– ಸಿರಿ ಭಟ್

ದಿನಾಂಕ 31 ಅಗಸ್ಟ್ 2014 ಕುಮಟಾದ ನಾದಶ್ರೀ ಸಭಾಭವನದಲ್ಲಿ ಸ್ವಸ್ತಿ ಪ್ರಕಾಶನದ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿಜೇತ ಶ್ರೀ ಕರ್ಕಿ ಕೃಷ್ಣಮೂರ್ತಿ ಯವರ “ಮಳೆ ಮಾರುವ ಹುಡುಗ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಸಿದ್ದ ಕಥೆಗಾರರಾದ ಡಾ. ಶ್ರೀಧರ್ ಬಳಗಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸುಂದರವಾಗಿ ನಿರೂಪಿಸಲ್ಪಟ್ಟಿತು. ಮಂಗಳೂರು ಆಕಾಶವಾಣೀ ನಿರ್ದೇಶಕರಾದ ಡಾ.ವಸಂತ ಕುಮಾರ್ ಪೆರ್ಲ ಹಾಗೂ ಪ್ರಸಿದ್ಧ ಕಾದಂಬರಿಕಾರರಾದ ಶ್ರೀ ಕರಣಂ ಪವನ್ ಪ್ರಸಾದ್ ನಮ್ಮೊಂದಿಗೆ ಇದ್ದರು. ಕಾರ್ಯಕ್ರಮ ಕುಮಾರಿ ಸುಶ್ಮಾ, ಕುಮಾರಿ ಶ್ವೇತಾ ಹಾಗೂ ಕುಮಾರಿ ಅನುಷಾ ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸ್ವಸ್ತಿ ಪ್ರಕಾಶನ ದ ಶ್ರೀಮತಿ ಪ್ರಿಯಾ ಕಲ್ಲಬ್ಬೆ ಎಲ್ಲರನ್ನೂ ಸ್ವಾಗತಿಸಿದರು.

ವಿನಾಯಕ್ ಭಾಗ್ವತ್ ಸ್ವಸ್ತಿ ಪ್ರಕಾಶನದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಶ್ರೀ ಸಂಜಯ್ ಭಟ್ ಬೆಣ್ಣೆ “ಮಳೆ ಮಾರುವ ಹುಡುಗ” ಕೃತಿಯನ್ನು ಪರಿಚಯಿಸಿದರು. ಕೃತಿಯ ಲೇಖಕರಾದ ಶ್ರೀ ಕರ್ಕಿ ಕೃಷ್ಣಮೂರ್ತಿ ಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಳೆ ಮಾರುವ ಹುಡುಗ ನ ಬಗ್ಗೆ ಅತಿಥಿಗಳು ವಿಮರ್ಶಾತ್ಮಕ ಮಾತುಗಳನ್ನಾಡಿದರು. ಕನ್ನಡ ಕಥಾ ಸಾಹಿತ್ಯಕ್ಕೆ ಇದೊಂದು ಉತ್ತಮ ಕೊಡುಗೆ ಎಂಬ ನುಡಿಗಳು ಮೂಡಿ ಬಂದವು.

ಲೇಖಕರಾದ ಕೃಷ್ಣಮೂರ್ತಿಯವರು ತಮ್ಮ ಸಾಹಿತ್ಯ ಪ್ರಯಾಣದಲ್ಲಿ ಕಥೆಗಳ ಜೊತೆಗಿನ ಅನುಭವ ಹಂಚಿಕೊಂಡರು. ಕೊನೆಯಲ್ಲಿ ಶ್ರೀಮತಿ ಸುಧಾ ಎಂ ಅವರು ಎಲ್ಲರನ್ನೂ ವಂದಿಸಿದರು. ಶ್ರೀ ರಾಘವೇಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶಿರಸಿ, ಹುಬ್ಬಳ್ಳಿ, ಬೆಂಗಳೂರು, ಗೋವಾ ಹೀಗೆ ದೂರದೂರದಿಂದ ಬಂದ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಸಡಗರದಿಂದ ಭಾಗವಹಿಸಿದರು.





ಅಭಿನಂದನೆಗಳು ಶ್ರೀ ಕೃಷ್ಣಮೂರ್ತಿ ಕರ್ಕಿಯವರೇ… ಅಭಿನಂದನೆಗಳು ‘ಸ್ವಸ್ತಿ ಪ್ರಕಾಶನ’… ಇಂಥ ಸಂತಸಗಳು ಸಾವಿರವಾಗಲಿ.