ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಬೈ ಕಥಾ ಸ್ಪರ್ಧೆಯಲ್ಲಿ ಅಜಿತ್ ಹರೀಶಿ, ಸದಾಶಿವ ಸೊರಟೂರು ಅವರಿಗೆ ಬಹುಮಾನ

ಮುಂಬಯಿಯ ಕನ್ನಡ ಭವನ ಎಜುಕೇಶನ್ ಸೊಸೈಟಿ ಹಮ್ಮಿಕೊಂಡಿದ್ದ ಅಖಿಲ ಭಾರತ ಕಥಾಸ್ಪರ್ಧೆಯಲ್ಲಿ ಡಾ. ಅಜಿತ್ ಹರೀಶಿ ಅವರ ಕಥೆ ‘ ಕನ್ನಡಿಗಂಟಿದ ಬಿಂದಿ’ ಪ್ರಥಮ ಸ್ಥಾನ ಪಡೆದಿದೆ.

ಸದಾಶಿವ ಸೊರಟೂರು ಅವರ ‘ನೀಲಿ’ ಎರಡನೆಯ ಹಾಗೂ ಡಾ ಕೊಲ್ಚಪ್ಪೆ ಗೋವಿಂದ ಭಟ್ ಅವರ ‘ಶಿಲ್ಪ ಸಹವಾಸ’ ಮೂರನೇ ಬಹುಮಾನಕ್ಕೆ ಪಾತ್ರವಾಗಿದೆ.

ದಿನಕರ ನಾಯಕ್ ಅವರ ‘ಒಂದು ಸಾವಿನ ವರದಿ’ ನಾಗರೇಖಾ ಗಾಂವ್ಕರ್ ಅವರ ‘ಪ್ರೀತಿಯ ಸಹವಾಸ’ ಪ್ರೋತ್ಸಾಹಕರ ಬಹುಮಾನ ಪಡೆದಿವೆ.

ಕೆ ಎಂ ವಸುಂಧರಾ ಅವರ ‘ಭಗ್ನ’, ಹೇಮಾ ಸದಾನಂದ ಅಮೀನ್ ಅವರ ‘ರೇಷನ್ ಕಾರ್ಡ್’ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಥಮ ಬಹುಮಾನವು ಹತ್ತು ಸಾವಿರ ರೂ ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಸೊಸೈಟಿಯು ತನ್ನ ವಾರ್ಷಿಕ ಮುಖವಾಣಿ ‘ಮಧುರವಾಣಿ’ಯ ಐವತ್ತರ ಸಂಭ್ರಮದ ವಿಶೇಷಾಂಕಕ್ಕೆ ಈ ಸ್ಪರ್ಧೆಯನ್ನು ಆಯೋಜಿಸಿತ್ತು.

‍ಲೇಖಕರು avadhi

3 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading