ಟಿ ಎನ್ ಸೀತಾರಾಮ್
ವೀ. ಕೆ. ಮೂರ್ತಿ ಇವತ್ತು ನಿಧನ ಹೊಂದಿದ್ದಾರೆ …. ಗುರುದತ್ತರ ಬಹುತೇಕ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದು ಮಾತ್ರ ಮುಖ್ಯವಲ್ಲ,
ಗುರುದತ್ ರೀತಿಯ ಚಿತ್ರಗಳು ಇಂದ್ರಿಯಗಳಿಗೆ ಮಾತ್ರ ದಕ್ಕುವಂಥದ್ದಲ್ಲ…. ನೋವಿನ ಸೂಕ್ಷ್ಮ ಕೇಂದ್ರಕ್ಕೆ ಥಟ್ಟನೆ ತಾಗುವಂಥವು .. ಸೂಕ್ಷ್ಮದ ಅಂತರ ಕಾದುಕೊಂಡ ವ್ಯಕ್ತಿಯನ್ನು ಉತ್ಕಟವಾಗಿ ಪ್ರೀತಿಸುವುದು ಜ್ವಾಲಾರಸವನ್ನು ಪ್ರೀತಿಯಿಂದ ಕುಡಿದಷ್ಟೇ ಕಷ್ಟ ಎಂದು ಪ್ರತಿ ದಿನ ಕಲಿಯುತ್ತಿದ್ದ ವ್ಯಕ್ತಿ ಗುರುದತ್… ತನ್ನ ಪ್ರೇಮ ,ನೋವು, ಆವೇಶ , ಉದ್ವಿಗ್ನತೆ ಎಲ್ಲವನ್ನೂ ಚಿತ್ರ ಮಾಡಿದ ವ್ಯಕ್ತಿ ಗುರುದತ್.. ಪ್ಯಾಸ, ಕಾಗಜ್ ಕೆ ಫೂಲ್…. ಇದೇ ಥರ.
ಅದರ ಸಾವಿರ ಬಗೆಯ ಭಾವದ ಸಂಕೀರ್ಣ ಬಣ್ಣಗಳನ್ನು ಕಪ್ಪು ಬಿಳುಪಿನ ನೆರಳುಗಳ ಮೂಲಕ ನೋಡುಗರ ಎದೆಗೆ ನೇರವಾಗಿ ಇಳಿಸಿದವರು ಮೂರ್ತಿ.
ಮೂರ್ತಿ ಇಲ್ಲದಿದ್ದರೆ ಗುರುದತ್ತನ ನೋವುಗಳು ಯಾರಿಗೂ ಅರ್ಥವಾಗದೆ ಗುರುದತ್ ಸೋಲುತ್ತಿದ್ದ ಎಂದು ಪುಟ್ಟಣ್ಣ ಹೇಳುತ್ತಿದ್ದರು .
ಪ್ರತಿಯೊಂದು frame ಆತ್ಮಕ್ಕೆ ಬೆಂಕಿ ಹಚ್ಚಿಕೊಂಡ ಒಂದೊಂದು ಕಾವ್ಯದ ಸಾಲಿನಂತೆ ಕಾಣುತ್ತಿತ್ತು ಅವರ ಛಾಯಾಗ್ರಹಣದಲ್ಲಿ.
ಭಾರತದ ಮಹೋನ್ನತ ಕ್ಯಾಮರಾಮನ್ ಒಬ್ಬರು ಇಂದು ಸತ್ತಿದ್ದಾರೆ.







0 Comments