ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಶಂಕರದಲ್ಲಿ ರಂಗಾಯಣ ನಾಟಕ

ಚಿರೇಬಂದಿ ವಾಡೆ

ರಂಗಾಯಣವು ತನ್ನ ಅತ್ಯಂತ ಯಶಸ್ವಿ ನಾಟಕ, ಶ್ರೇಷ್ಠ ಮರಾಠಿ ನಾಟಕಕಾರ ಶ್ರೀ ಮಹೇಶ್ ಎಲ್ಕುಂಚ್ವಾರ್ ಅವರು ರಚಿಸಿರುವ ‘ಚಿರೇಬಂದಿ ವಾಡೆ’ ಯನ್ನು ರಂಗಶಂಕರದಲ್ಲಿ ಭಾನುವಾರ, ಅಕ್ಟೋಬರ್ 7, 2012 ರಂದು 3.30 ಕ್ಕೆ ಮತ್ತು 7.30 ಕ್ಕೆ ಪ್ರದರ್ಶನ ಮಾಡಲಿದೆ. ರಂಗಾಯಣದ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಭಾರತೀಯ ರಂಗಭೂಮಿಯಲ್ಲಿ ಈ ನಾಟಕವು ತನ್ನದೇ ವಿಶಿಷ್ಟ ಸ್ಥಾನ ಹೊಂದಿದೆ.

ಮೈಸೂರಿನ ವಾರಾಂತ್ಯ ರಂಗ ಪ್ರದರ್ಶನಗಳಲ್ಲ್ಲಿ ಈ ನಾಟಕ ಈಗಾಗಲೇ ಅತ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಗಿರುವುದಷ್ಟೇ ಅಲ್ಲದೆ ರಾಜ್ಯದ ಹಲವಾರು ಕಡೆ ಪ್ರದರ್ಶನಗೊಂಡು ಜನರ ಮನಸೂರೆಗೊಂಡಿದೆ.

ಈ ನಾಟಕದ ಕನ್ನಡಾನುವಾದವನ್ನು ಶ್ರೀ ಮಾರುತಿ ಶಾನಭಾಗ ಮಾಡಿದ್ದಾರೆ. ರಂಗಾಯಣದ ಕಲಾವಿದೆಯಾದ ಶ್ರೀಮತಿ. ಪ್ರಮೀಳಾ ಬೆಂಗ್ರೆ ಈ ನಾಟಕವನ್ನು ನಿರ್ದೇಶಿಸಿದ್ದು, ನಾಟಕದ ರಂಗ ವಿನ್ಯಾಸವನ್ನು ಶ್ರೀ ಹೆಚ್. ಕೆ. ದ್ವಾರಕಾನಾಥ್ ಮಾಡಿದ್ದಾರೆ. ಸಂಗೀತವನ್ನು ಶ್ರೀ. ಶ್ರೀನಿವಾಸ ಭಟ್ (ಚೀನಿ) ಸಂಯೋಜಿಸಿದ್ದು, ವಸ್ತಾಲಂಕಾರವನ್ನು ಶ್ರೀ ಹುಲುಗಪ್ಪ ಕಟ್ಟೀಮನಿ, ಬೆಳಕಿನ ವಿನ್ಯಾಸವನ್ನು ಶ್ರೀ ಸಗೈ ರಾಜು, ಕೃಷ್ಣಕುಮಾರ್ ನಾರ್ಣಕಜೆ ಹಾಗೂ ರಂಗನಿರ್ವಹಣೆಯನ್ನು ಶ್ರೀಮತಿ. ಶಶಿಕಲಾ ಬಿ.ಎನ್. ಮಾಡಿದ್ದಾರೆ.

ಟಿಕೆಟ್ ದರ ರೂ. 70, ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪಕರ್ಿಸಿ, ರಂಗಾಯಣ 0821 – 2512639 ; ಮೊ: 94496 79780.

ಆನ್ ಲೈನ್ ಬುಕಿಂಗ್ ಗಾಗಿ www.indiastage.in ಸಂಪರ್ಕಿಸಿ:

 

‍ಲೇಖಕರು G

5 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading