ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್..

ಮೈಸೂರು ಇಂಗ್ಲಿಷ್ ಥಿಯೇಟರ್ ಫೋರಂ (METF) ವತಿಯಿಂದ ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ನ ಮೊದಲ ಆವೃತ್ತಿ ಡಿಸೆಂಬರ್ 12ರಿಂದ 14ರ ವರೆಗೆ ವಿಜಯನಗರ 1ನೇ ಹಂತದಲ್ಲಿರುವ ಜಗನ್ನಾಥ ಆರ್ಟ್ ಅಂಡ್ ಕಲ್ಚರ್ ಕೇಂದ್ರ (JCAC)ದಲ್ಲಿ ನಡೆಯಲಿದೆ. ಈ ಮೂರು ದಿನಗಳ ನಾಟಕೋತ್ಸವದಲ್ಲಿ ಇಂಗ್ಲಿಷ್ ರಂಗಭೂಮಿಯ ಪಠ್ಯದ ವಾಚನಗಳು ಮತ್ತು ನಾಟಕಗಳ ಪ್ರದರ್ಶನಗಳು ಹಮ್ಮಿಕೊಳ್ಳಲಾಗಿದೆ.

ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮವೂ ಡಿಸೆಂಬರ್ 12 ರ ಸಂಜೆ 6.00 ಗಂಟೆಗೆ ಜರುಗಲಿದ್ದು, ಡಾ. ವಿ. ಆರ್. ಅನಿಲ್ ಕುಮಾರ್, ನಿರ್ದೇಶಕರು, ಕಲ್ಪ ಹೆರಿಟೇಜ್ ಟ್ರಸ್ಟ್, ಮತ್ತು ಶ್ರೀಮತಿ ಹರಿಪ್ರಸಾದ್, ಹಿರಿಯ ರಂಗಭೂಮಿ ಕಲಾವಿದೆ, ಮೈಸೂರು ಇರಲಿದ್ದಾರೆ.

ಡಿಸೆಂ. 12ರಂದು ಸಂಜೆ 5 ಗಂಟೆಗೆ ಭಾರತೀಯ ಇಂಗ್ಲಿಷ್ ನಾಟಕಗಳ ಓದಿನ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದೆ. ಡಿಸೆಂ. 13ರಂದು ಸಂಜೆ 5 ಗಂಟೆಗೆ ಕಾವ್ಯ ವಾಚನ ಮತ್ತು ಡಿಸೆಂ. 14ರಂದು ಸಂಜೆ 5 ಗಂಟೆಗೆ ಅಂತಾರಾಷ್ಟ್ರೀಯ ಇಂಗ್ಲಿಷ್ ನಾಟಕಗಳ ವಾಚನ ನಡೆಯಲಿದೆ. ಪ್ರತಿದಿನವೂ ಸಂಜೆ ನಕ್ಷತ್ರ ಅಮ್ಫಿಥಿಯೇಟರ್‌ನಲ್ಲಿ ಓಪನ್ ಮೈಕ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನರಿಗೆ ಮುಕ್ತ ಪ್ರವೇಶವಿದೆ.

ಉತ್ಸವದಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಡಿಸೆಂ. 12ರಂದು ಸಂಜೆ 6.30ಕ್ಕೆ ಕಲಾಸರುಚಿ ಸಂಸ್ಥೆಯು ಸುಂದರ್ ಸರುಕೈ ಅವರ ರಚನೆಯ ಮತ್ತು ಬದರಿ ನಾರಾಯಣ ನಿರ್ದೇಶನದ “ಟು ಫಾದರ್ಸ್” ನಾಟಕವನ್ನು ಪ್ರದರ್ಶಿಸಲಿದೆ. ಡಿಸೆಂ. 13ರಂದು ಸಂಜೆ 6.30ಕ್ಕೆ ವೀಮೂವ್ ಥಿಯೇಟರ್ ತಂಡದ “ಹೂ ಕಿಲ್ಡ್ ಅಗಥಾ?” ನಾಟಕವನ್ನು ಪ್ರದರ್ಶಿಸಲಿದ್ದು, ಕಥೆ: ರಂಗರಾಜ ಭಟ್ರಾಚಾರ್ಯ ಮತ್ತು ಪವನ್ ಶರ್ಮಾ; ರಂಗರೂಪ: ಆದಿತ್ಯ ನಾಯಕ್; ನಿರ್ದೇಶನ: ಪವನ್ ಶರ್ಮಾ. ಡಿಸೆಂ. 14ರಂದು ಸಂಜೆ 6.30ಕ್ಕೆ ದಿ ಆ್ಯಕ್ಟರ್ಸ್ ಕಲೆಕ್ಟಿವ್ ತಂಡದ “ದಿ ಮಹಾಭಾರತ ಪ್ರಾಜೆಕ್ಟ್” ನಾಟಕದ ಪ್ರದರ್ಶನವಿರುತ್ತದೆ. ಇದರ ಆಲೋಚನೆ ಅಂಶುಲ್ ಜಂಬಾನಿ ಹಾಗೂ ಪಿ.ಐ. ರಾಜೇಶ್, ರಚನೆ ಹಾಗೂ ನಿರ್ದೇಶನ ಪಿ.ಐ. ರಾಜೇಶ್.

ಪ್ರತಿ ನಾಟಕದ ಟಿಕೆಟ್‌ ಬೆಲೆ ₹200 ಮತ್ತು ಮೂರು ದಿನಗಳ ನಾಟಕಕ್ಕೆ ಪಾಸ್ ₹500. ಟಿಕೆಟುಗಳು ಬುಕ್ ಮೈ ಶೋ ನಲ್ಲಿ ಕೂಡ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 91082 90415

ಮೈಸೂರು ಇಂಗ್ಲಿಷ್ ಥಿಯೇಟರ್ ಫೋರಂ (METF) ಮೈಸೂರಿನ ಇಂಗ್ಲಿಷ್ ರಂಗಭೂಮಿ ಆಸಕ್ತರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಸೃಜನಾತ್ಮಕ ಮಂಚ. ಇದು ಸ್ಕ್ರಿಪ್ಟ್ ವಾಚನ, ಸ್ಟೇಜ್ಡ್ ರೀಡಿಂಗ್‌ಗಳು, ರಿಹರ್ಸಲ್‌ಗಳು ಮತ್ತು ನಾಟಕ ಪ್ರದರ್ಶನಗಳ ಮೂಲಕ ರಂಗಭೂಮಿಯನ್ನು ಉತ್ತೇಜಿಸುತ್ತದೆ. METF ಕಾಲೇಜುಗಳಿಗಾಗಿ ವಿಶೇಷ ರಂಗಭೂಮಿ ಉತ್ಸವಗಳನ್ನು ಆಯೋಜಿಸಲ್ಲಾಗುತ್ತದೆ ಹಾಗೂ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಸುತ್ತದೆ. ಈ ಮೂಲಕ ಮೈಸೂರಿನ ಬೆಳೆಯುತ್ತಿರುವ ಇಂಗ್ಲಿಷ್ ರಂಗಭೂಮಿ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

‍ಲೇಖಕರು Admin

10 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading