ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಕ್ಕೆ 'ರಂಗಜಂಗಮ'

15 ವಸಂತದ ಸಂಭ್ರಮದಲ್ಲಿ ‘ಸಂಚಾರಿ ಥಿಯೇಟರ್’-
ರಂಗಕ್ಕೆ ‘ರಂಗಜಂಗಮ’

ಈ ಆಗಸ್ಟ್ 3 ಕ್ಕೆ ಸಂಚಾರಿ ಥಿಯೇಟರ್ 15 ವರ್ಷಗಳು ತುಂಬಿ 16 ನೇ ವರ್ಷಕ್ಕೆ ಕಾಲಿರಿಸಿದೆ. ಈ ಹದಿನೈದು ವರ್ಷಗಳಲ್ಲಿ ಸಂಚಾರಿ ಥಿಯೇಟರ್ ಸುಮರು 30 ನಾಟಕಗಳನ್ನು ಕಟ್ಟಿದೆ. ಹಲವಾರು ಜನ ಕಲಾವಿದರು
ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಹಳಬರೊಂದಿಗೆ ಹೊಸಬರು ಬೆರೆತು ಹೋಗಿದ್ದಾರೆ. ಹಲವರು ರಂಗಭೂಮಿಯಾಚೆಗೂ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಜೊತೆಜೊತೆಗೆ ನಟನೆಯ ಪಾಠಗಳು, ಅಭಿನಯ
ತರಗತಿಗಳು, ಮಕ್ಕಳ ವಾರಾಂತ್ಯ ಶಿಬಿರಗಳು, ಬೇಸಿಗೆ ವಸತಿ ಸಹಿತ ಶಿಬಿರ, ಹೊಸ ಹೊಸ ನಾಟಕಗಳು, ಸಂಚಾರಿಯ ನಾಟಕ ಪ್ರದರ್ಶನಗಳು, ಸುತ್ತಾಟಗಳು, ತಾಲೀಮು, ಕಾರ್ಯಾಗಾರಗಳು ನಡೆಯುತ್ತಲೇ
ಬಂದಿದೆ. ಈಗ 15 ನೇ ವರ್ಷದ ಸಂಭ್ರಮದ ಸಡಗರಕ್ಕೆ ಪ್ರತಿ ತಿಂಗಳು ನಾಟಕದ ಪ್ರದರ್ಶನ ನೀಡುವ ಯೋಜನೆಯಲ್ಲಿ ಇದೇ ಆಗಸ್ಟ್ 16 ರಂದು ರಂಗಜಂಗಮ ನಾಟಕದ ಮೂಲಕ ಸಡಗರಕ್ಕೆ ಚಾಲನೆ ಸಿಗುತ್ತದೆ.
ತಿಂಗಳಿಗೊಂದೊಂದು ಕಡೆ ತಿಂಗಳಿಗೊಂದೊಂದು ನಾಟಕ ಮಾಡುವ ಸಂಭ್ರಮ ನಮ್ಮದು.

ಸಂಚಾರಿ ಸಡಗರ -15 ರ ಮೊದಲ ಪ್ರದರ್ಶನ “ರಂಗಜಂಗಮ”
ಬಿ.ವಿ.ಕಾರಂತರನ್ನು ಹುಡುಕುವ ಒಂದು ಪ್ರಯತ್ನ.

ಸಂಚಾರಿ ಥಿಯೇಟರ್ ಅಭಿನಯಿಸುವ ರಂಗಪ್ರಯೋಗ
‘ರಂಗಜಂಗಮ”
ರಚನೆ ಮತ್ತು ನಿರ್ದೇಶನ : ಎಸ್. ರಾಮನಾಥ
ದಿನಾಂಕ ಆಗಸ್ಟ್ 16 ರಂದು, ರಂಗಶಂಕರದಲ್ಲಿ, ಸಂಜೆ 7.30 ಗೆ
ರಂಗಜಂಗಮ ಶ್ರೀ ಬಿ.ವಿ. ಕಾರಂತರು, ಈ ದೇಶ ಕಂಡ ಅಪರೂಪದ ರಂಗತಗ್ನರಲ್ಲೊಬ್ಬರು. ವೃತ್ತಿರಂಗಭೂಮಿಯ ಮೂಲಕ ತಮ್ಮ ರಂಗಪಯಣವನ್ನು ಪ್ರಾರಂಭಿಸಿ, ದೆಹಲಿಯ ರಾಷ್ಟ್ರೀಯ ನಾಟಕಶಾಲೆಯವರೆಗೂ ನಡೆದು,
ಅದರ ನಿರ್ದೇಶಕರೂ ಆಗಿ ರಂಗಭೂಮಿಯ ಎಲ್ಲ ಮಜಲುಗಳಲ್ಲಿ ಅಪಾರ ಅನುಭವ ಪಡೆದವರು. ಭಾರತೀಯ ರಂಗಭೂಮಿಗೆ ಇವರ ಕೊಡುಗೆ ಅಪಾರ ಅಂತೆಯೇ ಇವರು ಆಧುನಿಕ ಕನ್ನಡ ರಂಗಭೂಮಿಯ ಆದ್ಯ ಪ್ರವರ್ತಕರಲ್ಲೊಬ್ಬರೂ ಹೌದು.
ಪ್ರಸ್ತುತ, “ರಂಗಜಂಗಮ “, ಶ್ರೀ ಬಿ.ವಿ. ಕಾರಂತರ ವ್ಯಕ್ತಿತ್ವವನ್ನು ಅವರೇ ನಿರ್ದೇಶಿಸಿದ ನಾಟಕದ ಪಾತ್ರಗಳ ಮೂಲಕ, ಅವರೇ ಸಂಗೀತ ಸಂಯೋಜಿಸಿದ
ರಂಗಗೀತೆಗಳ ಮೂಲಕ ಕಂಡುಕೊಳ್ಳುವ ಅಪರೂಪದ ಪ್ರಯತ್ನ . ಈ ಪ್ರಯೋಗದಲ್ಲೊಂದು ಕತೆ ಇದೆ. ಅದು ರಂಗಭೂಮಿಗೆ ಸಂಬಂಧಪಟ್ಟದ್ದು. ನಟ, ಪಾತ್ರ, ನಾಟಕಕಾರ, ರಂಗಸಂಗೀತ ಇವೇ ಮುಂತಾದವು ಈ ಪ್ರಯೋಗದ
ಪಾತ್ರಗಳಾಗಿವೆ. ಶ್ರೀ ಬಿ.ವಿ.ಕಾರಂತರು ರಂಗಭೂಮಿಯ ಬಗ್ಗೆ ಹೊಂದಿದ್ದ ಅಭಿಪ್ರಾಯಗಳೇ ಈ ಪ್ರಯೋಗದ ಸಂಭಾಷಣೆಯಾಗಿದೆ. ಈ ಪ್ರಯೋಗದ ಪಾತ್ರಗಳು ತಮ್ಮೊಳಗೆ ತಮ್ಮ ಬಗ್ಗೆಯೇ ನಡೆಸುವ ರಂಗಭೂಮಿ ಕುರಿತ
ಜಿಜ್ಞಾಸೆಯ ಮೂಲಕ ಬಿ.ವಿ. ಕಾರಂತರ ವ್ಯಕ್ತಿತ್ವವನ್ನು ಅವರು ಬದುಕಿ ಬಾಳಿದ ರಂಗಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ.

‍ಲೇಖಕರು avadhi

13 August, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading