ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರಿನಲ್ಲಿ ವಿನೂತನ್ ಕಲಾ ಪ್ರದರ್ಶನ

“ಎನ್ಚಾಂಟೆಡ್ ರಾಕ್ಸ್” ಚಿತ್ರಕಲಾ ಪ್ರದರ್ಶನವು ಮೈಸೂರಿನ ಕಾಫಿ ಸಿಟಿ, ನೆರಳು ಬೆಳಕು ಗ್ಯಾಲರಿಯಲ್ಲಿ ಉದ್ಘಾಟನೆಯಾಯಿತು.  

ಖ್ಯಾತ ವಿಮರ್ಶಕರಾದ ಓ. ಎಲ್. ನಾಗಭೂಷಣ ಸ್ವಾಮಿಯವರು ಪ್ರದರ್ಶನವನ್ನು ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ನ ಗೌರವ ಅಧ್ಯಕ್ಷರಾದ ಪ್ರೊ. ಹಿ. ಚಿ. ಬೋರಲಿಂಗಯ್ಯನವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಓ.ಎಲ್.ಎನ್ ಅವರು ಮಾತನಾಡಿ ಈಗಿನ AI ಕಾಲಘಟ್ಟದಲ್ಲಿ ಅಮೂರ್ತ ಚಿತ್ರಗಳನ್ನು ನೋಡುವ ಬಗೆ ತಿಳಿದಿರುವವರು ವಿರಳ. ನಮಗೆ ಕಲೆ ಎಂದರೆ ಕೇವಲ ಸೌಂದರ್ಯ ಪ್ರಧಾನ ಮತ್ತು ರಿಯಲಿಸ್ಟಿಕ್ ಚಿತ್ರಗಳು ಮಾತ್ರವೆ ಅನ್ನಿಸುತ್ತದೆ. ಬಾಲ್ಯದಿಂದಲೇ ಅಮೂರ್ತತೆ ಮತ್ತು ರೂಪಕಗಳನ್ನು ಗ್ರಹಿಸುವಂತೆ ಮಾಡುವುದು ಮುಖ್ಯವಾಗಿದೆ ಎಂದರು. 

ಪ್ರೊ. ಹಿ. ಚಿ. ಬೋರಲಿಂಗಯ್ಯನವರು ಮಾತನಾಡಿ ಕಲಾವಿದ ವಿನೂತನ್ ಬೋರಲಿಂಗಯ್ಯ ನವರಿಗೆ ಶುಭಕೋರಿದರು. 

ವಿನೂತನ್ ಅವರು ಮಾತನಾಡಿ ನೆರಳು ಬೆಳಕು ಗ್ಯಾಲರಿಯು ಸೀಮಿತ ವರ್ಗಕ್ಕೆ ಮಾತ್ರ ಮೀಸಲಾಗದೆ, ಸಾರ್ವಜನಿಕರಿಗೆ ತಲುಪುವಂತೆ ತಮ್ಮ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು. 

ಪ್ರದರ್ಶನವು ದಿನಾಂಕ ಡಿಸೆಂಬರ್ 4 ವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. 

‍ಲೇಖಕರು avadhi

27 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading