ಮತ್ತೊಂದು ಹೊಸ ರಂಗಪ್ರಯೋಗದೊoದಿಗೆ ಪರಿವರ್ತನ ರಂಗ ಸಮಾಜವು ಮತ್ತೆ ಮೈಸೂರು ರಂಗಾಸಕ್ತರ ಮುಂದೆ ಬರುತ್ತಿದ್ದೆ.
ದಿಸೆಂಬರ ೨೫ ರ ಬಾನುವಾರದಂದು ಮೈಸೂರಿನ ರಾಮಕೃಷ್ಣನಗರದ ನಟನ ರಂಗಮoದಿರದಲ್ಲಿ “ನನ್ನ ಪ್ರೀತಿಯ ಅಮೃತ” ಎಂಬ ಹೆಸರಿನ ನಾಟಕವನ್ನು ಪ್ರದರ್ಶಿಸಲಿದೆ.
ಹೊಸ ನಾಟಕಗಳನ್ನು ಸಿಧ್ದಪಡಿಸಿ ಪ್ರಸ್ತುತಪಡಿಸುವುದು ಪರಿವರ್ತನ ರಂಗ ಸಮಾಜದ ಒಂದು ಸಂಪ್ರದಾಯವಾಗಿದೆ. ಖ್ಯಾತ ರಂಗ ನಿರ್ದೇಶಕರಾದ ಪ್ರೊ.ಎಸ್.ಆರ್.ರಮೇಶ್ ಅವರು ರಚಿಸಿ ನಿರ್ದೇಶಿದ ಭಾರತದ ಖ್ಯಾತ ಕವಿಯತ್ರಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತ ಪ್ರೀತಮ್, ಹಿಂದಿ ಚಲನಚಿತ್ರ ರಂಗದ ಮಾಂತ್ರಿಕ ಗೀತ ರಚನಾಕಾರ ಸಾಹಿರ್ ಲೂಧಿಯಾನ್ವಿ ಹಾಗೂ ಖ್ಯಾತ ವರ್ಣಚಿತ್ರಕಾರ ಇಮ್ರೋಜ್ ಇವರ ಅಪೂರ್ಣ ಪ್ರೀತಿಯ ಅಪೂರ್ವ ಕಥಾನಕವನ್ನ ತಮಗಾಗಿ ಪ್ರಸ್ತುತಪಡಿಸಲಿದೆ. ಅಮೃತಾಳ ಕಥೆಗಳ ಹಂದರದ ಹಿಂದಿದ್ದ ನೋವಿನ ಹಿನ್ನೆಲೆ ಏನು? ಹಿಂದಿ ಚಲನಚಿತ್ರಗಳಲ್ಲಿ ಸಾಹಿರ್ ರಚಿಸಿರುವ ಹಾಗೂ ತಾವು ಇಂದಿಗೂ ಕೇಳಿ ಮೆಚ್ಚುವ ಗುನುಗುನಿಸುವ ಹಳೆಯ ಸುಮಧುರ ಹಾಡುಗಳ ನಿಜ ನೋಟವಿದ್ದದ್ದು ಯಾವ ಕಡೆ ? ಇಮ್ರೋಜ್ರ ನಿಷ್ಕಲ್ಮಷ ಪ್ರೇಮದ ಉತ್ಕಟತೆ ಎಂತದ್ದು ?
ನಾಟಕ : ನನ್ನ ಪ್ರೀತಿಯ ಅಮೃತ
ನಿರ್ದೇಶನ : ಎಸ್.ಆರ್.ರಮೇಶ್
ದಿನಾಂಕ : ೨೫ ಡಿಸೆಂಬರ್ ೨೦೨೩
ಸ್ಥಳ : ನಟನ ರಂಗಶಾಲೆ, ರಾಮಕೃಷ್ಣನಗರ ಮೈಸೂರು.
ಸªಮಯ : ಸಂಜೆ ೬:೩೦ ಕ್ಕೆ






0 Comments