ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಸ್ ಮಾಡಬೇಡಿ "ಗುಡ್ ಅರ್ಥ್" ಅಂತಾರೆ ಶಾಂತ ಕುಮಾರಿ

ಶಾಂತ ಕುಮಾರಿ

“ಗುಡ್ ಅರ್ಥ್”-ಪರ್ಲ್ ಬಕ್ ರವರ ಈ ಕಾದಂಬರಿ ಅದ್ಭುತವಾಗಿದೆ. ಹಿಂದೆ ಓದಿದ್ದೆ . ಈಗ ಮತ್ತೊಮ್ಮೆ ಓದಬೇಕೆನಿಸಿತು. ನೀವುಗಳೂ ಓದಿರಬಹುದು..ಓದಿಲ್ಲದವರು ದಯವಿಟ್ಟು ಓದಿ. ಚೀನಾ ದೇಶದ ಬಡತನ ನಿಜಕ್ಕೂ ನಮ್ಮಲ್ಲಿ ಎಂಥಾ ತಲ್ಲಣ ಉಂಟು ಮಾಡುತ್ತದೆ ಎಂದರೆ ಭಾರತದ ಬಡತನ ಅದರ ಮುಂದೆ ಏನೂ ಅಲ್ಲವೇನೋ ಅನಿಸಿಬಿಡುತ್ತದೆ. ಅಲ್ಲಿನ ಗುಲಾಮಿ ಪದ್ಧತಿ ಹೆಣ್ಣುಮಕ್ಕಳ ಸ್ಥಿತಿ ಇನ್ನೂ ಎಷ್ಟೋ ವಿಷಯಗಳು ನಮ್ಮ ಮೇಲೆ ಗಾಢ ಪರಿಣಾಮ ಬೀರುತ್ತವೆ.

ಇದು ನೋಬೆಲ್ ಬಹುಮಾನ ಪಡೆದ ಕೃತಿ. ಲೇಖಕಿ ಈ ಪುಸ್ತಕ ಬರೆಯಲು ಹೊರಟಾಗಿನ ಈ ಅನಿಸಿಕೆ ನೋಡಿ”ನಾನು ಆರಾಮಾವಾಗಿ ಬರೆಯಲು ಕುಳಿತುಕೊಂಡಾಗ ನನಗೆ ಮೊದಲ ಬಾರಿಗೆ ಅನ್ನಿಸಿತು-ಅನೇಕ ಜನರೊಂದಿಗೆ ಆಳವಾದ ಸಂಬಂಧವಿಟ್ಟುಕೊಂಡು ಬದುಕುವುದೇ ಆತ್ಮಕ್ಕೆ ಶ್ರೀಮಂತಿಕೆಯ ಭಾವವನ್ನು ಕೊಡಬಲ್ಲದು-ಎಂದು” ಎಷ್ಟು ಸತ್ಯವಾದ ಮಾತು.
ಈ ಕತೆ ಮುಖ್ಯವಾಗಿ ವಾಂಗ್ ಲುಂಗ್ ಎಂಬ ಒಬ್ಬ ರೈತ ಮಣ್ಣಿನಾಳಕ್ಕೆ ತನ್ನ ಪ್ರೀತಿಯ ಬೇರುಗಳನ್ನಿಳಿಸಿದ ಕತೆ. ನಾಲ್ಕು ತಲೆಮಾರಿನ ಬದುಕಿನ ಚಿತ್ರಣ ಇಲ್ಲಿದೆ. ನಮ್ಮನ್ನು ಗಾಢವಾಗಿ ತಟ್ಟುವುದು ಅಲ್ಲಿನ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಲಿಂಗತಾರತಮ್ಯ. ಸಂತತಿ ಮುಂದುವರಿಯುವುದು ಗಂಡುಮಕ್ಕಳ ಮೂಲಕ ಮಾತ್ರವೆನ್ನುವ ಕಾರಣಕ್ಕೆ ಹೆಣ್ಣುಮಕ್ಕಳು ಹುಟ್ಟುವುದೇ ಬೇಡವೆಂದು ಬಯಸುವುದು ಬಡವರಿಗೆ ಹೆಣ್ಣುಮಗು ಹುಟ್ಟಿದರೆ ಅದನ್ನು ದಾಸಿ ಎಂದೇ ಗುರುತಿಸುವುದು ಹೆಣ್ಣುಮಗುವಿನಲ್ಲಿ ವಿಪರೀತವಾದ ಸೌಂದರ್ಯ ಪ್ರಜ್ಞೆಯನ್ನು ಬೆಳೆಸುತ್ತಾ ಎಳೆಯ ಮಗುವಾಗಿದ್ದಾಗಿನಿಂದಲೇ ಅವಳ ಪಾದವನ್ನು ಬಟ್ಟಿಯಿಂದ ಬಿಗಿಯಾಗಿ ಜೋಡಿಸಿ ಕಟ್ಟಿ ಅವು ಪುಟ್ಟದಾಗಿಯೇ ಉಳಿಯುವಂತೆ ಮಾಡಲು ಹೆಣಗಾಡುವುದು -ಒಟ್ಟಿನಲ್ಲಿ ಹೆಣ್ಣಿನ ಅಸ್ತಿತ್ವವನ್ನೇ ಶೂನ್ಯಗೊಳಿಸುವಂತಹ ನೂರಾರು ಉದಾಹರಣೆಗಳು ಕಾದಂಬರಿಯುದ್ದಕ್ಕೂ ಹರಡಿವೆ. ವಾಂಗ್ ಲುಂಗನ ಮೊದಲನೇ ಹೆಂಡತಿ ಓಲನ್ ಳದ್ದಂತೂ ಅತ್ಯಂತ ವಿಶಿಷ್ಟ ವ್ಯಕ್ತಿತ್ಚ. ಸದಾ ನಮ್ಮ ಹೃದಯದಲ್ಲಿ ಉಳಿಯುತ್ತಾಳೆ. ಓಹ್ ಇನ್ನೂ ಎಷ್ಟು ಹೇಳಿದರೂ ಈ ಕಾದಂಬರಿ ಬಗ್ಗೆ ಮುಗಿಯದಷ್ಟಿದೆ. ಚೀನಾದ ಜನಜೀವನದ ನೈಜ ಚಿತ್ರಣದೊಂದಿಗೆ ಮನುಕುಲದ ವ್ಯಥೆ ಹುಡುಕಾಟ ಎಲ್ಲವೂ ಇದೆ. ಓದದೇ ಇರುವವರು ಪ್ಲೀಸ್ ಓದಿ..
 

‍ಲೇಖಕರು G

30 July, 2014

4 Comments

  1. Kiran

    Dr K Shivarama Karantha’s “MARALI MANNIGE” was inspired by this novel. He talks of this book in his autobiography. He says, he deliberately did not read the second part onwards, but comparison was inevitable. He sent the English translation of MARALI MANNIGE to Mrs Buck, who found it engrossing. Definite read for every lover of literature and humanity.

  2. lalithasiddabasavaiah

    ಹೌದು,ಮರಳಿ ಮಣ್ಣಿಗೆ ಮತ್ತು ಗುಡ್ ಅರ್ಥ್ ಒಂದನ್ನೊಂದು ಬಹಳ ಹೋಲುತ್ತವೆ, ಹಾಗೆಯೆ ಮಲೆಗಳಲ್ಲಿ ಮದುಮಗಳು ಮತ್ತು ಒನ್ ಹಂಡ್ರಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕೂಡಾ. ಕುವೆಂಪು ಮತ್ತು ಕಾರಂತರು ದೊಡ್ದ ಪ್ರತಿಭೆ ಮಾತ್ರವಲ್ಲ ದೊಡ್ಡ ಬಾಳು ಬಾಳಿದವರೂ ಕೂಡಾ. ಬಹುಶಹ ಹೀಗೆ ದೊಡ್ದಬದುಕು ಮತ್ತು ದೊಡ್ಡ ಪ್ರತಿಭೆ ಎಲ್ಲಿ ಸೇರುತ್ತವೋ ಅಲ್ಲಿ – ಕಾಲದೇಶಗಳ ಮಿತಿಯನ್ನು ಒಂಸ್ವಲ್ಪವೂ ಗಣಿಸದೆ – ಇಹದ ಬಗ್ಗೆ ಚಿಂತಿಸುವ ಚಿತ್ತಕ್ರಮವೂ ಒಂದೇ ಆಗಿರುತ್ತದೆಂದು ತೋರುತ್ತದೆ. ಎಷ್ಟೋ ಸಲ ಯಾವುದೋ ಭಾಷೆಯ ಪದ್ಯವೊಂದರ ಸಾಲು ನಮ್ಮ ಕನ್ನಡದ ಚಿಂತನಾಕ್ರಮಕ್ಕೆ ಎಷ್ಟು ಹತ್ತಿರದಲ್ಲಿರುತ್ತದೆಂದರೆ ಆ ಪದ್ಯಕಾರ ಇಲ್ಲಿ ಎಂದೋ ಓಡಾಡಿರಲೆ ಬೇಕು ಅನ್ನಿಸುತ್ತದೆ. ನಮ್ಮ ಎಲ್ಲ ಆವರಣಗಳನ್ನೂ ಮೀರಿ ನಮ್ಮೊಳಗಿನ ಮನುಷ್ಯ ಜಾತಿ ಒಂದೇ ಅಲ್ಲವೇ, ಅದೇ ಅರಿಷಡ್ವರ್ಗಗಳನ್ನು ಒಂದು ತೋಳಿಂದ ಅಪ್ಪುತ್ತಲೆ ಇನ್ನೊಂದರಿಂದ ತಳ್ಳುತ್ತಲೂ ಇರುವ ಮಂಗಜಾತಿ!

  3. mahesh

    kannada anuvada siguthiddare thilisi plz

  4. Dr Geetha Shenoy

    ಈ ಕಾದಂಬರಿಯನ್ನು ಪಾರ್ವತಿ ಜಿ. ಐತಾಳರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಕಾಶಕರು ಅಂಕಿತ ಪುಸ್ತಕ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading