ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಯಲೋಕದ ಮಾಯಾವಿ…

ರಘು ಕುಮಾರ್ ಸಿ

ನಾನು ನನ್ನ ಸ್ನೇಹಿತ ದೀಪಕ್ ಜೊತೆ ಒಂದು ಭಾನುವಾರ ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಕೆಲವೊಂದು ಛಾಯಾಚಿತ್ರ ಪ್ರದರ್ಶನವನ್ನು ನೋಡಲು ಹೋಗಿದ್ದೆವು. ನಂತರ ಎಲ್ಲಾ ಛಾಯಾಚಿತ್ರಗಳನ್ನು ವೀಕ್ಷಿಸಿದ ಮೇಲೆ ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ ಗೆ ತೆರಳಿ, ನಾನು ನನ್ನ ಸ್ನೇಹಿತ ಇಬ್ಬರು ಬೈಟು ಕಾಫಿ ಕುಡಿಯುತ್ತಾ ಕುಳಿತಿದ್ದೆವು. ನನ್ನ ಬಳಿ ಇದ್ದ ಮೊಬೈಲ್ ಮತ್ತು ಕ್ಯಾಮೆರಾವನ್ನು ಮೇಜಿನ ಮೇಲೆ ಇಟ್ಟು ಕಾಫಿಯನ್ನು ಕುಡಿಯುತ್ತಾ ಪ್ರವಾಸದ ನಡುವೆ ಎದುರಾಗುವ ಕಷ್ಟ, ಸುಖಗಳನ್ನು ಮಾತನಾಡುತ್ತಾ ಕುಳಿತಿದ್ದೆವು.

ನಂತರ ನನ್ನ ಸ್ನೇಹಿತನ ಮೊಬೈಲಿಗೆ ಒಂದು ಕರೆ ಬರುವುದು ಆಗ ಅವನು ಎರಡು ನಿಮಿಷ ಮಾತನಾಡಿ ಬರುವೆನೆಂದು ಹೊರ ನಡೆಯುತ್ತಾರೆ. ನಂತರ ಹತ್ತು ನಿಮಿಷಗಳ ಬಳಿಕ ಮರಳಿ ಬಂದು ಸರ್ ಬನ್ನಿ ಇಲ್ಲಿ ನಿಮ್ಮ ಜೊತೆ ಯಾರೋ ಮಾತನಾಡಬೇಕೆಂದು ನನ್ನನ್ನು ಕರೆಯುತ್ತಾರೆ, ನಾನು ತಕ್ಷಣಕ್ಕೆ ಎದ್ದು ಹೋಗಿ ಯಾರೆಂದು ಕುತೂಹಲದಿಂದ ಮಾತನಾಡತೊಡಗುತ್ತೇನೆ ಸ್ವಲ್ಪ ಸಮಯದ ನಂತರ ಮತ್ತೆ ನಾವು ಕುಳಿತಿದ್ದ ಟೇಬಲ್ ಬಳಿ ತೆರಳುತ್ತೇವೆ. ಆಗ ನನಗೆ ಒಂದು ಆಘಾತ! ಕಾದಿರುತ್ತದೆ ಅದೇನೆಂದರೆ ನಾನು ಮೇಜಿನ ಮೇಲೆ ಇಟ್ಟಿದ್ದ ಕ್ಯಾಮರಾ ಮತ್ತು ಮೊಬೈಲ್ ಎರಡು ಕೂಡ ಕಾಣೆಯಾಗಿರುತ್ತದೆ ತಕ್ಷಣಕ್ಕೆ, ಗಾಬರಿಗೊಂಡ ನಾನು ನನ್ನ ಕಣ್ಣುಗಳನ್ನು ಎಡಬಲ ತಿರುಗಿಸಿ, ಮೇಲೆ ಕೆಳಗೆ ನೋಡುತ್ತಾ, ಕ್ಯಾಮರಾ ಯಾರ ಬಳಿ ಇದೆಯೋ ಎಂದು ಯೋಚಿಸುತ್ತಾ! ನಿಂತೇ ಬಿಡುತ್ತೇನೆ.

ಕೊನೆಗೂ ಕ್ಯಾಮೆರಾದ ಸುಳಿವು ಕಣ್ಣಿಗೆ ಬೀಳುವುದೇ ಇಲ್ಲ ಜೊತೆಯಲ್ಲೇ ಇದ್ದ ಸ್ನೇಹಿತ ದೀಪಕ್ ಸಾಕಷ್ಟು ಸಮಾಧಾನಕರ ಮಾತುಗಳನ್ನು ಹೇಳುತ್ತಾ, ಇಲ್ಲೇ ಎಲ್ಲೋ ಯಾರ ಬಳಿಯೋ ಇರಬಹುದು ಸರ್ ನೋಡೋಣ. ಎಂದು ಹೋಟೆಲ್ ನ ಮಾಲೀಕರ ಬಳಿ ಹೋಗಿ ವಿಚಾರಿಸುತ್ತಿರುತ್ತಾರೆ, ನಾನು ದಿಕ್ಕು ತೋಚದವನಂತೆ ಅಲ್ಲೇ ಕುಳಿತು ಪರಿತಪಿಸುತ್ತಿರುತ್ತೇನೆ. ನಂತರ ಎಲ್ಲೂ ಕ್ಯಾಮೆರಾದ ಸುಳಿವು ಸಿಗುವುದೇ ಇಲ್ಲ ನನಗಿದ್ದ ಒಬ್ಬ ಆತ್ಮೀಯ ಗೆಳೆಯನೆಂದರೆ ಈ ಕ್ಯಾಮೆರಾ ಏಕೆಂದರೆ, ಈ ಕ್ಯಾಮೆರಾದಿಂದ ಸಾಕಷ್ಟು ಮನಸ್ಸಿಗೆ ಖುಷಿ ನೀಡುವ ಫೋಟೋಗಳನ್ನು ತೆಗೆಯುವುದರ ಜೊತೆಗೆ ಹಲವಾರು ಪ್ರಿಯ ಗೆಳೆಯರ ಪರಿಚಯವಾಗಿಸಿದ ಕ್ಯಾಮೆರಾ ಇದಾಗಿದೆ.

ಬಹುಮುಖ್ಯವಾಗಿ ನಾನು ಈ ಸಂದರ್ಭದಲ್ಲಿ ನನ್ನ ತಾಯಿಯನ್ನು ನೆನೆಯಲೇಬೇಕು ಏಕೆಂದರೆ ಅವರೇ ಕೊಡಿಸಿದ ಮೊದಲ ಕ್ಯಾಮರಾ ಅದಾಗಿರುತ್ತದೆ. ಅಮ್ಮ ಪದೇಪದೇ ಹೇಳುತ್ತಿದ್ದರು ನಾನು ಹಲವರ ಫೋಟೋಗಳನ್ನು ನೋಡುತ್ತಿದ್ದಾಗ ನೀನು ಒಂದಲ್ಲ ಒಂದು ದಿನ ಈ ರೀತಿಯ ಫೋಟೋಗಳನ್ನು ತೆಗೆಯಬಲ್ಲೆ ಆದರೆ ಕಾಲ ಕೂಡಿ ಬರಬೇಕು ನಾವು ಆ ಸಮಯಕ್ಕೆ ಕಾಯಬೇಕೆಂದು ಹೇಳುತ್ತಲೇ ಇದ್ದರು. ನಂತರ ಗೆಳೆಯ ಸಮಾಧಾನ ಮಾಡಿ ಹೋಟೆಲಿನ ಹೊರಗಡೆ ಕರೆದುಕೊಂಡು ಹೋಗಿ ನಾನು ಮತ್ತೊಮ್ಮೆ ಹೋಟೆಲ್ ಮಾಲಿಕರ ಬಳಿ ವಿಚಾರ ಮಾಡುವೆ ಎಂದು ತಿಳಿಸುತ್ತಾ, ಸರ್ ನಿಮಗೆ ತಡವಾಯಿತು ನಿಮ್ಮ ಊರಿಗೆ ಹೋಗಲು ಎಂದು ನೆನಪಿಸುತ್ತಾ, ರೈಲು ನಿಲ್ದಾಣದಕ್ಕೆ ಕರೆತಂದು ನನ್ನನ್ನು ಬಿಡುವರು.

ನಾನು ಅಲ್ಲೆ ಯೋಚಿಸುತ್ತಾ ಕುಳಿತುಬಿಡುತ್ತೇನೆ. ರೈಲು ಹೊರಡಬೇಕೆನ್ನುವಷ್ಟರಲ್ಲಿ ತಕ್ಷಣ ಮೊಬೈಲ್ ನಿಂದ ಅಲರಾಂ ಹೊಡೆದುಕೊಳ್ಳಲು ಆರಂಭಿಸುತ್ತದೆ. ತಕ್ಷಣ ನಿದ್ದೆಯಿಂದ ಎದ್ದು ನೋಡಿದರೆ ಸಮಯ ಬೆಳಿಗ್ಗೆ 5 ಗಂಟೆ ಹೋ! ಇಷ್ಟು ಹೊತ್ತು ಎಲ್ಲ ನಡೆದಿದ್ದು ಒಂದು ಸುಂದರ ಸ್ವಪ್ನ ಎಂದು ತಿಳಿಯುತ್ತಲೇ ತಕ್ಷಣಕ್ಕೆ ಓಡಿ ಹೋಗಿ ನಾನು ಇಟ್ಟಿದ್ದ ಕ್ಯಾಮರಗಳನ್ನು ನೋಡಿದೆ ಅಲ್ಲಿ ನನ್ನ ಪ್ರೀತಿಯ ಕ್ಯಾಮೆರಾ ಕಣ್ಣಿಗೆ ಬಿತ್ತು, ಅದನ್ನು ಮುಟ್ಟಿದ ತಕ್ಷಣ ಮೈ ರೋಮಾಂಚನಗೊಂಡು ಒಂದು ಕ್ಷಣ ಭಾವುಕನಾಗಿ ಅಲ್ಲೇ ನಿಂತು ಬಿಡುತ್ತೇನೆ. ಇದೆಲ್ಲಾ ನಿಮಗೇಕೆ ಹೇಳುತ್ತಿದ್ದೇನೆಂದರೆ ಇದುವರೆಗೂ ನಾನು ತೆಗೆಯುತ್ತಿರುವ ಪಕ್ಷಿಗಳ ಚಿತ್ರಗಳನ್ನು ತೆಗೆಯಲು ಮಹಾ ಸ್ಪೂರ್ತಿ ನೀಡಿದ ನನ್ನ ಗುರು ಮಾಯಲೋಕದ ಮಾಯಾವಿ ನಮ್ಮ, ನಿಮ್ಮೆಲ್ಲರ ಪೂರ್ಣಚಂದ್ರ ತೇಜಸ್ವಿರವರು.

ಇಂದು ಅವರ 84ನೇ ಹುಟ್ಟು ಹಬ್ಬ …

‍ಲೇಖಕರು Admin

8 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading