ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿರ್ಜಾ ಬಷೀರ್‌ ಗೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ

ಅವಧಿಯ ಅಂಕಣಕಾರ, ಪಶುವೈದ್ಯ ಮಿರ್ಜಾ ಬಷೀರ್‌ ಅವರಿಗೆ ೨೦೨೦ ನೇ ಸಾಲಿನ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಘೋಷಿಸಲಾಗಿದೆ. ಡಾ. ಮಿರ್ಜಾ ಬಷೀರ್‌ ಅವರ ‘ಹಾರುವ ಹಕ್ಕಿ ಮತ್ತು ಇರುವೆ’ ಕೃತಿ ಆಯ್ಕೆಮಾಡಲಾಗಿದೆ. ಇದನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ.

ವಿಮರ್ಶಕ ಎಸ್‌.ಆರ್.‌ ವಿಜಯಶಂಕರ, ವಿಮರ್ಶಕಿ ಡಾ. ಎಂ.ಎಸ್.‌ ಆಶಾದೇವಿ ಮತ್ತು ಸಾಹಿತಿ ಡಾ. ಕೆ.ವೈ. ನಾರಾಯಣಸ್ವಾಮಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಡಾ. ಮಿರ್ಜಾ ಬಷೀರ್‌ ಅವರ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಶಸ್ತಿಯು ೨೫,೦೦೦ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.

‍ಲೇಖಕರು Admin

8 July, 2021

3 Comments

  1. ಲಲಿತಾ ಸಿದ್ಧಬಸವಯ್ಯ

    ಹೃತ್ಪೂರ್ವಕ ಅಭಿನಂದನೆಗಳು ಸರ್. ತಮ್ಮ ಪಶುವೈದ್ಯಕೀಯದ ಅನುಭವ ಮಾಲೆಯೂ ಬೇಗ ಪ್ರಕಟವಾಗಲಿ.

    • ಡಾ.ಮಿರ್ಜಾ ಬಷೀರ್.ತುಮಕೂರು

      ಸಂತಸ ವ್ಯಕ್ತಪಡಿಸಿದ ಇಬ್ಬರಿಗೂ ಧನ್ಯವಾದಗಳು

  2. Mahantesh navalkal

    ಬಶೀರ್ ಸರ್ ಧನ್ಯವಾದ ನನಗೂ ೨೦೦೮/ ರಲಿ ಈ ಪ್ರಶಸ್ತಿ ದಕ್ಕಿತ್ತು ಈಗ ನಿಮ್ಮಂತಹ ನಿಷ್ಪ್ರಹ ಜೀವಿಯ ಕಥಾ ಸಂಕಲನಕ್ಕೆ ದಕ್ಕಿದ್ದು ಸಂತಸ ತಂದಿದೆ ಬೆಸಗರಹಳ್ಳಿ ಪ್ರಶಸ್ತಿ ಕರ್ನಾಟಕದ ಪ್ರತಿಷ್ಠಿತ. ಅವಾರ್ಡ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading