ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋದಿ ಗೆಟಪ್ ನಲ್ಲಿ ಉಪ್ಪಿ

ರಿಯಲ್ ಸ್ಟಾರ್ ಉಪೇಂದ್ರ್ ಮೋದಿ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಟೋರಾಜ, ಡಿಕೆ, ಕಳ್ಳ ಮಳ್ಳ ಸುಳ್ಳ ಚಿತ್ರಗಳನ್ನು ನಿರ್ದೇಶಿಸಿದ ಉದಯ ಪ್ರಕಾಶ್ “ಮೋದಿ” ಎಂಬ ಹೆಸರಿನ ಚಿತ್ರಕ್ಕೆ ಆಕ್ಷನ್ಯ್ ಕಟ್ ಹೇಳಲಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಕೂಡಾ ರಿಜಿಸ್ಟರ್ ಆಗಿದೆ. ರಿಯಲ್ ಸ್ಟಾರ್ ಉಪ್ಪಿ ಈ ಚಿತ್ರದಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಚಿತ್ರದ ನಾಯಕನ ಪಾತ್ರಕ್ಕೆ  ಮೋಹನ್ ದಿವಾಕರ್ ಸೆಲೆಕ್ಟ್ ಆಗಿದ್ದಾನೆ. ಎನ್, ಕುಮಾರ್ ನಿರ್ಮಾಣದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಶುರುವಾಗಬೇಕಿರುವ ಮೋದಿ ಚಿತ್ರದ ಪೂರ್ವಭಾವಿ ಕೆಲಸಗಳು ಮುಗಿದಿವೆ. ನಿರ್ದೇಶಕ ಉದಯ ಪ್ರಕಾಶ್ ಸ್ವತಃ ಕಥೆ, ಚಿತ್ರಕಥೆ, ಬರೆದಿದ್ದು, ಪತ್ರಕರ್ತ ವಿನಾಯಕ ಕಲಗಾರು ಸಂಭಾಷಣೆಯನ್ನು ಬರೆದಿದ್ದಾರೆ. ರಾಜಕೀಯ ಎಳೆಯನ್ನಿಟ್ಟುಕೊಂಡು ಮಾಡುತ್ತಿರುವ ಈ ಚಿತ್ರದಲ್ಲಿ ತುಪ್ಪದ ಬೆಡಗಿ ರಾಗಿಣಿ ಪರ್ಸನಲ್ ಸೆಕ್ರೆಟರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ.

‍ಲೇಖಕರು admin

30 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading