ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಡೆಲ್ ಆದರು ಅನಂತಮೂರ್ತಿ..

ಆಗ ತಾನೆ slave flash unit ಕೊಂಡುಕೊಂಡಿದ್ದೆ.

ನನಗೆ ಮೊದಲಿನಿಂದಲೂ ಫ್ಲಾಷ್ ಬಳಸಿ ಫೋಟೋ ತೆಗೆಯುವುದು ಇಷ್ಟವಿಲ್ಲ. ಈಗ ಡಿಜಿಟಲ್ ಕ್ಯಾಮೆರಾಗಳಲ್ಲಿ ಅದು ಬಹಳ ಸುಲಭ. 64000ಕ್ಕಿಂತ ಹೆಚ್ಚಿನ ISO ಸಂವೇದನೆಯಲ್ಲಿ ಲಭ್ಯ ಬೆಳಕಿನಲ್ಲಿ ಚಿತ್ರೀಕರಿಸ ಬಹುದು. ಆದರೆ ಆಗ ASA ಎಂದು ಕರೆಯಲ್ಪಡುತ್ತಿದ್ದ (ಬಿಂಬಗ್ರಾಹಿಯಾಗಿದ್ದ) ಫಿಲ್ಮ್ ಗಳ ಸಂವೇದನಾಶೀಲತೆ 50 ರಿಂದ 100 ಅಷ್ಟೆ.

paramesh column crop200, 400 ASA ಫಿಲ್ಮ್ ಗಳು ದೊರೆಯುತ್ತಿದ್ದುವಾದರೂ ಕೈಗೆಟುಕದ ಬೆಲೆ. ಜೊತೆಗೆ ಪಕ್ಕಾ ಸಂಸ್ಕರಣೆ ಮಾಡದಿದ್ದರೆ ಗ್ರೈನ್ಸ್ ಹೆಚ್ಚಾಗಿ ಗುಣಮಟ್ಟ ಕಡಿಮೆಯಾಗುತ್ತಿತ್ತು. ಆದ್ದರಿಂದ ಬಹಳಷ್ಟು ಸಾರಿ ಫ್ಲಾಷ್ ಯೂನಿಟ್ಟುಗಳನ್ನು ನನ್ನಂಥವರು ಅನಿವಾರ್ಯವಾಗಿ ಬಳಸಬೇಕಿತ್ತು.

ಫ್ಲಾಷ್ ಬಳಸಿದಾಗ ಚಿತ್ರಗಳು flat ಆಗಿ ಇರುತ್ತಿದ್ದುವು. ಅದನ್ನು ಕೊಲ್ಲಲು ಎರಡನೆ ಬೆಳಕಿನ ಮೂಲವಾಗಿ ಸ್ಲೇವ್ ಫ್ಲಾಷ್ ಯೂನಿಟ್ಟನ್ನು ಕೊಂಡುಕೊಂಡಿದ್ದೆ. ನನ್ನ ಹೊಸ ಪ್ರಯೋಗಕ್ಕೆ ರೂಪದರ್ಶಿ ಬೇಕಿತ್ತು. ಒಂದು ದಿನ ಪಾಠವಿಲ್ಲದ ಸಮಯದಲ್ಲಿ URA (ಅವರನ್ನು ನಾವು ಹಾಗೂ ಕರೆಯುತ್ತಿದ್ದೆವು) ಅವರನ್ನು ಕೇಳಿದೆ. ಒಪ್ಪಿಕೊಂಡರು.

ಒಂದು ಫೋಟೋ ಮಾತ್ರ ಚೆನ್ನಾಗಿ ಬಂತು. ಉಳಿದ ಮೂರು ನೀವೇ ನೋಡಿ. ಚೆನ್ನಾಗಿದ್ದ ಒಂದು ಫೋಟೋವನ್ನು ಮಾತ್ರ ಅವರಿಗೆ ಕೊಟ್ಟು ಉಳಿದವುಗಳನ್ನು ಯಾರಿಗೂ ತೋರಿಸದೆ ಹಾಗೇ ಇಟ್ಟುಕೊಂಡಿದ್ದೆ. ಈ ಮೂರು ಫೋಟೋಗಳನ್ನು ಯಾರಿಗೂ ತೋರಿಸಲು ನಾನು ಬಯಸಲಿಲ್ಲ. ಈಗ ಆ ಫೋಟೋಗಳು ನನ್ನ ಬಳಿ ಇಲ್ಲ. ಆದರೆ ನೆಗೆಟೀವ್ ಗಳು ಸಿಕ್ಕವು. ಸ್ಕ್ಯಾನ್ ಮಾಡಿ ನಿಮಗೆ ತೋರಿಸುತ್ತಿದ್ದೇನೆ.

ನಾನು ಕೊಟ್ಟ ಫೋಟೋವನ್ನು ಇಷ್ಟ ಪಟ್ಟ URA, ಅದನ್ನು ಪ್ರಕಟವಾಗುತ್ತಿದ್ದ ತಮ್ಮ ಹೊಸ ಪುಸ್ತಕದ ರಕ್ಷಾಪುಟದಲ್ಲಿ ಪ್ರಕಟಿಸುವುದಕ್ಕಾಗಿ ಸುಬ್ಬಣ್ಣನಿಗೆ ಕಳಿಸು ಎಂದರು. ಎನ್ಲಾರ್ಜ್ ಮಾಡಿ ಒಂದು ಕವರ್ ಗೆ ಹಾಕಿ ಅಕ್ಷರ ಪ್ರಕಾಶನಕ್ಕೆ ಪೋಸ್ಟ್ ಮಾಡಿದೆ. ಜೊತೆಯಲ್ಲಿ ಒಂದು ಪತ್ರ ಸೇರಿಸಿದ್ದೆ. ಪದಗಳು ನೆನಪಿಲ್ಲ. ಅದರೆ ವಿಷಯ ನೆನಪಿದೆ.

ಈ ಚಿತ್ರವನ್ನು ಕಳಿಸುತ್ತಿದ್ದೇನೆ. ನಾನು ಹಿಂದೆ ಸ್ಕೀಮ್ ಒಂದರಲ್ಲಿ ನಿಮ್ಮಿಂದ ಕೊಂಡುಕೊಂಡಿರುವ ಪುಸ್ತಕಗಳ ಮೊತ್ತದಲ್ಲಿ ಕೆಲವು ಕಂತನ್ನು ಮಾತ್ರ ಕಟ್ಟಿದ್ದೇನೆ. ಉಳಿದದ್ದನ್ನು ನನಗೆ ಕಟ್ಟಲಾಗದೆ ಬಾಕಿ ಉಳಿಸಿಕೊಂಡಿದ್ದೇನೆ. ಈ ಚಿತ್ರಕ್ಕೆ ಕೊಡುವ ಸಂಭಾವನೆಯಲ್ಲಿ ಅದನ್ನು ಮುರಿದುಕೊಂಡು ಉಳಿದದ್ನನ್ನು ನನಗೆ ಕಳಿಸಿ ಅನ್ನುವಂಥ, ಈಗ ನೆನಸಿಕೊಂಡರೆ ಧಾರ್ಷ್ಟ್ಯದ ಅಹಂಕಾರದ ಅನಿಸುವ, ಮಾತುಗಳನ್ನು ಬರೆದಿದ್ದೆ.

ಆದರೆ ಆ ಮಾತುಗಳು ಬಡತನ ಮತ್ತು ಅವಮಾನಗಳನ್ನು ಹೂತಿಡುವ ಕೀಳರಿಮೆಯ ಮುಸುಕಿನ ಮಾತುಗಳೂ ಇರಬಹುದೆನಿಸುತ್ತದೆ. ಅನಂತಮೂರ್ತಿಯವರ ಫೋಟೋ ಆ ಪುಸ್ತಕದ ರಕ್ಷಾಪುಟದಲ್ಲಿ ಪ್ರಕಟವಾಗಲಿಲ್ಲ. ನಾನು ಕವರಿನಲ್ಲಿ ದೊಡ್ಡ ಫೋಟೋಗೆ ಬೆಂಬಲವಾಗಿ ರಟ್ಟನ್ನಾಗಲಿ ಗಟ್ಟಿಯಾದ ವಸ್ತುವನ್ನಾಗಲಿ ಇಟ್ಟಿರಲಿಲ್ಲ. ಅಂಚೆ ಇಲಾಖೆಯವರು ನೀಟಾಗಿ ಕವರನ್ನು ಅರ್ಧಕ್ಕೆ ಮಡಚಿ ತಲುಪಿಸಿದ್ದರು!

IMG_0001 IMG_0002 IMG_0004

‍ಲೇಖಕರು Admin

5 August, 2016

1 Comment

  1. shama nandibetta

    “ಆದರೆ ಆ ಮಾತುಗಳು ಬಡತನ ಮತ್ತು ಅವಮಾನಗಳನ್ನು ಹೂತಿಡುವ ಕೀಳರಿಮೆಯ ಮುಸುಕಿನ ಮಾತುಗಳೂ ಇರಬಹುದೆನಿಸುತ್ತದೆ.

    Bahala sala iduve nija sir. At the same time nimma kelasakke neevu sambhavane bayasiddu baaki murakondu ulidaddu kalisi andiddu thappina/ahankarada mathinanthe kaanuvudilla

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading