ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರಿನಲ್ಲಿ ಯವನಿಕ ರಂಗತಂಡದಿಂದ ರಂಗೋತ್ಸವ…

ಯವನಿಕ ರಂಗತಂಡವು 06.05.2023ರ ಶನಿವಾರ ಮತ್ತು 07.05.2023ರ ಭಾನುವಾರ ಎರಡು ದಿನಗಳ ರಂಗೋತ್ಸವವನ್ನು ಏರ್ಪಡಿಸಿದೆ. ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಎರಡೂ ದಿನ ಬೇರೆ ಬೇರೆ ರಂಗತಂಡಗಳು ನಾಟಕಗಳನ್ನು ಪ್ರದರ್ಶಿಸಲಿವೆ.

ಶನಿವಾರ ಸಂಜೆ ೭.೩೦ಕ್ಕೆ ಬೆಂಗಳೂರು ಪ್ಲೇಯರ್ಸ್ ತಂಡವು ಟಿ.ಪಿ. ಕೈಲಾಸಂ ರಚಿಸಿರುವ, ಅನುರಾಗ್‌ ಶರ್ಮ ಅವರ ನಿರ್ದೇಶನದ ‘ಗಂಡಸ್ಕತ್ರಿ’ ಎಂಬ ನಾಟಕವನ್ನು ಪ್ರಸ್ತುತಪಡಿಸಲಿದೆ.

ಭಾನುವಾರ ಸಂಜೆ ೭ ಗಂಟೆಗೆ ನೇಪಥ್ಯ ರಂಗತಂಡವು ಸಂಸ ರಚನೆಯ ‘ವಿಗಡ ವಿಕ್ರಮರಾಯ’ ನಾಟಕವನ್ನು ಮಂಜುನಾಥ್‌ ಭ್ಯಾಟೆ ಅವರ ನಿರ್ದೇಶನದಲ್ಲಿ ಅಭಿನಯಿಸಲಿದೆ.

ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ರಂಗೋತ್ಸವವವನ್ನು ಯಶಸ್ವಿಗೊಳಿಸಬೇಕು ಎಂದು ಯವನಿಕ ರಂಗತಂಡದ ಅನುರಾಗ್‌ ಶರ್ಮ ಮನವಿ ಮಾಡಿಕೊಂಡಿದ್ದಾರೆ.

‍ಲೇಖಕರು avadhi

6 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading