‘ಅಂಕಿತ ಪುಸ್ತಕ’ ಇದೇ ಪ್ರಥಮ ಬಾರಿಗೆ ಹೊರತಂದ ಮೀಡಿಯಾ ಮಾಲಿಕೆಯ ಬಿಡುಗಡೆಯ ಫೋಟೋಗಳು ಇಲ್ಲಿವೆ.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ‘ಇದು ಮುಂಗಾರು’, ಎಂ ಬಿ ಶ್ರೀನಿವಾಸ ಗೌಡ ಅವರ ‘ಮೀಡಿಯಾ ಡೈರಿ’ ಸುಘೋಷ್ ಎಸ ನಿಗಳೆ ಅವರ ‘ನ್ಯೂಸ್ ಪಿಂಟ್’ ಈ ಮಾಲಿಕೆಯಡಿ ಹೊರಬಂದಿವೆ. ಜಿ ಎನ್ ಮೋಹನ್ ಸಂಪಾದಿಸಿರುವ ಈ ಸರಣಿಯ ಮೊದಲ ಕಂತು ಇದು.
ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಎಚ್ ಎನ್ ನಾಗಮೋಹನ ದಾಸ್, ಚಿತ್ರ ನಿರ್ದೇಶಕ- ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕಂತೀರವ ಸ್ಟುಡಿಯೋ ಆಡಳಿತ ನಿರ್ದೇಶಕ ಎನ್ ಆರ್ ವಿಶುಕುಮಾರ್ ಅವರು ಸಮಾರಂಭದಲ್ಲಿದ್ದರು. ಇದೇ ಸಂದರ್ಭದಲ್ಲಿ ಜಿ ಪೂರ್ಣಿಮಾ ಅವರ ಕವನ ಸಂಕಲನ ‘ಕತ್ತಲ ಇಬ್ಬನಿ, ಬಣ್ಣದ ಚಿತ್ತಾರ’ ಸಹಾ ಬಿಡುಗಡೆಗೊಂಡಿತು.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ







ಪ್ರಿಯ ಮೋಹನ್ ಸರ್, ಮೀಡಿಯಾ ಲೋಕದ ಕುರಿತು ವಿವಿಧ ನೆಲೆಗಟ್ಟಿನಲ್ಲಿ ಹಲವು ಪುಸ್ತಕಗಳು ಪ್ರಕಟಣೆ ಕಂಡಿವೆ ಆದರೆ ಮಾದ್ಯಮ ಲೋಕದ ಆಗುಹೋಗುಗಳನ್ನು ದಟ್ಟವಾಗಿ ಕಟ್ಟಿಕೊಡುವ ಚಿದಂಬರ ಬೈಕಂಪಾಡಿಯವರ ‘ಇದು ಮುಂಗಾರು,ವಾಸ್ತವ ನೆಲೆಗಟ್ಟಿನಲ್ಲಿ ಹಾಸ್ಯ ಬೆರೆತ ಶೈಲಿಯಲ್ಲಿ ನೇರವಾಗಿ ಹೇಳುವ ಆಪ್ತತೆಯ ಬರಹ ಗೆಳೆಯ ಶ್ರೀನಿವಾಸಗೌಡರ ‘ಮೀಡಿಯಾ ಡೈರಿ’ಯಲ್ಲಿದ್ದರೆ, ಗಂಬೀರ ಧಾಟಿಯಲ್ಲಿ ವೃತ್ತಿಯ ತವಕ ತಲ್ಲಣಗಳನ್ನು ಹೇಳುವ ಸುಘೋಷ್ ನಿಘಳೆಯವರ ‘ನ್ಯೂಸ್ ಪಿಂಟ್’ ಇವುಗಳನ್ನು ಸಂಪಾದಿಸಿ ಉತ್ತಮ ಓದಿಗೆ ಕಾರಣರಾಗಿದ್ದೀರಿ.. ಇವೇ ಪುಸ್ತಕಗಳನ್ನು ದಯಮಾಡಿ ತಾವು ಜಿಲ್ಲಾ ಕೆಂದ್ರಗಳಿಗೂ ಹೋದಾಗ ಅಲ್ಲಲ್ಲಿ ಬಿಡುಗಡೆ ಮಾಡುವ ಕೆಲಸ ಮಾಡಿದರೆ ಇನ್ನೂ ಹೆಚ್ಚಿನ ಜನರನ್ನು ತಲುಪುಬಹುದಲ್ಲವೇ? ಅಂದಹಾಗೆ ಕಾರ್ಯಕ್ರಮ ಮುಗಿಸಿ ಊಟಕ್ಕೂ ಕಾಯದೇ ಓದಿನ ಹಸಿವಿನೊಂದಿಗೆ ಮದ್ಯಾಹ್ನ ಬಸ್ ನಲ್ಲಿ ಕುಳಿತವನು ಹಾಸನ ತಲುಪುವ ವೇಳೆಗೆ ಪುಸ್ತಕ ಓದಿ ಮುಗಿಸುವ ಮೂಲಕ ಹಸಿವು ನಿವಾರಿಸಿಕೊಂಡಿದ್ದೇನೆ.. ಮನಸ್ಸು ಚೇತೋಹಾರಿಯಾಗಿದೆ, ಇಂತಹದ್ದೊಂದು ಮುದ ನೀಡುವ ಪುಸ್ತಕದ ಓದಿಗೆ ನೀವು ಕಾರಣ ಅದಕ್ಕಾಗಿ ಧನ್ಯವಾದಗಳು.
ಪ್ರೀತಿಯ ಮೋಹನ್ ಸರ್…
ನಿನ್ನೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದೆ. ಆದರೆ, ಕೊನೆಯ ತನಕ ಇರಲಾಗಲಿಲ್ಲ. ಮಿಸ್ ಮಾಡಿಕೊಂಡೆ. ಆದರೆ, ನ್ಯೂಸ್ ಪಿಂಟ್ ಮತ್ತು ಮೀಡಿಯ ಡೈರಿ ಓದಿ ಮುಗಿಸಿದೆ. ಚೆನ್ನಾಗಿದೆ . ಉದಯೋನ್ಮುಖರನ್ನು ಬೆಳೆಸುವ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ… ಹ್ಯಾಟ್ಸ್ ಆಫ್ ಸರ್..
ತುಂಬಾ ದಿನಗಳ ನಂತರ, ನನಗೆ ತೃಪ್ತಿ ನೀಡಿದ ಭಾಗವಹಿಸುವಿಕೆ ಇದಾಗಿತ್ತು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಚ್ ಎನ್ ನಾಗಮೋಹನ ದಾಸ್, ನಾಗತಿಹಳ್ಳಿ ಚಂದ್ರಶೇಖರ್, ಜಿಎನ್ ಮೋಹನ್ ಹಾಗೂ ಎನ್ ಆರ್ ವಿಶುಕುಮಾರ್ ಅವರುಗಳು ಆಡಿದ ಮಾತುಗಳೆಲ್ಲಾ ಮೆಲುಕು ಹಾಕುವಂತಿದ್ದವು. ಅಂತೆಯೇ ಮೀಡಿಯಾ ಮಾಲಿಕೆಗಳ ಲೇಖಕರುಗಳ ಮಾತುಗಳು ಕೂಡ ಇದ್ದವು. ಚೊಚ್ಚಲ ಕವನ ಸಂಕಲನವನ್ನು ನೀಡಿದ ಶ್ರೀಮತಿ ಜಿ. ಪೂರ್ಣಿಮಾವರ ಮಾತುಗಳು ಮತ್ತು ಅವರು ಕೇಳಿಸಿದ ಒಂದು ಕವನ, ನನ್ನನ್ನು ಕ್ಷಣಹೊತ್ತು ಭಾವುಕನನ್ನಾಗಿಸಿದ್ದೂ ನಿಜ.
ಮೂರು ಮೂರೂವರೆ ಘಂಟೆಗಳ ಕಾಲದ ಉದ್ದಕ್ಕೂ ನನಗೆ ಕಿಂಚಿತ್ತೂ ಬೇಸರ ನೀಡದೇ, ಅರೆಕ್ಷಣವೂ ತೂಕಡಿಸದಂತೆ ಹಿಡಿದು ಕೂರಿಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.