ರಂಗ ವರ್ತುಲ ರಂಗತಂಡ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಸಂದರ್ಭದಲ್ಲಿ ಎರಡು ದಿನಗಳ ರಂಗ ಉತ್ಸವವನ್ನು ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ಇದೇ ಮಾರ್ಚ್ 18 ರಂದು ಟ್ರೆಡ್ ಮಿಲ್ ಹಾಗು ಮಾರ್ಚ್ 19 ರಂದು ರಬ್ಡಿ ನಾಟಕವನ್ನು ಜೆ ಪಿ ನಗರದ ರಂಗಶಂಕರದಲ್ಲಿ ಸಂಜೆ 7:30ಕ್ಕೆ ಪ್ರದರ್ಶಿಸಲಿದೆ. ಜೊತೆಗೆ ಈ ಎರಡೂ ಪ್ರದರ್ಶನಗಳು ತಂಡದ 49ನೇ ಹಾಗು 50ನೇ ಪ್ರದರ್ಶನಗಳಾಗಿರುವುದು ಉತ್ಸವದ ರಂಗನ್ನು ಮತ್ತು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ಟ್ರೆಡ್ ಮಿಲ್ (ಮಾರ್ಚ್ 18, 2014 | ರಂಗಶಂಕರ | ಸಂಜೆ 7:30ಕ್ಕೆ )
ನಿರ್ದೇಶನ : ನಿತೀಶ್ ಎಸ್
ರಚನೆ : ಸಂದೀಪ್ ಶಿಖಾರ್ | ರಾಘವೇಂದ್ರ ಆಚಾರ್ಯ
ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ : 9986828680
ಅಭಿನಯ 2013- ರಾಷ್ಟ್ರೀಯ ನಾಟಕೋತ್ಸವದಲ್ಲಿ ಅತ್ಯುತ್ತಮ ನಾಟಕ ಹಾಗು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡ ಟ್ರೆಡ್ ಮಿಲ್ , ಕಾಂಕ್ರೀಟ್ ಕಾಡುಗಳಲ್ಲಿ ಎಡಬಿಡದೆ ಓಡುತ್ತಾ ಜೀವನ ಸಾಗಿಸುತ್ತಿರುವ ನಮ್ಮಗಳ ಬದುಕಿನ ಅಪೂರ್ವ ನೆನೆಪುಗಳ ಸುಂದರ ಪ್ರಯಾಣ. ಮೇಲ್ನೋಟಕ್ಕೆ ಹಾಸ್ಯ ಪ್ರಧಾನವಾಗಿ ಕಂಡು ಬಂದರೂ, ದಿನವಿಡೀ ಓಡುತ್ತಾ ಕಡೆಗೆ ಎಲ್ಲಿಯೂ ತಲುಪಲಾಗದ ನಮ್ಮಗಳ ಅಸಹಾಯಕತೆಯ ವಿವಿಧ ಮಗ್ಗಲುಗಳನ್ನು ನಮ್ಮ ಮುಂದಿಡುತ್ತದೆ. ಈ ಓಟದಲ್ಲಿ ನಾವು ಕಳೇದುಕೊಂಡಿರುವ ಹಾಗು ಕಳೇದುಕೊಳ್ಳ ಹೊರಟಿರುವ ಅತ್ಯಮೂಲ್ಯ ಸಂಗತಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಮ್ಮ ಅನಾವರಣಗೊಳಿಸುತ್ತದೆ. ಈ ನಮ್ಮ ಓಟ ಶುರುವಾದದ್ದಾದರೂ ಎಲ್ಲಿ? ಹೇಗೆ?? ಯಾರಿಂದ??? ಯಾರಿಗಾಗಿ ??? ಎಂಬ ಅನೇಕ ಪ್ರಶ್ನೆಗಳನ್ನು ತೆರೆದಿಡೂತ್ತದೆ.
ರಬ್ಡಿ (ಮಾರ್ಚ್ 19, 2014 | ರಂಗಶಂಕರ | ಸಂಜೆ 7:30ಕ್ಕೆ )
ನಿರ್ದೇಶನ : ನಿತೀಶ್ ಎಸ್
ರಚನೆ : ಹೇಮಲತ ಲೋಕೇಶ್ ಹಾಗು ನಿತೀಶ್ ಎಸ್
ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ : 9986828680
ಮಣ್ಣು ಜಲ್ಲಿ ಹೊತ್ತು ಜೀವನ ಸಾಗಿಸುವ ಸಾವಂತ್ರಿ ಮತ್ತವಳ ಬುದ್ಧಿಮಾಂದ್ಯ ಅಂಗವಿಕಲ ಮಗಳು ಪುಟ್ಟಕ್ಕನ ಸುತ್ತ ರಬ್ಡಿ ಬೆಳೆಯುತ್ತಾ ಸಾಗುತ್ತದೆ. ಪುಟ್ಟಕ್ಕನ ಭವಿಷ್ಯದಲ್ಲಿ ತಾನು ಕಾಣುವ ಕನಸುಗಳು ನನಸಾಗಲು ಸಾಧ್ಯವಿಲ್ಲವೆಂಬ ಅರಿವಿದ್ದರೂ, ಛಲಬಿಡದೆ ಆ ಕನಸುಗಳ ಬೆನ್ನೇರಿ ಮುನ್ನುಗ್ಗುವ ಸಾವಂತ್ರಿಯ ಬದುಕ ಪ್ರೀತಿಸುವ ಬಗೆ ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತದೆ. ಪುಟ್ಟಕ್ಕನನ್ನು ವಿಶೇಷ ಶಾಲೆಗೆ ಸೇರಿಸುವ ಸಲುವಾಗಿ, ಅದಕ್ಕೆ ತಗುಲುವ ವೆಚ್ಚ ಭರಿಸಲು ಓರ್ವ ಐಟಿ ಉದ್ಯೋಗಿ ದಂಪತಿಗಳಿಗೆ ಬಾಡಿಗೆ ತಾಯಿಯಾಗಲು ಸಾವಂತ್ರಿ ಮುಂದಾಗುತ್ತಾಳೆ. ನೈಸರ್ಗಿಕ ಹಾಗು ಪ್ರಾಕೃತಿಕ ಕ್ರಿಯೆಗಳ ವಿರುದ್ಧದ ಮನುಷ್ಯನ ಸೆಣೆಸಾಟ, ತಾಯಿ-ಮಗು ನಡುವಣ ಅವಿನಾಭಾವ ಸಂಬಂಧ ಹಾಗು ತಾಯ್ತನದ ಸೂಕ್ಷ್ಮ ಸಂವೇದನೆಗಳ ಸುತ್ತಾ ರಬ್ಡಿ ತನ್ನನ್ನ ತಾನು ವಿಸ್ತಸಿರಿಕೊಳ್ಳುತ್ತಾ ಸಾಗುತ್ತದೆ. ಬಾಡಿಗೆ ತಾಯಿಯ ಮೂಲಕ ಮುಗುವನ್ನು ಪಡೆಯುವ ಆ ಐಟಿ ಉದ್ಯೋಗಿ ದಂಪತಿಗಳ ಪ್ರಯತ್ನ ಸಫಲವಾಗುವುದೆ ? ಸಾವಂತ್ರಿಯು ಆ ದಂಪತಿಗಳಿಗೆ ಮಗು ಹೆತ್ತು ಕೊಡುವಳೇ ?? ಸಾವಂತ್ರಿಯ ಕನಸುಗಳು ನನಸಾಗುವುದೆ ???






0 Comments