
ಕೆಳಗೆ ಬೀದಿಯಲ್ಲಿ ಜಗತ್ಪ್ರಸಿದ್ಧ ಗಣಪತಿ ಮೆರವಣಿಗೆ ನಡೀತಾಯಿದೆ.
ಬಾಲ್ಕನೀಲಿ ಜಾಗ ಇಲ್ಲ ಅಂತ ಊರಿಗೇ ಹೇಳಿದ್ದಾಗಿದೆ.
ಈಗ ಬಾಗಿಲು ತೆಗೀಬೇಕೋ ಬೇಡವೋ…
ಬಾಗಿಲು ತೆಗೆದರೆ ಆಗೋ ನಷ್ಟ ಏನು…
ಬಾಗಿಲು ಹಾಕೇ ಇದ್ದರೆ ಆಗೋ ಲಾಭ ಏನು…
ಒಂದು ತೆರೆದ ಬಾಗಿಲು ಅಥವಾ ಮುಚ್ಚಿದ ಬಾಗಿಲು ಸಂಬಂಧಗಳನ್ನ ನಿರ್ಧಾರ ಮಾಡತ್ತೆ ಅನ್ನೋದಾದ್ರೆ ಜೀವನ ಅಷ್ಟು ಸುಲಭಾನಾ…
ಅದಕ್ಕೇ ಹೇಳಿದ್ದು
ಬೀದಿಯೊಳಗೊಂದು ಮನೆಯ ಮಾಡಿ ಅಂತ.
ಗುರುವಾರ ಶುಕ್ರವಾರ ರಂಗ ಶಂಕರದಲ್ಲಿ ಪ್ರದರ್ಶನಗಳಿದ್ದಾವೆ.
ಸಂಜೆ 7.30ಕ್ಕೆ
ಕೊಟ್ಟ ದುಡ್ಡಿಗೆ ಮೋಸ ಇಲ್ಲ. ಬನ್ನಿ.
-ಎಸ್. ಸುರೇಂದ್ರನಾಥ್






0 Comments