ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಕಾರಣಿಗಳಿಗೆ ಅಪ್ಲೈ ಆಗಲ್ಲ..

ಧರ್ಮಶಾಸ್ತ್ರ ರಾಜಕಾರಣಿಗಳಿಗೆ ಅಪ್ಲೈ ಆಗಲ್ಲ
ರೇಣುಕಾರಾಧ್ಯ ಎಚ್ ಎಸ್ 

ಜೈಮಿನಿಭಾರತದಲ್ಲಿ ವೇದವ್ಯಾಸ ಧರ್ಮರಾಯನಿಗೆ ಧರ್ಮಶಾಸ್ತ್ರ ಬೋಧಿಸುವಾಗ ಹಣ( ಲಕ್ಷ್ಮಿ) ಯಾರ ಬಳಿ ನಿಲ್ಲುವುದಿಲ್ಲ ಎಂಬುದಕ್ಕೆ ಕೆಲ ಸ್ವಭಾವದ ವ್ಯಕ್ತಿಗಳ ಪಟ್ಟಿ ಕೊಡುತ್ತಾನೆ.

“ಜಡನ ಮೂರ್ಖನ ಶಠನ ತಾಮಸನ ನಿಷ್ಟುರದ
ನುಡಿಯವನ ಪಿಸುಣನ ಕೃತಘ್ನನ ಕರುಬನ ಬಾ
ಯ್ಬಡಿಕನ ಕುಚೇಷ್ಟಿಕನ ಕಾಮುಕನ ಹಿಂಸಕನ ಡಾಂಭಿಕನ ಪಾಷಂಡಿಯ
ಕಡುಕೋಪದವನ ಬಹುಭಕ್ಷಕನ ಖೂಳನನ
ದೃಢನ ಕುತ್ಸಿಕನ ಕುಹಕನ ದುರಾಚಾರದಿಂ
ನಡೆವವನ ವಿಶ್ವಾಸಘಾತಕನ ಪಾತಕನ ಲಕ್ಷ್ಮೀ ತೊಲಗದೆ ಮಾಣ್ಬಳೆ ”

ಮೇಲಿನ ಪಟ್ಟಿಯಲ್ಲಿನ 99% ಗುಣಗಳನ್ನು ನಮ್ಮ ಇವತ್ತಿನ ಎಲ್ಲ ರಾಜಕಾರಣಿಗಳಲ್ಲಿ ಮನೆ ಮಾಡಿವೆ. ಆದರೆ ನಮ್ಮ ರಾಜಕಾರಣಿಗಳ ಆಸ್ತಿಯ ಪಟ್ಟಿ ನೋಡಿದರೆ ನೂರರಿಂದ ಸಾವಿರ ಕೋಟಿಗಳನ್ನೂ ಮೀರಿದೆ,ಇವರ ಮನೆಯಲ್ಲಿ ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಿದ್ದಾಳೆ.

‍ಲೇಖಕರು avadhi

21 April, 2018

1 Comment

  1. Lalitha siddabasavayya

    ಪದ್ಯದ ಕೊನೆಯ ಸಾಲನ್ನು ಹೀಗೆ ಬದಲಾಯಿಸಿಕೊಂಡು ಬಿಡೋಣ
    “————– ಪಾತಕನ ಲಕ್ಷ್ಮೀ ಎಂದಿಗುಂ ತೊರೆದಿರ್ಪಳೆ”

    ಧರ್ಮಶಾಸ್ತ್ರ ಕೂಡಾ ಕಾಲಕ್ಕೆ ತಕ್ಕಂತೆ ನವೀಕರಣಗೊಳ್ಳಲೆ ಬೇಕು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading