ಮೃಗತ್ವದ ಅನಾವರಣವೇ 'ಜಲ್ಲಿಕಟ್ಟು'

ಮಲೆಯಾಳಂ ಭಾಷೆಯ ‘ಜಲ್ಲಿಕಟ್ಟು’ ಚಿತ್ರದ ಬಗ್ಗೆ ಹಿರಿಯ ಚಿಂತಕರಾದ ಡಾ.ಹೆಚ್.ವಿ. ವೇಣುಗೋಪಾಲ್ ಅವರ ನೋಟವನ್ನು ‘ಅವಧಿ’ ಪ್ರಕಟಿಸಿತ್ತು.
ಇದಕ್ಕೆ ವ್ಯತಿರಿಕ್ತವಾದ ನೋಟ ಹೊಂದಿರುವ ಲೇಖನವನ್ನು ಅನಾಮಿಕ ಬರೆದಿದ್ದಾರೆ. ಬಾಲು ವಿ ಎಲ್ ಅವರ ಫೇಸ್ ಬುಕ್ ವಾಲ್ ನಿಂದ ಈ ಲೇಖನ ಆರಿಸಿಕೊಳ್ಳಲಾಗಿದೆ.
ಅನಾಮಿಕ
ಆಹಾರ ರಾಜಕೀಯದ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ವಿಶ್ಲೇಷಣೆ ಮಾಡಿದರೆ ಇಡೀ ಸಿನಿಮಾ ದಲಿತ ಮತ್ತು ಕ್ರಿಶ್ಚಿಯನ್ ರ ವಿರೋಧಿಗಳಿಗೆ ಹೆಚ್ಚಿನ ಲಾಭ ತಂದು ಕೊಡುತ್ತದೆ.
ಸಿನಿಮಾದ ಪ್ರಾರಂಭದಲ್ಲೆ ಇಡೀ ಊರು ಎಮ್ಮೆ ಮಾಂಸವನ್ನು ಅಂಗಡಿಯಿಂದ ಕೊಂಡು ಹೋಗುತ್ತದೆ. ಕೊಳ್ಳುವವರು ಕ್ರಿಶ್ಚಿಯನ್ ಮತ್ತು ದಲಿತರು ಅನ್ನುವುದು ಸ್ಪಷ್ಟವಾಗಿ ಸಿನಿಮಾ ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಅನಂತರ ಎಮ್ಮೆ ತಪ್ಪಿಸಿಕೊಂಡು ಇಡೀ ಊರಿನ ಜನರ ಅದರಲ್ಲೂ ಗಂಡಸರೊಳಗಿನ ಮೃಗತ್ವ ಅನಾವರಣಗೊಳ್ಳುತ್ತದೆ. ಕೊನೆಯ ದೃಶ್ಯ ಮೃಗತ್ವದ ಪರಮಾವಧಿಯನ್ನು ತೋರಿಸುತ್ತದೆ.
ಸಾಮಾನ್ಯ ಪ್ರೇಕ್ಷಕ ಈ ಸೂಕ್ಷ್ಮದ ವಿವರಗಳನ್ನು ಗ್ರಹಿಸುತ್ತಾನೆಯೇ ಅನ್ನುವುದು ನನ್ನ ಸಂದೇಹ. ಆದರೆ ಸಾಮಾನ್ಯ ಪ್ರೇಕ್ಷಕ ಎಮ್ಮೆ ಮಾಂಸ ಏನೆಲ್ಲ ಹಿಂಸೆಯನ್ನು ಹುಟ್ಟು ಹಾಕಬಲ್ಲದು ಎಂದು ವಿಶ್ಲೇಷಿಸುವ ಸಾಧ್ಯತೆಯೇ ಹೆಚ್ಚು. ಪ್ರೇಕ್ಷಕ ಎಮ್ಮೆ, ದನದ ಮಾಂಸವನ್ನು ಹಿಂಸೆಯ ಜೊತೆಗೆ ಸಮೀಕರಣ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ.

ಈ ಎಮ್ಮೆ ಬೇಟೆಯ ವಿರುದ್ಧ ಇನ್ನೊಬ್ಬ ಕ್ರಿಶ್ಚಿಯನ್ ಜಿಲ್ಲಾಧಿಕಾರಿಗೆ ಪತ್ರ ಬರೆಸುವ ದೃಶ್ಯ ಬಹಳ ಮುಖ್ಯವಾದದ್ದು. ಆ ಪತ್ರ ಬರೆದುಕೊಡುವವನು (ಈ ಪಾತ್ರದ ಜಾತಿ ಅಥವಾ ರಿಲಿಜನ್ ಅನ್ನು ನಾನು ಸ್ಪಷ್ಟವಾಗಿ ಗಮನಿಸಿಲ್ಲ ಅಥವಾ ಸಿನಿಮಾದಲ್ಲಿ ಹೇಳಿಲ್ಲ) ಎಮ್ಮೆಯನ್ನು ಮಹಿಷಾ ಅಂತ ಬರೆಯುತ್ತಾನೆ. ಅದಕ್ಕೆ ಆ ಕ್ರಿಶ್ಚಿಯನ್ ಎಮ್ಮೆಯನ್ನು ಎಮ್ಮೆ ಅಂತ ಬರಿ ಅನ್ನುತ್ತಾನೆ. ಅದಕ್ಕೆ ಪತ್ರ ಬರೆಯುವವನು ಒಪ್ಪದ ಕಾರಣಕ್ಕೆ ಮಹಿಷಾ ಅನ್ನುವ ಪದಕ್ಕೆ ಈ ಕ್ರಿಶ್ಚಿಯನ್ ಒಪ್ಪುತ್ತಾನೆ. (ಇದೇ ಸಾಂಸ್ಕೃತಿಕವಾಗಿ ತಮ್ಮ ಕಡೆಗೆ ಇನ್ನೊಬ್ಬನನ್ನು ಸೆಳೆದುಕೊಳ್ಳುವುದು. ಇನ್ನು ಮುಂದೆ ಆ ಕ್ರಿಶ್ಚಿಯನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಗೆ ಎಮ್ಮೆ ಮಹಿಷಾ ನಾಗುತ್ತದೆ. Right wing Populism ನ ಬೀಜ ಬಿತ್ತನೆ ಆಗುವುದು ಈ ರೀತಿಯಲ್ಲೆ).
ಅನಂತರ ಆ ಕ್ರಿಶ್ಚಿಯನ್ ಸತ್ಯಾಗ್ರಹಿ ರೂಪದಲ್ಲಿ ಜಿಲ್ಲಾಧಿಕಾರಿಯ ಮನೆಯ ಮುಂದೆ ಕುಳಿತಿರುವುದು, ಅದೇ ಸಮಯದಲ್ಲಿ ಅವನದೇ ಊರಿನ ಜನರು ತಮ್ಮೊಳಗಿನ ಹಿಂಸೆಯ ಅಭಿವ್ಯಕ್ತಿಯಲ್ಲಿ ತೊಡಗಿರುವುದು ಪ್ರೇಕ್ಷಕನಿಗೆ ಮಾಂಸಾಹಾರವೇ ಹಿಂಸೆಗೆ ಕಾರಣ ಅನ್ನಿಸಿಬಿಡಬಹುದು.
ದಲಿತರು ಮತ್ತು ಮತಾಂತರ ಹೊಂದಿದ ಹಿಂದುಳಿದ, ದಲಿತ ಕ್ರಿಶ್ಚಿಯನ್ ಸಮುದಾಯದೊಳಗಿನ ಹಿಂಸೆಯನ್ನು ಈ ರೀತಿಯಲ್ಲಿ explicit ಆಗಿ ತೆರೆಯ ಮೇಲೆ ಅಭಿವ್ಯಕ್ತಿಗೊಳಿಸುವುದು ಮೇಲ್ಜಾತಿಯವರ Structural ಹಿಂಸೆಯೇ ಪರವಾಗಿಲ್ಲ ಅನ್ನಿಸುವಂತೆ ಮಾಡುತ್ತದೆ. ಆಗ ಮೇಲ್ಜಾತಿಯವರ Structural ಹಿಂಸೆ ಯಾವುದೇ ಅಡ್ಡಿ ಆತಂಕ ಇಲ್ಲದೇ ನಿರಂತರವಾಗಿ ನಡೆಯುತ್ತದೆ.
ನನ್ನ ಅಭಿಪ್ರಾಯದಲ್ಲಿ ಈ ಕಾಲಘಟ್ಟದಲ್ಲಿ ಹಿಂದುಳಿದ, ದಲಿತ ಮತ್ತು ಕ್ರಿಶ್ಚಿಯನ್, ಮುಸ್ಲಿಂ ಕಥೆಗಳನ್ನು ಹೇಳುವಾಗ ಇಡೀ ಸಮುದಾಯದವರನ್ನು ಹಿಂಸೆಯ ಪ್ರತಿರೂಪಗಳಂತೆ ತೋರಿಸಲೇಬಾರದು. ಈ ರೀತಿ ತೋರಿಸಿದ್ದೆ ಆದರೆ ಪುರಾಣದಲ್ಲಿ ಬರುವ ದಾನವ, ರಾಕ್ಷಸರಿಗೆ ನಾವುಗಳೇ ಸಾಕ್ಷಿ ಒದಗಿಸದಂತೆ ಆಗುತ್ತದೆ. ಆದ್ದರಿಂದ ನಮ್ಮ ಸಿನಿಮಾ, ಸಾಹಿತ್ಯ ಎಲ್ಲವೂ Structural Corruption and violence ಅನ್ನು ಸಾಮಾನ್ಯ ಜನರಿಗೆ ತೋರಿಸುವ, ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕೆ ಹೊರತು ಜಲ್ಲಿಕಟ್ಟಿನ ರೀತಿಯ ಮೃಗತ್ವದ ಅನಾವರಣಕ್ಕೆ ಕೈ ಹಾಕಬಾರದು.

‍ಲೇಖಕರು avadhi

November 6, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: