ಹೆಸರಿಲ್ಲದಚಿಕ್ಕಚಿಕ್ಕ ಕಥೆಗಳು
– ಸಿ. ವಿ. ಶೇಷಾದ್ರಿಹೊಳವನಹಳ್ಳಿ
೧
ಶೆಟ್ಟಿಕೆರೆಯ ಶೆಟ್ಟಿ ಪಟ್ಟಣದಿಂದ ಹಳ್ಳಿಗೆ ಹೊರಟಿದ್ದ. ಬುರುಡೆ ಬಾಣಲೆಯಾಗುವಂಥ ಬಿಸಿಲು. ಅಲ್ಲೊಂದು ಹಳೆ ಕಾಲದ ಮಂಟಪ. ಅಲ್ಲಿ ಮಲಗಿದ. ತಲೆ ಕೆಳಗೆ ಮೂಟೆ ಅವನ ತಲೆಯ ವಾಸನೆ, ಭಾರ ಹೊತ್ತುಚಿತ್ರ ಹಿಂಸೆ ಅನುಭವಿಸುತಿತ್ತು. ಅದರಲ್ಲಿದ್ದ ಬೇಳೆ ಕಾಳುಗಳು, ಚಕ್ಕೆ, ಲವಂಗ, ದಾಲ್ಚಿನ್ನಿಗಳು ಅವನ ತಲೆಯ ಕೊಳೆಯನ್ನೇ ಗೊಬ್ಬರವೆಂದೂ ಮೂಟೆಯನ್ನೆ ಮಣ್ಣೆಂದೂ ತಳಿದು ಚಿಗುರೋಣವೇ? ಎಂದು ಪರಸ್ಪರ ಕೇಳಿಕೊಂಡವು. ಇದ್ದಕ್ಕಿದ್ದಂತೆಎಲ್ಲಿಂದಲೋಒಂದು ಹಾವು ಬಂದು ಮೂಟೆಯೊಳಗೆ ತೂರಿ ಮೊಟ್ಟೆಯಿಟ್ಟು ಹೊರಟು ಹೋಯ್ತು. ಶೆಟ್ಟಿಯ ಹೊರಳಾಟಕ್ಕೆ ಮೊಟ್ಟೆ ಒಡೆದು ರಸವೆಲ್ಲ ಸಿಡಿದು ಹನಿ ಹನಿಯಾಗಿ ಹನಿಯೆಲ್ಲ ಒಡೆದು ಕಾಣದ ಬಿಂದುಗಳಾಗಿ ಕಾಳು ಕಾಳುಗಳ ಕಾಯದೊಳಗೆ ,ಚಕ್ಕೆಯ ಪಕ್ಕೆಯೊಳಗೆ , ಲವಂಗದ ಲಂಗದೊಳಗೆ ತೂರಿದವು.
ಶೆಟ್ಟಿಅಂಗಡಿಯಲ್ಲಿ ಈಗ ಅವನ್ನೆಲ್ಲ ಮಾರುವುದಕ್ಕಿಟ್ಟ. ಅಂಗಡಿತುಂಬ ಧವಸ ಧಾನ್ಯಗಳಲ್ಲಿ ಮರಿ ಮರಿ ಹಾವುಗಳು ಹರಿದಾಡುತ್ತಿದ್ದವು. ಆದರೆ ಕಣ್ಣಿಗೆ ಕಾಣುತ್ತಿರಲಿಲ್ಲ. ಜನ ಬಂದರು. ಕೊಂಡರು. ಉಂಡರು. ಏನಾಶ್ಚರ್ಯ! ಪ್ರತಿಯೊಬ್ಬನೂ ಹಾವು. ಪ್ರತಿಯೊಬ್ಬನಿಗೂ ಹೆಡೆ , ಬಾಲ. ಪ್ರತಿಯೊಬ್ಬನೂ ಹುಡುಕುತ್ತಿದ್ದಾನೆ ಬಿಲ.
೨.
ಸುಡುವ ಟಾರು ರಸ್ತೆ ಮೇಲೆ , ರಸ್ತೆಗಳ ಪಕ್ಕದ ಬೆಟ್ಟಗಳ ಬಂಡೆಗಳ ಮೇಲೆ, ವಿದ್ಯಾಥರ್ಿ ನಿಲಯಗಳ ಕಾಂಪೌಂಡ್ಗಳ ಮೇಲೆ, ಸಕರ್ಾರಿ ಕಟ್ಟಡಗಳ ಮೇಲೆ, ಬರಲಿದೆ..ಬರಲಿದೆಆ ಮಹಾ ಪುರುಷನ ಯುಗ , ಈ ಮಹಾ ಪುರುಷನ ಯುಗಎಂದು ಬರೆಯುತ್ತ ಹೊರಟಿತು ದಂಡೊಂದು.
ಎಲ್ಲರೂ ಹಸಿದಿದ್ದರು.ನಾಯಕರುಗಡದ್ದಾಗಿಉಂಡು ಬಂದಿದ್ದರು.
ಮಳೆಗಾಲ, ಚಳಿಗಾಲ ಬಂದು ಹೋಗಿ ಬೇಸಿಗೆ ಬಂದಿದೆ.ರಸ್ತೆಗಳಲ್ಲಿ ಟಾರು, ಬೆಟ್ಟಗಳಲ್ಲಿ ಬಂಡೆಗಳು, ವಿದ್ಯಾಥರ್ಿ ನಿಲಯಗಳ ಕಾಂಪೌಂಡ್ಗಳ ಹಾಗೂ ಸಕರ್ಾರಿ ಕಟ್ಟಡಗಳ ಗೋಡೆಗಳು ಹಾಗೇ ಇವೆ. ಬರಹಕಾಣುತ್ತಿಲ್ಲ.
ಅಂದಿನ ಮೆರವಣಿಗೆಯ ನಾಯಕ ಶಿರೋಮಣಿಗಳು ತಲೆ ತಪ್ಪಿಸಿಕೊಂಡಿದ್ದಾರೆ ವಿಧಾನ ಸೌಧದೊಳಗೆ.ಅನುಯಾಯಿಗಳು ಏನಾದರು?ಒಂದೇ ಹುಡುಗಿಯನ್ನು ಪ್ರೀತಿಸಿ ಹೊಡೆದಾಡಿ ಕೆಲವರುಜೈಲು ಸೇರಿದರು.(ಹುಡುಗಿಗೆ ಈಗ ಬೇರೊಬ್ಬ ನೊಡನೆ ಮದುವೆಯಾಗಿದೆ.) ಭಂಗಿ, ಗಾಂಜಾ, ಬ್ರೌನ್ ಶುಗರ್, ಪಾನ್ಪರಾಗ್ಗಳ ಮನೆಯನ್ನು ಕೆಲವರು ಕಾವಲು ಕಾಯಲು ಹೋದರು. ಕೆಲವರು ಬೇರೆ ಬೇರೆ ಟಾಕೀಸುಗಳಲ್ಲಿ ಗೇಟ್ಕೀಪರಾದರು. ಬರಹ ಪೂತರ್ಿ ಅಳಿಸಿಹೋಗಿದೆ.
]]>
ಮಿ೦ಚು ಕಥೆಗಳು
ನಿಮಗೆ ಇವೂ ಇಷ್ಟವಾಗಬಹುದು…




0 Comments