
ಸಾಸ್ವೆಹಳ್ಳಿ ಸತೀಶ್
ಗೆಳೆಯ ಶ್ರೀಪಾದ ಭಟ್ ಹವ್ಯಾಸಿ ರಂಗಭೂಮಿಗೆ ಘನತೆ ತಂದವರು.
ಅವರ ನಾಟಕಗಳು ವಿಶಿಷ್ಟವಾಗಿರುತ್ತಲೇ ಸಮಕಾಲೀನ ವಿಷಯಗಳನ್ನು ಚರ್ಚಿಸುತ್ತವೆ.
ಸಾಲು ಸಾಲಿಗೆ ಒಳ್ಳೆಯ ನಾಟಕಗಳನ್ನು ಕೊಡುತ್ತಿರುವ ಇವರು ಹಳ್ಳಿಗಳು ತಾಲೂಕು ಕೇಂದ್ರದ ತಂಡಗಳನ್ನು ಆಯ್ದು ಕೊಳ್ಳುವುದು ವಿಶೇಷ. ಗ್ರಾಮೀಣ ಭಾಗದ ಒಲವಿರುವ ಹಳ್ಳಿಯವರೇ ಆಗಿರುವ ಇವರನ್ನು ಗುರುತಿಸಿ ‘ಅವಧಿ’ ತಂಡ ರಂಗಶಂಕರದಲ್ಲಿ ಉತ್ಸವ ಮಾಡುತ್ತಿರುವುದು ನಮಗೆಲ್ಲಾ ಖುಷಿ ತಂದಿದೆ.
ಶ್ರೀಪಾದ್ ಇದಕ್ಕೆ ಅರ್ಹರೂಕೂಡಾ.
ನಾಟಕೋತ್ಸವ ಯಶಸ್ವಿ ಆಗಲಿ. ಮೂರು ತಿಂಗಳಿಗೊ ಆರು ತಿಂಗಳಿಗೊ ರಂಗಶಂಕರದವರು ಶನಿವಾರ ಭಾನುವಾರ ಹೊರಗಿನವರಿಗೆ ಬಿಟ್ಟು ಕೊಟ್ಟರೆ ನಮ್ಮ ಒಳ್ಳೆಯ ಪ್ರಯೊಗಗಳನ್ನು ಮಾಡಲು ನಾವೆಲ್ಲಾ ಮನಸ್ಸು ಮಾಡಬಹುದು. ಈ ಉತ್ಸವದ ಯಶಸ್ಸಿನ ನಂತರವಾದರೂ ಅದು ಸಾಕಾರಗೊಳ್ಳಲಿ.
ಅಭಿನಂದನೆಗಳು ಶ್ರೀಪಾದ್. ನಮ್ಮೆಲ್ಲರ ಪರವಾಗಿ ‘ಅವಧಿ’ಗೆ ಧನ್ಯವಾದಗಳು.






ಉತ್ತರಕನ್ನಡ ರಂಗಭೂಮಿಯ ಅದ್ಭುತ ಕೊಡುಗೆಯಾಗಿರುವ ಶ್ರೀಪಾದ ಭಟ್ಟರ ಬೆಳವಣಿಗೆ ಕಂಡು ಖುಷಿಯಾಗುತ್ತಿದೆ. ಪರಂಪರೆಯ ಬೇರು, ಆಧುನಿಕತೆಯ ಕಾಂಡದಲ್ಲಿ ಅರಳುತ್ತಿರುವ ಅವರ ರಂಗಕಾವ್ಯಗಳೆಲ್ಲ ಬುದ್ದಿ ಭಾವಗಳನ್ನು ಏಕಕಾಲದಲ್ಲಿ ಆವರಿಸುತ್ತದೆ. ಅಪ್ಪಟ ಮಾನವೀಯ ಕಾಳಜಿ, ಅವರೆಲ್ಲ ಪ್ರಯೋಗಗಳಲ್ಲಿ ಎದ್ದು ತೋರುತ್ತದೆ. ಸೃಜನಶೀಲ ಪ್ರಯೋಗಗಳೆಂದರೆ ಯಾವುದೇ ಸಿದ್ಧಾಂತದ ಯಾವುದೋ ಬದ್ಧತೆಯ ಪ್ರತಿಪಾದನೆಯಲ್ಲ. ನಮ್ಮೊಳಗಿನ ಜಡತೆಯನ್ನು ಛಿದ್ರಿಸಿ ಮಾನವೀಯ ನೆಲೆಗೆ ಸಿದ್ಧಗೊಳಿಸುವ ಒಂದು ಸುಂದರ ಪಾಠಶಾಲೆ ಈ ರಂಗಭೂಮಿ, ಎಂಬುದನ್ನು ಸಾಬೀತು ಗೊಳಿಸುತ್ತಿರುವ ಶ್ರೀಪಾದರ ಸಾಧನೆಯನ್ನು ನಮ್ಮ “ಅವಧಿ” ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನೀಯ.