ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಾಸದ ಮಾತುಕತೆ’ಯಲ್ಲಿ…

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆಶ್ರಯದಲ್ಲಿ ಎನ್. ಆರ್.ಕಾಲೋನಿಯಲ್ಲಿರುವ ಐ.ಬಿ.ಹೆಚ್.ಪ್ರಕಾಶನದ ಸಭಾಂಗಣದಲ್ಲಿ ನಡೆದ ‘ಕೃತಿರಚನೆ, ಹಸ್ತಪ್ರತಿ ಆಯ್ಕೆ ಹಾಗೂ ಪ್ರಕಟಣಾ ಜಗತ್ತಿನ ಸುತ್ತಮುತ್ತ’ ವಿಷಯದ ಬಗ್ಗೆ ನಡೆದ ‘ಮಾಸದ ಮಾತುಕತೆ’ ಯನ್ನು ಕ.ಸಾ.ಪ.ದ ನಿಕಟಪೂರ್ವ ಗೌರವ ಕಾರ್ಯದರ್ಶಿಯವರಾದ ಶ್ರೀ ಕೆ. ರಾಜಕುಮಾರ್ ರವರು ವಿಷಯ ತಜ್ಞರಾಗಿ ಆಗಮಿಸಿ ಸೇರಿದ್ದ ಬರಹಗಾರರು, ಪ್ರಕಾಶಕರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು ಸಂವಾದವು ನಡೆಯಿತು.

ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರು ಅಧ್ಯಕ್ಷತೆ ವಹಿಸಿದ್ದರು, ಶ್ರೀ ಸಂಜಯ್ ಅಡಿಗರು ಮುಖ್ಯ ಅತಿಥಿಗಳಾಗಿದ್ದರು, ಸಪ್ನದ ಶ್ರೀ ಆರ್. ದೊಡ್ಡೇಗೌಡ ಅವರು ಸ್ವಾಗತಿಸಿದರು, ಸ್ನೇಹ ಬುಕ್ ಹೌಸ್ ನ ಶ್ರೀ ಕೆ.ಬಿ.ಪರಶಿವಪ್ಪನವರು ನಿರೂಪಣೆ ಮಾಡಿದರು.

ಲೇಖಕರಾದ ಶ್ರೀ ಸಂತೋಷ ಮೆಹಂದಳೆ, ಡಾ.ಶರಣು ಹೂಲ್ಲೂರ್, ಶ್ರೀ ಸು.ರುದ್ರಮೂರ್ತಿ ಶಾಸ್ತ್ರಿ, ಎಸ್.ಜಿ.ಮಾಲತಿಶೆಟ್ಟಿ, ಪ್ರಕಾಶಕರಾದ ಅವಧಿಯ ಶ್ರೀ ಜಿ.ಎನ್.ಮೋಹನ್, ಸಾವಣ್ಣ ಪ್ರಕಾಶನದ ಶ್ರೀ ಜಮೀಲ್ ಸಾವಣ್ಣ, ಮೈತ್ರಿ ಪ್ರಕಾಶನದ ಶ್ರೀಮತಿ ಅಂಜಲಿ ದೇಸಾಯಿ, ಸುರೇಶ್, ಗಿರಿರಾಜು, ವಸಂತದ ಶ್ರೀ ಕೆ.ಎಸ್.ಮುರಳಿ, ನಿರಂತರ ಜಗಾಟ, ಚಂದ್ರಕೀರ್ತಿ, ಅಂಕಿತ ಶ್ರೀ ಪ್ರಕಾಶ್ ಕಂಬತ್ತಳ್ಳಿ ಮುಂತಾದವರು ಭಾಗವಹಿಸಿದ್ದರು.

‍ಲೇಖಕರು Admin

1 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading