ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೈತ್ರಿ ಪುಸ್ತಕ’ ಬಹುಮಾನಕ್ಕಾಗಿ ಆಹ್ವಾನ

 ಮೈತ್ರಿ  ಪುಸ್ತಕ -2021 ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದ್ದೇವೆ.

 ಆಸಕ್ತರು ತಮ್ಮ 10 ಕತೆಗಳನ್ನು  ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಬೇಕು.

ಆಯ್ಕೆಯಾದ ಹಸ್ತಪ್ರತಿಗೆ ರೂ 7000 ಬಹುಮಾನ, ಫಲಕ ಹಾಗೂ ಪುಸ್ತಕ ಪ್ರಕಟಿಸಲಾಗುತ್ತದೆ.

ಈ ಕೆಳಗಿನ  ಆಂಶಗಳನ್ನು ಗಮನಿಸಿ.

  1. ಇದುವರೆಗೂ ಒಂದೂ ಕತಾಸಂಕಲನ ಪ್ರಕಟಿಸದ ಕತೆಗಾರರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಸಾಹಿತ್ಯದ  ಇತರೇ ಪ್ರಕಾರಗಳಲ್ಲಿ ಒಂದೆರಡು ಪುಸ್ತಕ ಪ್ರಕಟವಾಗಿದ್ದವರೂ ಸ್ಫರ್ಧೆಯಲ್ಲಿ ಭಾಗವಹಿಸಬಹುದು.
  2. ಕತೆಗಳನ್ನು ಕಡ್ಡಾಯವಾಗಿ ನುಡಿ/ಯುನಿಕೋಡ್ ಮೂಲಕ ಟಂಕಿಸಿ ಪ್ರಿಂಟ್ ರೂಪದಲ್ಲಿ  ಕಳಿಸಬೇಕು. ಇಮೇಲ್ ಮೂಲಕ ಕಳಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.
  3. ಹಸ್ತಪ್ರತಿಯಲ್ಲಿ ಎಲ್ಲಿಯೂ ಲೇಖಕರ ಹೆಸರು ಇರಕೂಡದು. ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ವಿಳಾಸ ಸ್ವವಿವರ ನಮೂದಿಸಿರಬೇಕು.
  4. ಕತೆಗಳು ಸುಮಾರು 1500-2000 ಪದ ಮಿತಿಯಲ್ಲಿರಲಿ.‌ ನೀಳ್ಗತೆ, ನ್ಯಾನೊ ಕತೆಗಳು ಬೇಡ.
  5. ಕತೆ ಪೋಸ್ಟ್ /ಕೊರಿಯರ್ ಮೂಲಕ ಕಳಿಸಿಕೊಡಲು 31/01/2021 ಕೊನೆಯ ದಿನಾಂಕವಾಗಿರುತ್ತದೆ.
  6. ಹಸ್ತಪ್ರತಿಗಳನ್ನು ವಾಪಸ ಮಾಡಲಾಗುವುದಿಲ್ಲ.
  7. ಹೆಸರಾಂತ ಕತೆಗಾರರು ತೀರ್ಪುಗಾರರಾಗಿರುತ್ತಾರೆ ಅವರ ಆಯ್ಕೆಯೇ ಅಂತಿಮ.

ವಿಳಾಸ:

ಶ್ರೀಮತಿ ಅಂಜಲಿ ದೇಸಾಯಿ
ಮೈತ್ರಿ  ಪ್ರಕಾಶನ
504, ಎರಡನೇ ಕ್ರಾಸ್,
ಎರಡನೇ ಬ್ಲಾಕ್
ಬಿ ಎಸ್ ಕೆ ಮೊದಲ ಹಂತ
ಬೆಂಗಳೂರು—560050
ಹೆಚ್ಚಿನ ಮಾಹಿತಿಗೆ: 83173 96164

‍ಲೇಖಕರು Avadhi

1 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading