
ಬಿ ರಾಜೇಶ್
‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕ ಒಂದು ಮದುವೆಯ ಕುರಿತಾದದ್ದು ಥೀಸಿಯಸ್, ಹಿಪ್ಪೊಲಿಟ, ಲೈಸ್ಯಾಂಡರ್, ಹರ್ಮಿಯ, ಡಿಮಿಟ್ರಿಯಸ್ ಮತ್ತು ಹೆಲೆನ ಪ್ರೇಮದಲ್ಲಿ ಬಿದ್ದಿದ್ದಾರೆ. ಥೀಸಿಯಸ್ ಮತ್ತು ಹಿಪ್ಪೋಲಿಟಾಳ ಮದುವೆ ನಿಶ್ಚಯವಾಗಿ ತಯಾರಿ ನಡೆದಿದೆ. ಹರ್ಮಿಯ ಮತ್ತು ಲೈಸ್ಯಾಂಡರ್ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಹೆಲೆನಾಳಿಗೆ ಡಿಮಿಟ್ರಿಯಸ್ ಮೇಲೆ ಪ್ರೇಮ, ಆದರೆ ಹರ್ಮಿಯಾಳ ತಂದೆ ಈಜಿಯಸ್ ಅವಳ ಮದುವೆಯನ್ನು ಡಿಮಿಟ್ರಿಯಸ್ ಜೊತೆ ಮಾಡಲು ನಿಶ್ಚಯಿಸಿರುತ್ತಾನೆ.
ಮದುವೆಯ ಸಂಭ್ರಮಾಚರಣೆಯಲ್ಲಿ ಆಡಬೇಕಾದ ನಾಟಕದ ತಾಲೀಮನ್ನು ಬಾಟಮ್ ಮತ್ತು ಅವನ ತಂಡ ಕಾಡಿನಲ್ಲಿ ನಡೆಸುತ್ತಿರುತ್ತದೆ. ಇದೇ ವೇಳೆಯಲ್ಲಿ ಕಿನ್ನರ ಲೋಕದ ಒಬೆರಾನ್ ಮತ್ತು ಟೈಟಾನಿಯ ಮಧ್ಯೆ ವಾಗ್ವಾದ ಉಂಟಾಗುತ್ತದೆ. ಇದರ ಭಾಗವಾಗಿ ಒಬೆರಾನ್ ತನ್ನ ಸೇವಕ ಪಕ್ ಎಂಬುವನನ್ನು ರಹಸ್ಯ ನಿಯೋಜನೆಯೊಂದಕ್ಕೆ ಕಳುಹಿಸುತ್ತಾನೆ. ಮೊದಲೇ ಗೊಂದಲದಲ್ಲಿದ್ದ ಮದುವೆ ಮನೆಯ ಪ್ರೇಮಿಗಳು, ಪಕ್ ಗೊತ್ತಿಲ್ಲದೆ ಮಾಡುವ ಒಂದು ತಪ್ಪಿನಿಂದಾಗಿ ಇನ್ನೂ ಹೆಚ್ಚು ಗೊಂದಲಕ್ಕೆ ಒಳಗಾಗುತ್ತಾರೆ. ತಾನು ಮಾಡಿದ ತಪ್ಪನ್ನು ಪಕ್ ಸರಿಪಡಿಸಿದ ಮೇಲೆ ಎಲ್ಲಾ ಸುಖಾಂತ್ಯವಾಗಿ ಜೋಡಿಗಳು ಒಂದಾಗುತ್ತಾರೆ.
ಬೆಳಕು, ವಿನ್ಯಾಸ ಹಾಗೂ ನಿರ್ದೇಶನ: ಜೀವನ್ ಕುಮಾರ್ ಹೆಗ್ಗೋಡು
ವಸ್ತ್ರ ವಿನ್ಯಾಸ: ಬಿ.ಎನ್. ಶಶಿಕಲಾ
ನೃತ್ಯ ಹಾಗೂ ಸಹ ನಿರ್ದೇಶನ: ಕಾರ್ತಿಕ್ ಉಪಮನ್ಯು
ರಂಗಸಜ್ಜಿಕೆ, ಪರಿಕರ, ಪ್ರಸಾದನ: ಮಂಜುನಾಥ್ ಕಾಚಕ್ಕಿ
ಸಹಾಯ: ಪುರುಷೋತ್ತಮ ಕಾಕಂಬಿ
ಹಿನ್ನೆಲೆ ಸಂಗೀತ ನಿರ್ವಹಣೆ: ಮಂಜು ಮಂಗಲ
ಸಂಗೀತ ಸಾಂಗತ್ಯ: ಶ್ರೀಕಂಠಸ್ವಾಮಿ, ಚಿರಂತನ್, ಪೃಥ್ವಿ
ರಂಗ ನಿರ್ವಹಣೆ: ಕು. ಮಾನಸ ಮತ್ತು ಕು. ಸ್ನೇಹಾ
ನಿರ್ಮಾಣ ನಿರ್ವಹಣೆ: ರವಿಪ್ರಸಾದ್ ಹೆಚ್.ಆರ್. ಮತ್ತು ರಾಜೇಶ್ ಬಿ.
ನಿರ್ಮಾಣ: ರಂಗವಲ್ಲಿ

ಪಾತ್ರ ಪರಿಚಯ
ಥೀಸಿಯಸ್: ಸಂದೀಪ್, ರಾಜೇಶ್
ಹಿಪಾಲಿಟ: ಸುನೀತಾ, ಮಾನಸ,
ಫಿಲಾಸ್ಟ್ರೆಟ್: ವಾಸುದೇವ್
ಲೈಸ್ಯಾಂಡರ್: ಗೌತಮ್
ಹರ್ಮಿಯಾ: ಪ್ರವಲಿಕಾ, ಭೂಮಿ
ಡೆಮಿಟ್ರಿಯಸ್: ಹೊಯ್ಸಳ
ಹೆಲೆನ: ದವನ ಧನರಾಜ್, ಸುಷ್ಮಾ
ಪೀಟರ್ ಕ್ವಿನ್ಸ್: ಮಂಜು ಆರ್.
ನಿಕ್ ಬಾಟಮ್: ಆದರ್ಶ್
ಟಾಮ್ ಸ್ನೌಟ್: ರಾಕೇಶ್
ಫ್ರಾನ್ಸಿಸ್ ಫ್ಲೂಟ್: ಸಂಜಯ್
ಬಡಗಿ ಸ್ನಗ್: ರಕ್ಷಿತ್
ರಾಬಿನ್ ಸ್ಟಾರ್ವಲಿಂಗ್: ಧನುಷ್
ಒಬೆರಾನ್: ಪ್ರಣವ್ ಸ್ವರೂಪ್
ಟೈಟಾನಿಯಾ: ಭಾರ್ಗವಿ, ಚಂದನ ರೋಹಿಣಿ
ಪಕ್: ಮಂಜು, ಧನುಷ್
ನೃತ್ಯ ಮೇಳದವರು: ಹರ್ಷಿತ್, ಸುಚರಿತ, ವೆಂಕಟೇಶ, ಶ್ರೀಲಕ್ಷ್ಮಿ
ಸ್ನೇಹಾ, ಪ್ರಜ್ವಲ್, ಹರ್ಷಾ, ದೀಪ್ತಿ
ರಂಗವಲ್ಲಿಯ ವರ್ಷಗಳ ಅಪೂರ್ವ ರಂಗಯಾತ್ರೆಯ ಅನುಭವವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಯೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ `ಭೂಮಿಕಾ ರಂಗಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಮೊದಲ ಆವೃತ್ತಿ ಈ ವರ್ಷದಿಂದ ಆರಂಭವಾಗಿದ್ದು, ಇನ್ನು ಇದು ನಿಯತಕಾಲಿಕವಾಗಿ ಪ್ರತಿವರ್ಷ ನಡೆಯುವ ರಂಗಶಿಬಿರವಾಗಲಿದೆ. ರಂಗಭೂಮಿಯ ವಿವಿಧ ಪ್ರಕಾರಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿ, ಪರಿಣಿತರಿಂದ ವಿಶೇಷ ತರಗತಿಗಳನ್ನು ಆಯೋಜಿಸಿ, ನಾಟಕದ ಆಟವನ್ನು ಆಡುವ, ಆಡಿಸುವ ಪ್ರಕ್ರಿಯೆಯಲ್ಲಿ ಎಲ್ಲರೂ ತೊಡಗಿಕೊಳ್ಳುವಂತೆ ಈ ಶಿಬಿರವನ್ನು ವಿನ್ಯಾಸಗೊಳಿಸಲಾಗಿದೆ.
ರಂಗಕರ್ಮಿ ದಿ. ಶ್ರೀ ಜಯತೀರ್ಥ ಜೋಶಿ ಅವರ ನೆನಪಿನಾರ್ಥವಾಗಿ ಜನವರಿ ೫, ರಂದು ಆರಂಭವಾದ ಭೂಮಿಕಾ ಶಿಬಿರಕ್ಕೆ ನಾಡಿನ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಚಾಲನೆ ನೀಡಿದರು. ದಿನಗಳ ಕಾಲ ನಡೆದ ಶಿಬಿರದಲ್ಲಿ ರಂಗಕರ್ಮಿ ಪ್ರಸನ್ನ, ಖ್ಯಾತ ಇಂಗ್ಲಿಷ್ ಸಾಹಿತ್ಯ ವಿದ್ವಾಂಸ ಪ್ರೊ. ಬಾಲಾಜಿ, ಸಾಗರದ ಸ್ಪಂದನ ಸಂಸ್ಥೆಯ ನಿರ್ದೇಶಕಿ ಎಂ.ವಿ. ಪ್ರತಿಭಾ, ರಂಗಾಯಣದ ಕಲಾವಿದರಾದ ಪ್ರಶಾಂತ್ ಹಿರೇಮಠ, ನಂದಿನಿ ಕೆ.ಆರ್, ಎಂ.ಸಿ. ಕೃಷ್ಣಪ್ರಸಾದ್, ಕೆ.ಜೆ.ಸಚ್ಚಿದಾನಂದ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ರಂಗಭೂಮಿಯ ವಿವಿಧ ಆಯಾಮಗಳ ಕುರಿತು ಮಾರ್ಗದರ್ಶನ ನೀಡಿದರು.

ನೀನಾಸಂ ಪದವೀಧರ ಜೀವನ್ ಕುಮಾರ್ ಹೆಗ್ಗೋಡು ಅವರ ಮಾರ್ಗದರ್ಶನದಲ್ಲಿ ಒಟ್ಟು ೩೪ ಮಂದಿ ಯುವ ರಂಗಾಸಕ್ತರು ಪಾಲ್ಗೊಂಡಿದ್ದು, ಅವರಲ್ಲಿ ೧೬ ಮಂದಿ ಹೆಣ್ಣುಮಕ್ಕಳು ರಂಗಭೂಮಿಯೆಡೆಗೆ ತೋರಿದ ಆಸಕ್ತಿ ವಿಶಿಷ್ಟವಾದುದು. ಇಷ್ಟೊಂದು ಸಂಖ್ಯೆಯಲ್ಲಿ ಆಗಮಿಸಿದ ಶಿಬಿರಾರ್ಥಿಗಳಿಗೆ ಜಗತ್ತಿನ ಶ್ರೇಷ್ಠ ನಾಟಕಕಾರ ವಿಲಿಯಂ ಷೇಕ್ಸ್ಪಿಯರ್‌ನನ್ನು ಪರಿಚಯಿಸುವ ನಿಟ್ಟಿನಲ್ಲಿ `ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕವನ್ನು ಆಡಿಸಲಾಗುತ್ತಿದೆ.
ಶ್ರೀ ಜಯತೀರ್ಥ ಜೋಶಿಭೂಮಿಕಾ ರಂಗಶಿಬಿರವನ್ನು ಅದ್ವಿತೀಯ ರಂಗಕರ್ಮಿ ಶ್ರೀ ಜಯತೀರ್ಥ ಜೋಶಿಯವರ ನೆನಪಿನಲ್ಲಿ ನಡೆಸುತ್ತಿರುವುದು ವಿಶೇಷದ ಸಂಗತಿ. ವಿಶ್ವದ ಯಾವುದೇ ಶ್ರೇಷ್ಠ ರಂಗಕರ್ಮಿಗೆ ಕಡಿಮೆಯಲ್ಲದ ಶ್ರೀ ಜಯತೀರ್ಥ ಜೋಶಿ ಇಂದು ರಂಗಕರ್ಮಿಗಳ ಹಾಗೂ ರಂಗಾಸಕ್ತರ ಮನಸ್ಸಿನಿಂದ ಮರೆಯಾಗುತ್ತಿರುವಾಗ, ಅವರ ನೆನಪಿನಲ್ಲಿ ರಂಗಶಿಬಿರವನ್ನು ಆಯೋಜಿಸಿ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ರಂಗಭೂಮಿಗೆ ಇನ್ನಷ್ಟು ಹೊಸ ಕಲಾವಿದರನ್ನು ಸ್ವಾಗತಿಸುವ ಮೂಲಕ, ಶ್ರೀ ಜೋಶಿಯವರ ಪರಂಪರೆಯನ್ನು ಮುಂದುವರೆಸಲು ರಂಗವಲ್ಲಿ ಹೆಮ್ಮೆಪಡುತ್ತದೆ.

ಜಯತೀರ್ಥ ಜೋಶಿ ಅವರು ೧೯೫೭ರ ಜುಲೈ ೨೪ರಂದು ಗದಗ ಜಿಲ್ಲೆಯಲ್ಲಿ ಜನಿಸಿದರು. ತಂದೆ ಸಂಸ್ಕೃತ ಹಾಗೂ ಆಂಗ್ಲಭಾಷೆಯಲ್ಲಿ ಪ್ರಕಾಂಡ ಪಂಡಿತರಾಗಿದ್ದ ಶ್ರೀ ಗುರಾಚಾರ್ಯ ಚೋಶಿ, ತಾಯಿ ಶ್ರೀಮತಿ ಗೋದಾವರಿ ಬಾಯಿ. ಭಾರತ ರತ್ನ ಪಂಡಿತ ಭೀಮಸೇನ ಜೋಶಿ ಇವರ ಅಣ್ಣ. ಖ್ಯಾತ ನಾಟಕಕಾರಜಡಭರತ ಶ್ರೀ ಜಿ.ಬಿ. ಜೋಶಿ ಇವರ ಚಿಕ್ಕಪ್ಪ. ಮನೆಯಲ್ಲಿ ಸಾಹಿತ್ಯ ಮತ್ತು ಸಂಗೀತದ ದಟ್ಟ ವಾತಾವರಣವಿದ್ದರೂ ಇವರು ಆಯ್ದುಕೊಂಡಿದ್ದು ರಂಗಭೂಮಿಯನ್ನು.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ ಹೈದರಾಬಾದಿನಲ್ಲಿ ಕೆಲಸಕ್ಕೆ ಸೇರಿಕೊಂಡರು. ಯಾವುದೋ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಾಗ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ಜಾಹೀರಾತು ನೋಡಿ, ಚಿಕ್ಕಪ ಜಿ.ಬಿ. ಜೋಶಿ ಅವರಿಂದ ಸಲಹೆ ಪ್ರೋತ್ಸಾಹ ಪಡೆದು ರಾಷ್ಟ್ರೀಯ ನಾಟಕ ಶಾಲೆ ಸೇರಿ ೧೯೮೧-೮೨ರಲ್ಲಿ ಡಿಪ್ಲೊಮಾ ಇನ್ ಅಡ್ವಾನ್ಸ್ ಡ್ರಮಾಟ್ರಿಕ್ಸ್ ಮತ್ತುಕೋರ್ಸ್ ಆನ್ ಥಿಯೇಟರ್ ಎಜುಕೇಶನ್ ಮುಗಿಸಿ ೧೯೮೭ರಲ್ಲಿ ಬ್ರಿಟನ್ನಿನ ಲೆಂಕೆಸ್ಟರ್ ವಿವಿಯಿಂದ ನಾಟಕ ಅಧ್ಯಯನದಲ್ಲಿ ಎಂ.ಎ. ಪದವಿ ಪಡೆದರು.
ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಹಾಗು ನಾಟಕ ವಿಭಾಗದಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜೋಶಿಯವರನ್ನು ಕರ್ನಾಟಕ ಸರ್ಕಾರವು ೧೯೮೯ರಲ್ಲಿ ಬಿ.ವಿ. ಕಾರಂತರು ಸ್ಥಾಪಿಸಿದ ರಂಗಾಯಣಕ್ಕೆ ಮೊತ್ತ ಮೊದಲ ಆಡಳಿತಾಧಿಕಾರಿಯಾಗಿ ನಿಯೋಜಿಸಿತು. ರಂಗಾಯಣದ ಶೈಶವಾವಸ್ಥೆಯ ಆರಂಭದ ಐದು ವರ್ಷಗಳು ಕಾರಂತರೊಂದಿಗೆ ಕೈ ಜೋಡಿಸಿ ದುಡಿದಿದ್ದು ಜೋಶಿಯವರ ಬದುಕಿನ ಅತ್ಯಂತ ಮಹತ್ವದ ಮಜಲು.
ಖ್ಯಾತ ನಿರ್ದೇಶಕರಾದ ಶ್ರೀ ಎಸ್.ರಘುನಂದನ, ಸಿ. ಬಸವಲಿಂಗಯ್ಯ, ಪಿ. ಗಂಗಾಧರ ಸ್ವಾಮಿ, ಪ್ರಸಿದ್ಧ ರಂಗವಿನ್ಯಾಸಕ ಹೆಚ್.ಕೆ. ದ್ವಾರಕಾನಾಥ್, ಖ್ಯಾತ ಕವಿ, ನಾಟಕಕಾರ, ಚಲನಚಿತ್ರ ಸಂಭಾಷಣಾಕಾರ ಹಾಗೂ ರಂಗಸಂಗೀತ ತಜ್ಞರಾದ ಹೆಚ್.ಕೆ. ಯೋಗಾನರಸಿಂಹ (ಯೋಗಣ್ಣ) ಕನ್ನಡ ರಂಗಭೂಮಿಯ ಖ್ಯಾತ ನಟ ದಿವಂಗತ ಏಣಗಿ ನಟರಾಜ್, ರಂಗಸAಗೀತ ತಜ್ಞ ಶ್ರೀನಿವಾಸಭಟ್ (ಚೀನಿ) ಸೇರಿದಂತೆ ಹಲವು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಸಿದ್ಧ ಶಿಕ್ಷಕ-ಪ್ರಶಿಕ್ಷಕರೊಡನೆ ಸೇರಿ ಅಂದಿನ ರಂಗಾಯಣದ ಕಲಾವಿದರಿಗೆ ಅತ್ಯಂತ ಸಮರ್ಥವಾದ ಹಾಗೂ ವಿಶಿಷ್ಟವಾದ ರಂಗಶಿಕ್ಷಣ ನೀಡಿ ಅವರನ್ನು ಪರಿಪೂರ್ಣ ಕಲಾವಿದರನ್ನಾಗಿ ರೂಪಿಸಿದರು.
ರಂಗಾಯಣಕ್ಕಾಗಿ ಅವರು ೧೯೯೦ರಲ್ಲಿ ನಿರ್ದೇಶಿಸಿದ ಶ್ರೀ ಗೋಪಾಲಕೃಷ್ಣ ಅಡಿಗರ ಕವನಭೂಮಿಗೀತ ಒಂದು ವಿಶಿಷ್ಟ ರಂಗಪ್ರಯೋಗವಾಗಿ ಮೂಡಿಬಂತು. ರಂಗಕರ್ಮಿಗಳು, ಸಾಹಿತಿಗಳು ಹಾಗೂ ಪ್ರೇಕ್ಷಕರೆಲ್ಲರೂ ಮುಕ್ತಕಂಠದಿಂದ ಪ್ರಶಂಶಿಸಿದ ಕನ್ನಡ ರಂಗಭೂಮಿಯ ವಿನೂತನ ಪ್ರಯೋಗವಾಗಿತ್ತು. ರಂಗಾಯಣದಲ್ಲಿ ಇದಕ್ಕಾಗಿಯೇ ನಿರ್ಮಿತವಾದ ರಂಗಮಂದಿರದಲ್ಲಿ ಪ್ರಥಮ ಪ್ರದರ್ಶನ ಕಂಡು ಆ ರಂಗಮಂದಿರಕ್ಕೆ ಭೂಮಿಗೀತ ಎಂದು ಹೆಸರು ಬರಲು ಕಾರಣವಾಯಿತು.

೧೯೯೪ರಲ್ಲಿ ರಂಗಾಯಣಕ್ಕಾಗಿ ಗಿರೀಶ್ ಕಾರ್ನಾಡರತಲೆದಂಡ, ಬೆಕೆಟ್ ರಚಿಸಿದ ಹ್ಯಾಪಿ ಡೇಸ್',ಎಂಡ್ ಗೇಮ್’ ಮತ್ತು ಅಯೊನೆಸ್ಕೊ ರಚಿಸಿದ ದಿ ಚೇರ್' ನಾಟಕಗಳನ್ನು ನಿರ್ದೇಶಿಸಿದರು. ಚಂದ್ರಕಾಂತ ಕುಸನೂರರು ರಂಗರೂಪಕ್ಕಿಳಿಸಿದ ರಾವ್ ಬಹದ್ದೂರರಗ್ರಾಮಾಯಣ ನಿರ್ದೇಶಿಸಿದರು.
ಅನೇಕ ಗುರುತರವಾದ ರಂಗಸಾಧನೆಗಳನ್ನು ಮಾಡಿದ್ದರೂ ಯಾವ ಪ್ರಚಾರದ ಆಸೆಯೂ ಇಲ್ಲದ, ಯಾವ ಮನ್ನಣೆಗಳನ್ನು ಅಪೇಕ್ಷೆ ಪಡದ, ಪ್ರಶಸ್ತಿ ಪುರಸ್ಕಾರಗಳಿಂದ ತುಂಬಾ ದೂರವೇ ಉಳಿದ ಒಂದು ಅದ್ಭುತ ರಂಗಚೇತನ ಶ್ರೀ ಜಯತೀರ್ಥ ಜೋಶಿಯವರನ್ನು ರಂಗವಲ್ಲಿ ತಂಡ ಭೂಮಿಕಾ ರಂಗಶಿಬಿರದ ಮೂಲಕ ಸ್ಮರಿಸುತ್ತಾ ಯುವ ಪೀಳಿಗೆಗೆ ಪರಿಚಯಿಸುವುದು ತನ್ನ ವಿನಮ್ರ ಕರ್ತವ್ಯವೆಂದು ಭಾವಿಸುತ್ತದೆ.







0 Comments