ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೋ ಮನಸ್ಸು ಭಾರವಾಗಿದೆ. .

ಕಿರಣ್ ಎಂ ಗಾಜನೂರು

ನಮ್ಮ ಕಾಲೇಜಿನ ಪಕ್ಕದ ಗದ್ದೆಯಲ್ಲಿ ಬೋರ್ ಕೊರೆಯಲು ಬಂದಿದ್ದ ಲಾರಿಯಲ್ಲಿ ನಾಲ್ಕು ಜನ ಮಧ್ಯಪ್ರದೇಶದ ಯುವಕರು ತಿಂಗಳಿಗೆ ೬೦೦೦ದ ಕೂಲಿಗೆ ಕೆಲಸ ಮಾಡುತ್ತಿದ್ದಾರೆ ೩ ದಿನದ ಹಿಂದೆ ಅದರಲ್ಲಿ ಒಬ್ಬ ಕೆಲಸ ಮತ್ತು ಬಿಸಿಲಿನ ದಣಿವಾರಿಸಿಕೊಳ್ಳಲು ಲಾರಿಯ ಕೆಳಗೆ ಮಲಗಿದ್ದಾನೆ ಅದನ್ನು ನೋಡದ ಚಾಲಕ ಆತನ ಮೇಲೆ ಲಾರಿ ಚಲಾಯಿಸಿದ್ದಾನೆ. ಪಾಪ ಉಸಿರು ತಿರುಗಿಸಿಕೊಳ್ಳಲು ಸಮಯ ಸಿಕ್ಕಿಲ್ಲ ಸ್ಥಳದಲ್ಲೆ ಅಸುನಿಗಿದ್ದಾನೆ. . . .
ಮಧ್ಯಪ್ರದೇಶದ ಯಾರದೂ ಮನೆಯ ೨೦/೨೨ ವರ್ಷದ ಯುವಕ ಕರ್ನಾಟಕದ ಶಿವಮೊಗ್ಗದಲ್ಲಿ ದುರಂತ ಸಾವಿಗೆ ಬಲಿಯಾಗಿದ್ದಾನೆ. . . ಈ ಹೆಣವಾಗಿರುವ ಆತ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮಲಗಿದ್ದಾನೆ ೨ ದಿನದ ನಂತರ ವಿಷಯ ತಿಳಿದ ಆತನ ತಂದೆ ತಾಯಿ ರೈಲು ಹತ್ತಿದ್ದಾರೆ ಅದು ಇಲ್ಲಿಗೆ ತಲುಪಲು ೬ ದಿನ ಬೇಕಂತೆ ೬ ದಿನ ಆ ತಾಯಿ ರೈಲಿನಲ್ಲಿ ಹೇಗೆ ಕಳೆಯುತ್ತಾಳೆ ಎಂಬುದನ್ನು ನೆನೆದು ಯಾಕೂ ಮನಸ್ಸು ಭಾರವಾಗಿದೆ. . .

ಉಳಿದ ಹುಡುಗರು ಊರಿಗೆ ಹೊಗುತ್ತೇವೆ ಎಂದರು ಕರೆತಂದ ಮಾಲಿಕ ಬಿಡುತ್ತಿಲ್ಲ ಮತ್ತು ಆ ಹುಡುಗರ ಮನೆಯವರ ಕರೆಗಳನ್ನು ಸ್ವಿಕರಿಸುತ್ತಿಲ್ಲ. . . ಆ ಹುಡುಗರ ಮನಸ್ಸಿನಲ್ಲಿ ಸತ್ತ ಸ್ನೇಹಿತನ ನೆನೆಪು ಕಣ್ಣಮುಂದೆ ಮನೆಗೆ ಕಳಿಸಲು ಒಪ್ಪದ ಮಾಲಿಕನ ಜಿವಂತ ಮುಖ ಎರಡು ಇವೆ . . .
ಯಾಕೆ ನಮ್ಮ ವ್ಯವಸ್ಥೆ ಹೀಗಿದೆ ನಾವು ಪಡೆದ ಶಿಕ್ಷಣ ನಮ್ಮಲ್ಲಿರುವ ತಾಂತ್ರಿಕತೆ, ಜ್ಞಾನ, ಉತ್ಕೃಷ್ಟ ಸಾರಿಗೆ ವ್ಯವಸ್ಥೆ ಮುಖ್ಯವಾಗಿ ನಮ್ಮ ಪ್ರಭುತ್ವ ಆ ಸತ್ತ ಮಗ ಮತ್ತು ರೈಲಿನಲ್ಲಿ ಪಯಣಿಸುತ್ತಿರುವ ಆ ತಾಯಿಯ ಬೇಟಿಯನ್ನು ಇಷ್ಟು ದಿರ್ಘವಾಗಿಸಬಾರದಿತ್ತು ಎಂದು ಮನಸ್ಸು ವ್ಯಾಕುಲಗೊಂಡಿದೆ. . . . .
ಬಡವರ ಪಾಲಿನ ಆಧುನಿಕತೆ ಎಂದರೆ ಇದೆ ಇರಬೇಕು. . . . ಛೇ ಪಾಪ

‍ಲೇಖಕರು G

6 February, 2013

2 Comments

  1. Santhoshkumar LM

    🙁 yappa. manassu kalakitu

  2. Shama Nandibetta

    ಉಳಿದದ್ದು ಬರಿಯ ಮೌನ.. ಅದಕ್ಕೇ ಮನಸು ಭಾರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading