ನಾಗೇಶ್ ಕೆ.ಎನ್ ಸಂಪಾದಕತ್ವದ ‘ಕೃಷಿ ಸಮಯ’ ರೈತೋತ್ಸವದ ವಿಶೇಷ ಸಂಚಿಕೆಯು ಮಾರುಕಟ್ಟೆಯಲ್ಲಿದೆ.
ನಾಗೇಶ್ ಕೆ.ಎನ್ ರವರು ತಮ್ಮ ಸಂಪಾದಕೀಯದಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಯಶೋಗಾಥೆಯನ್ನು ನೆನೆದಿದ್ದಾರೆ. ಡಾ. ಸಾಗರಿ.ಆರ್. ರಾಮದಾಸ್ ರವರ ಲೇಖನವನ್ನು ‘ಮೇವಿಲ್ಲದೆ-ಪಶುಗಳಿಲ್ಲ, ಪಶುಗಳಿಲ್ಲದೆ-ಗೊಬ್ಬರವಿಲ್ಲ, ಗೊಬ್ಬರವಿಲ್ಲದೆ-ಬೆಳೆ ಇಲ್ಲ, ಬೆಳೆ ಇಲ್ಲದೆ-ಮೇವಿಲ್ಲ’ ಎಂಬ ಲೇಖನವನ್ನು ಅಚ್ಚುಕಟ್ಟಾಗಿ ಸಂಪಾದಕರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಕವಿತಾ ಕುರುಗಂಟಿ, ಕೃಷ್ಣಪ್ರಸಾದ್ ರವರ ಲೇಖನವನ್ನೂ ಸಹ ‘ರೈತರ ಮನೆಗಳಲ್ಲಿ ವೈವಿಧ್ಯಮಯ ದೇಸಿ ಬೀಜಗಳು ಮತ್ತೆ ಸೇರಬೇಕು’ ಕನ್ನಡಕ್ಕೆ ತುರ್ಜುಮೆಗೊಳಿಸಿದ್ದಾರೆ ಸಂಪಾದಕರು. ಕೆ.ಎಸ್. ನಂದಿನಿ ಜಯರಾಂ ರವರ ‘ಜಾಗತಿಕ ತಾಪಮಾನ ಮತ್ತು ಕೃಷಿ’ ವಿಷಯದಡಿ, ‘ಒಲೆ ಹತ್ತಿ ಉರಿದೊಡೆ ನಿಲ್ಲಬಹುದು, ಧರೆ ಹತ್ತಿ ಉರಿದೊಡೆ ನಿಲ್ಲಬಹುದೆ’ ಲೇಖನವು ಜಾಗತಿಕ ತಾಪಮಾನದಿಂದ ಕೃಷಿಗೆ ಎರಗಿದ ಪರಿಣಾಮವನ್ನು ತಿಳಿಸಿದ್ದಾರೆ. ಈ ಬಾರಿಯ ‘ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಂತರಾಷ್ಟ್ರೀಯ ಪ್ರಶಸ್ತಿ’ ಭಾಜನ ಕುಟುಂಬಗಳ ಪರಿಚಯವೂ ಈ ವಿಶೇಷ ಸಂಚಿಕೆಯಲ್ಲಿದೆ.







0 Comments