ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮೂರ್ಖರ ಜೊತೆಯಲ್ಲಿ ಹೇಗಿರಬೇಕು?'!

ಪಂಡಿತಾರಾಧ್ಯ

ಒಮ್ಮೆ ಅಕ್ಬರ್ ಬೀರಬಲ್ ನನ್ನು ಕೇಳಿದ: ‘ಮೂರ್ಖರ ಜೊತೆಯಲ್ಲಿ ಹೇಗಿರಬೇಕು?’
ಅದಕ್ಕೆ ನಾಳೆ ಉತ್ತರಿಸುವುದಾಗಿ ಬೀರಬಲ್ ಹೇಳಿದ.
ಒಬ್ಬನ್ನು ಕರೆದು ಅವನನ್ನು ಅರಮನೆಗೆ ಕರೆದುಕೊಂಡು ಹೋಗಿ ಚಕ್ರವರ್ತಿಗಳನ್ನು ಪರಿಚಯಿಸುವುದಾಗಿ ತಿಳಿಸಿ,
ಅವರು ಏನು ಕೇಳಿದರೂ ಮೌನಿಯಾಗಿರುವಂತೆ ಸೂಚಿಸಿದ.

ಮರುದಿನ ಬೀರಬಲ್ ಆತನೊಂದಿಗೆ ಅರಮನೆಗೆ ಹೋದ. ‘ ಮಹಾಸ್ವಾಮಿ, ಇವರು ಮಹಾ ಜ್ಞಾನಿ. ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ‘ ಎಂದು ಅಕ್ಬರನಿಗೆ ತಿಳಿಸಿದ. ಅಕ್ಬರ್ ತನ್ನ.ಪ್ರಶ್ನೆಯನ್ನು ಕೇಳಿದ, ‘ಮೂರ್ಖರ ಜೊತೆಯಲ್ಲಿ ಹೇಗಿರಬೇಕು?’
ಆ ವ್ಯಕ್ತಿ.ಬೀರಬಲ್ ಹೇಳಿದಂತೆ ಮೌನವಾಗಿದ್ದ. ಬಹುಶಃ ಕೇಳಿಸಿರಲಿಕ್ಕಿಲ್ಲ ಎಂದು ಅಕ್ಬರ್ ಮತ್ತೆ ಕೇಳಿದ. ಮತ್ತೆ ಮತ್ತೆ ಕೇಳಿದ.
ಪರಿಣ‌ಾಮ ಮಾ‌ತ್ರ ಅಷ್ಟೆ. ಅಕ್ವರನಿಗೆ ತಾಳ್ಮೆ ತಪ್ಪಿತು. ಬೀರಬಲ್ ಕಡೆ ತಿರುಗಿ,
‘ ಈತ ಮಹಾ ಜ್ಞಾನಿ ಎಂದೆ, ನೋಡಿದರೆ ಏನೂ ತಿಳಿದೆ ಮೌನದಿಂದ ಇದ್ದಾನೆ ‘ ಎಂದ.
ಬೀರಬಲ್ ಉತ್ತರಿಸಿದ. ಇಲ್ಲ ಮಹಾಸ್ವಾಮಿ, ನಿಮ್ಮ ಪ್ರಶ್ನೆ ‘ಮೂರ್ಖರ ಜೊತೆಯಲ್ಲಿ ಹೇಗಿರಬೇಕು?’ ಎನ್ನುವುದಕ್ಕೆ
ಅವರು ಈಗಾಗಲೇ ಉತ್ತರಿಸಿದ್ದಾರೆ.
ನೀವು ಅರ್ಥಮಾಡಿಕೊಳ್ಳದೆ ಮತ್ತೆ ಮತ್ತೆ ಕೇಳಿದಾಗಲೂ ಅವರು ಬೇಸರಿಸದೆ ಅಷ್ಟೂ ಬಾರಿ ಉತ್ತರಿಸಿದ್ದಾರೆ!’ ಎಂದ.
 

‍ಲೇಖಕರು G

6 August, 2014

2 Comments

  1. Anonymous

    olle prasanga sir.

  2. Kiran

    ಆದರೆ ಈ ಬಗೆ ನಮ್ಮ ಸದ್ಯದ ಕಾಲಮಾನದಲ್ಲಿ ಉಪಯೋಗವಿಲ್ಲ.
    ನಾವು ಮೌನವಾಗಿದ್ದರೆ ಮೂರ್ಖರು ಇನ್ನೂ ಜೋರಾಗಿ ಮಾತಾಡಿ ಅವರ ಸತ್ಯವನ್ನೇ ಪ್ರತಿಷ್ಟಾಪಿಸುತ್ತಾರೆ. ಕೊನೆಗೆ ಜನರು ಅವರನ್ನೇ ಕೇಳತೊಡಗಿ ನಿಜವಾಗಿ ಮಾತಾಡಬೇಕಾದವರು ಮೂಲೆಗುಂಪಾಗುತ್ತಾರೆ.
    ಮದುವೆಯಾಗಿದ್ದರೆ ಇದು ಇನ್ನೂ ಚೆನ್ನಾಗಿ ಅರ್ಥವಾಗುತ್ತೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading