ಮೇಫ್ಲವರ್ ಗೆ ’ಸ್ಲಂಡಾಗ್ ಮಿಲೆನಿಯರ್’ ಸಂವಾದಕ್ಕೆ ಹೋಗಿದ್ರಿ ಅಂತ ತಿಳೀತು…

‘ನಾನು ಸಾಹಿತಿಯಲ್ಲ. ಕವಿಯಂತೂ ಅಲ್ವೇ ಅಲ್ಲ! ಚಿಕ್ಕಂದಿನಲ್ಲಿ ಮನೆಗೆ ಬೇಕಾದ ದಿನಸಿ ಪಟ್ಟಿ ಬಿಟ್ಟು ಈವರೆಗೂ ಏನನ್ನೂ ಬರೆದಿಲ್ಲ ನಾನು! …’ ಎನ್ನುತ್ತಲೇ ಇಂದು ಬ್ಲಾಗ್ ಲೋಕದ ಉತ್ತಮ ಬರಹಗಾರ ಎಂದು ಹೆಸರು ಪಡೆದವರು ಸಂದೀಪ್ ಕಾಮತ್.

ಸಂದೀಪ್ ಕಾಮತ್ ತಮ್ಮ ಕಡಲತೀರದಲ್ಲಿ ಏನಾದರೂ ಹೊಸತು ಬರೆದಿದ್ದಾರೆ ಎಂದರೆ ಅಲ್ಲಿ ಹಣಿಕಿಕ್ಕಲು ಬ್ಲಾಗಿಗರ ಸಂತೆಯೇ ನೆರೆಯುತ್ತದೆ. ಎಂತಹ ಗಂಭೀರ ವಿಷಯ ಕೈಗೆತ್ತಿಕೊಂಡರೂ ಅವರು ಮಂಡಿಸುವ ಕ್ರಮ ಎಲ್ಲರನ್ನೂ ಸೆಳೆದುಕೊಳ್ಳುತ್ತದೆ.

‘ಇಂತಿಷ್ಟು ನಗು ಫ್ರೀ’ ಎಂದು ಮನಸ್ಸು ಮಾಡಿದಂತೆ ಬರೆಯುವ ಇವರು ‘ವಾರೆ ಕೋರೆ’ ಯ ಪ್ರಕಾಶ್ ಶೆಟ್ಟಿ ಅವರ ಕಣ್ಣಿಗೆ ಬೀಳಲಿ ಎಂದು ಪ್ರಾರ್ಥಿಸುತ್ತಾ ಅವರ ಬ್ಲಾಗಿನಿಂದ ತಂಡ ಕಳ್ಳ ಮಾಲು ಇಲ್ಲಿದೆ…

photo_17_hires

ಸಂದರ್ಶಕ:ಸರ್ ಮೇ ಫ್ಲವರ್ ಗೆ ’ಸ್ಲಂ ಡಾಗ್ ಮಿಲೆನಿಯರ್’ ಸಂವಾದಕ್ಕೆ ಹೋಗಿದ್ರಿ ಅಂತ ತಿಳೀತು ಆದ್ರೆ ನೀವು ಆ ಚಿತ್ರವನ್ನು ನೋಡೆ ಇಲ್ಲ ಅಂತ ನನಗೆ ಗೊತ್ತಿದೆ! ಮತ್ತೆ ಯಾಕೆ ಸರ್ ಸಂವಾದಕ್ಕೆ ಹೋದ್ರಿ?

ಸಂದೀಪ್: ಹೆ ಹೆ ಏನೋ ಇದು ಯಾವಾಗ್ಲೂ ಮಗಾ ಅಂತ ಕರೀತಾ ಇದ್ದವನು ಇವತ್ತು ಸರ್ ಅಂತಾ ಇದ್ದೀಯ? ಓಹ್ ಇಂಟರ್ವೂ ಅಂತಾನಾ?? ಇರ್ಲಿ ಬಿಡೋ ಮಾಮೂಲಾಗಿ ’ನೀನು ’ ಅಂತ ಕರಿ ಪರ್ವಾಗಿಲ್ಲ. .

ಸಂದರ್ಶಕ:ಓಕೆ ನೀನು ಸಿನೆಮಾ ನೋಡಿಲ್ಲ ಅಂತ ನಂಗೆ ಗೊತ್ತು .ಮತ್ತೆ ಯಾಕೆ ಸಂವಾದದಲ್ಲಿ ಭಾಗಿಯಾದೆ?ಭಾಗಿಯಾಗೋದಲ್ಲದೆ ಏನೇನೋ ಚರ್ಚೆ ಬೇರೆ ಮಾಡಿದ್ದೀಯಂತೆ ಯಾಕೆ?

ಸಂದೀಪ್:ಹೌದು ನಾನು ಸಿನೆಮಾ ನೋಡಿಲ್ಲ .ಏನಿವಾಗ?ಸಿನೆಮಾ ನೋಡಿಲ್ಲ ಅಂದ್ರೆ ಅದರ ಬಗ್ಗೆ ಮಾತಾಡಬರ್ದಾ?ಹಾಗೆ ನೋಡಿದ್ರೆ ನಾನು ’ವೈಟ್ ಟೈಗರ್ ’ಕೂಡಾ ಓದಿಲ್ಲ ಆದ್ರೆ ಬ್ಲಾಗ್ ನಲ್ಲಿ ಅದರ ಬಗ್ಗೆ ಉಗಿದು ಬರೆದಿಲ್ವ?

ಸಂದರ್ಶಕ:ನಂಗ್ಯಾಕೊ ನೀನು ಸಿನೆಮಾ ನೋಡದೇ ಅದರ ಬಗ್ಗೆ ಮಾತಾಡಿದ್ದು ಇಷ್ಟ ಆಗಿಲ್ಲಪ್ಪ.

ಸಂದೀಪ್:ಲೋ ಗೂಬೆ ! ’ ನಾನು ಸ್ಲಂ ಡಾಗ್ ಸಿನೆಮಾ ನೋಡಿಲ್ಲ ,ಅದ್ದರಿಂದ ಸಂವಾದ ಮುಂದಿನ ವಾರ ಇಟ್ಕೊಳ್ಳಿ ,ಅಷ್ಟರ ಒಳಗೆ ಸಿನೆಮಾ ನೋಡಿ ರೆಡಿ ಅಗಿರ್ತೀನಿ’ ಅಂದ್ರೆ ಮೋಹನ್ ಅವ್ರು ಉಗಿಯಲ್ವೇನೋ?

ಸಂದರ್ಶಕ:ಸಿನೆಮಾ ನೋಡಿಲ್ಲ ಅಂದ್ರೆ ನೀನು ಮೇ ಫ್ಲವರ್ ಗೆ ಹೋಗ್ಲೆ ಬಾರ್ದಿತ್ತು ಕಣೋ.

ಸಂದೀಪ್:ಹೆ ಹೆ .ಮೇ ಫ್ಲವರ್ ಒಂದು ಶಾಪಿಂಗ್ ಕಾಂಪ್ಲೆಕ್ಸ್ ಇದ್ದ ಹಾಗೆ ಕಣ್ಲ .ಅಲ್ಲಿ ಸುಮ್ಮನೆ ಹೋಗಿ ಏನೂ ಮಾಡದೆ.ಮಾತಾಡದೆ ,ಹಂಗೆ ಬಿಟ್ಟಿ ಪುಸ್ತಕಗಳನ್ನು ಓದ್ಕೊಂಡು ಬರಬಹುದು.ಅಂದ ಹಾಗೆ ನಾನು ಶ್ರೀರಾಂ ಪುರದ ಸ್ಲಂ ನೋಡಿದ್ದೀನಿ,ಡಾಗ್ ನೋಡಿದ್ದೀನಿ ,ಬೆಂಗಳೂರಿನಲ್ಲಿ ಬಹಳಷ್ಟು ಮಿಲೆನಿಯರ್ ಗಳನ್ನೂ ನೋಡಿದ್ದೀನಿ.ಹಾಗಾಗಿ ನಾನು ಸ್ಲಂ+ಡಾಗ್+ಮಿಲೆನಿಯರ್ ನೋಡಿದ್ದೀನಿ ಅಂತಾಯ್ತಲ್ವ?

ಸಂದರ್ಶಕ:ನಿನ್ ತಲೆ .ಮೂರನ್ನೂ ಒಟ್ಟಿಗೆ ನೋಡಿದ್ದೀಯಾ?

ಸಂದೀಪ್:ಇಲ್ಲ.
ಸಂದರ್ಶಕ:ಮತ್ತೆ ? ನಿನಗೆ ಸಿನೆಮಾ ಬಗ್ಗೆ ಏನ್ ಗೊತ್ತು.ಎಡಿಟಿಂಗ್,ಕೊರಿಯಾಗ್ರಾಫಿ,ಮಿಕ್ಸಿಂಗು,ಕ್ಯಾಮೆರಾ ವರ್ಕು ಅದು ಇದು ಅಂತ ಎಷ್ಟು ಕಷ್ಟ ಇದೆ ಗೊತ್ತಾ? ಸುಮ್ನೆ ಹೋಗಿ ಸ್ಲಂ ಡಾಗ್ ಇಷ್ಟ ಆಗಿಲ್ಲ ಅಂದ್ಯಲ್ಲ .ತಲೆ ಇದೆಯಾ ನಿಂಗೆ?

ಸಂದೀಪ್:ನಿಂಗೆ ಅಡಿಗೆ ಮಾಡೋದಕ್ಕೆ ಗೊತ್ತಾ?

ಸಂದರ್ಶಕ:ಇಲ್ಲ!

ಸಂದೀಪ್:ಮತ್ತೆ ಮೊನ್ನೆ ಶಾಂತಿಸಾಗರದಲ್ಲಿ ವೆಜ್ ಪಲಾವ್ ಸರಿಯಾಗಿಲ್ಲ .ಇಷ್ಟ ಆಗಿಲ್ಲ ಅಂತ ಉಗೀತಾ ಇದ್ದೆ ಯಾರನ್ನೋ.ಪಲಾವ್ ಮಾಡೊದು ಎಷ್ಟು ಕಷ್ಟ ಅಂತ ಗೊತ್ತಾ ನಿಂಗೆ? ಮೊದಲು ರೈಸ್ ಮಾಡ್ಬೇಕು,ಆಮೇಲೆ……

ಸಂದರ್ಶಕ:ತಪ್ಪಾಯ್ತು ಗುರುವೇ!…..ಅದಿರ್ಲಿ ನಿಂಗೆ ಸ್ಲಂ ಡಾಗ್ ಅಂದ್ರೆ ಯಾಕೆ ಸಿಟ್ಟು?ಅದರಲ್ಲಿ ’ನಿಜವಾದ’ ಭಾರತ ತೋರಿಸಿದ್ದಾರೇ ಅಂತಾನಾ?

ಸಂದೀಪ್:ಹೇ ಸಿಟ್ಟೇನಿಲ್ಲ ಮಾರಾಯಾ ಒಂದು ಸಾತ್ವಿಕವಾದ ಬೇಸರ ಅಷ್ಟೆ.ಆ ಸಿನೆಮಾ ನೋಡಿ ’ಯಾರಾದ್ರೂ’ ಭಾರತದ ಬಗ್ಗೆ ತಪ್ಪು ತಿಳ್ಕೋತಾರೇನೋ ಅಂತ ಬೇಸರ ಅಷ್ಟೇ.ಸ್ಲಂ ಡಾಗ್ ಗೆ ಅವಾರ್ಡ್ ಬಂದಿದ್ದರಿಂದ ಅದೆಷ್ಟೊ ವಿದೇಶಿಯರು ಭಾರತದ ಬಗ್ಗೆ ತಪ್ಪು ತಿಳ್ಕೋತಾರೇನೋ ಅಂತ ಭಯ!

ಸಂದರ್ಶಕ:ತಪ್ಪು ತಿಳ್ಕೊಂಡ್ರೆ ನಿಮ್ಮಪ್ಪನ್ ಗಂಟೇನು ಹೋಗುತ್ತೆ?

ಸಂದೀಪ್:ನಮ್ಮಪ್ಪನ್ ಗಂಟೇನೂ ಹೋಗಲ್ಲ.ಆದ್ರೆ ನಮ್ಮನೆ ದೋಸೆ ತೂತು ಅಂತ ಯಾರಿಗೂ ಗೊತ್ತಾಗ್ಬಾರ್ದು ಅಂತ 🙂

ಸಂದರ್ಶಕ:ಇದೊಳ್ಳೆ ಕಥೆಯಾಯ್ತಲ್ಲ ! ಎಲ್ಲರ ಮನೆ ದೋಸೆ ತೂತು ಅಂತ ಕೇಳಿಲ್ವಾ ನೀನು!

ಸಂದೀಪ್:ಇರಬಹುದು.ಆದ್ರೆ ನಮ್ಮನೆ ದೋಸೆ ತೂತು ಎಷ್ಟು ’ದೊಡ್ಡದು’ ಅಂತ ಬೇರೆಯವ್ರಿಗೆ ಗೊತ್ತಾಗಬಾರದು ಅಷ್ಟೆ.

ಸಂದರ್ಶಕ:ಒಹ್ ಹಾಗಾ? ಯಾರಾದ್ರೂ ವಿದೇಶಿಯರು ನಿನ್ ಹತ್ರ ಬಂದು ಕೇಳ್ತಾರೇನೋ ಭಾರತದ ಬಗ್ಗೆ.

ಸಂದೀಪ್:ಯಾಕೆ ಕೇಳಲ್ಲ? ನಿಂಗೆ ಗೊತ್ತಿಲ್ವಾ? ನಂ ಆಫೀಸ್ ಗೆ ತಿಂಗಳಿಗೆ ಎಷ್ಟು ಫಾರಿನರ್ಸ್ ಬರ್ತಾರೆ ಅಂತ. ಆ ಪೋಲೋ ಚೈನಾದಿಂದ ಬಂದಾಗ ಅವನು ಕಲಾಸಿಪಾಳ್ಯ ನೋಡಿ ಮೂಗು ಮುರಿದಾಗ ನಂಗೆ ಎಷ್ಟು ಕಷ್ಟ ಆಗಿತ್ತು ಗೊತ್ತಿಲ್ವ ನಿಂಗೆ?

ಸಂದರ್ಶಕ:ನಿಂದು ವಿಪರೀತ ಆಯ್ತು ಮಾರಾಯ.ಯಾವುದೆ ಸಿನೆಮಾ ನೋಡಿ ಜನ ತಮ್ಮ ಅಭಿಪ್ರಾಯ ನಿರೂಪಿಸಿಕೊಳ್ಳಲ್ಲ ಅಷ್ಟೇ.ಅದು ನಿನ್ನ ಭ್ರಮೆ!

ಸಂದೀಪ್:ಓಹ್ ಹಾಗ .ನೀನು ಅಮೆರಿಕಾ ನೋಡಿಲ್ಲ ಅಲ್ವ.ಮತ್ತೆ ಯಾಕೆ ನಿಂಗೆ ಅಮೆರಿಕ ಅಂದ್ರೆ ಸಿಡಿಮಿಡಿ.ಅಲ್ಲಿಯ ಸಂಸ್ಕೃತಿ ಸರಿ ಇಲ್ಲ ಅಂತ ಯಾಕೆ ಯಾವಾಗ್ಲೂ ಗೊಣಗ್ತಾ ಇರ್ತೀಯಾ?

ಸಂದರ್ಶಕ: ಅದು F TV ನೋಡಿದ್ರೆ ಗೊತ್ತಾಗುತ್ತೆ ಬಿಡು! ಆಮೇಲೆ ಅವರ ಇಂಗ್ಲೀಷ್ ಸಿನೆಮಾ ನೋಡಿದ್ರೆ ಗೊತ್ತಾಗುತ್ತೆ .ಸಿನೆಮ ಶುರು ಆದ್ರೆ ಸಾಕು-ಕಿಸ್ಸು .ಹತ್ತು ನಿಮಿಷಕ್ಕೊಂದು ಕಿಸ್ಸಿಲ್ಲ ಅಂದ್ರೆ ಅವರ ಸಿನೆಮಾ ಮುಂದೆ ಹೋಗಲ್ಲ.ಮತ್ತೆ ಅಲ್ಲಿ ಅಪ್ಪ ಅಮ್ಮ ಅಂದ್ರೆ ಮರ್ಯಾದೆ ಇಲ್ಲ ಕಣೋ.ವಿಚಿತ್ರ ದೇಶ ಅದು.ಅಲ್ಲಿನ ಸಂಸ್ಕೃತಿನೇ ಸರಿ ಇಲ್ಲ ಕಣೋ!

ಸಂದೀಪ್:ಒಹ್ ಅಮೆರಿಕಾ ಗೆ ಹೋಗದೇನೆ ಬರೀ F TV ,ಇಂಗ್ಲೀಷ್ ಸಿನೆಮಾ ನೋಡಿನೇ ಅಂಥ ದೇಶದ ಬಗ್ಗೆ ನೀನು ಅಭಿಪ್ರಾಯ ನಿರೂಪಿಸಿಕೊಂಡೆ ಅಲ್ಲಾ?ಆಮೇಲೆ ನಂಗೆ ಹೇಳ್ತೀಯ ’ಬರೀ’ ಸಿನೆಮಾದಿಂದ ಏನೂ ಆಗಲ್ಲ ಅಂತ! ಒಳ್ಳೇ ಆಸಾಮಿ ಕಣಯ್ಯ ನೀನು!

ಸಂದರ್ಶಕ:ಹಾಗೆನಿಲ್ಲ ಆ ದೇಶದ ಬಗ್ಗೆ ಒಳ್ಳೆಯ ಸಿನೆಮಾನೂ ನೋಡಿದ್ದೀನಿ .ಹಾಗಾಗಿ ಆ ದೇಶದ ಬಗ್ಗೆ ಒಳ್ಳೆ ಅಭಿಪ್ರಾಯಾನೂ ಇದೆ ನಂಗೆ.

ಸಂದೀಪ್:ಓಕೆ ಹಾಗಿದ್ರೆ ಭಾರತದ ಬಗ್ಗೆ ಒಳ್ಳೆ ಅಭಿಪ್ರಾಯ ಬರೊ ಹಾಗೆ ಇರೊ ಸಿನೆಮಾ ಅವರು ನೋಡ್ತಾರೆ ಅಂತೀಯಾ ನೀನು.

ಸಂದರ್ಶಕ:ಹೌದು ಯಾಕೆ ನೋಡಲ್ಲ? ಸ್ಲಂ ಡಾಗ್ ನೋಡಿಲ್ವ ಅವರು ಹಾಗೆ ಬೇರೆ ಸಿನೆಮಾನೂ ನೋಡ್ತಾರೆ.

ಸಂದೀಪ್:ಸ್ಲಮ್ ಡಾಗ್ ಗೆ ಅವಾರ್ಡ್ ಬಂದಿದೆ ಅದಕ್ಕೆ ಎಲ್ಲರೂ ನೋಡಿದ್ದಾರೆ ಅವಾರ್ಡ್ ಬಂದಿಲ್ಲ ನೋಡ್ತಾರಾ?

ಸಂದರ್ಶಕ:ನಿನ್ನ So called ಪ್ರಕಾಶಿಸುತ್ತಿರೋ ಭಾರತದ ಬಗ್ಗೆ ಒಳ್ಳೆ ಸಿನೆಮಾ ತೆಗೆದು ಅವಾರ್ಡ್ ತಗೊಳ್ಳಯ್ಯ ನೋಡ್ತಾರೆ ಎಲ್ಲ!

ಸಂದೀಪ್:ಬಿಟ್ಟಿ ಸಲಹೆಗೇನೋ ಕೊರತೆ ಇಲ್ಲ ನಿನ್ ಹತ್ರ ! ಇರ್ಲಿ ಬಿಡು ನೋಡೋಣ ಅಂಥ ಸಿನೆಮಾ ಬರುತ್ತೇನೋ ಅಂತ:(ಒಳ್ಳೆ ಸಿನೆಮಾ ಬಂದ್ರೂ ಅವಾರ್ಡ್ ಬರೋದು,ಅವರು ಅದನ್ನು ನೋಡೋದು ಅಷ್ಟರಲ್ಲೇ ಇದೆ ಬಿಡು.

ಸಂದರ್ಶಕ:ನೀನು ಯಾವಾಗ ನೋಡಿದ್ರೂ ’ಅವರು ಏನಂದುಕೋತಾರೋ ,ಇವರು ಏನಂದುಕೋತಾರೋ ’ ಅಂತ ಬದುಕ್ತಿರ್ತೀಯ .ಕಮಾನ್ ಮ್ಯಾನ್ ಅಂದುಕೊಳ್ಳುವವರು ಅಂದುಕೊಳ್ಳಲ್ಲಿ ಬಿಡು .ಭಾರತ ದರಿದ್ರ ದೇಶ ,ಕೊಳಕು ದೇಶ ಇಲ್ಲಿ ಏನೂ ಸರಿ ಇಲ್ಲ ಅಂತ .ನಿಂಗೇನು ಪ್ರಾಬ್ಲೆಮ್ ?

ಸಂದೀಪ್:ಆಯ್ತಪ್ಪ ನಂಗೇನೂ ಪ್ರಾಬ್ಲೆಮ್ ಇಲ್ಲ ಬಿಡು.ಈಗ ಹೇಳು ಆ ಸಿನೆಮಾದಿಂದ ಧಾರಾವಿ ಸ್ಲಂ ಜನರಿಗೆ ಏನು ಲಾಭ ಆಯ್ತು? A R Rehaman ಗೆ ಅವಾರ್ಡ್ ಬಂತು .ಡ್ಯಾನಿಗೂ ಅವಾರ್ಡ್ ಬಂತು.ಲತಿಕಾ ಗೆ ನೆಕ್ಸ್ಟ್ ಫಿಲಂ ಗೆ ಚಾನ್ಸ್ ಸಿಕ್ತು.ಅನಿಲ್ ಕಪೂರ್ ಗೆ ಏನೂ ಸಿಕ್ಕಿಲ್ಲ ಆದ್ರೂ ಪುಣ್ಯಾತ್ಮ ಖುಷಿಯಾಗಿದ್ದಾನೆ! ಈಗ ಹೇಳು ರಿಯಲ್ ಸ್ಲಂ ಡಾಗ್ ಗಳಿಗೆ ಏನ್ ಸಿಕ್ತು?

ಸಂದರ್ಶಕ:ಡ್ಯಾನಿ ಏನೂ ಚ್ಯಾರಿಟಿ ಸಂಸ್ಥೆ ಇಟ್ಟಿಲ್ಲ ಸ್ಲಂ ಜನಗಳಿಗೆ ಸಹಾಯ ಮಾಡಲು.ಅವನ ಕೆಲಸ ಫಿಲಂ ಮಾಡೋದು .ಫಿಲಂ ಆದ ಮೇಲೆ ಅದನ್ನು ಅವಾರ್ಡ್ ಗೆ ಕಳಿಸೋದು.ಅವಾರ್ಡ್ ಬಂದ್ರೆ ಅದನ್ನು ತಗೊಂಡು ತಾಜ್ ಹೋಟ್ಲಲ್ಲಿ ಪಾರ್ಟಿ ಮಾಡೋದು.ಅದು ಬಿಟ್ರೆ ಅವನೇನು ಮಾಡೊಕಾಗುತ್ತೆ?ಓಹ್ ಮೇ ಫ್ಲವರ್ ನಲ್ಲಿ ಯಾರೋ ’ನಾವು ನೈಜ ಪರಿಸ್ಥಿತಿಯ ಬಗ್ಗೆ ಬೇಸರ ಪಡೊದಕ್ಕಿಂತ ಸ್ಲಂ ಜನರ ಬದುಕನ್ನು ಅಭಿವೃದ್ಧಿ ಪಡಿಸೋಣ ’ ಅಂದಿದ್ದಕ್ಕೆ ಸಿಟ್ಟು ಬಂತಾ?

ಸಂದೀಪ್:ಇನ್ನೇನ್ ಮತ್ತೆ ಸಿನೆಮ ಮಾಡೊರು ಯಾವತ್ತಾದ್ರೂ ಒಳ್ಳೆ ಉದ್ದೇಶದಿಂದ ಸಿನೆಮಾ ಮಾಡಿದ್ದು ನೋಡಿದ್ದೀಯ?

ಸಂದರ್ಶಕ:ನಿಂದೊಳ್ಳೆ ಗೋಳಾಯ್ತು ಮಾರಾಯ! ಸಿನೆಮ ಅಂದ್ರೆ ಮನರಂಜನೆ .ನೋಡ್ಬೆಕು -ಮರೀಬೇಕು ಅಷ್ಟೆ.

ಸಂದೀಪ್:ಓಹ್ ಹಾಗಾ! ಇನ್ನು ಮುಂದೆ ಟ್ರೈ ಮಾಡ್ತೀನಿ ಕಣ್ಲಾ ಸಿನೆಮಾನ ಸಿನೆಮಾ ಥರ ನೆ ನೋಡೋದಕ್ಕೆ.

ಸಂದರ್ಶಕ:ಈಗ ಹೇಳು ಸಂವಾದ ಹೇಗಿತ್ತು ?

ಸಂದೀಪ್:ಬಹಳ ಚೆನ್ನಾಗಿತ್ತು !ಪರಮೇಶ್ವರ್ ಅದ್ಭುತವಾಗಿ ಮಾತಾಡಿದ್ರು.ಆರತಿ,ಸುಘೋಷ್,ಶ್ರೀಜಾ,ಲೀಲಾ ಸಂಪಿಗೆ ,ಶ್ರೀ,ವಿಕಾಸ್,ಮಂಜುನಾಥ್ ,ಮೋಹನ್ ಎಲ್ಲಾ ಚೆನ್ನಾಗೇ ಮಾತಾಡಿದ್ರು.

ಸಂದರ್ಶಕ:ಹಾಗಿದ್ರೆ ಸ್ಲಂ ಡಾಗ್ ಬಗ್ಗೆ ನಿನ್ನ ಅಭಿಪ್ರಾಯ ಬದಲಾಯ್ತು ಅನ್ನು!

ಸಂದೀಪ್:No Way!! ಡ್ಯಾನಿಯ ಬಗ್ಗೆ ಸಿಟ್ಟಿಲ್ಲ .ಆದ್ರೆ ಏನೋ ಬೇರೆ ರೀತಿಯ ಬೇಸರ ಇದೆ 🙁

ಸಂದರ್ಶಕ:ಏನು ಬೇಸರ ಹೇಳಪ್ಪ.

ಸಂದೀಪ್:ನನ್ನ ಭಾರತವನ್ನು ಸುಂದರವಾಗಿ ತೋರಿಸಲಾಗಲಿಲ್ಲವಲ್ಲ ಅನ್ನೋ ಬೇಸರ ! ನನ್ನ ಭಾರತದಲ್ಲಿ ಇಷ್ಟೊಂದು ತೊಂದರೆಗಳಿವೆಯಲ್ಲಾ ಅನ್ನೋ ಬೇಸರ ! ನನ್ನ ಬಗ್ಗೆಯೆ ಬೇಸರ!

‍ಲೇಖಕರು avadhi

January 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. paramesvara guruswamy

    ಸಂದೀಪ್,
    ನಿಮಗೆ ಆರೋಗ್ಯಕರವಾದ intraspection ಇದೆ. I like it.

    ಪ್ರತಿಕ್ರಿಯೆ
  2. neelanjala

    ನಂಗೂ ಇಷ್ಟವಾಗುತ್ತೆ. ಓದಿ ತುಂಬಾನೇ ನಗಬಹುದು. ಆದರೆ ಓದಿ ಆದ ಮೇಲೆ ಅವರ ಅಭಿಪ್ರಾಯ ಮಾತ್ರ ನಂಗೆ ಒಪ್ಪಿಗೆ ಆಗೋಲ್ಲ. ಎಷ್ಟೋ ಸಲ ಎಳೆ ಹುಡಗನೇನೋ ಅಂದನ್ನಿಸಿದ್ದಿದೆ. ನಂಗೂ ಇವತ್ತು ವಾದ ಮಾಡೊ ಮೂಡ್ ಬಂದಿದೆ. ಅದಕ್ಕಾಗಿ;
    -Fashion TV , ಈ ಚಾನೆಲ್ ಯಾಕೆ ಇರೋದು ಅಂತ ಯಾರದರೂ ಫ್ಯಾಷನ್ ಡಿಸೈನರ್ ಹತ್ರ ಕೇಳಿ ನೋಡಿ. ಆ ಪ್ರೊಫೆಷನ್ ನಮಗೆ ಅರ್ಥವಾಗದಿದ್ರೆ ಸುಮ್ಮನಿರಬೇಕು. ramp ಇರೋದು ಕೇವಲ ದೇಹ ತೋರಿಸೊಕ್ಕಲ್ಲ. ಮಾಡೆಲ್ ಹಾಕುವ ಬಟ್ಟೆಯ ಮೇಲೆ ಆ ವರ್ಷದ / ಮುಂದಿನ ವರ್ಷದ ಟ್ರೆಂಡ್ ನಿರ್ಧಾರವಾಗುತ್ತೆ. ಅದನ್ನು inspiration ಆಗಿ ಇಟ್ಟು ಕೊನ್ಡು ಬೇರೆ ಡಿಸೈನ್ ಮಾಡುತ್ತಾರೆ. ಅಲ್ಲಿ ಉಪಯೋಗಿಸಿದ ಬಟ್ಟೆ, ಅದರ ನೇಯ್ಗೆ, ಬಣ್ಣ, ಹೋಲಿಗೆ,accessories…….. ಎಲ್ಲವನ್ನೂ ಗಮನಿಸಲಾಗುತ್ತೆ. garments industry, fashion industry ಬಗ್ಗೆ ಗೊತ್ತಿಲ್ಲದ ಜನ ಆ ಚಾನೆಲ್ ಬಗ್ಗೆ ಮೂಗು ಮುರಿಯುವುದು ಸಹಜವೇ.
    -ಇನ್ನೂ ಇಂಗ್ಲೀಶ್ ಸಿನೆಮಾ, ನಾನು ನೋಡಿದ ಸಿನೆಮಾ ಪಾತ್ರಗಳಿಗೆ ಫ್ಯಾಮಿಲಿ ಅನ್ನೋದು ತುಂಬಾ ಮಹತ್ತರ ಸಂಗತಿ. ಜವಾಬ್ದಾರಿ, ಕರ್ತವ್ಯ ಇದರ ಬಗ್ಗೆಯೋ ತುಂಬಾ ಮಹತ್ವ ಕೊಡಲಾಗುತ್ತೆ ಎಂದು ತಿಳಿದಿದ್ದೇನೆ. ನನಗೆ ಯಾವತ್ತೂ ಅದೊಂದು ಕೆಟ್ಟ ಸಂಸ್ಕ್ರತಿ ಎಂದು ಅನ್ನಿಸಲೇ ಇಲ್ಲ. ಅಲ್ಲೂ individuality ಇದೆ, loyalty ಇದೆ. ಏನೋಪಾ……
    -ಮೊನ್ನೆ ಟೀವಿಲಿ ತೋರಿಸ್ತಾ ಇದ್ರು, ಅನಿಲ್ ಕಪೂರ್ ತಮಗೆ ಬಂದ ಹಣವನ್ನು ಸ್ಲಮ್ ಮಕ್ಕಳ ಸಲುವಾಗಿ ಕೆಲಸ ಮಾಡುವ ಸಂಸ್ಥೆಗೆ ಕೊಟ್ಟದ್ದು.
    -ಇನ್ನೂ ಪಿಚ್ಚರ್ ಬಗ್ಗೆ ಏನೂ ಹೇಳಲ್ಲ. ನಾನು ನೋಡಿಲ್ಲ. ಪ್ರಶಸ್ತಿ ಬರೋ ಮೊದಲು ಅದರ ಕತೆ ಓದಿದ್ದೆ. ಆ ಕರೋರ್ ಪತಿ ಮಾದರಿ ಕತೆ ನೋಡಬೇಕು ಅನ್ನಿಸಲಿಲ್ಲ. ಈಗ ಪ್ರಶಸ್ತಿ ಬಂದ ಮೇಲೂ ನೋಡಬೇಕು ಅನ್ನಿಸ್ತಿಲ್ಲ. ನೋಡೊಕೆ ಇರುವ ಫಿಲ್ಮ್ ಲೀಸ್ಟ್ ಇನ್ನೂ ಮುಗಿದಿಲ್ಲ. ಮುನ್ದೊಂದು ದಿನ ನೋಡ್ತಿನಿ. ಆದ್ರೆ ಯಾರಾದ್ರೂ ಆಸ್ಕರ್ ಗೆ ಬಯ್ದ್ರೆ ಮಾತ್ರ ನಂಗೆ ಕೋಪ ಬರುತ್ತೆ. ನಮಗೆ ಕ್ರಿಕೆಟ್ಗೆ ವರ್ಲ್ಡ್ ಕಪ್ ಬೇಕು, ಆಟಗಳಿಗೆ ಓಲಂಪಿಕ್ಸ್ ಬೇಕು, ಆದ್ರೆ ಫಿಲ್ಮ್‌ಗಳಿಗೆ ಇರೋ ಪ್ರಶಸ್ತಿ ಮಾತ್ರ ಬೇಡ.
    – ಸ್ಲಮ್ ತೋರಿಸಿದ್ದೆ ಮಾಹಾಪರಾಧ ಅಂತ ಓದಿ ಓದಿ ಬೇಜಾರು ಬಂದು ಬಿಟ್ಟಿದೆ. ನಾನು ನೋಡಿದ ಹೊರ ದೇಶದ ಚಿತ್ರಗಳಲ್ಲಿ ಬಡತನ ಇತ್ತು. ಕೊಳಕು ಅಪಾರ್ಟ್ ಮೆನ್ಟ್ ಗಳು ಇದ್ವು, ಮೂರುಕು ಮನೆಗಳು ಇದ್ವು. ಅವನ್ನು ನೋಡಿ ನಾನು ಯಾವತ್ತೂ ಆ ದೇಶಗಳಲ್ಲಿ ಇರೋದು ಬಡತನ ಮಾತ್ರ ಅಂತ ತೀರ್ಮಾನ ಮಾಡೇ ಇಲ್ಲ. ಕತೆಗೆ ಪೂರಕ ಆಗಿರೋ ಲೋಕೇಶನ್ ಗಳಿದ್ದವು. ನಿಜವಾಗ್ಲೂ ಇಲ್ಲಿ ನಮ್ಮ ಸ್ಲಮ್ ಗಳನ್ನು ಅಷ್ಟು ಕೆಟ್ಟದಾಗಿ ತೋರಿಸಿದ್ದಾರ?

    ಪ್ರತಿಕ್ರಿಯೆ
  3. ಸಂಬುದ್ಧ

    ನಿಮ್ಮ ಕಲ್ಪನೆಯ ಸಂದರ್ಶನ ಚೆನ್ನಾಗಿದೆ.ಇಷ್ಟವಾಯಿತು.ಮೇ ಪ್ಲವರ್ ನಲ್ಲಿ ನಡೆದ ಸ್ಲಂ ಡಾಗ್ ಮಿಲಿನಿಯೇರ್ ಚಿತ್ರ ಸಂವಾದದಲ್ಲಿ ಪಾಲ್ಗೊಂಡಿದ್ದೆ.ಆದರೆ,ತುಟಿ ಬಿಚ್ಚಲಿಲ್ಲ.ನೀವೆಲ್ಲಾ ಏನಲ್ಲಾ ಅಭಿಪ್ರಾಯ
    ಹೊರ ಹಾಕತ್ತೀರಿ ಎಂದು ಗಮನಿಸುತ್ತಿದೆ.ನಿಮ್ಮ ಸುಂದರ ಭಾರತ ಕಲ್ಪನೆ ಬಗ್ಗೆ ನನ್ನ ಕೆಲ ತಕರಾರುಗಳು ಇವೆ.
    ಶಂಕರಚಾರ್ಯರು ಸೌಂದರ್ಯ ಮೀಮಾಂಸೆಯಲ್ಲಿ ಬದುಕು ಮಾಯ ಎನ್ನುವಾಗೆ ನಿಮ್ಮ ಕಲ್ಪನೆಯೂ ಇದೆ.ಸುಂದರ ಕಲ್ಪನೆಯೇ ಮಿಥ್ಯ ಎಂದು ನನ್ನಗೆ ಅನ್ನಿಸುತ್ತದೆ.ಇಲ್ಲಿನ ಬಡತನ,ಜಾತೀಯತೆ,ಭ್ರಷ್ಟಾಚಾರ,ಇವೆಲ್ಲ ನೀವು ಪ್ರತಿಪಾದಿಸುವ ಸುಂದರ ಭಾರತವೇ ?.ಇವೆಲ್ಲಾ ವಾಸ್ತವಾಗಿರುವುದರಿಂದಲೇ ಇಂತಹ ಸಿನೆಮಾಗಳು,ಕಥೆಗಳು ಬರಲು ಸಾಧ್ಯ ಎಂದು ನನ್ನ ತಿಳುವಳಿಕೆ.
    ನಾನು ಸಿನೆಮಾ ನೋಡಿದ್ದೀನಿ.ಇತ್ತೀಚಿಗೆ ಗುರುಗಳಾದ ಪರಮೇಶ್ವರ ಅವರು ಒಂದು ಮಾತು ಹೇಳಿದ್ದರು.ಕೆಲ ಸಿನೆಮಾಗಳು ಮೊಂಡು ಚಾಕುನಿಂದ ಕೊ ಯ್ಯುದ್ದಿರುವಾಗೆ ಮಾಡ್ತಾರೆ ಅಂತ ಅವರದ್ದೆ ಮಾತು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತೇನೆ.ಆದರೆ,ಸ್ಲಂ ಡಾಗ್ ಸಿನಮಾ ನನಗೆ ಹಾಗೆ ಅನ್ನಿಸಲಿಲ್ಲ.ಅದೊಂದು ಹರಿತವಾದ ಚಾಕು ಎಂದೆನ್ನಿಸಿತು.ವರ್ತಮಾನದ ಬಗ್ಗೆ ಅರಿವು ಇಲ್ಲದಿದ್ದರೆ,ಇತಿಹಾಸ ಅರ್ಥವಾಗುವುದಿಲ್ಲ.ಇತಿಹಾಸ ಗೊತ್ತಿಲ್ಲದಿದ್ದರೆ ಇತಿಹಾಸ ಸೃಷ್ಟಿಸಲು ಸಾಧ್ಯವಾಗೋದಿಲ್ಲ.
    – ಸಂಬುದ್ಧ

    ಪ್ರತಿಕ್ರಿಯೆ
  4. ಸಂದೀಪ್ ಕಾಮತ್

    ಪರಮೇಶ್ವರ ಗುರುಸ್ವಾಮಿಯವರೇ ನಾನು ’ಸ್ಲಂ ಡಾಗ್ ’ ಸಿನೆಮಾದ ಬಗ್ಗೆ ಗಂಭೀರವಾಗಿ ಬರೆಯಬಹುದಿತ್ತು ಆದ್ರೆ ನಿಮ್ಮೊಂದಿಗೆ ಸಂವಾದದ ನಂತರ ಹಾಸ್ಯದ ಧಾಟಿಯಲ್ಲೇ ಬರೆಯೋಣ ಅನ್ನಿಸಿತು.
    ನೀವು ನಿಮ್ಮ ಅಭಿಪ್ರಾಯಗಳನ್ನು ನವಿರಾದ ಹಾಸ್ಯದೊಂದಿಗೆ ಹೇಳಿದ್ದು ನಂಗೆ ತುಂಬಾ ಇಷ್ಟ ಆಯ್ತು.ಬಹುಷಃ ನಾನು ಇನ್ನು ಮುಂದೆ ಸಿನೆಮಾ ನೋಡುವ ದೃಷ್ಟಿ ಸ್ವಲ್ಪ ಮಟ್ಟಿಗೆ ಬದಲಾಗಬಹುದೇನೋ ನಿಮ್ಮ ಸಂಪರ್ಕಕ್ಕೆ ಬಂದಿದ್ದರಿಂದ.
    ನಾನು ಶಿವಸೇನೆ ಅಥವ ಇನ್ಯಾವುದೇ ಸಂಘಟನೆಯ ರೀತಿಯಲ್ಲಿ ಸ್ಲಂ ಡಾಗ್ ಅನ್ನು ವಿರೋಧಿಸುವುದಿಲ್ಲ .ನಂಗೆ ಡ್ಯಾನಿಯ ಬಗ್ಗೆ ,ಸಿನೆಮಾ ನಿರ್ದೇಶಕರ ಬಗ್ಗೆ ಅಪಾರವಾದ ಗೌರವ ಒಲುಮೆ ಇದೆ.ನಮ್ಮೆಲ್ಲರ ದಿನ ನಿತ್ಯದ ಜಂಜಡಗಳಿಂದ ಸ್ವಲ್ಪ ಮಟ್ಟಿಗಾದ್ರೂ ನೆಮ್ಮದಿ,ರಿಲೀಫ್ ನೀಡುವುದು ಸಿನೆಮಾಗಳು.
    ನನ್ನ ಪ್ಯಾಂಟ್ ಹರಿದಿದ್ದು ಅದನ್ನು ನಾಲ್ಕು ಜನ ನೋಡ್ತಾರೆ (ಮತ್ತೆ ಆ ಪ್ಯಾಂಟನ್ನು ನಾನು ಹೊಲಿಯಲು ಸಾಧ್ಯ ಇಲ್ಲ!) ಅನ್ನೋ ಸಂಕೋಚವಷ್ಟೇ ನನಗೆ ಇದ್ದಿದ್ದು.ಇದನ್ನು ದೇಶಪ್ರೇಮ ಅಂತ ನಾನು ಅಂದುಕೊಂಡಿಲ್ಲ.
    ಕಾರ್ಯಕ್ರಮದ ಕಡೆಯವರೆಗೂ ನೀವು ತುಂಬಾ ಬ್ಯಾಲೆನ್ಸ್ ಆಗಿ ಮಾತಾಡಿದ್ರಿ ಅದು ನಂಗೆ ತುಂಬಾನೇ ಇಷ್ಟ ಆಯ್ತು.
    ಮದುವೆ .ಮುಂಜಿ ಮುಂತಾದ ಕಾರ್ಯಕ್ರಮಕ್ಕೆ ಹೋಗ್ಬೇಕಾದ್ರೆ ಹೆಂಗಸರು(ಗಂಡಸರೂ!) ತಮ್ಮ ಬಿಳಿ ಕೂದಲನ್ನು ಡೈ ಮಾಡಿ ಕಪ್ಪಾಗಿಸಿ ಹೋಗ್ತಾರೆ ಯಾರೂ ಕೂದಲಾಗಿರೋದು ನೈಜತೆ ಅದು ರಿಯಾಲಿಟಿ ಅಂತ ಹಾಗೆ ಹೋಗಲ್ಲ.ಆದ್ರೆ ಭಾರತದ ನೈಜತೆ ತೋರಿಸಿದ್ರೆ ಇವರಿಗೆಲ್ಲ ಖುಷಿಯಾಗುತ್ತೆ. ಭಾರತಕ್ಕೂ ಕೃತಕವಾದ ಬಣ್ಣ ಹಾಕಿ ತೋರಿಸೋಣ ಅನ್ನೋ ನನ್ನ ಆಸೆಗೆ ಯಾರೂ ಸಪೋರ್ಟ್ ಮಾಡಲ್ಲ.
    ಈ ಬಗ್ಗೆ ನಂಗೆ ಬೇಸರವಿಲ್ಲ.ಭಾರತಕ್ಕೆ ಬಣ್ಣ ಕೊಡುವ ಪ್ರಕ್ರಿಯೆಯಲ್ಲಿ ನಾನು ಖಂಡಿತ ಭಾಗಿ ಆಗ್ತೀನಿ.

    ನೀಲಾಂಜಲರವರೇ,
    ನೀವು ಹಾಗೂ ’ಇನ್ನೊಬ್ಬರು’ ಯಾವತ್ತೂ ನನ್ನನ್ನು ಮತ್ತು ನನ್ನ ಮಾತುಗಳನ್ನು ಎಳಸು ಅಂತಲೇ ಭಾವಿಸಿರೋದ್ರಿಂದ ನನ್ನ ಯಾವುದೇ ಮಾತುಗಳು ನಿಮಗೆ ಸರಿ ಅನ್ನಿಸೋದು ನಂಗೆ ಸಂಶಯ ಹಾಗಾಗಿ ನಾನು ಚರ್ಚೆಯ ಮೂಡ್ ನಲ್ಲಿಲ್ಲ!
    ಆದ್ರೆ ಒಂದೇ ಮಾತು ಫ್ಯಾಶನ್ ಲೋಕದ ಬಗ್ಗೆ ಗೊತ್ತಿರದಿದ್ರೆ ಮಾತಾಡಬಾರದು ಅಂತ ನಂಗೆ ತಾಕೀತು ಮಾಡಿದ್ರಿ ನೀವು.ಆದ್ರೆ ನೀವೇ ಆ ಬಗ್ಗೆ ಒಂದು ದೊಡ್ಡ ಪ್ಯಾರಾ ಬರೆದ್ರಿ .ಹೀಗಾಗಿ ನಿಮಗೆ ಫ್ಯಾಶನ್ ಲೋಕದ ಬಗ್ಗೆ ತುಂಬಾ ಅರಿವಿದೆ ಅಂದುಕೊಳ್ಳೋಣವೇ?
    ಸುಬುದ್ಧ,
    ಹಿಂದೆ ಇದ್ದ -ಈಗ ಇರುವ -ನಾಳೆ ಇರುವ ಎಂದೆಂದೂ ಇರುವ ಭಾರತ ನನಗೆ ಸುಂದರವಾದ ಭಾರತವೇ .ನಾನು ಪಾಕಿಸ್ತಾನದಲ್ಲಿ ಹುಟ್ಟಿದ್ರೆ ನಾನು ಕಸಬ್ ನನನ್ನು ಸಪೋರ್ಟ್ ಮಾಡ್ತಾ ಇದ್ದೆ .
    ಅದರ ಅರ್ಥ ಇಷ್ಟೆ ಭಾರತ ಹೇಗೆ ಇದ್ರೂ ,ಭಾರತದಲ್ಲಿ ಎಷ್ಟೆ ಬಡತನ ಇದ್ರೂ ,ಎಷ್ಟೆ ಸ್ಲಂ ಗಳಿದ್ರೂ ,ಎಷ್ಟೆ ಭ್ರಷ್ಟಾಚಾರಗಳಿದ್ರೂ ಭಾರತ ನನಗೆ ಸುಂದರವೇ .
    ಬಡತನವೇ ಇಲ್ಲದ,ಭ್ರಷ್ಟಾಚಾರವೇ ಇಲ್ಲದ ,ಕೆಟ್ಟ ಅಂಶಗಳೇ ಇಲ್ಲದ ದೇಶ ಯಾವುದಾದ್ರೂ ಇದ್ರೆ ಹೇಳಿ ನಾನು ಅಲ್ಲಿಗೆ ಹೊಗುವ ತಯಾರಿ ನಡೆಸ್ತೀನಿ..

    ಪ್ರತಿಕ್ರಿಯೆ
  5. neelanjala

    ಸಂದೀಪ್,
    ಇನ್ನೊಂದು ದೊಡ್ಡ ಪ್ಯಾರಾ 😉
    “ತುಂಬಾ ಅರಿವು” ಅಂತ ಏನಿಲ್ಲ. ನನ್ನ ದೊಡ್ಡಮ್ಮನ ಮಗಳು ಫ್ಯಾಷನ್ ಡಿಸೈನರ್. ಅವಳ ಒಡನಾಟದಿಂದ ಅವಳ ಫಿಲ್ಡ್ ಬಗ್ಗೆ ಸ್ವಲ್ಪ ಜಾಸ್ತಿ ಗೊತ್ತು. ಮೇಲೆ ಹೇಳಿದ್ದೆಲ್ಲ ಅವಳಿಂದ ಕಲಿತದ್ದೇ. ಬಟ್ಟೆಯ ನೆಯ್ಗೆಯ ಆಧಾರದ ಮೇಲೆ quality n prize ಡಿಸೈಡ್ ಆಗೋದು, ಏಷ್ಟೋನ್ದು ಬಗೆಯ fabrics, stitching, cuttings, patterns, washes…… ಎಲ್ಲ ಅವಳಿಂದಲೇ ಗೊತ್ತಾಗಿದ್ದು. ಗುಂಡಿಗಳು ಎಷ್ಟು ತರಹ ಇರುತ್ತೆ ಗೊತ್ತಾ! ಬೆಂಗಳೂರಲ್ಲಿ ಆಗೋ fab india expo ನೋಡಿ ಬರಬೇಕು. ಚಿಕ್ಕ ಜಲಕ್ ಸಿಗುತ್ತೆ. amazing field. ನಾ ಹಾಕೋ ಬಟ್ಟೆಯಲ್ಲಿ ಇಷ್ಟೊಂದು ಕೆಲಸ ಇರುತ್ತೆ ಅಂತ ನಂಗೆ ಗೊತ್ತಿರಲಿಲ್ಲ 😀

    ಪ್ರತಿಕ್ರಿಯೆ
  6. ಡಿ.ಎಸ್.ರಾಮಸ್ವಾಮಿ

    ಸಂವಾದಕ್ಕೆ ಹಾಜರಾಗದೇ ಇದ್ದದ್ದಕ್ಕೆ ಈಗ ವಿಪರೀತ ಸಂಕಟವಾಗುತ್ತಿದೆ! ಸಂದೀಪ್ ನಿಮ್ಮ ಲೇಖನ ಕಲ್ಪಿತ ಸಂದರ್ಶನ ಅಂತ ನೀವೇ ಹೇಳಿಕೊಂಡಿದ್ದರೂ ಪ್ರಾಯಶಃ ಇದಕ್ಕಿಂತ ಒಳ್ಳೆಯ ಉತ್ತರ ನಿಜವಾಗಿ ನಡೆಸಿದ ಸಂದರ್ಶನಕ್ಕೂ ಸಿಗುತ್ತಿರಲಿಲ್ಲ. ಎಲ್ಲರೂ ಹೊಗಳುವ ಸತ್ಯಜಿತ್ ರೇ ಹಾಗೇ ಇಂಗ್ಲಿಷ್ ನಲ್ಲಿ ಬರೆಯುತ್ತಿದ್ದ/ಬರೆಯುತ್ತಿರುವ ಬಹುತೇಕರು ಹರಿದ ಪ್ಯಾಂಟನ್ನು ಹೊಲಿಸುವ ಬದಲು ವಾಸ್ತವ ಅಂತ ಹೇಳುತ್ತ ತಮ್ಮ ಬೇಳೆ ಬೇಯಿಸಿಕೋತ ಅವಾರ್ಡು ಗಿವಾರ್ಡು ಪಡೀತಿದಾರೆ. ನಿಮ್ಮ ಬದ್ಧತೆ ಹೀಗೇ ಇರಲಿ!

    ಪ್ರತಿಕ್ರಿಯೆ
  7. Sunil

    Sandeep sir,
    Naanu aa cinema nodiddini….nimma sandarshana odide…commentigarige baredia
    pratikriye kooda. Batte haridudara bagigina
    sankochavashte nanagiddiddu anta heli,bere ‘inneno helalaaga ee sandharbakke’ arogyapoorna mangala haadiddiri.
    Tamma badhdhateya bagge apaara gauravavide.
    Amma hegiddroo yaavattidroo amma ne.Avlige novaadaga,khaayile bandaaga gunapadisalu nammellara pramanika prayatna agatyavide ashte.
    Sunil.

    ಪ್ರತಿಕ್ರಿಯೆ
  8. Ravichandra

    Nilanjala avru F’TV bagge heliddare. but,Fashion Ramp mathe fashion show irodhu nivu helida karanagalige
    antha annodu sari….Adre…..idhu ishtakke
    agidhre vondhu special channel agtha irllila
    sir.. mathe nive heli… fashion show
    nodi design mado jana programge hogirthare.
    idhanna ellara maneli thorso agathya illa.
    Adakke ashtondhu famous???!!! models (specially
    hudgiru papa igeega hudugrige chance siktha
    idhe????!!!)agthya kanditha illa alwa.90% jana
    enikkae FTV nodthare anodu nagna sathya sir.
    (Fashion industry ge relate agiro kelsa madtha
    irodrinda idanna baritha idheeni).
    Comming to the point…Slum-Dog-Millanior ondhu nodi creativity and Concept bagge kushi pado antha
    Bahala indian films gallali ondhu antha nanna
    abhipraya. Idakke ishtondu importance siguthe
    antha expect madirlilla.
    Anyway…”Oscar” ge naminate agidrinda ishtondu
    kushi besara ella. OSCAR ge nominate aglikke
    exceptional bittu bere resons bahala ide alwa????

    ಪ್ರತಿಕ್ರಿಯೆ
  9. ಗುರು ಬಾಳಿಗ

    ಈ ವರ್ಷ ಮೂರನೇ ಬಾರಿ “ಮಂಗಳೂರು” ದೆಹಲಿಯ ಎಲ್ಲ ಪತ್ರಿಕೆಗಳಲ್ಲಿ ಮುಖಪುಟಕ್ಕೆ ಬಂದಿದೆ ಸಂದೀಪ್. ಆದರೂ ದೆಹಲಿಯಂತ ದೆಹಲಿಯಲ್ಲಿ, ನಾವು ಮ್ಯಾಂಗಲೋರ್ ಅಂತಂದ್ರೆ ಬ್ಯಾಂಗಲೋರ್ ? ಅಂತ ಕೇಳ್ತಾರೆ. ಇನ್ನು ಈ ಸುದ್ದಿಗಳನ್ನು ಗಮನವಿಟ್ಟು ಓದಿದವರಿಗೆ ದೆಹಲಿಗಿಂತ ಅದೇನು ಕೆಟ್ಟದಿಲ್ಲ ಅಂತ ಗೊತ್ತಿರತ್ತೆ.

    ಸ್ಲಂ ಡಾಗ್ ಸಿನೆಮಾ ನೋಡುವವರು, ಅದನ್ನು ನೋಡಿದ ಮಾತ್ರಕ್ಕೆ ಭಾರತದ ಬಗ್ಗೆ ಅಭಿಪ್ರಾಯ ರೂಪಿಸಿಕೊಂಡರೆ ಅದರಿಂದೇನು ನಷ್ಟವಿಲ್ಲ. ಹಂಗಂತ “ಇಂಡಿಯ ಶೈನಿಂಗ್” ಸಿನೆಮ ಮಾಡಿ ಆಸ್ಕರ್ ಗೆದ್ದರೂ ಅದರಿಂದ ಈಗಾಗಲೇ ಇರುವ ಅಭಿಪ್ರಾಯ ಭಯಂಕರ ಬದಲಾಗಲ್ಲ.

    ಭಾರತವನ್ನು ಅದರ “ಹ್ಯೂಮನ್” ಆಗಿರುವ ರೂಪಕ್ಕೊಸ್ಕರ ಪ್ರೀತಿಸುವವರು ಬಹಳಷ್ಟು ಜನ ಲೋಕದಲ್ಲಿ ಇದ್ದಾರೆ. ಅವರು ಸ್ಲಂ, ಕಸದ ರಾಶಿ, ಬೀಡಾದ ಪೀಕು, ಪ್ಲಾಸ್ಟಿಕ್ ಅವಜ್ಞೆ, ಗೈಡುಗಳ ದುರಾಸೆ, ರಿಕ್ಷದವರ ತ್ಯಾಕ್ಸಿಯವರ ಮೋಸ ಇನ್ನೂ ಹಲವಾರು ನೆಗೆಟಿವ್ಗಳ ಹೊರತಾಗಿಯೂ ಮತ್ತೆ ಮರಳಿ ಬರುತ್ತಲೇ ಇರುತ್ತಾರೆ.

    ಅಂತರಾಷ್ಟ್ರೀಯ ರಾಜಕೀಯವಂತೂ ಸಿನೆಮಾದಿಂದ ನಿರ್ಧರವಾಗೋದೇ ಇಲ್ಲ.

    ಹಾಗಾಗಿ ರೆಹಮಾನ್ ನ “ಜಯ್ ಹೋ” ಗೆ ಜಯವಾಗಲಿ. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: