ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿರ್ಜಾ ಬಷೀರ್, ಮಂಜುಳಾ ಹಿರೇಮಠ, ಸ್ಮಿತಾ ಅಮೃತರಾಜ್ ಗೆ ‘ಸ್ವಾಭಿಮಾನಿ ಪುಸ್ತಕ ಬಹುಮಾನ’

ಕನ್ನಡ ಚಳವಳಿ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ‘ಸ್ವಾಭಿಮಾನಿ ಕರ್ನಾಟಕ ವೇದಿಕೆ’ ತನ್ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ‘ಸ್ವಾಭಿಮಾನಿ ಪುಸ್ತಕ ಬಹುಮಾನ’ ಪುರಸ್ಕಾರವನ್ನು ಘೋಷಿಸಿದೆ.

ಡಾ. ಮಿರ್ಜಾ ಬಷಿರ್‌ ಅವರ ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾಸಂಕಲನ, ಮಂಜುಳಾ ಹಿರೇಮಠ ಅವರ ‘ಗಾಯಗೊಂಡವರಿಗೆ’ ಕವನ ಸಂಕಲನ, ಸ್ಮಿತಾ ಅಮೃತರಾಜ್‌ ಅವರ ‘ಒಂದು ವಿಳಾಸದ ಹಿಂದೆ’ ಪ್ರಬಂಧ ಸಂಕಲನ, ಜಾಣಗೆರೆ ವೆಂಕಟರಾಮಯ್ಯ ಅವರ ‘ಜಲಯುದ್ಧ’ ಕಾದಂಬರಿ ಹಾಗೂ ಸಂಕೀರ್ಣ ವಿಬಾಗದಲ್ಲಿ ಕಾ.ತ. ಚಿಕ್ಕಣ್ಣ ಅವರ ‘ಕಣ್ಣಂಚಿನ ನೆಳಲು’ ಕೃತಿಗಳು ಆಯ್ಕೆಯಾಗಿವೆ.

ಸ್ಪರ್ಧೆಗೆ 2020ರಲ್ಲಿ ಪ್ರಕಟವಾದ 150ಕ್ಕೂ ಹೆಚ್ಚು ಕೃತಿಗಳು ಬಂದಿದ್ದು, ಅವುಗಳಲ್ಲಿ ಅತ್ಯುತ್ತಮವಾದ ಐದು ಕನ್ನಡ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 5 ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಹಿರಿಯ ವಿಮರ್ಶಕ ಎಸ್.ಆರ್.‌ ವಿಜಯಶಂಕರ, ಹಿರಿಯ ಲೇಖಕ ದ್ವಾರನಕುಂಟೆ ಪಾತಣ್ಣ ಹಾಗೂ ಪತ್ರಕರ್ತ ರಘುನಾಥ ಚ.ಹ. ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ಕೊರೊನಾ ಬಿಕ್ಕಟ್ಟು ತಿಳಿಯಾದ ನಂತರ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ.

‍ಲೇಖಕರು Avadhi

25 May, 2021

3 Comments

  1. YALLAPPA YAKOLLI

    ellarigu abhinandanegalu
    yakolli y m saudatti

  2. Vasundhara k m

    ಪುರಸ್ಕೃತರಿಗೆ ಅಭಿನಂದನೆಗಳು

  3. Ravikumar S B

    ಪುರಸ್ಕಾರಕ್ಕೆ ಭಾಜನರಾದ ಎಲ್ಲರಿಗೂ ಅಭಿನಂದನೆಗಳು. ಶುಭವಾಗಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading