ಪಲ್ಲವಿ ರಾವ್
ಬಿಡುಗಡೆಯ ಮೊದಲೇ ಎರಡನೆಯ ಮುದ್ರಣಕ್ಕೆ ಹೋಗಿ ಅಪಾರ ನಿರೀಕ್ಷೆ ಹುಟ್ಟುಹಾಕಿದ ,ಕನ್ನಡದ ಮೊದಲ ಆಕಾಶಯಾನದ ಕಾದಂಬರಿ ಇತ್ಯಾದಿ ಇತ್ಯಾದಿ ವಿಷೇಷಣಗಳೊಂದಿಗೆ ಕೈ ಸೇರಿದ ‘ಯಾನ’ ಎರಡು ಪುಟದ ನಂತರ ಓದಲೇನೂ ಇಲ್ಲವೆನ್ನುವಂತೆ ಅಸಹನೆ ಹುಟ್ಟಿಸಿತು.
ಮತ್ತದೇ ಪರಿಚಿತ ಭೈರಪ್ಪ ಬ್ರಾಂಡ್ ಸ್ತ್ರೀ-ಪುರುಷ ಸಂಬಂಧ ವಿಷ್ಲೇಷಣೆ…ಮತ್ತದೇ ಕೆಲಸ ಮಾಡುವ ಆಧುನಿಕ ಮಹಿಳೆಯ ಬಗೆಗಿನ ಅಸಹನೆ..ವ್ಯತ್ಯಾಸವೆಂದರೆ ಈ ಬಾರಿ ನಾಯಕಿ ಫೈಟರ್ ಪೈಲಟ್, ನಾಯಕ ವಿಜ್ಞಾನಿ,ಆದರೂ ಅವನೊಳಗೂ ಭೈರಪ್ಪನವರ ಪರಕಾಯ ಪ್ರವೇಶ…”ಗರ್ಭ ಧರಿಸುವುದು ಮತ್ತು ಸಾಕಿ ಸಲಹುವುದು ಹೆಣ್ಣಿನ ಕರ್ತವ್ಯ, ಸಧ್ಯ ಅಡುಗೆ ಮಾಡಿದ್ದಳು ಅಪ್ಪಟ ಗೃಹಿಣಿಯಂತೆ, ಗಂಡಂದಿರಿಗೆ ಪ್ರಿಯವಾಗುವ ತೆಳು ಮೈಕಟ್ಟು , ಹೆಣ್ಣು ಕೆಲವೊಮ್ಮೆ ಅತ್ಯಾಚಾರವನ್ನು ಬಯಸುತ್ತಾಳೆ, ಮೂವತ್ತರ ನಂತರ ಮುದುಕಿ, ಇಂತಹ ತಥಾಕಥಿತ ಉಪದೇಶಗಳು ಉದ್ದಕ್ಕೂ ಸಿಗುತ್ತವೆ.
ಹೋಗಲಿ ಆ ವಿಷಯ ಬಿಟ್ಟುಬಿಡೋಣ ಅಂದರೆ ಸ್ಟಾರ್ ವಾರ್, ಅವತಾರ್ ಗಳನ್ನು ನೋಡಿ ಬೆಳೆದಿರುವವರಿಗೆ ‘ಯಾನ ‘ ಕಟ್ಟಿಕೊಡುವ ಗಗನ ಯಾತ್ರೆಯ ವಿವರಗಳು ತೀರಾ ಬೇಸಿಕ್ ಮತ್ತು ಅನ್ಇಂಟರೆಸ್ಟಿಂಗ್,ಒಮ್ಮೆ ಗೂಗಲ್ ಮಾಡಿದರೆ ಸಿಗುವ ವಿವರಗಳಿಗೆ ಅವರು ಅಷ್ಟೊಂದು ದಿನ ರಿಸರ್ಚ್ ಮಾಡಬೇಕಿತ್ತೆ? ಅನ್ನಿಸುತ್ತದೆ.ಇಲ್ಲೂ ಪ್ರಣಾಳ ಶಿಶು, ಸರೋಗೇಟ್ ಮದರ್ ಬಗೆಗೆ ತೀರಾ ತೆಳು ವಿವರಗಳು ಮತ್ತು ಇದು ನಿಸರ್ಗ ವಿರುಧ್ಧ , ಹೆಣ್ನಿನ ಸ್ವಾತಂತ್ರ್ಯದ ಹಂಬಲ, ಪುರುಷ ಅಹಂಕಾರವನ್ನು ಒಪ್ಪಿಕೊಳ್ಳದಿರುವುದರಿಂದಲೇ ತೊಂದರೆ ಅನ್ನುವಂತೆ ಬರೆಯುತ್ತಾರೆ ಹೊರತು ಆಳಕ್ಕಿಳಿಯುವ, ವಿಜ್ಞಾನದ ಜಿಜ್ಞಾಸೆ ನಡೆಸುವ ಪ್ರಯತ್ನವೇ ಇಲ್ಲ.

ತಮಾಷೆಯೆಂದರೆ ನಾಯಕಿಯ ಕೊಬ್ಬಿನಿಂದ ದೂರ ಸರಿಯುವ ನಾಯಕನ ವಯಸ್ಸು, ದೈಹಿಕ ರೂಪುರೇಷೆಗಳ ಬಗೆಗೆ ವಿವರಗಳೇ ಇಲ್ಲ, ಇಲ್ಲಿಯೂ ಭೈರಪ್ಪನವರ ಪ್ರಕಾರ ಉನ್ನತವಾದ ಆಧ್ಯಾತ್ಮ, ಧ್ಯಾನ, ವಿಜ್ಞಾನ, ಕೇವಲ ಗಂಡಿನ ಸ್ವತ್ತು. ನಾಯಕಿ ಏನಿದ್ದರೂ ಹಿಂದಿ ಸಿನೆಮ ಹೀರೋಯಿನ್ನಂತೆ ಹಾಡಿಗೆ ಅಲ್ಲಲ್ಲ ಕೃಷಿ ಕೆಲಸಕ್ಕೆ ಮೀಸಲು, ಹುಡುಗರು ಮಾತ್ರ ಕಂಪ್ಯೂಟರ್ ನಿಪುಣರು . ಇದನ್ನು ಕೊಂಡು ಓದಿದ ನನ್ನ ಭೈರಪ್ಪ ಮೋಹಕ್ಕೆ ನಗು ಬಂತು
ಏನೋ ಗಹನವಾದ ಧರ್ಮಸಂಕಟವನ್ನು ಹೇಳ ಹೊರಟವರಂತೆ ಶುರುವಾಗುವ ‘ಯಾನ’ಏನೂ ಹೇಳದೆ ಮತ್ತೆ ಅದೇ ಹಳೆಯ ಜಾಡಿಗೆ ಹೊರಳುತ್ತದೆ ಅಲ್ಲಲ್ಲಿ ಸಂಸ್ಕೃತ ವಾಕ್ಯಗಳ ಸಮರ್ಥನೆಯೂ ನಡೆಯುತ್ತದೆ. ಇದು ನನ್ನ ದೃಷ್ಟಿಯಲ್ಲಿ ಅವರ ಕೃತಿಗಳಲ್ಲೇ ಅತ್ಯಂತ ತೆಳು ಮತ್ತು ದುರ್ಬಲ. ಈ ಕಥೆ ಹೇಳಲು ಬಾಹ್ಯಾಕಾಶ ಯಾನವೇನೂ ಬೇಕಿರಲಿಲ್ಲ ಮತ್ತು ಕಥೆಗೆ ‘ಕವಲು ಪಾರ್ಟ್ 2 ಎಂದು ಹೆಸರಿಟ್ಟರೂ ಆಗುತ್ತಿತ್ತು.
ಓದಿದ ನನ್ನಂತ ಬಹಳಷ್ಟು ಜನರಿಗೆ, ಬೀಜದ ಮೇಲಿನ ಹಕ್ಕು ಕ್ಷೇತ್ರದ್ದು ಎಂದು ವಾದಿಸುವ ‘ಪರ್ವದ’ ದಿಟ್ಟ ಕುಂತಿಯನ್ನು ಚಿತ್ರಿಸಿದ ಭೈರಪ್ಪ ಎಲ್ಲಿ ಮಾಯವಾದರು ಅನ್ನುವ ಸಂಕಟವಾಗುತ್ತದೆ.
ನೀವು ಅಪ್ಪಟ ಭೈರಪ್ಪ ಭಕ್ತರಾಗಿದ್ದರೆ ಮಾತ್ರ ನಿಮಗೆ ಈ ಕೃತಿ ರುಚಿಸಬಹುದು, ಬಾಹ್ಯಾಕಾಶದ ಬಗೆಗಿನ ಕುತೂಹಲಕ್ಕೆ ಕೃತಿ ಕೈಗೆತ್ತಿಕೊಳ್ಳುವವರಾಗಿದ್ದರೆ ಯೆಂಡಮೂರಿಯ ಹಳೆಯ ‘ಅಂಧಕಾರದಲ್ಲಿ ಸೂರ್ಯ ಮತ್ತು ಬೆಳಕಿನೆಡೆಗೆ ಸೂರ್ಯ ‘ಓದಬಹುದು ಅಥವ ಅಸಿಮೋವ್ನ Foundation series ಓದಬಹುದು .






I’ve just started reading. What surprises me is, even in space it’s the woman who cooks food 😀
Just reading the book, lets see…
For all space Odyssy lovers.. please watch “Gravity”.. amazing movie and performance by Sandra bullock.. yes, she is a woman and space scientist and a mom who has lost her child in a road accident. I couldn’t read Kavalu and left the book halfway and felt deceived and betrayed because I grew up reading Byrappa books. “Nayi neraLu” was my first mature reading book and Parva is still one of my all time fav. But from your review and many others I hear from.. I too wonder Where is Parva’s Byrappa?
Hav read many works of Bhairappa.am only halfway through yaana..let me read completely before commenting.
ಬೀಜದ ಮೇಲಿನ ಹಕ್ಕು ಕ್ಷೇತ್ರದ್ದು ಎಂದು ವಾದಿಸುವ ‘ಪರ್ವದ’ ದಿಟ್ಟ ಕುಂತಿಯನ್ನು ಚಿತ್ರಿಸಿದ ಭೈರಪ್ಪ ಎಲ್ಲಿ ಮಾಯವಾದರು ಅನ್ನುವ ಸಂಕಟವಾಗುತ್ತದೆ.
ತು೦ಬ ಚೆನ್ನಾಗಿ ಹೇಳಿದ್ದೀರಿ ಪಲ್ಲವಿ.
To some extent I agree Pallavi. It happens during high expectations.
ಬೀಜದ ಮೇಲಿನ ಹಕ್ಕು ಕ್ಷೇತ್ರದ್ದು ಎಂದು ವಾದಿಸುವ ‘ಪರ್ವದ’ ದಿಟ್ಟ ಕುಂತಿಯನ್ನು ಚಿತ್ರಿಸಿದ್ದೂ ಕೂಡ ಭೈರಪ್ಪನವರೇ ಎಂದು ಗೊತ್ತಿರುವಾಗ ಇಲ್ಲಿನ ಯಾನದ ವಿವರಣೆಗಳನ್ನು ಅಲ್ಲಿನ ಪಾತ್ರಗಳಿಗೆ ಅನ್ವಯಿಸಿಕೊಳ್ಳಬಹುದೇ ಹೊರತು ಭೈರಪ್ಪನವರಿಗಲ್ಲ. ಕುಂತಿಯ ಚಿತ್ರಣ ಇಷ್ಟವಾದವರಿಗೆ, ಆ ರೀತಿಯೇ ಎಲ್ಲಾ ಬರೆಯಬೇಕು ಎಂದು ಆಸೆಪಡುವವರಿಗೆ ಯಾನ , ಕವಲುಗಳು ನಿರಾಶೆ ಸಹಜ. ಅಂದಮೇಲೆ ಇದು ವಸ್ತುನಿಷ್ಟವಂತೂ ಅಲ್ಲ.