ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯು.ಪಿ. ಉಪಾಧ್ಯಾಯ ಎಂದರೆ ಒಂದು ಯೂನಿವರ್ಸಿಟಿ

ಸುಚಿತ್ ಕೋಟ್ಯಾನ್ 

ತುಳು ಭಾಷೆಗೆ ಬಹುದೊಡ್ಡ ಕೊಡುಗೆ ನೀಡಿದ ಯು.ಪಿ. ಉಪಾಧ್ಯಾಯರು ನಮ್ಮನ್ನಗಲಿದ್ದಾರೆ..

ಅಗಲಿದ ಹಿರಿಯರಿಗೆ ಭಾವಪೂರ್ಣ ಶೃದ್ಧಾಂಜಲಿ..

ಒಂದು ಯೂನಿವರ್ಸಿಟಿ ಮಾಡುವ ಕೆಲಸವನ್ನು ಉಪಾಧ್ಯಾಯ ದಂಪತಿಗಳಿಬ್ಬರೇ ಮಾಡಿದ್ದರು..

ನಮ್ಮ ಎಂಜಿಎಂ ಕ್ಯಾಂಪಸ್ಸಿನಲ್ಲಿ ಆ ಹಿರಿಯ ಜೀವಗಳನ್ನು ಕಂಡಾಗಲೆಲ್ಲ ಕೈಮುಗಿಯುತ್ತಿದ್ದೆ..

ತುಳು ನಿಘಂಟಿನ ಆರು ಸಂಪುಟಗಳು, ಸಂಕ್ಷಿಪ್ತ ಪದಕೋಶಗಳನ್ನು ನನ್ನ ಖಾಸಗಿ ಗ್ರಂಥಾಲಯದಲ್ಲಿ ಮುಟ್ಟಿನೋಡುವಾಗಲೆಲ್ಲಾ ಇವರ ಮೇಲಿನ ಪ್ರೀತಿ,ಗೌರವ ನೂರ್ಮಡಿಯಾಗುತ್ತೆ..

ನಮ್ಮ ಕ್ಯಾಂಪಸ್ಸಿನಲ್ಲಿ ಆಗಾಗ ಕಾಣಿಸಿಕೊಳ್ಳುವ ಕೆ.ಪಿ.ರಾವ್, ಎನ್.ಟಿ. ಭಟ್, ಕು.ಗೋ, ಕುಂಡಂತಾಯರು, ತೀರಾ ಇತ್ತೀಚೆಗಿನವರೆಗೂ ಕಾಣಿಸುತ್ತಿದ್ದ ಯು.ಪಿ.ಉಪಾಧ್ಯಾಯರು, ಏರ್ಯರು ಇವರೆಲ್ಲ ನಮ್ಮ ಹೆಚ್ಚಿನ ವಿದ್ಯಾರ್ಥಿಗಳಿಗೆ ಅಪರಿಚಿತರು..

ಅವರು ಈ ಮಣ್ಣಿಗೆ, ಭಾಷೆಗೆ, ಸಂಸ್ಕೃತಿಗೆ ಕೊಟ್ಟಿರುವ ಕೊಡುಗೆ ನಮ್ಮ ಯುವ ಜನಾಂಗಕ್ಕೆ ಗೊತ್ತಿಲ್ಲ.. ಅವರ ಅಪಾರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೇರವಾಗಿ ಮುಟ್ಟಿಸುವುದಕ್ಕಾಗುತ್ತಿಲ್ಲವಲ್ಲ ಅನ್ನುವ ನೋವೊಂದು ಕಾಡುತ್ತಲೇ ಇರುತ್ತದೆ..

‍ಲೇಖಕರು avadhi

19 July, 2020

1 Comment

  1. Prajna Mattihalli

    Good writing Suchit Kotyan

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading