ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಂತ್ರೀಕೃತ ಬದುಕಿನಲ್ಲಿ ಹೊಸ ನಾಟಕಗಳ ಹಾಗೂ ನಾಟಕಕಾರರ ಕೊರತೆ

ಶ್ರೀಪತಿ ಮಂಜನಬೈಲು

ಒಂದು ಪತ್ರಿಕಾ ವರದಿ :- ಇಂದಿನ ಯಾಂತ್ರೀಕೃತ ವೇಗದ ಬದುಕಿನಲ್ಲಿ ಪೌಷ್ಟಿಕಾಂಶ ಕಡಿಮೆ ಇರುವ ಆಹಾರ ತಿನ್ನುವುದು, ಜಂಕ್ಫುಡ್ ಸೇವನೆ, ಧೂಮಪಾನ, ಮದ್ಯಪಾನದಂತಹ ದುರಭ್ಯಾಸಗಳನ್ನು ಹೊದಿರುವ ಕಾರಣ 30 ವರ್ಷ ಮೀರಿದ ಮಹಿಳೆಯರು ಗರ್ಭ ಧರಿಸಿದರೆ ಕಡಿಮೆ ತೂಕದ ಮಗುವನ್ನು ಹೆರುವ ಸಾಧ್ಯತೆಗಳು ಹೆಚ್ಚು. ಒತ್ತಡ ಹೆಚ್ಚು ಇರುವ ಕಾರಣ ಇವರು ಪ್ರಸವ ಪೂರ್ವ ಆರೈಕೆಯನ್ನು ಸರಿಯಾಗಿ ಮಾಡುವುದಿಲ್ಲ. ಹೀಗಾಗಿ ಇವರಿಗೆ ಹುಟ್ಟಿದ ಮಗು ಕೂಡ ಆರೋಗ್ಯ ಸಮಸ್ಯೆಗಳನ್ನು ಹೊ0ದುವ ಸಾಧ್ಯತೆಗಳೂ ಇವೆ’ -ಎನ್ನುತ್ತಾರೆ ಡಾಕ್ಟರ್…………ರವರು.
ಯಾಕೋ ಈ ವರದಿ, ಮೇಲೆ ತಿಳಿಸಿರುವ ಚರ್ಚಿತವಾಗಬೇಕಾದ ವಿಷಯಕ್ಕೆ ತೀರಾ ಹತ್ತಿರದ ಸಂಬಂಧಿ ಎನಿಸಿದ್ದು. ತಾನು ಏನು ತಿನ್ನುತ್ತಿದ್ದೇನೆ, ಯಾವುದನ್ನು ಕುಡಿಯುತ್ತಿದ್ದೇನೆ, ಮತ್ತು ಯಾವ ಹೊತ್ತಿನಲ್ಲಿ ಮಲಗುತ್ತಿದ್ದೇನೆ ಅಲ್ಲದೇ ಲೈಂಗಿಕ ಕ್ರಿಯೆಗಳನ್ನು ಯಾವ ರೀತಿ ನಡೆಸುತ್ತಿದೇನೆ ಎಂಬುದರ ಕುರಿತ ಜೀವನ ಅರ್ಥೈಸುವಿಕೆಯ ಆಚೆಗೆ ನಿಂತು ಸಹಜವಾಗಿ ಮಾಡುತ್ತಿರುವಂತೆ ಕಾಣುತ್ತಿದೆ ಈ ಯಾಂತ್ರೀಕೃತ ಬದುಕಿನ ವೇಗ. ಹೀಗಾಗಿ ವೇಗದ ಬದುಕಿನಲ್ಲಿರುವ ವ್ಯಕ್ತಿಗಳ ಆಹಾರ ವಿಹಾರಗಳ ಪ್ರಭಾವದಿಂದ ಹುಟ್ಟುವ ಕಡಿಮೆ ತೂಕದ ಅಥವಾ ಆರೋಗ್ಯ ಸಮಸ್ಯೆಗಳನ್ನು ಹೊತ್ತುಕೊಂಡು ಹುಟ್ಟುವ ಮಕ್ಕಳಂತಿದೆ, ಈಗಿನ ನಗರದ ಯಾಂತ್ರೀಕೃತ ಬದುಕು ಮತ್ತು ಅವರ ಕಲಾ ಅಭಿರುಚಿ. ಪತ್ರಿಕೆಗಳು, ಟೀವಿ ಛಾನೆಲ್ಗಳು ಇನ್ನಿತರ ಪ್ರಚಾರ ಪ್ರಸಾರ ಮಾಧ್ಯಮಗಳು ಸಂಪೂರ್ಣ ನಗರದಲ್ಲೇ ಕೇಂದೀಕೃತವಾಗಿರುವುದರಿಂದ, ಈ ಮಂದಿಯ ಅರೆ ಅವಸ್ಥೆಯ ಈ ಕಲಾ ಪ್ರಕಾರಗಳಿಗೆ, ಏನೋ ಘನಂದಾರಿ ಆಗಿದೆ ಅಂತ ಪ್ರಚಾರ ಸಿಗುತ್ತದೆ. ಅದೇ ಕನ್ನಡ ಕಲಾ ಸಂಘ ಹೊಸಪೇಟೆ, ಹಾವೇರಿಯ ಒಂದು ಹಳ್ಳಿಯ ಶೇಷಗಿರಿ ಕಲಾ ತಂಡ , ಮುದ್ರಾಡಿಯ ನಮ ತುಳುವೆರ, ಹೀಗೆ ಅನೇಕ ಗ್ರಾಮೀಣ ತಂಡಗಳು ಪ್ರದರ್ಶಿಸುವ ಅತ್ಯತ್ತಮ ನಾಟಕಗಳು, ಜನಮೆಚ್ಚುಗೆಯದಾಗಿರುತ್ತದೆ, ಆದರೆ ಮೇಲಿನ ಪ್ರಚಾರ ಮಾಧ್ಯಮಗಳ ಮೆಚ್ಚುಗೆಯ ಪರಧಿಯಲ್ಲಿರುವುದಿಲ್ಲ.

ಏನಿದು ಯಾಂತ್ರೀಕೃತ ಬದುಕು? ಎಲ್ಲರ ದೃಷ್ಟಿಯಲ್ಲಿ ಇದು ನಗರ ಜೀವನಕ್ಕೆ ಸಂಬಂಧಿಸಿದ್ದು, ಅದರಲ್ಲೂ ಕಾಸ್ಮೋಪೊಲಿಟಿನ್ ನಗರಕ್ಕೆ ಹೆಚ್ಚು ಸಂಬಂಧಿಸಿದ್ದು ಅಂತ. ನಿಜವಾಗಿಯೂ ಯಾಂತ್ರೀಕೃತ ಬದುಕು ಅಂದರೆ ಹಲ್ಳಿಯ ರೈತನ ಬದುಕು. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಮೈ ಬಗ್ಗಿಸಿ ದುಡಿದು, ನೆಲಕ್ಕೆ ಮೈ ಚೆಲ್ಲಿ ಸುಖವಾಗಿ ನಿದ್ರೆ ಮಾಡುವ ಈತ, ಬಿಡುವಿನಲ್ಲಿ ಯಕ್ಷಗಾನವನ್ನು ನೋಡುತ್ತ, ತಾಳಮದ್ದಳೆಯನ್ನು ಕೇಳುತ್ತ, ನಾಟಕವನ್ನು ನೋಡುತ್ತ, ಶಾಸ್ತ್ರೀಯ ಸಂಗೀತವನ್ನು ಕೇಳುತ್ತ, ಇನ್ನೂ ಹೆಚ್ಚು ಬಿಡುವು ಸಿಕ್ಕರೆ, ಹತ್ತಿರದ ಊರಿಗೆ ಸಂಸಾರ ಸಮೇತ ಬಂದು ಸಿನೇಮಾ ನೋಡಿ ಮತ್ತೆ ಮುಂದಿನ ವಾರದ ಕೆಲಸಗಳಿಗೆ ಅಣಿಯಾಗುವವ. ಇನ್ನು ಈ ಟ್ರೆಕಿಂಗ್, ಸ್ವಿಮಿಂಗ್, ಮುಂತಾದ ನಗರದವರ ಡಂಬಾಚಾರಗಳು, ಇವರ ದೈನಂದಿನ ಕಾರ್ಯದ ಭಾಗಗಳು, ಮತ್ತು ಇವರ ಎಲ್ಲ ಕ್ರಿಯೆಗಳು ಪ್ರಕೃತಿಯ ಸಹ ವರ್ತನೆಯಲ್ಲಿ ಇರುತ್ತದೆ.

ನಗರದ ಅಥವಾ ಈ ಕಾಸ್ಮೋಪೊಲಿಟಿನ್ ನಗರದವರ ಯಾಂತ್ರೀಕೃತ ಬದುಕು; ಅಂದರೆ ವಿಷಕಂಠನ ಗಂಟಳೊಳಗಿನ ಜೀವನ. ವಾಯುಮಾಲಿನ್ಯ, ಜಲಮಾಲಿನ್ಯ, ಇಂದನ ಮಾಲಿನ್ಯ, ವಸ್ತು ಮಾಲಿನ್ಯ, ವಾಸ್ತು ಮಾಲಿನ್ಯ, ಸಂಚಾರಮಾಲಿನ್ಯ , ಆಹಾರ ಮಾಲಿನ್ಯ ಹೀಗೆ ಅನೇಕ ಮಾಲಿನ್ಯಗಳೊಳಗೆ ಬದುಕುತ್ತ, ಅನ್ಯರಿಗೆ ಈ ವಿಷಯಗಳ ಕುರಿತು ಬಾಧಕಗಳನ್ನು ಭೋಧಿಸುತ್ತ ಅದರಿಂದ ಪಾರಾಗಲು ಏನು ಮಾಡಬೇಕು ಮತ್ತು ಅದಕ್ಕೆ ಎಷ್ಟು ಹಣ ಚೆಲ್ಲಬೇಕು ಎಂದೂ ತಿಳಿಹೇಳುತ್ತಾರೆ. ಮಧ್ಯರಾತ್ರಿಯಿಂದ ಬೆಳಗಿನವರೆಗೆ ಕೆಲಸ. ಆಮೇಲೆ ಮನೆಗೆ ಬಂದು ಮನೆಯಲ್ಲಿ ಹೆಂಡತಿ ಅನ್ನೋಳು ಇದ್ದರೆ, ಅದೇನೋ ನಿದ್ರಾ ವಿಹೀನತೆಯಲ್ಲಿ ಒಂದು ಸ್ಖಲನ, ಅದೂ ಅವಸರದಲ್ಲಿ. ಇಷ್ಟಾದ ಮೇಲೆ ಹೆಂಡತಿ ಕೆಲಸಕ್ಕೆ ಹೋಗುತ್ತಾಳೆ. ಇವನು ರಾತ್ರಿ ಮಾಡಿಟ್ಟ ಅಡುಗೆಯನ್ನು ಫ್ರಿಡ್ಜ್ನಿಂದ ತೆಗೆದು ನಿದ್ರೆಯ ಮಂಪರಿನಲ್ಲಿ ತಿಂದು, ಮಲಗುತ್ತಾನೆ. ಇವರ ವಾರದ ರಜಾ ದಿನಗಳು ಎಲ್ಲ ಹೊರಗಡೆಗೆ ಮೀಸಲು. ‘ನ ಘರಕಾ, ನ ಘಾಟಕಾ’ ಅನ್ನುತ್ತಾರಲ್ಲ ಹಾಗೆ ಇವರ ಜೀವನ. ಇದೊಂದು ಪ್ರಕೃತಿ ವಿರೋಧಿ, ಅವಾಸ್ತವಗಳ ಆಗರದ ಬದುಕು. ಇದನ್ನು ನೀವು ಯಾಂತ್ರೀಕೃತ ಬದುಕು ಅಂತ ಕರಿತೀರಾದ್ರೆ ಅದು ಯಂತ್ರಗಳಿಗೆ ಆಗುವ ಅಗೋಚರ ಅವಮಾನ. ಹಾಗಾಗಿ ನನ್ನ ಪ್ರಕಾರ ಈ ಯಾಂತ್ರೀಕೃತ ಬದುಕು ಅನ್ನೋದೆ ಇಲ್ಲ. ಬದುಕ ಸಾಗಿಸಲು ಬದುಕಿನ ರೀತಿ ವಿಭಿನ್ನ. ಅದು ಮುಖ್ಯವಾಗಿ ಪ್ರಕೃತಿ ಸಹವರ್ತಿ ಬದುಕು ಮತ್ತು ಪ್ರಕೃತಿ ವಿರೋಧ ವರ್ತಿ ಬದುಕು ಅಷ್ಟೆ. ಇಂತಹ ಪರಿಯಲ್ಲಿ ನಮ್ಮ ರಂಗಭೂಮಿಗೆ ಹೊಸ ನಾಟಕಗಳ ಹಾಗೂ ನಾಟಕಕಾರ ಕೊರತೆಯ ಬಗ್ಗೆ ಚರ್ಚಿಸೋಣ!. ಓ ಮರೆತಿದ್ದೆ! ಈಗಲೂ ನಮ್ಮ ಹೆಚ್ಚಿನ ಕಲಾಕಾರರ ಬದುಕು(ನಗರ ಬದುಕಿನ ಕಲಾಕಾರರಲ್ಲ)ಪ್ರಕೃತಿ ಸಹವರ್ತ ಬದುಕಲ್ಲ. ಅವರ ಈ ಬದುಕು, ಪ್ರಕೃತಿ ಸಹವರ್ತ  ಬದುಕಿನಲ್ಲಿ ಬಾಳುವವರ ಪ್ರಕೃತಿ ಸರಿ ಇಡಲು ಸಹಾಯ ಆಗುತ್ತಿದೆ. ಇರಲಿ, ಮುಖ್ಯ ವಿಷಯಕ್ಕೆ ಬರೋಣ.
ಥೇಟರ್ ಒಂದು ಶೂನ್ಯದಲ್ಲಿ ಹುಟ್ಟುವ ಅಥವಾ ಆರಂಭವಾಗುವ ವಸ್ತುವಲ್ಲ. ಅದು ಹುಟ್ಟುವುದೇ ಸನ್ನಿವೇಶದ ತತ್ತಿಯನೊಡೆದು. ಅದು ಸಾಮಾಜಿಕ ಅಥವಾ ರಾಜಕೀಯ ಸನ್ನಿವೇಶಗಳೇ ಆಗಿರಬಹುದು. ಕಾಲಾನುಕಾಲಕ್ಕೆ ಸನ್ನಿವೇಶ ಬದಲಾಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ಆ ಕಾಲದ ತಿಳುವಳಿಕೆಯಂತೆ ಪ್ರತಿಕ್ರಿಯಿಸುತ್ತ; ಎದುರಿಸುತ್ತ ಬೆಳೆಯಬೇಕು. ಅಂದರೆ ಇದು ನಟನ ಮತ್ತು ಪ್ರೇಕ್ಷಕನ ನಡುವೆ ನಡೆವ ಒಂದು ತರಹದ ಇಂದ್ರೀಯ ಸಂಬಂಧಿತ ಸ್ತರದ ಎನ್ಕೌಂಟರ್ ಆಗಿರಬೇಕು. ಯಾಕೆಂದರೆ ಥೇಟರ್ ನಿಜ ಘಟನೆಗಳ ಅರಿವನ್ನು ಹುಟ್ಟುಹಾಕುವ ಒಂದು ಸಾಧನವಾಗಿದೆ. ಅದಕ್ಕೆ ಖ್ಯಾತ ವಿಮರ್ಶಕ ಝೀನ್ ವಿಲಾಸ್ ಹೇಳುತ್ತಾನೆ ರಂಗಭೂಮಿ ಅಂದರೆ ಯಾವತ್ತೂ ಪ್ರೇಕ್ಷಕನಿಗೆ ವಾಸ್ತವವನ್ನು ಅನುಭವಿಸುವಂತೆ ಮಾಡುವುದು. ಹೀಗಾಗಿ ರಂಗಭೂಮಿ ವಾಸ್ತವವಾಗಿ ಸತ್ಯ.
ಹೇಳಬೇಕಾದನ್ನು ಆರ್ಡರ್ ಆಫ್ ಸೆನ್ಸ್ ಪ್ರಕಾರ ಹೇಳಿದರೆ ಅಲ್ಲಿ ಪ್ರೇಕ್ಷಕ ತೊಡಗಿಕೊಳ್ಳುತ್ತಾನೆ ಮತ್ತು ಇತರರನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಾನೆ. ರಂಗತಜ್ಞ ಶ್ರೀನಿವಾಸ ಕಪ್ಪಣ್ಣ ಹೇಳುವಂತೆ ‘ರಂಗಭೂಮಿಯ ಮುಂದಿನ ಹೆಜ್ಜೆಯನ್ನು ನಿರ್ಧರಿಸಬೇಕಾಗಿರುವುದು ಕಲಾವಿದರೇ ಹೊರತು ನಾಟಕ ವಿಮರ್ಶಕರಲ್ಲ. ಇಲ್ಲಿ ಕಲಾವಿದ ಅನ್ನೋದು ಒಂದು ವಿಸ್ತೃತಾರ್ಥವುಳ್ಳ ಪದ ಅಂತ ಗ್ರಹಿಸಬೇಕು. ನಾಟಕಗಳು ಪ್ರೇಕ್ಷಕನನ್ನು ಮುಟ್ಟಬೇಕೆ ಹೊರತು, ವಿಮರ್ಶಕರು ನಾಟಕವನ್ನು ಹೇಗೆ ಗೃಹಿಸಿದ್ದಾರೆ ಎಂಬುದಲ್ಲ. ಒಂದರ್ಥದಲ್ಲಿ ನಾಟಕಕಾರರು ವಿಮರ್ಶಕ ಹಾಗೂ ಪ್ರೇಕ್ಷಕ ಈ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಯಾಕೆಂದರೆ ನಾಟಕವನ್ನು ಉಳಿಸುವ ಮತ್ತು ಬೆಳೆಸುವ ದೊಡ್ಡ ಶಕ್ತಿ ಅಂದರೆ ಪ್ರೇಕ್ಷಕ, ವಿಮರ್ಶಕನಲ್ಲ. ಭಿನ್ನರುಚಿಯ ಪ್ರೇಕ್ಷಕರಿರುವುದು ಸಹಜ, ಆದರೆ ಆ ಭಿನ್ನರುಚಿಗಳನ್ನು ಗ್ರಹಿಸಿಕೊಂಡು, ಅದರಲ್ಲಿನ ಪ್ರಭಾವಿಯಾಗುವ ರುಚಿಯನ್ನು ಮಹತ್ವವಾಗಿಸಿಬೇಕು. ವಿಮರ್ಶಕನ ಮಾತುಗಳು ಕೇವಲ ಕೆಲವೇ ಬುದ್ದಿಜೀವಿಗಳೆನಿಸಿಕೊಂಡವರ ವಲಯದಲ್ಲಿ ಹಾಗೇ ಸುತ್ತಾಡಿ, ಅದು ಸತ್ತು ಹೋಗುತ್ತದೆ. ಆದರೆ ಪ್ರೇಕ್ಷಕನದು ಹಾಗಲ್ಲ, ಅವನು ಮತ್ತಷ್ಟು ಪ್ರೇಕ್ಷಕರನ್ನು ಸೃಷ್ಟಸುತ್ತಾನೆ, ಅವನೊಬ್ಬ ತೋಂಡಿ ಪ್ರಜಾರಕ.
ಇನ್ನು ಎಂತಹ ನಾಟಕಗಳು ಬೇಕು ಅನ್ನೋದು ಮತ್ತು ಕನ್ನಡದ ಸಂದರ್ಬದಲ್ಲಿ ನಾಟಕಗಳ, ನಾಟಕಕಾರರ ಕೊರತೆ ಇದೆಯೇ ಅಂದರೆ ಇಲ್ಲ ಅನ್ನೊದು ಕಷ್ಟ. ಯಾವಾಗ ಈ ರಂಗಭೂಮಿ ಶೈಕ್ಷಣಿಕ ವಿಷಯವಾಯಿತೋ, ಆಗ ಪಾಶ್ಚಾತ್ಯ, ಪೌರ್ವಾತ್ಯ ರಂಗ ವಿಷಯಗಳು ಅತೀ ಪ್ರಭಾವ ಬೀರಿತು, ನಮ್ಮ ಪಾರಂಪರಿಕ ರಂಗ ಅದರೊಳಗೆ ಒ0ದಾಗಿ ಮಹತ್ವದ ಭಾಗವಾಗಲಿಲ್ಲ. ಇದರಿಂದಾಗಿ ಹಲವು ಕೃತಿಗಳು ವಿಮರ್ಶಕರ ಬಿಡೆಯೊಳಗೆ ಬಿದ್ದಂತೆ ರಚಿತವಾಗಿದ್ದು ಕಾಣಬಹುದಾಯಿತು. ಆ ಹೊತ್ತಿನಿಂದ ಪ್ರಯೋಗ ರಂಗಭೂಮಿ ಹುಟ್ಟಿಕೊ0ಡಿತು, ಈ ಪ್ರಯೋಗಗಳು ಹೇಗಾಯಿತೆಂದರೆ, ನೆಟ್ಟ ಒಂದು ಸಸಿ, ಬೆಳೆಯಿತೇ ಎಂದು ನೋಡಲು, ಪ್ರತಿ ದಿವಸ ಅದನ್ನು ತಗೆದು ನೋಡಿ ಮತ್ತೆ ನೆಟ್ಟು ಅದರ ಬೆಳವಣಿಗೆಯನ್ನು ಬಯಸಿದಂತಾಗಿದೆ; ನಮ್ಮ ನಾಟಕ ಪ್ರಯೋಗಗಳು. ಹೀಗಾಗಿ ಪ್ರೇಕ್ಷಕ ಗಲಿಬಿಲಿಗೊಂಡ, ಅನುಮಾನಿಸಿದ, ಸಂಶಯಿತನಾದ, ಹಾಗೇ ದೂರಾದ. ಅದಕ್ಕೆ ಸರಿಯಾಗಿ ಮನೆಯ ಊಟದ ಟೇಬಲ್ ಮೇಲೆ ಊಟ ಮಾಡುತ್ತ, ಬೆಡ್ ರೂಂನಲ್ಲಿ ಮಲಗಿಕೊಂಡೆ ಮನರಂಜನೆ ಪಡೆದುಕೊಳ್ಳುವ ವಿದ್ಯುನ್ಮಾನ ವ್ಯವಸ್ಥೆಗಳು ಬಂದಿದ್ದು, ಅವನು ಥೇಟರ್ನಿಂದ ವಿಮುಖನಾಗುವುದಕ್ಕೆ ಕಾರಣವಾಯಿತು.
ನನಗೆ ಈ ಸ0ದರ್ಭದಲ್ಲಿ ನೆನಪಾಗುವುದು ಹೆರಾಲ್ಡ್ ಕ್ಲರ್ಮನ್ ತನ್ನ ಲೈಸ್ ಲೈಕ್ ಟ್ರುತ್ ಎಂಬ ಕೃತಿಯಲ್ಲಿ ಹೇಳಿರುವ ಮಾತು ನೋಡಿ “When my detached capacity for feeling, thought, sentiment, laughter and passion are brought in to play! I am entertained , when my senses are brought into play”.
ನಮ್ಮ ನಾಟಕಗಳು ‘ಇಮಿಟೇಶನ್ ಆಪ್ ಲೈಫ್’ ಜೊತೆಗೆ ನಮ್ಮ ಪಾರಂಪರಿಕ ರಂಗಭೂಮಿಯ ಅಂಶಗಳನ್ನು ಅಡಕಿಸಿ ರಚಿಸಿವ ಕೃತಿಗಳು ಈಗಿನ ಅವಶ್ಯವೆಂದು ನನ್ನ ಭಾವನೆ. ಈ ರೀತಿ ಬರೆಯುವವರನ್ನು ಮರಾಠಿ ರಂಗಭೂಮಿಯಲ್ಲಿ ಕಾಣಬಹುದಾಗಿದೆ. ಈ ತರಹದ ಕೃತಿಗಳು ಕನ್ನಡದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣುತ್ತೇವೆ. ಈ ದೃಷ್ಟಿಯನ್ನು ಹೊ0ದಿ ಬರೆಯುವ ನಾಟಕಕಾರರು ನಮಗೆ ಬೇಕಾಗಿದ್ದಾರೆ. ಈ ನ್ಯೂನ್ಯತೆಯಿಂದಾಗಿ ಕೆಲ ನಿದರ್ೇಶಕರು ಕನ್ನಡದ ಕಥೆಗಳ ಕಡೆ ಗಮನ ಹಾಯಿಸಬೇಕಾಯಿತು. ಹೀಗೆ ಕಥೆಗಳನ್ನು ರಂಗಕ್ಕೆ ಅಳವಡಿಸಿ, ಯಶಸ್ವಿಯಾಗಿ ಪ್ರದಶರ್ಿಸದ್ದನ್ನು ಕಾಣಬಹುದು..
ರಂಗಕ್ಕೆ ಅಳವಡಿಸಬಹುದಾದ ಹಲವಾರು ಕಥೆಗಳು ನಮ್ಮಲ್ಲಿ ಇವೆ. ಜಯಂತ ಕೈಕಿಣಿಯಿಂದ ಹಿಡಿದು ನಾಗರಾಜ ವಸ್ತಾರೆ ತನಕದ ಕಥಾ ಲೇಖಕರು, ಜಾಗತೀಕರಣದ ನಂತರದ ಇಂದಿನ ಜೀವನ ರೀತಿ, ಹಳ್ಳಿಗಳೆಲ್ಲ ಮಿನಿ ಪಟ್ಟಣಗಳಾಗುತ್ತಿರುವದು, ಪಟ್ಟಣದ ಉದ್ಯೋಗ ಸಮಸ್ಯೆ, ದೈಹಿಕ ಶ್ರಮದ ಉದ್ಯೋಗಗಳಲ್ಲಿ ಕಾಮರ್ಿಕರ ಕೊರತೆ, ಕೊಳ್ಳುಬಾಕ ಹಪಾಪಿತನ, ಕೂಡಲೇ ಹಣಗಳಿಸುವ ತೃಷೆ, ಇದರಿಂದ ಆಗುವ ಕೊಲೆ ಸುಲಿಗೆಗಳು, ವಂಚನೆಮಾಡುವ ಬೋಗಸ್ ಸಂಸ್ಥೆಗಳು, ಆತ್ಮಹತ್ಯೆ, ಹೀಗೆ ಅನೇಕ ವಿಷಯಗಳನ್ನು ತಮ್ಮ ಕಥೆಗಳಲ್ಲಿ ತಂದಿದ್ದಾರೆ. ಅಲ್ಲದೆ ಈಗಿನ ಈ ಕಂಪ್ಯೂಟರ್, ಜೆನೆಟಿಕ್ಸ್ ಸಂಕರಗಳ ಪರಿಣಾಮ, ಟೆಸ್ಟ್ ಟ್ಯೂಬ್ ಬೇಬಿ, ವೀರ್ಯ ಕೃಷಿ, ಹೀಗೆ ಜೀವನ ಮೇಲೋಗರಕ್ಕಾಗಿ ಬಹಳಷ್ಟು ವಿಜ್ಞಾನ, ತಂತ್ರಜ್ಞಾನದ ಕುರಿತ ಕಥೆಗಳು ಬಂದಿವೆ. ಆದರೆ ನಮ್ಮ ನಾಟಕ ರಚನಾಕಾರರು ಈ ವಿಷಯಗಳನ್ನು ತೆಗೆದುಕೊಂಡು ನಾಟಕ ಕೃತಿ ರಚಿಸಿದ್ದು ಅಷ್ಟಾಗಿ ಕಂಡುಬಂದಿಲ್ಲ. ಜೊತೆಗೆ ಎಷ್ಟು ಜನ ನಾಟಕ ನಿರ್ದೇಶಕರುಗಳು ಈ ವಿಷಯಗಳಲ್ಲಿ ಸಾಮಾನ್ಯ ಜ್ಞಾನ ಪಡೆದುಕೊ0ಡಿದ್ದಾರೆ? ಈ ಕೆಲಸವೂ ಆಗಬೇಕಿದೆ.
ನಾನು ಕಂಡು ಕೊಂಡಂತೆ, ನಮ್ಮ ಕಥಾ ಲೇಖಕರುಗಳಲ್ಲಿ, ಇತ್ತೀಚಿಗಿನ ಹೆಚ್ಚಿನವರು ತಂತ್ರ ಜ್ಞಾನ ಮತ್ತು ವಿಜ್ಞಾನದ ವಿಷಯಗಳನ್ನು ಪ್ರಬುದ್ದವಾಗಿ ಗಳಿಸಿಕೊಂಡವರು. ಅಲ್ಲದೆ ಅವರಲ್ಲಿ ಕೆಲವರು ನಾಟಕಗಳನ್ನು ಬರೆಯುವವರೂ ಇದ್ದಾರೆ. ಹಾಗಾಗಿ ನಮ್ಮ ಇಂತಹ ಕಥಾ ಲೇಖಕರು ಈ ವಿಷಯಗಳನ್ನು ಅಳವಡಿಸಿಕೊಂಡು ನಾಟಕಗಳನ್ನು ಕೊಟ್ಟರೆ, ನಾಟಕಗಳ ಕೊರತೆ ನೀಗುವುದು ಸಾಧ್ಯವಾಗುತ್ತದೆ. ಜೊತೆಗೆ, ಸಹವರ್ತಿಯಾಗಿ ಈ ವಿಷಯಗಳ ಜ್ಞಾನ ಪಡೆದ ನಾಟಕ ನಿದರ್ೇಶಕರುಗಳೂ ಹುಟ್ಟಿಕೊಳ್ಳುತ್ತಾರೆ. ಆಗ ನಮ್ಮ ರಂಗಭೂಮಿ ಹೊಸತಿರುವನ್ನು ಕಾಣುವುದು ಖಂಡಿತ. ಹೀಗಾದಾಗ ಪ್ರಸ್ತುತ ಪ್ರೇಕ್ಷಕ ವರ್ಗದೊ0ದಿಗೆ ಹೊಸ ಪ್ರೇಕ್ಷಕ ವರ್ಗ ಸೇರಿಕೊಂಡು, ಈಗ ನಾವು ಕಾಣುತ್ತಿರುವ ಕೊರತೆಗಳ ನೀಗುವಿಕೆಯ ಉತ್ತರವಾಗಬಹುದು. ಹಾಗಾಗಲಿ ಎಂದು ನಂಬಿಕೆಯನ್ನು ವ್ಯಕ್ತಪಡಿಸುತ್ತೇನೆ.
 

‍ಲೇಖಕರು G

7 May, 2015

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. Gopaala Wajapeyi

    ಗೆಳೆಯಾ, ಒಂದು ಚಿಂತನಾರ್ಹ ಲೇಖನ. ರಂಗಭೂಮಿಯ ಕುರಿತ ನಿನ್ನ ಒಂದು ಲೇಖನ ಮಾಲೆಯನ್ನು ‘ಅವಧಿ’ಯಲ್ಲಿ ನಿರೀಕ್ಷಿಸುವೆ.

  2. narayan raichur

    kelavu uttama holahugalu lekhanadallive !! GOOD !!
    Narayan Raichur

  3. ಎನ್.ಎಸ್.ಶ್ರೀಧರ ಮೂರ್ತಿ

    ಒಂದು ರೀತಿಯಲ್ಲಿ ಎಲ್ಲಾ ಮಾಧ್ಯಮಗಳು ಸವಾಲನ್ನು ಎದುರಿಸುತ್ತಿರುವ ಕಾಲ ಇದು. ಅದರಲ್ಲಿಯೂ ರಂಗಭೂಮಿ ಸಾಹಿತ್ಯ ಮತ್ತು ಸಿನಿಮಾ ನಡುವೆ ಸಿಕ್ಕಿ ಹಾಕಿಕೊಂಡಿದೆ.ಎಷ್ಟೋಜನಕ್ಕೆ ಅದು ಚಿತ್ರರಂಗಕ್ಕೆ ಲಾಂಚ್ ಪ್ಯಾಡ್‍ ತರಹ ಆಗಿ ಬಿಟ್ಟಿದೆ. ಸಹಜವಾಗೇ ಸೃಜನಶೀಲತೆ ಕುಗ್ಗಿದೆ. ಲೇಖನದಲ್ಲಿನ ಹೊಸ ವಿಚಾರಗಳ ಹಿನ್ನಲೆಯಲ್ಲಿ ಇನ್ನಷ್ಟು ಚರ್ಚೆಗಳು ನಡೆಯ ಬೇಕಾಗಿದೆ. ಅಪರೂಪದ ಲೇಖನಕ್ಕಾಗಿ ಶ್ರೀಪತಿಯವರಿಗೆ ವಂದನೆಗಳು

  4. shobha venkatesh

    chennagide nimma lekhana…neevu helida reetiya hosa natakagalu baruthive..bareyuthiddare..pradrshanavu aguthide..narayana raichur avru helidante uttama holahagulu chennagi chitratavagide nimma lekhandalli sripati manjanbailu avare.ranga bhoomiya bagge innu ee tharahada lekhanagalu avadhiyalli barali yendu ashisuve.rangabhoomige avadhiyalli koduva prashastya kushiyaguthade.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading