ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಶೆಗಾಗಿ!
೧. ಸ್ವಚ್ಛವಾಗಿ ಮುಖ ಕ್ಷೌರ ಮಾಡಿ/ಮಾಡಿಸಿ ತೆಗೆಸಿದ, ನಿಮ್ಮನ್ನೇ ಹೋಲುವ ಭಾವಚಿತ್ರದೊಂದಿಗೆ, ಅಂತರಜಾಲದಲ್ಲೇ ಅನ್ಯರ ಸಹಾಯ ಪಡೆಯದೆ ನೊಂದಾಯಿಸಬೇಕು. ಸಹಾಯ ಪಡೆದದ್ದು ಆಯೋಜಕರ ಗಮನಕ್ಕೆ ಬಂದರೆ, ನೊಂದಣಿಯನ್ನು ತಿರಸ್ಕರಿಸಲಾಗುವುದು. ಇದೇ ಭಾವಚಿತ್ರದ ಐ ಡಿ ಯನ್ನು ಹಣೆಗೋ ಅಥಾವ ದೇಹದ ಮಧ್ಯಭಾಗಕ್ಕೋ ಅಂಟಿಸಿಕೊಳ್ಳಬೇಕು. ಐ ಡಿ ಯನ್ನು ಕಳೆದುಕೊಳ್ಳುವುದು, ಶಿಥಿಲಗೊಳಿಸುವುದು ಆದರೆ ನೀವು ಸಮ್ಮೇಳನದದಿಂದ ಹೊರ ಹೋದಂತೆ.
೨. ಮದ್ಯಪಾನ ಮಾಡಿ ಸಮ್ಮೇಳನದ ಆವರಣದಲ್ಲಿ ಹೆಜ್ಜೆಯಿಡಕೂಡದು. ಮದ್ಯಪಾನದ ಹ್ಯಾಂಗೋವರಿನಲ್ಲಿ ಬರುವುದನ್ನು ಕೂಡ ನಿಷೇಧಿಸಲಾಗಿದೆ. ಈ ನಿಯಮ ಆಯೋಜಕರಿಗೆ ಅನ್ವಯಿಸುವುದಿಲ್ಲ. ಹೊರದಬ್ಬುವ ಕೊನೆಯ ನಿಷ್ಕರ್ಶೆ ಆಯೋಜಕರದ್ದೆ.
೩. ಯಾವುದೇ ಖಾಸಗಿ ಪ್ರಾಯೋಜಕರನ್ನು ಸಮ್ಮೇಳನದ ಅಂಗಳದಲ್ಲಿ ನಿಂದಿಸುವುದು ನಿಷಿದ್ಧ.
೪. ಸಭ್ಯ ವರ್ತನೆಯ ಪ್ರದರ್ಶನ ಇರಲೇಬೇಕು. ಸಮ್ಮೇಳನದ ಅಧ್ಯಕ್ಷರು, ಸಂಪನ್ಮೂಲ ವ್ಯಕ್ತಿಗಳು ಕಂಡು ಬಂದಾಗ ಎದ್ದು ನಿಂತು ಬಗ್ಗಿ ವಂದಿಸುವುದು, ವಯಸ್ಸಿನಲ್ಲಿ ನಿಮಗಿಂತ ಹಿರಿಯರಾದರೆ ಕಾಲು ಮುಟ್ಟಿ ನಮಸ್ಕರಿಸುವುದು ಇತ್ಯಾದಿ. ಹೆಚ್ಚಿನ ವಿವರಗಳನ್ನು ಸಭ್ಯ ನಿಯಮಾವಳಿಗಳು ಎಂಬ ಕಿರು ಹೊತ್ತಿಗೆಯಲ್ಲಿ ಪ್ರಕಟಿಸಲಾಗಿದೆ. ಭಾಗವಹಿಸುವ ಪ್ರತಿನಿಧಿಗಳು ೫೦/- ರೂ ಪಾವತಿಸಿ ಈ ಪುಸ್ತಕವನ್ನು ಸದಾ ಕೈಯಲ್ಲೇ ಹಿಡಿದಿರಬೇಕು. ಅಗತ್ಯಬಿದ್ದಲ್ಲಿ ಆಯೋಜಕರಿಗೆ ಪುಸ್ತಕವನ್ನು ತೋರಿಸಬೇಕಾಗಬಹುದು.
೫.ಶಸ್ತ್ರಾಸ್ತ್ರಗಳ ಬಳಕೆ ನಿಶಿದ್ಧ. ಇದಕ್ಕೆ ಪೆನ್ನೂ ಕೂಡ ಹೊರತಲ್ಲ. ಪೆನ್ನಿನ ನಿಬ್ಬು ಚೂಪಾಗಿರದೆ, ೦.೯ mm ಗಿಂತಲೂ ಮೊಂಡಾಗಿರಬೇಕು. ನಮ್ಮ ಪ್ರಾಯೋಜಕರು ಈ ಸಮ್ಮೇಳನಕ್ಕೆಂದೇ ಸಿದ್ಧಪಡಿಸಿದ ಪೆನ್ನುಗಳನ್ನು ರಿಯಾಯಿತಿ ಬೆಲೆ ಅಂದರೆ ರೂ ೧೦೦/- ಕೊಟ್ಟು ಪಡೆದುಕೊಳ್ಳಬಹುದು. ಸಮ್ಮೇಳನದ ನಂತರ ಪೆನ್ನುಗಳನ್ನು ಕಡ್ಡಾಯವಾಗಿ ಹಿಂತಿರುಗಿಸಬೇಕು. ಪಾವತಿಸಿದ ಹಣವನ್ನು ಆಯೋಜಕರು ಮುಂದಿನ ಸಮ್ಮೇಳನದ ಖರ್ಚು ವೆಚ್ಚಗಳಿಗೆ ಉಪಯೋಗಿಸಿಕೊಳ್ಳಲು ಸಹಮತವನ್ನು ಲಿಖಿತ ದಾಖಲೆಯೊಂದಿಗೆ ವ್ಯಕ್ತಪಡಿಸಬೇಕೆ.
೬. ಸಭ್ಯ ನಿಯಮಾವಳಿ ಕಾಲಂ ೨೦ ರ ಅಡಿಯಲ್ಲಿ ಕೆಲವು ಪದಗಳ ಪ್ರಯೋಗ ನಿಷಿದ್ಧ. ಇದಕ್ಕೆ ನಿಷಿದ್ಧ ಬೈಗುಳಗಳು ಎಂಬ ಕಿರುಹೊತ್ತಿಗೆಯನ್ನು ರೂ ೫೦ ಮೇಲಿನ ಹೆಚ್ಚು ಮೊತ್ತವನ್ನು ಕೊಟ್ಟು ಖರೀದಿಸಿ ಬಾಯಿ ಪಾಠ ಮಾಡಬೇಕು, ಆದರೆ ಉಪಯೋಗಿಸದಂತೆ ಎಚ್ಚರ ವಹಿಸಬೇಕು. [ಪೇಜ್ ೪೪ ರಲ್ಲಿ ಕಂಡುಬರುವ ಧಾರವಾಡದ ಸಾಮಾನ್ಯ ಬೈಗುಳಗಳ ಬಳಕೆಗೆ ಅವಕಾಶವಿದೆ]
೭. ಸಂಪನ್ಮೂಲ ವ್ಯಕ್ತಿಗಳ, ಸಮ್ಮೇಳನ ಅಧ್ಯಕ್ಷರ ಫೋಟೊ ತೆಗೆಯುವುದು, ಅವರ ಜೊತೆ ಫೋಟೊ ತೆಗೆಸಿಕೊಳ್ಳುವುದು, ಅವರ ಹಸ್ತಾಕ್ಷರ ಪಡೆಯುವುದು, ಅವರ ಜೊತೆ ಮಾತನಾಡುವುದು ಎಲ್ಲದ್ದಕ್ಕೂ ಅನುಕೂಲ ಮಾಡಿಕೊಡಲಾಗಿದ್ದು ಪ್ರತಿಯೊಂದ ದರ ಪಟ್ಟಿಯನ್ನು ‘ದರಪಟ್ಟಿ’ ಕಿರು ಹೊತ್ತಿಗೆಯಲ್ಲಿ ಕಾಣಬಹುದು. ಈ ಚಟುವಟಿಕೆಗಳ ರಶೀತಿಯನ್ನು ಮುಂಗಡ ಪಡೆಯಬೇಕಾಗಿದ್ದು, ಮೊದಲು ಬಂದವರಿಗೆ ಆದ್ಯತೆ.
೮. ಮೇಲೆ ತಿಳಿಸಿದ ಎಲ್ಲಾ ಕಿರುಹೊತ್ತಿಗೆಗಳ ಹಕ್ಕುಗಳು ಆಯೋಗಕ ಪ್ರಕಾಶಕರದ್ದೇ ಆಗಿದ್ದು, ಅವುಗಳ ಯಾವುದೇ ಭಾಗವನ್ನು ಅನುಮತಿಯಿಲ್ಲದೆ ಬಳಸುವುದು ನಿಶಿದ್ಧ.
[ವಿ ಸೂ: ಎಲ್ಲವೂ ತಮಾಶೆಗಾಗಿ. ಯಾವುದೇ ಪ್ರಕಾಶನ ಸಂಸ್ಥೆ ಅಥವಾ ವ್ಯಕ್ತಿಗಳ ವಿರುದ್ಧ ದುರುದ್ದೇಶ ಪೂರಿತವಾದದ್ದಲ್ಲ.]





ತಮಾಷೆಗಾಗಿ ಎಂಬ ರಕ್ಷಾಕವಚ ಅನಗತ್ಯ. ಮುಂದೆ ಯಾರೂ ಈ ರೀತಿ ಹಾಸ್ಯಾಸ್ಪದರಾಗದಂತೆ ಇದು ಎಚ್ಚರಿಕೆಯಾಗಲಿ.
non sense
bal chandaagaite saami
bhaala bhaala pasand aaytu.
ಅರಿವು ನಮ್ಮದು ತಿಳಿವು ಅವರದು.ಅಗೋದೆಲ್ಲ ವಳ್ಳೆದೆ ಎನ್ನೊ ಗಾದೆ ನಂಬೆಕು ಅಷ್ಟೆ.