ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಹಮತ್ ಕೃತಿ ಕುರಿತು ಅರುಣ ಜೋಳದಕೂಡ್ಲಿಗಿ

ವಾಗ್ವಾದಗಳ ಕನ್ನಡ ಸಾಹಿತ್ಯ ಚರಿತ್ರೆ

ಡಾ.ಅರುಣ್ ಜೋಳದಕೂಡ್ಲಿಗಿ

 

ಕನ್ನಡ ಸಾಹಿತ್ಯ ವಾಗ್ವಾದಗಳು

ಡಾ.ರಹಮತ್ ತರೀಕೆರೆ

ಪುಟ:230, ರೂ: 120, 2012

ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕನ್ನಡ ಸಾಹಿತ್ಯ ಚರಿತ್ರೆಯನ್ನು ಭಿನ್ನವಾಗಿ ಕಟ್ಟುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಅದು ಈಗಲೂ ನಿಂತಿಲ್ಲ. ಇಂತಹ ಸಮಕಾಲಿನ ಪ್ರಯತ್ನವೆ ರಹಮತ್ ತರೀಕೆರೆ ಅವರ ಕನ್ನಡ ಸಾಹಿತ್ಯ ವಾಗ್ವಾದಗಳು ಕೃತಿ. ಒಂದು ಊರಿನ ಚರಿತ್ರೆ; ಶಾಸನ ಹಸ್ತಪ್ರತಿ ತಾಲೂಕು ಕಛೇರಿಯ ದಾಖಲೆಗಳಿಗಿಂತ, ಆ ಊರಿನ ಜಗಳ ಹೊಡೆದಾಟ ಸೇಡು ರಸಿಕತೆಯ ಮೌಖಿಕ ಕಥನಗಳ ಮೂಲಕ ರಂಗೇರುತ್ತದೆ. ಸಾಹಿತ್ಯ ಚರಿತ್ರೆಗೂ ಇರುವ ಇಂತಹದ್ದೊಂದು ಗುಣವನ್ನು ಈ ಕೃತಿ ಕಾಣಿಸುತ್ತದೆ. ಸಾಹಿತ್ಯದ ಒಳಗಿಂದ ಹೊರಟ ಬಾಣಗಳು ಸಾಮಾಜಿಕ ವಲಯವ ತಾಕಿ ಕೆಲ ವಾಗ್ವಾದಗಳು ಹುಟ್ಟಿದರೆ, ಸಮಾಜದ ಒಳಗಿಂದ ಹೊರಟ ಬಾಣಗಳು ಸಾಹಿತ್ಯಲೋಕಕ್ಕೆ ನಾಟಿ ಮತ್ತೆ ಕೆಲ ವಾಗ್ವಾದಗಳು ಹುಟ್ಟಿವೆ.

ಈ ಕೃತಿಯಲ್ಲಿ `ನಾವಲು’ (1917). `ರುದ್ರ ನಾಟಕ’ (1941) `ಶೂದ್ರ ತಪಸ್ವಿ’ (1944)`ಅಶ್ಲೀಲ ಸಾಹಿತ್ಯ'(1952)`ಚೆನ್ನಬಸವ ನಾಯಕ’ (1956) `ದಲಿತ ದೃಷ್ಟಿಕೋನ’ (1980) `ಬೂಸಾ ಸಾಹಿತ್ಯ’ (1973)ಕನರ್ಾಟಕ ಸಂಸ್ಕೃತಿ ಚಚರ್ೆ (1978)`ಶ್ರೇಷ್ಠತೆ’ಯ ಪ್ರಶ್ನೆ (1990)`ಸಂಗ್ಯಾ ಬಾಳ್ಯಾ’ (2005) ಹೀಗೆ ಹತ್ತು ಪ್ರಮುಖ ಸಂಗತಿಗಳು ಹುಟ್ಟಿಸಿದ ವಾಗ್ವಾದಗಳನ್ನು ಚಚರ್ಿಸಲಾಗಿದೆ. ಈ ವಾಗ್ವಾದಗಳು ಸಾಹಿತ್ಯ ಮತ್ತು ಸಾಮಾಜಿಕ ನಂಬಿಕೆಗಳಲ್ಲಾದ ಪಲ್ಲಟಗಳ ದಾಖಲೆಯಂತಿವೆ. ಲಿಂಗಬೇಧ ಮತ್ತು ಜಾತಿ ಶ್ರೇಣೀಕರಣದ ನೆಲೆಯಲ್ಲಿ ಸಾಹಿತ್ಯವನ್ನು ನೋಡುವ ದೃಷ್ಠಿಕೋನದಲ್ಲಾದ ಬದಲಾವಣೆಗಳನ್ನು ಬಿಂಬಿಸುವ ಚಿತ್ರಪಟದಂತಿವೆ.

ಇಲ್ಲಿನ ವಾಗ್ವಾದಗಳಲ್ಲಿ ಮುಖ್ಯವಾಗಿ ತಿರುಮಲಾಂಬ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ನರಹರಿ ಶಮರ್ಾ, ಬಿ.ಎಂ.ಶ್ರೀಕಂಠಯ್ಯ, ದ.ರಾ.ಬೇಂದ್ರೆ, ಎಂ.ಜಿ. ಕೃಷ್ಣಮೂತರ್ಿ, ಕುವೆಂಪು, ಸಂಗಣ್ಣ ಕುಪ್ಪಸ್ತ, ಅನಕೃ, ನಿರಂಜನ, ಬಿ.ಕೃಷ್ಣಪ್ಪ, ಬಿ. ಬಸವಲಿಂಗಪ್ಪ, ಸಿದ್ದಲಿಂಗಯ್ಯ, ಯು.ಆರ್.ಅನಂತಮೂತರ್ಿ, ಪೂರ್ಣಚಂದ್ರ ತೇಜಸ್ವಿ, ಕೆ.ವಿ.ಸುಬ್ಬಣ್ಣ, ಪಿ. ಲಂಕೇಶ್, ಎಂ.ಎಂ.ಕಲಬುಗರ್ಿ, ಚಂದ್ರಶೇಖರ ಕಂಬಾರ, ಕುರ್ತಕೋಟಿ ಮುಂತಾದವರ ಚಿಂತನೆಗಳಿದ್ದು, ಅವುಗಳ ಮೇಲೆ ಚಚರ್ೆ ಬೆಳೆಸಲಾಗಿದೆ.

ಪ್ರತಿ ಪ್ರಕರಣವನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದ್ದು, ಮೊದಲನೆಯದರಲ್ಲಿ ಪ್ರಕರಣಕ್ಕೆ ಕಾರಣವಾದ ಸಂಗತಿಗಳ ಪೂರ್ವಪೀಠಿಕೆಯಿದೆ; ಎರಡನೆಯದರಲ್ಲಿ ವಾಗ್ವಾದಕ್ಕೆ ಕಾರಣವಾದ ಚಿಂತನೆಯ ವಾದಮಂಡನೆಯಿದೆ; ಮೂರನೆಯ ಖಂಡದಲ್ಲಿ ವಾದಮಂಡನೆಗೆ ಪ್ರತಿಯಾಗಿ ಪರ-ವಿರೋಧವಾಗಿ ಬಂದ ಪ್ರತಿಕ್ರಿಯೆಗಳಿವೆ. ನಾಲ್ಕನೆಯದರಲ್ಲಿ ಸಾಹಿತ್ಯ ಸಮಾಜ ಮತ್ತು ಸಂಸ್ಕೃತಿ ಪ್ರಶ್ನೆಗಳ ವಿಶ್ಲೇಷಣೆಯಿದೆ. ಕೊನೆಯಲ್ಲಿ ವಾಗ್ವಾದಕ್ಕೆ ಪೂರಕವಾದ ಟಿಪ್ಪಣಿ ಹಾಗೂ ಇನ್ನಿತರ ಆಕರಗಳ ಮಾಹಿತಿ ಒದಗಿಸಲಾಗಿದೆ.

ಕಳೆದೊಂದು ಶತಮಾನದ ಅವಧಿಯಲ್ಲಿ, ಕಾಲಕಾಲಕ್ಕೆ ಎದ್ದ ಪ್ರಮುಖ ವಾಗ್ವಾದಗಳ ನೆಲೆಯಲ್ಲಿ ಹುಟ್ಟಬಹುದಾದ ಚಿಂತನಾಕ್ರಮ ಇಲ್ಲಿದೆ. ಹಾಗಾಗಿ ಇಲ್ಲಿ ಪ್ರಾತಿನಿಧಿಕವಾದ ಕೆಲವನ್ನು ಮಾತ್ರ ಚಚರ್ಿಸಲಾಗಿದ್ದರೂ, ಇಡಿಯಾದ ಚಚರ್ೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆಯಾ ಕಾಲಕ್ಕೆ ಉಂಟಾದ ನೂರಾರು ವಾಗ್ವಾದಗಳನ್ನು ಒಡಲೊಳಗಿಟ್ಟುಕೊಂಡಂತಿದೆ. ಈ ವಾಗ್ವಾದಗಳು ಸಾಹಿತ್ಯ ಪರಿಕಲ್ಪನೆಗೆ, ಸಾಹಿತ್ಯ ಕೃತಿಗಳಿಗೆ, ವಿಮಶರ್ೆಯ ವಿಧಾನಕ್ಕೆ, ಅನುವಾದದ ಸ್ವರೂಪಕ್ಕೆ, ಸಂಪಾದನೆಯ ತತ್ವಕ್ಕೆ, ಭಾಷೆಯ ಬಳಕೆಗೆ, ಛಂದಸ್ಸಿನ ನಿಯಮೋಲ್ಲಂಘನೆಗೆ, ಸಾಹಿತ್ಯದ ಓದಿಗೆ ಸಂಬಂಧಿಸಿವೆ. ಹೀಗಾಗಿ ವಾಗ್ವಾದಗಳ ಪ್ರಮುಖ ಭಾಗಗಳನ್ನು ಉಲ್ಲೇಖಿಸಿಕೊಂಡು, ಅಲ್ಲಿ ಅಡಗಿರುವ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಶ್ನೆಗಳನ್ನು ಎತ್ತಿಕೊಂಡು, ಅವು ನಮ್ಮ ವರ್ತಮಾನ ಬದುಕಿನಲ್ಲಿ ಹೇಗೆ ರೂಪಾಂತರಗೊಂಡು ಮುಂದುವರೆದಿವೆ ಎಂಬುದನ್ನು ಪರಿಶೀಲಿಸುವ ವಿಧಾನವನ್ನು ಇಲ್ಲಿ ಅನುಸರಿಸಲಾಗಿದೆ.

ಲೇಖಕರ ರಚನೆಯ ಸಾಹಿತ್ಯವನ್ನು ಓದುವ ಮೂಲಕ ಅವರ ಬಗೆಗೆ ಒಂದು ಚಿತ್ರವನ್ನು ಕಟ್ಟಿಕೊಂಡಿರುತ್ತೇವೆ. ಅದೇ ಲೇಖಕರು ಸಾಮಾಜಿಕ ವಿದ್ಯಮಾನಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ, ಸಾಹಿತ್ಯಿಕ ವಾಗ್ವಾದವೊಂದರಲ್ಲಿ ಲೇಖಕರ ನಿಜ ಕಾಳಜಿ ಹೇಗೆ ವ್ಯಕ್ತವಾಗುತ್ತದೆ ಮುಂತಾಗಿ ನೋಡಲು ಈ ಕೃತಿ ಹೊಸ ನೋಟವೊಂದನ್ನು ಕೊಡುತ್ತದೆ. ಹೀಗಾಗಿ ಸಾಹಿತ್ಯ ಕೃತಿಗಳ ಮೂಲಕ ಕಾಣುವ ಹಲವು ಸಾಹಿತಿಗಳ ಚಿತ್ರ, ಸಾಮಾಜಿಕ ನೆಲೆಯಲ್ಲಿ ಹೇಗೆ ಬದಲುಗೊಳ್ಳುತ್ತದೆ ಎನ್ನುವುದನ್ನು ನೋಡುವುದು ಕುತೂಹಲಕಾರಿಯಾಗಿದೆ. ಕೃತಿಯ ಚಾರಿತ್ರಿಕ ವಿವರ ಮತ್ತು ಅದರೊಳಗಿನ ಚಿಂತನೆಗಳೆರಡೂ ಸಮಸಮ ಆಗಿರುವಂತಹ ವಿಧಾನವು, ಸಾಹಿತ್ಯ ಚರಿತ್ರೆಗೆ ಹೊಸ ಆಯಾಮ ನೀಡಬಲ್ಲದು. ಈ ಹಿನ್ನೆಲೆಯಲ್ಲಿ ವಾಗ್ವಾದಗಳ ಮೂಲಕ ಕಟ್ಟಲಾದ ಸಾಹಿತ್ಯ ಚರಿತ್ರೆಯಾಗಿ ಇಡೀ ಚಿಂತನೆ ರೂಪುಗೊಂಡಿದೆ.

ಇಲ್ಲಿನ ವಾಗ್ವಾದಗಳ ಕುರಿತ ಚಚರ್ೆ ಕೇವಲ ಸಾಹಿತ್ಯಕ ಮಾತ್ರವಾಗಿರದೆ, ಸಾಮಾಜಿಕ ಚಚರ್ೆಯ ಆಯಾಮವನ್ನು ಪಡೆಯುವುದು, ಅದು ರಾಜಕೀಯ ವಿದ್ಯಮಾನದ ಚಚರ್ೆಯಾಗಿಯೂ ವಿಸ್ತರಣೆ ಪಡೆದು ಸಾಂಸ್ಕೃತಿಕ ವಾಗ್ವಾದವಾಗುವ ಆಯಾಮ ಇಲ್ಲಿನ ಚಚರ್ೆಗಿದೆ. ಈ ಕಾರಣಕ್ಕಾಗಿ ಶುದ್ಧ ಸಾಹಿತ್ಯದ ಚಚರ್ೆಯ ಸೀಮಿತ ಚೌಕಟ್ಟುಗಳನ್ನು ಮುರಿಯುವ ಕಾರಣಕ್ಕೂ ಈ ಕೃತಿ ಮುಖ್ಯವಾಗುತ್ತದೆ. ಕೃತಿಯೊಂದರ ಶುದ್ಧ ಸಾಹಿತ್ಯಿಕ ಚಚರ್ೆಗೆ ಇರುವ ಮಿತಿಗಳನ್ನು ಇಲ್ಲಿನ ವಾಗ್ವಾದಗಳು ಸ್ಪಷ್ಟವಾಗಿ ಕಾಣಿಸುತ್ತವೆ.

ಸಾಹಿತ್ಯ ಲೋಕಕ್ಕೆ ಹೊಸ ಪ್ರಕಾರದ ನೆಲೆಯಲ್ಲಿ ನಾವಲು, ರುದ್ರನಾಟಕ; ಲಿಂಗದ ನೆಲೆಯಲ್ಲಿ ಮಹಿಳೆ; ಜಾತಿಯ ನೆಲೆಯಲ್ಲಿ ದಲಿತ ಕೆಳಜಾತಿಗಳು ಪ್ರವೇಶಿಸಿದಾಗಲೂ ಅವು ವಗ್ವಾದದ ಮೂಲಕ ತನ್ನ ಪ್ರವೇಶವನ್ನು ಗಟ್ಟಿಗೊಳಿಸಿಕೊಂಡಂತಿವೆ. ರುದ್ರನಾಟಕ ವಾಗ್ವಾದದಲ್ಲಿ ಪಶ್ಚಿಮದ ಸಾಹಿತ್ಯ ಪ್ರಕಾರವೊಂದರ ಪ್ರವೇಶ, ನಾವಲು ವಾಗ್ವಾದದಲ್ಲಿ ಮಹಿಳೆಯ ಸಾಹಿತ್ಯ ಪ್ರವೇಶ; ಶೂದ್ರ ತಪಸ್ವಿ, ದಲಿತ ದೃಷ್ಟಿಕೋನ, ಬೂಸಾ ಸಾಹಿತ್ಯದ ವಾಗ್ವಾದಗಳಲ್ಲಿ ದಲಿತ ಸಾಹಿತ್ಯದ ಪರೀಕ್ಷೆಯೂ ನಡೆದಂತಿದೆ.

ವಾಗ್ವಾದಗಳ ಕೃತಿ ಮತ್ತೊಂದು ವಾಗ್ವಾದಕ್ಕೆ ಎಡೆಯಾಗದಿರಲಿ ಎಂಬ ಎಚ್ಚರ ತರೀಕೆರೆಯವರನ್ನು ಬಹುವಾಗಿ ಕಾಡಿದಂತಿದೆ. ಈ ಎಚ್ಚರವೇ ಹಲವುಕಡೆ ವಿಶ್ಲೇಷಣೆಯ ಮೊನಚನ್ನು ಮೊಂಡಾಗಿಸಿದೆ. ನಿಷ್ಠುರ ಟೀಕೆಯನ್ನು ನಯವಾಗಿಸಿ ತೇಲಿಸಿದೆ. ಪುಸ್ತಕದ ಕೊನೆಯ ಭಾಗದ ಚಚರ್ೆಯಲ್ಲಿ ವಾಗ್ವಾದಗಳ ಬಿಡಿ ಬಿಡಿ ಚಿತ್ರಗಳ ನೆಲೆಯಲ್ಲಿ ಅವುಗಳು ಬಿಟ್ಟುಕೊಡುವ ಸೂಕ್ಷ್ಮ ಒಳನೋಟಗಳನ್ನು ಹೆಕ್ಕಿಕೊಡುತ್ತಾರೆ. ಆದರೆ ಈ ಎಲ್ಲಾ ಬಿಡಿಚಿತ್ರಗಳ ಒಳಗಿಂದ ಹೊಮ್ಮಬಹುದಾದ ತಾತ್ವಿಕ ನೆಲೆಯೊಂದನ್ನು ಶೋಧಿಸುವಲ್ಲಿ ತರೀಕೆರೆಯವರು ಪೂರ್ಣ ಯಶಕಂಡಂತಿಲ್ಲ. ಅಥವಾ ಇನ್ನಷ್ಟು ಶೋಧಕ್ಕೆ ಅವಕಾಶವನ್ನು ಒದಗಿಸಿದ್ದಾರೆ.

ಕನ್ನಡ ಸಾಹಿತ್ಯ ಚರಿತ್ರೆಯ ಜಡ ಓದಿಗೆ ಈ ಕೃತಿ ತಡೆಯನ್ನೊಡ್ಡುತ್ತದೆ. ಅಂತೆಯೇ ಸಾಹಿತ್ಯವನ್ನು ಪ್ರವೇಶಿಸುವ ವಿಧ್ಯಾಥರ್ಿಗಳಿಗೆ ಇದು ಭಿನ್ನವಾದ ದೃಷ್ಟಿಕೋನವನ್ನು ಒದಗಿಸುತ್ತದೆ. ಇಂದು ನಿಲರ್ಿಪ್ತವಾಗಿರುವ ಸಾಹಿತ್ಯ ವಲಯವನ್ನು ಅಣಕಿಸುವಂತೆ, ಕೆಣಕುವಂತೆ ಸಣ್ಣ ಪುಟ್ಟ ಕಿಡಿಗಳು ಈ ಕೃತಿಯ ಒಳಗಿಂದ ಸಿಡಿಯುತ್ತವೆ. ಈ ಎಲ್ಲಾ ಕಾರಣಗಳಿಗಾಗಿ ಸಾಹಿತ್ಯದ ವಿದ್ಯಾಥರ್ಿಗಳು ಸಾದ್ಯವಾದರೆ ಒಮ್ಮೆ ಓದಬಹುದಾದ ಕೃತಿಯಿದು.

‍ಲೇಖಕರು G

27 December, 2012

2 Comments

  1. shanthi k.a.

    thank you for sharing..

  2. DIVYA ANJANAPPA

    ಪುಸ್ತಕದ ವಿಶ್ಲೇಷಣೆಯು ಸಾಹಿತ್ಯ ಅಧ್ಯಯನಶೀಲರಿಗೆ ಮಾರ್ಗದರ್ಶಿಯಂತಿದ್ದು,ಪುಸ್ತಕದ ಸಮಗ್ರ ಮಾಹಿತಿಯನ್ನು ಒಳಗೊಂಡ ಈ ನಿಮ್ಮ ಲೇಖನವು ಪುಸ್ತಕವನ್ನು ಓದಲು ನಮ್ಮನ್ನು ಪ್ರಚೋದಿಸಿದೆ.ಧನ್ಯವಾದಗಳು ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading