ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮಿ ಅಲಿ ಮತ್ತು ಮೂವರು ಮಿಸೆಸ್ ಅಲಿಯವರು'

ಪಂಡಿತಾರಾಧ್ಯ

ಈಗ ವಿದೇಶ ಪ್ರಯಾಣ ಸಾಮಾನ್ಯ. ಪ್ರಖ್ಯಾತ ಪಕ್ಷಿ ವೀಕ್ಷಕ ಸಲೀಂ ಅಲಿ ಅವರು ತಮ್ಮ ನೆನಪುಗಳನ್ನು ಬರೆಯುವಾಗ ಹಿಂದಿನ ಸ್ಥಿತಿಯನ್ನು ಹಾಸ್ಯಮಯವಾಗಿ ಬರೆದಿದ್ದಾರೆ.

ಬರ್ಮಾ, ಸಿಂಗಪುರ ಮೊದಲಾದ ವಿದೇಶಗಳಲ್ಲಿದ್ದ ತಮ್ಮ ಅಣ್ಣಂದಿರನ್ನು ಭೇಟಿಯಾಗಲು ಹೋದವರು ಭಾರತಕ್ಕೆ ಹಡಗಿನಲ್ಲಿ ಹಿಂದಿರುಗಬೇಕಿತ್ತು. ಆಗ ಹಡಗಿನ ಮೊದಲ ದರ್ಜೆಯ ಪ್ರಯಾಣಿಕರ ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಕ್ರಮವಿತ್ತು. ಸಲೀಂ ಅಲಿ ಆಗ ಇನ್ನೂ ಅವಿವಾಹಿತ ಯುವಕ. ಅವರ ಜೊತೆ ಭಾರತಕ್ಕೆ ಬರಲು ಮೂವರು ಅತ್ತಿಗೆಯರೂ ಹೊರಟಿದ್ದರು.
ಪತ್ರಿಕೆಯಲ್ಲಿ ಪ್ರಯಾಣಿಕರ ವಿವರ ಪ್ರಕಟಿಸುವಾಗ ‘ಮಿ. ಅಲಿ ಮತ್ತು ಮೂವರು ಮಿಸೆಸ್ ಅಲಿಯವರು’ ಎಂದು ಪ್ರಕಟಿಸಿದ್ದರು! ಆ ಬಗ್ಗೆ ಬರೆಯುತ್ತಾ ಅಲಿಯವರು, ಇದನ್ನು ನೋಡಿದವರು, ‘ಇಲ್ಲಿ ನೋಡಿ ಇವನೊಬ್ಬ ನಿಜವಾದ ಮುಸಲ್ಮಾನ! ತನ್ನ ಮೂವರು ಶ್ರೀಮತಿಯರೊಂದಿಗೆ ಪ್ರಯಾಣಿಸುತ್ತಿದ್ದಾನೆ’ ಎಂದುಕೊಳ್ಳುತ್ತಾರೆ! ಎಂದಿದ್ದಾರೆ.

‍ಲೇಖಕರು G

11 May, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading