ನಾವೆಲ್ಲಾ ತುರ್ತಾಗಿ ಮಾನವರಾಗಬೇಕಿದೆ..!
-ಡಾ.ಎಸ್.ಬಿ.ಜೋಗುರ
ಮನುಷ್ಯನ ನಾಗರಿಕತೆ ಎನ್ನುವದು ಕೇವಲ ಆತ ಬಳಸುವ ಕಾರು, ಕಟ್ಟಡ, ವೇಷಭೂಷಣ, ಮನೆಗಳ ರಚನೆ, ಬ್ಯಾಂಕ ಬ್ಯಾಲೆನ್ಸ್ ಗಳ ಮೂಲಕ ಮಾತ್ರ ಇತ್ಯರ್ಥವಾಗದೇ ಆ ಪರಿಕರಗಳನ್ನು ಬಳಸುವಾತನಲ್ಲಿಯ ಮಾನವೀಯ ಮತ್ತು ಸಾಂಸ್ಕೃತಿಕ ಗುಣಗಳನ್ನು ಆಧರಿಸಿ ಅದು ನಿರ್ಧರಿತವಾಗಬೇಕು. ಮನುಷ್ಯನಲ್ಲೊಂದು ಮೃಗಾಲಯವಿರುವಂತೆ ವರ್ತಿಸುವವರನ್ನು ನಾಗರಿಕರೆಂದು ಕರೆಯುವಲ್ಲಿ ಬಾರಿ ಬಾರಿ ಯೋಚಿಸಬೇಕಾಗುತ್ತದೆ. ಮನುಷ್ಯನೊಬ್ಬ ಪಶು ಸದೃಶನಾಗಿ ವ್ಯವಹರಿಸಿದಾಗ ಅವನ ಎಲ್ಲ ಭೌತಿಕ ಸಾಧನಗಳು ತೃಣಕ್ಕೆ ಸಮಾನ ಎನ್ನುವ ಭಾವನೆ ಬರುವದು ಸಹಜ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಜಾತಿಪದ್ಧತಿಯ ಮನ:ಸ್ಥಿತಿಯಲ್ಲಿ ಬದಲಾವಣೆಗಳಾಗಿವೆಯಾದರೂ ಆ ಬದಲಾವಣೆ ಕಾನೂನಿನ ಒತ್ತಡದಿಂದ ಬಲವಂತವಾಗಿ ಒಡಮೂಡಿ ಬಂದದ್ದಾಗಿದೆಯೇ ಹೊರತು ಮನಸಾರೆ ಅಲ್ಲ. ಹಿಂದೆ ಕೆಲ ಜಾತಿಗಳನ್ನು ಅತ್ಯಂತ ನಿಕೃಷ್ಟವಾಗಿ ನಡೆಯಿಸಿಕೊಳ್ಳುತ್ತಿದ್ದ ಸಾಕಷ್ಟು ದೃಷ್ಟಾಂತಗಳು ನಮಗೆ ಚರಿತ್ರೆಯಲ್ಲಿ ಸಿಗುತ್ತವೆ. ಕೇರಳದಲ್ಲಿ ತಿಯನ್ ಎನ್ನುವ ಕೆಳಜಾತಿ ಮೇಲಿನ ಜಾತಿಯುವರೊಂದಿಗೆ ನಿಂತು ಮಾತನಾಡುವಾಗ 36 ಹೆಜ್ಜೆಗಳ ಅಂತರವನ್ನು ಕಾಪಾಡಿಕೊಳ್ಳಬೇಕಿತ್ತು. ಪುಲಿಯನ್ ಎನ್ನುವ ಕೆಳಜಾತಿ ಮೇಲಿನವರೊಡನೆಯ ಸಾಮಾಜಿಕ ಸಂಪರ್ಕದಲ್ಲಿ 96 ಹೆಜ್ಜೆಗಳ ಅಂತರವನ್ನು ಕಾಯಬೇಕಿತ್ತು. ತಮಿಳುನಾಡಿನ ಶಾನಾರ ಎನ್ನುವ ಕೆಳಜಾತಿ 24 ಹೆಜ್ಜೆಗಳ ಅಂತರವನ್ನು ಕಾಯಬೇಕಿತ್ತು. ಕೇರಳದ ನಂಬೂದ್ರಿ ಮೇಲ್ಜಾತಿಯ ವೈದ್ಯ ಕೆಳಜಾತಿಯ ರೋಗಿಗಳ ನಾಡಿಯನ್ನು ಪರೀಕ್ಷಿಸುವಾಗ ಕೈಗೆ ರೇಷ್ಮೆ ಬಟ್ಟೆಯನ್ನು ಸುತ್ತಿಕೊಂಡು ನಾಡಿಯನ್ನು ಪರೀಕ್ಷಿಸುತ್ತಿದ್ದ ಬಗ್ಗೆ ಉಲ್ಲೇಖಗಳಿವೆ. ಹಾಗೆಯೇ ಕೆಳಜಾತಿಯ ಜನ ಊರಲ್ಲಿ ಬರುವಾಗ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಬರುವಂತೆ.. ಕೈ0ುಲ್ಲಿ ಗೆಜ್ಜೆ ಕಟ್ಟಿದ ಕೋಲನ್ನು ಹಿಡಿದು ಬರುವಂತೆ, ತಲೆಯ ಮೇಲೆ ಕೊಂಬು ಧರಿಸಿ ಬರುವಂತೆ, ಕೊರಳಲ್ಲಿ ಮಡಿಕೆ ಧರಿಸಿ ಬರುವಂತೆ, ಸೊಂಟಕ್ಕೆ ಕಸಪೊರಿಕೆ ಬಿಗಿದು ಬರುವಂತೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಸಾಲದೆಂಬಂತೆ ಅವರು ಬಂಗಾರದ ಆಭರಣಗಳನ್ನು ಧರಿಸದಿರುವಂತೆ, ಆಕಳ ಹಾಲನ್ನು ಸೇವಿಸದಿರುವಂತೆ, ಛತ್ರಿ ಹಿಡಿಯದಿರುವಂತೆ, ಪಾದರಕ್ಷೆ ಧರಿಸದಿರುವಂತೆ ಮದುವೆ0ುಲ್ಲಿ ಮೆರವಣಿಗೆ ಹೊರಡಿಸದಿರುವಂತೆ ಇಂಥಾ ಇನ್ನೂ ಅನೆಕ ಬಗೆಯ ಅಮಾನವೀಯ ಸಾಮಾಜಿಕ ನಿರ್ಬಂಧಗಳ ನಡುವೆ ಅವರು ಬದುಕಿರುವದಿತ್ತು. ಪೂನಾದಲ್ಲಿ ಮರಾಠಾ ಪೇಶ್ವೆಯರು ಆಳುವ ಸಂದರ್ಭದಲ್ಲಿ ಮಹಾರ ಹಾಗೂ ಮಾಂಗ್ ಎನ್ನುವ ಕೆಳಜಾತಿಗಳು ಪೂನಾ ನಗರದಲ್ಲಿ ಬರಬೇಕಿದ್ದರೆ ಬೆಳಿಗ್ಗೆ 9 ಘಂಟೆಯ ಒಳಗೆ ಬರುವಂತಿರಲಿಲ್ಲ ಹಾಗೂ ಮಧ್ಯಾಹ್ನ 3 ಘಂಟೆಯ ನಂತರ ಬರುವ ಹಾಗಿರಲಿಲ್ಲ. ಈ ಬಗೆಯ ಕಿರಿಕಿರಿಯಿಂದಾಗಿಯೇ ರೋಷಿ ಹೋಗಿ ಡಾ ಅಂಬೇಡ್ಕರ ಅವರು ತನ್ನ ಲಕ್ಷಾನುಗಟ್ಟಲೆ ಅನು0ಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಅಪ್ಪಿಕೊಂಡದ್ದು ಈಗ ಚರಿತ್ರೆ. ಇದೆಲ್ಲಾ ಸ್ವಾತಂತ್ರ್ಯ ಪೂರ್ವದ ಕಥೆ. 0ಾವದೋ ಸಂದರ್ಭದಲ್ಲಿ ಇದ್ದಿರಬಹುದಾದ ಅನಿಷ್ಟ ಆಚರಣೆಗಳು ಎಂದು ಉದಾಸೀನ ಮಾಡಬಹುದು. ಸ್ವಾತಂತ್ರ್ಯ ನಂತರದ ಸ್ಥಿತಿಗೆ ಬರೋಣ.
ದೇಶ ಸ್ವಾಯತ್ತವಾಗಿ ಆರು ದಶಕಗಳು ಉರುಳಿದರೂ ದಲಿತರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ನಾವಿನ್ನೂ ಸಮರ್ಥರಾಗಿಲ್ಲ. ತಲೆ ತಲಾಂತರದಿಂದಲೂ ಶೋಷಣೆಗೆ ಗುರಿ ಮಾಡುತ್ತ ಬಂದ ದಲಿತರ ಮೇಲಿನ ದೌರ್ಜನ್ಯಗಳು ಸಂಪೂರ್ಣವಾಗಿ ನಿಂತಿಲ್ಲ. ತೀರಾ ಇತ್ತೀಚಿಗೆ ಹರಿಯಾಣಾದ ಹಿಸಾರ್ ಎನ್ನುವ ಪ್ರಾಂತದಲ್ಲಿ 16 ವರ್ಷ ವಯೋಮಾನದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಸುಮಾರು 12 ಜನ ಮೇಲ್ಜಾತಿಯವರು ಸಾಮೂಹಿಕವಾಗಿ ಅತ್ಯಾಚಾರವನ್ನು ಎಸಗಿರುವದಿದೆ. ಅಷ್ಟು ಮಾತ್ರವಲ್ಲದೇ ಈ ದುರುಳರು ಇಡೀ ಅತ್ಯಾಚಾರದ ಪ್ರಕರಣವನ್ನು ಶೂಟಿಂಗ್ ಮಾಡಿ ಮೆಸೇಜ್ ಮಾಡಿದ್ದಾರೆ. ಆ ಎಲ್ಲ ವರದಿಯನ್ನು ರಾಷ್ಟ್ರೀಯ ದಲಿತ ಮಾನವ ಹಕ್ಕುಗಳ ಆ0ೋಗದ ಸದಸ್ಯರು ಸವಿವರವಾಗಿ ನೀಡಿರುವದಿದೆ. ಕಳೆದ ಅಕ್ಟೋಬರ್ 5 ರಂದು ಈ ಸದಸ್ಯರು ಘಟನೆ0ು ಸ್ಥಳಕ್ಕೆ ಹೋಗಿ ವಸ್ತು ಸ್ಥಿತಿ0ುನ್ನು ಪರಿಶೀಲಿಸಿ ವಿವರಗಳನ್ನು ಹೊರಹಾಕಿರುವದಿದೆ. ಈ ದಲಿತ ಮಾನವ ಹಕ್ಕುಗಳ ಆ0ೋಗದಲ್ಲಿದ್ದ ಮಹಿಳಾ ಸದಸ್ಯೆ ಆಶಾ ಕೋತ್ವಾಲ್ ಎನ್ನುವವರು ಹೇಳುವ ಹಾಗೆ ‘ನಾಗರಿಕ ಸಮಾಜ ಕಳೆದ ಆರು ವರ್ಷದ ಹಿಂದೆ ಜೆಸ್ಸಿಕಾ ಲಾಲ್ ಹತ್ಯೆ0ು ಸಂದರ್ಭದಲ್ಲಿ ಹೇಗೆ ಜೆಸ್ಸಿಕಾ ಪರವಾಗಿ ನಿಂತಿತೋ ಅದೇ ಬಗೆ0ು ಸಹಕಾರ ನಾವು ಈಗಲೂ ನಿರೀಕ್ಷಿಸುತ್ತೇವೆ’ ಎಂದಿರುವದಿದೆ. ಈ ಬಗೆ0ು ಐದಾರು ಘಟನೆಗಳು ಈಗಾಗಲೇ ದಾಖಲೆಯಾಗಿದ್ದು, ದಾಖಲೆಯಾಗದೇ ಗಪ್ ಚುಪ್ ಆಗಿ ಉಳಿದವುಗಳಿಗೆ ಲೆಕ್ಕವಿಲ್ಲ ಎಂದು ಈ ಆಯೋಗದ ಸದಸ್ಯರು ಹೇಳುವದಿದೆ. ಈಗಾಗಲೇ ಈ ಗ್ಯಾಂಗ್ ರೇಪಲ್ಲಿ ಭಾಗಿ0ಾದ 12 ಜನರ ಪೈಕಿ 11 ಜನರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿ0ಾಗಿರುವದಿದೆ. ಈ ಘಟನೆಯ ಹಿಂದೆ ಕಾರಣ ಏನೇ ಇರಬಹುದು ಆದರೆ ಆ ಬಾಲಕಿ0ು ಮೇಲೆ ನಡೆದ ಅಮಾನವೀ0ು ಕೃತ್ಯವನ್ನು ಮಾತ್ರ ಮನುಷ್ಯರಾದವರು ಒಕ್ಕೊರಲಿನಿಂದ ಖಂಡಿಸಲೇಬೇಕು.
ಹಿಂದೊಮ್ಮೆ ಆಸಾಂ ರಾಜ್ಯದಲ್ಲಿ ಬಾರ್ ಎದುರಲ್ಲಿ ಓರ್ವ ಬಾಲಕಿಯನ್ನು ಹತ್ತಾರು ಪೋಕರಿಗಳು ಸುತ್ತುವರಿದು ಆಕೆಯನ್ನು ಹರಿದು ತಿಂದಂತೆ ಮಾಡಿದ ದೃಶ್ಯವನ್ನು ಟಿ.ವಿ.ಯ ಬಹುತೇಕ ಚ್ಯಾನೆಲ್ ಗಳು ರಾತ್ರಿಯಿಡೀ ತೋರಿರುವದಿತ್ತು. ಸ್ವಾತಂತ್ರ್ಯೋತ್ತರ ಭಾರತದ ಅತ್ಯಂತ ವಿಕಾರ ಸಾಕ್ಷಿಗಳಾಗಿ ಇವು ನಮ್ಮ ಮಧ್ಯೆ ಇವೆ. ಹೀಗೇ ಆದರೆ ಮಾನವ ಜೀವನ ಕ್ರಮೇಣವಾಗಿ ತುಚ್ಚವಾಗುತ್ತಾ ನಡೆಯುತ್ತದೆ. ದಲಿತ ಮತ್ತು ಕೆಳಸ್ತರದವರ ಮೇಲಿನ ದೌರ್ಜನ್ಯಗಳನ್ನು ಸಂವಿಧಾನಾತ್ಮಕವಾಗಿ ರಕ್ಷಿಸಲಾಗಿದೆಯಾದರೂ ಮಾನವೀಯ ನೆಲೆಯಲ್ಲಿ ಅವರಿಗೆ ಸಿಗಬೇಕಾದ ಸಾಮಾಜಿಕ ಸ್ಥಾನಮಾನಗಳು ಇನ್ನೂ ದೊರೆತಿಲ್ಲ. ಬಿಹಾರದ ಗಯಾ ಜಿಲ್ಲೆಯ ಒಂದು ಗ್ರಾಮದಲ್ಲಿ ಸರಕಾರದಿಂದ ತನಗೆ ಬರಬೇಕಾದ ಇಂದಿರಾ ವಿಕಾಸ ಯೋಜನೆಯ ಹಣಕಾಸಿನ ನೆರವನ್ನು ಕೇಳಲು ಹೋದರೆ ಮಾಜಿ ಪಂಚಾಯತ ಮುಖಂಡ ಕೆಲ ಗೂಂಡಾಗಳೊಂದಿಗೆ 35 ವರ್ಷದ ಆ ಮಹಿಳೆಯ ಗುಡಿಸಲಿಗೆ ನುಗ್ಗಿ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತ ದಹನ ಮಾಡಿದ ಘಟನೆಯನ್ನು ‘ಹಿಂದುಸ್ಥಾನ ಟೈಮ್ಸ್’ ಪತ್ರಿಕೆ [9-10-2012] ವರದಿ ಮಾಡಿರುವದಿದೆ. ಆ ಮಹಿಳೆ0ು ಗಂಡ ಭೂತಾನದಲ್ಲಿ ಕೆಲಸಕ್ಕಿದ್ದಾನೆ. ಈ ಮಾಜಿ ಪಂಚಾ0ುತ ಮುಖಂಡ ಅವಳೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರ ಬಗ್ಗೆ ಅಲ್ಲಿಯ ಜನ ಮಾತನಾಡಿರುವದಿದೆ. ಇದು ಒಂದರ್ಥದಲ್ಲಿ ಉಂಡೂ ಹೋದ.. ಕೊಂಡೂ ಹೋದ… ಕೊನೆಗೆ ಕೊಂದೂ ಹೋದ ಎನ್ನುವಂತಾಯಿತು. ಈ ಬಗೆ0ು ಒಂದಿಲ್ಲಾ ಒಂದು ಘಟನೆಗಳು ಆಗಾಗ ಘಟಿಸುತ್ತಲೇ ಇರುತ್ತವೆ. ಯಾವದೋ ಒಂದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹೀಗೆ ಅಮಾಯಕ ಬಾಲಕಿಯರ ಮೇಲೆ..ಹೆಣ್ಣು ಮಕ್ಕಳ ಮೇಲೆ ಅಮಾನವೀಯ..ಹೇಯವಾದ ಕೃತ್ಯಗಳನ್ನು ಎಸಗುವದು ಯಾವುದೇ ನಾಗರಿಕ ಸಮಾಜಕ್ಕೂ ಶೋಭೆ ತರುವಂಥದಲ್ಲ. ಇಂಥಾ ಕೃತ್ಯದಲ್ಲಿ ತೊಡಗಿರುವ ಯಾರೇ ಆಗಲಿ ಅವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು. ಆ ಶಿಕ್ಷೆ ಮುಂದೆ ಈ ಬಗೆಯ ಕೃತ್ಯ ಎಸಗುವವರಿಗೆ ಒಂದು ಪಾಠವಾಗುವಂತಿರಬೇಕು.
ದೇಶದಲ್ಲಿ ಈಗಾಗಲೇ 15 ಪ್ರಮುಖ ರಾಜ್ಯಗಳಲ್ಲಿ ದಲಿತರ ಹಕ್ಕುಗಳ ಆಯೋಗಗಳಿದ್ದು ಪ್ರತಿಯೊಂದು ರಾಜ್ಯವೂ ಈ ಬಗೆಯ ಆಯೋಗಗಳನ್ನು ಸ್ಥಾಪಿಸಬೇಕು ಇದು ಕಡ್ಡಾಯವಲ್ಲದಿದ್ದರೂ ಈ ಬಗೆಯ ಅಹಿತಕರ ಘಟನೆಗಳು ಜರುಗಿದಾಗ ನ್ಯಾಯಾಲಯವೇ ಈ ಬಗೆಯ ಆಯೋಗಗಳನ್ನು ನೇಮಿಸುವದಿದೆ. ಇಡೀ ಸಾಮಾಜಿಕ ವ್ಯವಸ್ಥೆ ಅನೇಕ ಬಗೆ0ು ಅವಾಂತರಗಳ ನಡುವೆ ಸಿಲುಕಿ ನರಳುತ್ತಿರುವಂತಿದೆ. ಈಗ ನಾವೆಲ್ಲರೂ ಅತಿ ತುತರ್ಾಗಿ ಮಾನವರಾಗುವ ಅವಶ್ಯಕತೆಯಿದೆ. ಅದೊಂದೇ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು.





0 Comments