
ಧಾರವಾಡ ವಿದ್ಯಾವರ್ಧಕ ಸಂಘವು 2013 ನೇ ವರ್ಷದ ಶ್ರೇಷ್ಠ ಮಹಿಳಾ ಕನ್ನಡ ಕೃತಿಗಳಿಗೆ ಮಾತೋಶ್ರೀ ರತ್ನಮ್ಮಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ’ ಕೊಡಲು ನಿರ್ಧರಿಸಿದೆ. ಒಟ್ಟು ಮೂರು ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಂದು ಕೃತಿಗೆ 10,000 ರೂ. ಸಮಾನಾಂತರ ಬಹುಮಾನ ನೀಡಿ ಗೌರವಿಸಲಾಗುವುದು.
ನಿಯಮಗಳು ಇಂತಿವೆ
ಲೇಖಕಿಯರು ಮಾತ್ರ ಬಹುಮಾನಕ್ಕೆ ಪುಸ್ತಕಗಳನ್ನು ಕಳಿಸಬೇಕು. ಕನ್ನಡ ಕೃತಿಗಳಿಗೆ ಬಹುಮಾನಗಳನ್ನುಕೊಡಲಾಗುವುದು. ಪ್ರಕಟಿತ ಮೂಲ ಕೃತಿಯಾಗಿರಬೇಕು, ಅನುವಾದದ ಕೃತಿಯಾಗಿರಬಾರದು. ಕೃತಿಯು 1-1-2013 ರಿಂದ 31-12-2013 ರ ಮಧ್ಯ ಪ್ರಕಟವಾಗಿರಬೇಕು.
ಯಾವುದೇ ವಿ.ವಿ.ಡಾಕ್ಟರೇಟ ಕೊಟ್ಟ ಪ್ರಬಂಧಗಳಿಗೆ ಮತ್ತು ಪಿಎಚ್ಡಿ ಪ್ರಬಂಧ ಅಂತಾ ಯಾವುದೇ ವಿವಿಗೆ ಹಾಜರುಪಡಿಸಿದ, ತಿರಸ್ಕೃತವಾದ ಕೃತಿಗಳಿಗೆ ಹಾಗೂ ಎಂ.ಪಿಲ್ ಮಾಡಿ ಪ್ರಕಟಿಸಿದ ಕೃತಿಗಳಿಗೆ ಬಹುಮಾನ ನೀಡಲಾಗುವುದಿಲ್ಲ.
ಪ್ರತಿಯೊಂದು ಕೃತಿಯ ಐದು ಪ್ರತಿಗಳನ್ನು ಕಳಿಸಬೇಕು. ಒಬ್ಬರು ಒಂದಕ್ಕಿಂತ ಹೆಚ್ಚು ಕೃತಿಗಳನ್ನು ಕಳಿಸಬಹುದಾದರೂ ಅವರ ಒಂದು ಕೃತಿಗೆ ಮಾತ್ರ ಬಹುಮಾನಕೊಡಲಾಗುವುದು. ಲೇಖಕಿಯರು ತಮ್ಮ ಪರಿಚಯ ಹಾಗೂ ತಮ್ಮ ಗ್ರಂಥ ಮಾಹಿತಿಯನ್ನು ಸ್ವಹಸ್ತಾಕ್ಷರದಲ್ಲಿ ಬಿಳಿ ಹಾಳೆಯ ಮೇಲೆ ಬರೆದು ಕಳಿಸಬೇಕು.
ಪ್ರಕಾಶಕರು ಪುಸ್ತಕಗಳನ್ನು ಸಲ್ಲಿಸಿದರೂ ಬಹುಮಾನ ಬಂದಲ್ಲಿ ಅದನ್ನು ಲೇಖಕಿಯರಿಗೆ ಕೊಡಲಾಗುವುದು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಚೇರಿ ವೇಳೆಯಲ್ಲಿ ಸ್ವತಃ ಬಂದು ಅಥವಾ ಅಂಚೆಯ ಮೂಲಕ ಪುಸ್ತಕಗಳನ್ನು ಸಲ್ಲಿಸಲು 2014 ಮೇ31 ಕೊನೆಯ ದಿನವಾಗಿದೆ. ಬಹುಮಾನ ನೀಡುವಲ್ಲಿ ಸಂಘದ ನಿರ್ಣಯವೇ ಕೊನೆಯದು. ಈಗಾಗಲೇ ಈಬಹುಮಾನವನ್ನು ಮೂರು ಬಾರಿ ಪಡೆದುಕೊಂಡವರಿದ್ದರೆ. ಭಾಗವಹಿಸಲು ಅವಕಾಶವಿರುವುದಿಲ್ಲ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ (94480-22950) ಅವರನ್ನು ಸಂಪರ್ಕಿಸಬಹುದು.
ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಪುಸ್ತಕ ಆಹ್ವಾನ
ನಿಮಗೆ ಇವೂ ಇಷ್ಟವಾಗಬಹುದು…




0 Comments