ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮ್ಯೂಜಿಯಂನಲ್ಲಿ ಮೊರೆದ ಹೋರಾಟದ ಹಾಡುಗಳು..

ಬೀದಿಯಲ್ಲಿ ಮುಷ್ಟಿ ಎತ್ತಿ ಹಿಡಿದು, ಕಣ್ಣುಗಳನ್ನು ಕೆಂಡದುಂಡೆ ಮಾಡಿಕೊಂಡು, ಹರಿತವಾದ ಶಬ್ದಗಳಲ್ಲಿ ದೊಡ್ಡ ದನಿ ಎತ್ತಿ ಹಾಡಿದ್ದೂ ಹಾಡೇ ಹೌದೇನು? ಕಾರ್ಮಿಕರ ಮುಷ್ಕರದಲ್ಲಿ, ರೈತರ ಪ್ರತಿಭಟನೆಯಲ್ಲಿ, ಗಾರ್ಮೆಂಟ್ಸ್ ಕೆಲಸಗಾರರ ಧರಣಿಯಲ್ಲಿ, ರಸ್ತೆ ತಡೆಯಲ್ಲಿ, ಅಂಗನವಾಡಿ ಅಮ್ಮಂದಿರ ಆಹೋರಾತ್ರಿ ಹೋರಾಟದಲ್ಲಿ ಒಡಲ ಸಂಕಟಕ್ಕೆ ಪದ ಜೋಡಿಸಿ ಹೊರಗೆ ಹಾಕಿದದೂ ಹಾಡಾಗುತ್ತಾ ?

ಈ ಎಲ್ಲದಕ್ಕೂ ಮೊನ್ನೆ ಉತ್ತರ ಕೊಟ್ಟದ್ದು ಸುಮಂಗಲ ದಾಮೋದರನ್

ಹೋರಾಟದ ಹಾಡುಗಳ ಬಗ್ಗೆಯೇ ಸಂಶೋಧನೆ ನಡೆಸಿರುವ, ಹಲವಾರು ಪುಸ್ತಕಗಳನ್ನು ಬರೆದಿರುವ, ಅಧಿಕೃತವಾಗಿ ಮಾತನಾಡಬಲ್ಲ ಸುಮಂಗಲಾ ಮೊನ್ನೆ ಬೆಂಗಳೂರಿನಲ್ಲಿದ್ದರು. ಜೆ ಪಿ ನಗರದಲ್ಲಿರುವ ‘ಇಂಡಿಯನ್ ಮ್ಯೂಜಿಕ್ ಎಕ್ಸ್ಪೀರಿಯನ್ಸ್ ಮ್ಯೂಜಿಯಂ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ. ಅದರ ನಿರ್ದೇಶಕರಾದ ಪ್ರೀಮಾ ಜಾನ್ ಜೊತೆಗಿನ ಸಂವಾದದಲ್ಲಿ ಹೋರಾಟದ ಹಾಡುಗಳು ಹೇಗೆ ಜಗತ್ತಿನ ಸಂಗೀತದಿಂದ, ಸಾಹಿತ್ಯದಿಂದ ಸ್ಪೂರ್ತಿ ಪಡೆದವು ಎನ್ನುವುದನ್ನು ಹೇಳುತ್ತಲೇ ಹೇಗೆ ನಮ್ಮಲ್ಲಿನ ಹೋರಾಟದ ಹಾಡುಗಳು ದಶಕಗಳ ಕಾಲ ಹಿಂದಿ ಸಿನೆಮಾಗಳಿಗೆ ಪ್ರೇರಣೆಯಾಗಿದ್ದವು ಎನ್ನುವುದನ್ನೂ ವಿವರಿಸಿದರು.

ಮ್ಯೂಜಿಯಂ ನೀವೆಲ್ಲರೂ ನೋಡಲೇಬೇಕಾದ ತುಂಬಾ ವಿಭಿನ್ನವಾದ ಮ್ಯೂಜಿಯಂ. ಇಲ್ಲಿ ಎಲ್ಲಾ ರೀತಿಯ ಸಂಗೀತಕ್ಕೂ ಸ್ಥಾನವಿದೆ. ಅಲ್ಲಿ ಹಾಡು ಕೇಳಬಹುದು, ಗಾಯಕರ ಫೋಟೋ ನೋಡಬಹುದು, ನೀವೇ ಆ ಸಂಗೀತ ನುಡಿಸಬಹುದು. ಡಿಜಿಟಲ್ ಹಾಡುಗಳನ್ನು ಆಯ್ಕೆ ಮಾಡಿ ಕೇಳಬಹುದು.

ಇಂತಹ ಮ್ಯೂಜಿಯಂ ಹೋರಾಟದ ಹಾಡುಗಳಿಗೂ ಮಹತ್ವದ ಸ್ಥಾನವನ್ನು ನೀಡಿದೆ. ಇದನ್ನು ಸುಮಂಗಲಾ ಅವರೇ curate ಮಾಡಿದ್ದಾರೆ. ಆಸಕ್ತರೆಲ್ಲರಿಗೂ ಹೋರಾಟದ ಹಾಡುಗಳ ಇತಿಹಾಸ, ಪ್ರಾಮುಖ್ಯತೆ ವಿವರಿಸುತ್ತಾ ಆ ಗೀತೆಗಳನ್ನೂ ಕೇಳಿಸಿದರು.

ಅಷ್ಟೇ ಅಲ್ಲದೆ ಸಂಜೆ ಸುಮಾರು ಒಂದೂವರೆ ಗಂಟೆ ಕಾಲ ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೆ ಹೋರಾಟದ ಹಾಡುಗಳು ಸಾಗಿ ಬಂದದ್ದನ್ನು ತಮ್ಮ ತಂಡದೊಂದಿಗೆ ಹಾಡಿ ತೋರಿಸಿದರು. ಅವರು ಕಾರ್ಯಕ್ರಮ ಮುಗಿಸಲು ಕೇಳುಗರೆ ಬಿಡಲಿಲ್ಲ. ಕೊನೆಗೆ ಇವತ್ತಿನ ಪ್ರಭುತ್ವಕ್ಕೆ ಚುಚ್ಚು ಮುಳ್ಳಾಗಿರುವ ‘ಹಮ್ ದೇಖೇಂಗೆ’ ಜೊತೆಗೆ ಮುಗಿಯಿತು.

‍ಲೇಖಕರು Admin

13 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading