ಮುರಳಿ ಕೃಷ್ಣ ಕಂಡಂತೆ – ಚಿತ್ರಕಲಾ ಪರಿಷತ್ತಿನ ಕಲಾಪ್ರದರ್ಶನ..

ಮುರಳಿ ಕೃಷ್ಣ

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಕಲಾಪ್ರದರ್ಶನವೂ ಯುವಕಲಾವಿದೆಯೊಡನೆ ಮಾತುಕತೆಯೂ

ಸುಮಾರು ಎರಡು ವಾರಗಳ ಹಿಂದೆ ಚಿತ್ರಕಲಾ ಪರಿಷತ್ತಿನಲ್ಲಿ ಎರಡು ಚಿತ್ರಕಲಾ ಪರ್ದರ್ಶನಗಳನ್ನು ವೀಕ್ಷಿಸುವ ಸಂದರ್ಭ ಒದಗಿ ಬಂದಿತು. ನಾನು ಪೈಂಟಿಂಗ್ಸ್ ಗಳನ್ನು ವೀಕ್ಷಿಸುತ್ತಿದ್ದಾಗ ಹತ್ತಿರದಲ್ಲೇ ಯುವತಿಯೊಬ್ಬಳು ನಿಂತಿದ್ದಳು. ನಾನು ” ನೀವು ಕಲಾವಿದೆಯೇ?” ಎಂದು ಪ್ರಶ್ನಿಸಿದಾಗ, ಆಕೆ ಹೌದೆಂದಳು. ಬಹುಶಃ ನನ್ನ ಅವತಾರವನ್ನು ಕಂಡು, ನನಗೆ ಅದೇ ಪ್ರಶ್ನೆ ಆಕೆಯಿಂದ ಬಂದಿತು. ನಾನು ಒಬ್ಬ ಸಣ್ಣ ಲೇಖಕ ಎಂದು ತಿಳಿಸಿದೆ. ಸುಮಾರು 10-15 ನಿಮಿಷಗಳ ಕಾಲ ಮಾತನಾಡಿದೆವು.

ಆಕೆ ಕೇರಳದ ಕೊಚ್ಚಿಯ ‘ ಸಾಮರಸ್ಯ ‘ ಎಂಬ ಚಿತ್ರಕಲಾ ತಂಡದ ಸುಮಾರು 30 ಕಲಾವಿದರ ಜೊತೆ ಬೆಂಗಳೂರಿಗೆ ಬಂದಿದ್ದಳು. ಕೊಚ್ಚಿ ಎಂದಾಕ್ಷಣ ಅಲ್ಲಿ ನಡೆದ Biennale 2023ರ ಬಗೆಗೆ ಪ್ರಸ್ತಾಪಿಸಿದೆ. ಆಕೆ ಇನ್ನೂ ನಡೆಯುತ್ತಿದೆ ಎಂದಳು. ಮೂಲತಃ ಒಡಿಶಾದವಳಾದ, ಕೊಚ್ಚಿಯಲ್ಲಿ ನೆಲೆಸಿರುವ ಆ ಯುವತಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ್ದಾಳೆ. ಆದರೆ ಅದನ್ನು ಬದಿಗಿಟ್ಟು ಕಲಾಪ್ರಪಂಚದ ಭಾಗವಾಗಲು ನಿರ್ಧರಿಸಿ, ಅದರಂತೆ ಕಾರ್ಯಪ್ರವೃತ್ತರಾಗಿದ್ದಾಳೆ! ತನ್ನ ಮನೆಯವರೆಲ್ಲರೂ ಕಲಾಭಿಮಾನಿಗಳು ಎಂದು ತಿಳಿಸಿದಳು.

ಕೊಚ್ಚಿಯಲ್ಲಿ ಚಿತ್ರಕಲಾ ವಾತಾವರಣ ಚೆನ್ನಾಗಿದೆ ಎಂದಳು. ಪಕ್ಕದಲ್ಲಿದ್ದ ನನ್ನ ಮಗ ಅಭಿನವ್ ಮುರಳಿಯನ್ನು ಪರಿಚಯಿಸುತ್ತ ” ಈತನೂ ಒಬ್ಬ ಕಲಾವಿದ ” ಎಂದು ತಿಳಿಸಿದೆ. ನನ್ನ ಮಗ ತಾನೊಬ್ಬ ಹಾಬಿ ಆರ್ಟಿಸ್ಟ್ ಎಂದು ಸ್ಪಷ್ಟೀಕರಣವನ್ನು ನೀಡಿದ. ಅದಕ್ಕೆ ಆಕೆ ” ನಾವೆಲ್ಲರೂ ಹಾಬಿ ಆರ್ಟಿಸ್ಟ್ ಗಳೇ”ಎಂದು ನಸುನಕ್ಕಳು! ಆಕೆಯ 2-3 ಪೈಂಟಿಂಗ್ಸ್ ಗಳು ಗಮನಾರ್ಹವಾಗಿದ್ದವು. ಪ್ರದರ್ಶನದಿಂದ ಹೊರಗೆ ಹೋಗುವಾಗ ‘ Visitors Book ‘ ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ ಎಂದಳು. ನಾವು ಹಾಗೇ ಮಾಡಿದೆವು.

ನೀವು ಏನೇ ಹೇಳ್ರೀ, ಕ್ರಿಯಾಶೀಲ, ಸೃಜನಶೀಲ ಯುವಕ-ಯುವತಿಯರ ಜೊತೆ ಸ್ವಲ್ಪ ಸಮಯವನ್ನು ಕಳೆದರೆ ನನಗೆ ಒಂದು ತೆರನಾದ ಚೈತನ್ಯ ಬರುತ್ತದೆ !

‍ಲೇಖಕರು avadhi

March 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: