ವಿಜಯಭಾಸ್ಕರ ರೆಡ್ಡಿ

ಯಾದಗಿರಿಯ ರೈಲ್ವೆ ನಿಲ್ದಾಣ ಹಾದಿಯಲ್ಲಿರುವ ಮಾರಾಜ್ ಇಡ್ಲಿಯ ಈ ಚಿಕ್ಕ ಹೋಟೆಲ್ ನ ಆ ಚಟ್ನಿ ಗಮಲು ಸವಿಯಲು ಆಹಾ! ಅದೆಷ್ಟು ಚಂದ.
ಗಿರಿನಗರದ ಶುದ್ದ ಮನಸಿನ ಮಾರಾಜ್ ಸೇಟ್ ತನ್ನ ಪಾರಂಪರಿಕ ಕಾಯಕವಾದ ಈ ಇಡ್ಲಿ ಚಟ್ನಿ ಮಾಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ರುಚಿಕರ, ಸ್ವಾದಭರಿತ ಚಟ್ನಿ ನೀಡುವಲ್ಲಿ ನಿಸ್ಸೀಮರು. ಅಪ್ಪಿ ತಪ್ಪಿ ನೀವ್ಯಾರಾದರು ಯಾದಗಿರಿಗೆ ಹೋದರೆ ತಪ್ಪದೆ ಈ ಇಡ್ಲಿ ಚಟ್ನಿ ಸವಿಯಿರಿ.
ಲೊಕೇಷನ್ : ಶಾಸ್ತ್ರಿ ಚೌಕ್ ನ ನೇರ ಹಾದಿ ಹಿಡಿದು ಹೋದರೆ ರೈಲ್ವೆ ನಿಲ್ದಾಣದ ಬಲ ಭಾಗದಲ್ಲಿದೆ.
ಅಂದ ಹಾಗೆ ಯಾದಗಿರಿ ನಮ್ಮ ಅಮ್ಮ ಹುಟ್ಟಿದ ಊರು.








0 Comments