ಇಲ್ಲಿಯವರೆಗೆ
ಮಂಜುಳಾ ಬಬಲಾದಿ
ಹಿಂದಿನ ರಾತ್ರಿಯೆಲ್ಲ ಮಳೆ ಧಾರಾಕಾರ! ರವಿಯಿಲ್ಲದ ಬೆಳಗಿನಲ್ಲಿ ಮಳೆಯ ಜಿಟಿ-ಜಿಟಿ ರಾಗ ಮುಂದುವರೆದಿತ್ತು. ಅಂದು ಕೇವಲ ಗ್ಯಾಂಗ್ಟಾಕ್ ವಿಹಾರ ಮಾಡುವುದೆಂದು ನಿರ್ಧಾರವಾಗಿತ್ತು. ಗ್ಯಾಂಗ್ಟಾಕ್ನರ ಪ್ರಾದೇಶಿಕ ಬೆಳಗಿನ ತಿನಿಸು ಏನಿರಬಹುದು ಎಂದು ಕುತೂಹಲದಿಂದ ತೇ(ಕಾ)ರನೇರಿ ಹೊರಟವರಿಗೆ ಸಿಕ್ಕಿದ್ದು ರುಚಿ-ರುಚಿಯಾದ ತರಕಾರಿ ಮೊಮೊಗಳು ಮತ್ತು ಪೂರಿ ಸಾಗು. (ನಾವು ಸಸ್ಯಾಹಾರಿಗಳಾದ್ದರಿಂದ ನಮಗೆ ಹೆಚ್ಚಿನ ಆಯ್ಕೆಗೆ ಅವಕಾಶವಿರಲಿಲ್ಲ. ಅಂದಹಾಗೆ ಮಾಂಸಾಹಾರಿ ಮೊಮೊಗಳಲ್ಲಿ ತರೇವಾರಿ ಆಯ್ಕೆಗಳಿವೆಯಂತೆ).
ಗ್ಯಾಂಗ್ಟಾಕ್, ಸಿಕ್ಕಿಂ ರಾಜ್ಯದ ರಾಜಧಾನಿ. ಪೂರ್ವ ಹಿಮಾಲಯ ಶ್ರೇಣಿಯಲ್ಲಿ, ೫೮೦೦ ಅಡಿಗಳಷ್ಟು ಎತ್ತರದಲ್ಲಿರುವ ಈ ಸುಂದರ ನಗರ, ಹಲವಾರು ಪ್ರಸಿದ್ಧ ಬೌದ್ಧ ಮಠಗಳನ್ನೂ (ಮೊನಾಸ್ಟರಿಗಳು) ಹೊಂದಿದೆ. ಪ್ರಮುಖವಾಗಿ ನೇಪಾಳಿ, ಲೆಪ್ಚಾ, ಭುತಿಯಾ ಪಂಗಡದ ಜನಗಳು ವಾಸವಾಗಿರುವ ಈ ಸ್ಥಳದ ಜನರ ಮಾತಿನ ಶೈಲಿ ನನಗೆ ಬಹಳ ಹಿಡಿಸಿತು. ಹೆಚ್ಚು-ಕಮ್ಮಿ ಎಲ್ಲರೂ ಹಿಂದಿಯಲ್ಲಿ ಸಂಭಾಷಿಸಬಲ್ಲರು. ಆದರೆ ನೇಪಾಳಿಪ್ರಮುಖ ಆಡು ಭಾಷೆ.
ನಾವು ಮೊದಲು ಸಂದರ್ಶಿದ ಸ್ಥಳ ಹಿಮಾಲಯನ್ ಜುಆಲಾಜಿಕಲ್ ಪಾರ್ಕ್. ಇದೂ ಇನ್ನೊಂದು ಮೃಗಾಲಯದ ತರಹವೇ ಇರುತ್ತದೆ, ಹಲವು ಹೊಸ ಪ್ರಾಣಿಗಳನ್ನು ನೋಡಲು ಸಿಗಬಹುದೇನೋ ಅಂದುಕೊಂಡು ಹೋದವಳಿಗೆ ಆಶ್ಚರ್ಯ ಕಾದಿತ್ತು. ಹಿಮಾಲಯನ್ ಜುಆಲಾಜಿಕಲ್ ಪಾರ್ಕ್ ಒಂದು ಪುಟ್ಟ ಅರಣ್ಯದ ತರಹ ಇದೆ. ಅಲ್ಲಿಯ ಪ್ರಾಣಿಗಳನ್ನು ’ಇಮರ್ಶನ್ ಎಕ್ಸಿಬಿಟ್’ ಎಂದ ವಿಧಾನದಲ್ಲಿ ಪ್ರದರ್ಶಿಸಲಾಗಿದೆ. ಈ ವಿಧಾನದಲ್ಲಿ ಪ್ರಾಣಿಗಳಿಗೆ ಅವುಗಳ ನೈಸರ್ಗಿಕ ವಾಸಸ್ಥಾನದಂಥ ಪರಿಸರವನ್ನು ಸೃಷ್ಟಿಗೊಳಿಸಿ, ಅವುಗಳನ್ನು ಅಲ್ಲಿ ಪೋಷಿಸಲಾಗುತ್ತದೆ. ಹೀಗಾಗಿ ಕೆಲವೊಮ್ಮೆ ನಮ್ಮಂಥ ಸಂದರ್ಶಕರಿಗೆ ಕೆಲವು ಪ್ರಾಣಿಗಳು ಕಾಣದೇ ಸಹ ಇರಬಹುದು! ನಮ್ಮ ಕಣ್ಣಿಗೆ ಕಂಡ ಪ್ರಾಣಿಗಳು ಚಿರತೆ, ಕೆಂಪು ಪಾಂಡಾ (ಹಿಮಾಲಯನ್ ಕೆಂಪು ಪಾಂಡಾ ಇಲ್ಲಿನ ಪ್ರಾದೇಶಿಕ, ವಿಶೇಷ ಪ್ರಾಣಿ.. ತುಂಬಾ ಮುದ್ದು ನೋಡಲು), ಟಿಬೆಟನ್ ತೋಳ, ಸ್ನೋ ಚಿರತೆ, ಹಿಮಾಲಯನ್ ಪಾಮ್ ಕಿವೆಟ್, ಚಿರತೆ ಬೆಕ್ಕು ಽ ಕಿವೆಟ್ ಬೆಕ್ಕು.
ಇವಷ್ಟೇ ಅಲ್ಲದೇ ಈ ಪಾರ್ಕ್ನಾಲ್ಲಿ ಯಾಕ್ಗಬಳು, ಹಿಮಾಲಯನ್ ಬೆಟ್ಟದ ಆಡು, ಹಿಮಾಲಯನ್ ಕರಡಿಗಳೂ ಇವೆಯಂತೆ. ಇವುಗಳ ದರ್ಶನ ನಮಗಾಗಲಿಲ್ಲ. ಹಿಮಾಲಯನ್ ಪ್ರಾಂತದ ಕೆಲವು ಹಕ್ಕಿಗಳೂ ಇಲ್ಲಿ ನೋಡಸಿಗುತ್ತವೆ. ಆದರೆ ಅವುಗಳ ಹೆಸರೆಲ್ಲೂ ನಮೂದಿಸಿದ್ದು ಕಾಣಲಿಲ್ಲ. ಮಳೆ ಹನಿಗಳಲ್ಲಿ ಮುಗ್ಧವಾಗಿ ಅರಳಿ ನಗುತಿದ್ದ ವಿಧ-ವಿಧದ ಸ್ನಿಗ್ಧ-ಸುಂದರ ಹೂಗಳು, ಪೈನ್ ಮರಗಳು, ತರೇವಾರಿ ಸಸ್ಯರಾಶಿ, ಇಂಬಳ ಕಡಿತಗಳು, ಮತ್ತೆ ಒಂದು ಉಲ್ಲಾಸದಾಯಕ ಟ್ರೆಕ್ಕಿಂಗ್ ಅನುಭವ! ಇವೆಲ್ಲ ಈ ಪ್ರಾಣಿ ಸಂಗ್ರಹಾಲಯ ಸುತ್ತಿದ್ದರ ಪರಿಣಾಮವಾಗಿ, ನಮಗೆ ದೊರೆತ ಹೆಚ್ಚಿನ ಬೋನಸ್ಗಳು.
ಅಲ್ಲಿಂದ ನಾವು ಗಣೇಶ್ ಟೋಕ್ಗೆರ ತೆರಳಿದೆವು. ಹಿಂದಿನ ದಿನದ ಮಳೆಯ ಪರಿಣಾಮವೋ ಏನೋ, ಸಂಪೂರ್ಣ ಮಂಜು ಕವಿದ ವಾತಾವರಣವಿತ್ತು. ಗಣೇಶನಲ್ಲದೇ ಬೇರಿನ್ನೇನೂ ಕಾಣಲಿಲ್ಲ ಈ ವ್ಯೂ ಪಾಯಿಂಟ್ನದಲ್ಲಿ ನಮಗೆ. ಭಾರತದ ಬೇರೆ ಬೇರೆ ಪ್ರಾಂತಗಳಲ್ಲಿ ಮಂತ್ರ ಹೇಳುವ ಪರಿ ಬೇರೆ-ಬೇರೆಯಾಗಿರುತ್ತದೆ. ಈ ಮಂದಿರದಲ್ಲಿ ಫೋಟೊ ತೆಗೆಯೋ ಅನುಮತಿ ಇರಲಿಲ್ಲ. ಆದರೆ ನಾ ಆ ಮಂತ್ರಗಳನ್ನ ಪಟಕ್ಕನೆ ರೆಕಾರ್ಡ್ ಮಾಡಿಕೊಂಡು ಬಿಟ್ಟೆ. 😉 ಆಮೇಲೆ, ಈ ಕಡೆಯ ದೇವಸ್ಥಾನಗಳಲ್ಲಿ ಒಣ ಕುಂಕುಮ ಇರುವುದಿಲ್ಲ. ಹಸಿ ಕುಂಕುಮ ಮತ್ತು ಅರಿಶಿನ ಎರಡೂ ಒಟ್ಟೊಟ್ಟಿಗೇ ಹಣೆಗಿಡುತ್ತಾರೆ. ಆ ಕ್ಷಣದಲ್ಲಿ ನನ್ನಲ್ಲಿನ ಕನ್ನಡತಿ ಖುಶಿಯಾಗಿಬಿಟ್ಟಿದ್ದಳು ದೇವಸ್ಥಾನದ ಹತ್ತಿರದಲ್ಲೇ ಒಂದು ನೆನಹಂಗಡಿ. ಆದರೆ ಖರೀದಿಸಬೇಕು ಅಂತ ಅನಿಸೋ ಯಾವುದೇ ನೆನಹಿನ ವಸ್ತು ನನಗೆ ಕಾಣಲಿಲ್ಲ.
ಕೆಳಗಿಳಿದು ಬಂದರೆ ಸಿಕ್ಕಿಮೀಸ್ ಸಾಂಪ್ರದಾಯಿಕ ಉಡುಪುಗಳ ಫೋಟೊ ಸೆಶನ್ ನಡೆದಿತ್ತು. ಇದರಲ್ಲಿ ಮಿಂಚಿದ್ದು ಎಂದಿನಂತೆ ನಮ್ಮ ಕನ್ನಡ ಕುವರ ನಂದನ್. ಪಕ್ಕದಲ್ಲೇ ಆಟವಾಡುತಿದ್ದ ಇನ್ನೊಬ್ಬ ಹುಡುಗಿಯ ಜೊತೆ ಕ್ಷಣದಲ್ಲೇ ಅವನ ಗೆಳೆತನವೂ ಬೆಳೆದಿತ್ತು. ಅವನ ಮುಖಾಂತರ ಕಲಿತ ಮೊದಲ ನೇಪಾಲಿ ವಾಕ್ಯ ’ತಿಮ್ರೊ ನಾಮ್ ಕೀ?’ (ನಿನ್ನ ಹೆಸರೇನು?)
ಗ್ಯಾಂಗ್ ಟಾಕ್ಗೆ ಹೋಗಲು ನಿರ್ಧಾರ ಮಾಡಿದ ಪ್ರಮುಖ ಕಾರಣಗಳಲ್ಲೊಂದು, ಕಾಂಚನಜುಂಗೆಯ ದರ್ಶನ ಪಡೆಯುವುದು. ನಮ್ಮ ಮುಂದಿನ ಸಂದರ್ಶನದ ಸ್ಥಳ ತಾಶಿ ವ್ಯೂ ಪಾಯಿಂಟ್. ಸಿಕ್ಕಿಂನ ದಿವಂಗತ ರಾಜ ತಾಶಿ ನಂಗ್ಯಲ್ ನಿರ್ಮಿಸಿದ ಈ ವ್ಯೂ ಪಾಯಿಂಟ್ನಿಂನದ ಕಾಂಚನಜುಂಗಾ ಹಿಮಾಲಯ ಶ್ರೇಣಿಯ ಉತ್ತಮ ನೋಟ ಸಿಗುತ್ತದೆ ಅಂತ ಅದಾಗಲೇ ಓದಿ ತಿಳಿದುಕೊಂಡಿದ್ದೆ. ಮಂಜು ಕವಿದ ವಾತಾವರಣವಿದ್ದರೂ ನನ್ನೊಳಗಿನ ಆಶಾವಾದ ಮೊಂಡು ಹಟ ಮಾಡಿತ್ತು. ತಾಶಿ ವ್ಯೂ ಪಾಯಿಂಟ್ ತಲುಪಿದ ಮೇಲೆ ಆಶಾವಾದ ಆ ಕ್ಷಣದಲ್ಲಿ ಸೋತಿತ್ತು… ಪ್ರಕೃತಿಯ ಮುಂದೆ ಎಂಥ ಆಶಾವಾದವಾದರೂ ತಲೆ ತಗ್ಗಿಸಲೇಬೇಕು! ಮಂಜು, ಮತ್ತು ಮಂಜನ್ನಷ್ಟೇ ಕಂಡು ತಾಶಿ ವ್ಯೂ ಪಾಯಿಂಟ್ನಿಂವದ ಮರಳಿದೆವು. ಪ್ರವಾಸದಲ್ಲಿ ಮೊದಲ ಬಾರಿಗೆ ನನ್ನ ನಿರಾಸೆ ಕಾಡಿತ್ತು!
ಅಲ್ಲಿಂದ ಮುಂದಿನ ಭೇಟಿ ನಾಂಗ್ಯಲ್ ಇನ್ಸ್ಟಿಟ್ಯೂಟ್ ಆಫ್ ಟಿಬೆಟಾಲಜಿ. ಇದು ಗ್ಯಾಂಗ್ಟಾವಕ್ನದ ಪ್ರಮುಖ ಆಕರ್ಷಣೆಗಳಲ್ಲೊಂದು ಅಂತ ಗೆಳತಿ ಅಂಜಲಿ ಮೊದಲೇ ತಿಳಿಸಿದ್ದರು. ಹೀಗಾಗಿ ಸ್ವಲ್ಪ ಕುತೂಹಲದೊಂದಿಗೇ ಈ ಸ್ಥಳ ತಲುಪಿದ್ದು. ಪ್ರವೇಶ ಟಿಕೆಟ್ ಪಡೆದು, ಎದುರಲ್ಲಿದ್ದ ಬುದ್ಧನ ಮೂರ್ತಿಯ ದರ್ಶನ ಪಡೆದು, ಒಳ ಹೊಕ್ಕಾಗ ಕಂಡದ್ದು ಹೊಸ ಪ್ರಪಂಚ. ಬೌದ್ಧ ಧರ್ಮದ ಬಗ್ಗೆ ಹೆಚ್ಚು ತಿಳಿದುಕೊಂಡಿರದ ನನಗೆ, ಹಲವಷ್ಟು ಹೊಸ ವಿಷಯಗಳು ಕಣ್ಣಿಗೆ ಬಿದ್ದವು.
ಬುದ್ಧನ ಹನ್ನೆರಡು ಕೃತ್ಯಗಳು, ಬೌದ್ಧ ಗುರುಗಳಿಗೆ ಏಳು ಬಟ್ಟಲುಗಳಲ್ಲಿ ನೀರಿನ ಸಮರ್ಪಣೆ, ವಿವಿಧ ಬುದ್ಧನ ಮೂರ್ತಿಗಳು, ಹಳೆಯ ಟಿಬೆಟನ್ ನಾಣ್ಯಗಳು… ಹೀಗೆ ನೋಡಿದಲ್ಲೆಲ್ಲ, ನನಗೆ ಈ ಮುಂಚೆ ಗೊತ್ತೇ ಇರದ ಎಷ್ಟೊಂದು ಮಾಹಿತಿಗಳು. ಇದಷ್ಟೇ ಅಲ್ಲದೇ ಭೂತಾನ್ನಾ ಹಲವಾರು ವಿರಳ ಸಂಗೀತ ವಾದ್ಯಗಳು, ಥಂಕಾ ಕೈ ಕುಸುರಿಯಲ್ಲಿ ಅರಳಿದ ಬುದ್ಧನ ವಿವಿಧ ಅವತಾರಗಳು, ಬೌದ್ಧ ಧರ್ಮದ ಹಲವು ಹಸ್ತಲಿಖಿತ, ಮೂಲ ಪುಸ್ತಕಗಳು, ಕಪಾಲಿ, ಮತ್ತಿತರ ಪೂಜನೀಯ ವಸ್ತುಗಳು, ಹೀಗೇ ಇಲ್ಲಿನ ಸಂಗ್ರಹ ಅದ್ಭುತವಾಗಿದೆ. ಈ ಸಂಗ್ರಹಾಲಯಕ್ಕೆ ಹೊಂದಿಕೊಂಡಂತೇ ಒಂದು ಗ್ರಂಥಾಲಯವೂ ಇದೆ, ಅಲ್ಲಿ ಲೆಪ್ಚಾ ಮತ್ತು ಸಂಸ್ಕೃತದ ಹತ್ತು-ಹಲವು ಹಸ್ತಪ್ರತಿಯ ಕೃತಿಗಳು, ಅಗಾಧ ಸಂಖ್ಯೆಯ ಟಿಬೆಟನ್ ಅನುವಾದಿತ ಕೃತಿಗಳು, ಟಿಬೆಟನ್ ಬೌಧ್ಧ ಧರ್ಮದ ತಂತ್ರ ವಿದ್ಯೆಯ ಕುರಿತಾದ ಪುಸ್ತಕಗಳ ಉತ್ತಮ ಸಂಗ್ರಹವಿದೆ. ಇದುವರೆಗೂ ಹೆಚ್ಚಾನು ಹೆಚ್ಚು ಪ್ರಕೃತಿಯಲ್ಲೇ ಕಳೆದು ಹೋಗಿದ್ದ ನನಗೆ, ಈ ಸಂಗ್ರಹಾಲಯದ/ಗ್ರಂಥಾಲಯದ ಸಂದರ್ಶನ, ಹೊಸ ವಿಷಯಗಳ ದರ್ಶನ ಮಾಡಿಸಿದ್ದಂತೂ ನಿಜ.
ಟಿಬೆಟನ್ ವಾಸ್ತುವಿನ್ಯಾಸದ ಮಾದರಿಯಲ್ಲಿ ಕಟ್ಟಿರುವ ಈ ಪ್ರಸಿದ್ಧ ಸಂಗ್ರಹಾಲಯವನ್ನು ೧೯೫೮ರಲ್ಲಿ ತಾಶಿ ನಂಗ್ಯಲ್ ನಿರ್ಮಿಸಿದ್ದರು. ಭಾರತದ ಆಗಿನ ಪ್ರಧಾನಿ ಜವಾಹರಲಾಲ್ ನೆಹರು, ಅದೇ ವರ್ಷದ ಅಕ್ಟೋಬರ್ ೧ ರಂದು ಈ ಸಂಗ್ರಹಾಲಯವನ್ನು ಉದ್ಘಾಟನೆ ಮಾಡಿದ್ದರು.
ಈಗಷ್ಟೇ ಮೂಡಿದ ಹೊಸ ತಿಳುವಳಿಕೆಯನ್ನೇ ಮೆಲುಕು ಹಾಕುತ್ತ ನಡೆದದ್ದು ಗ್ಯಾಂಗ್ಟಾಯಕ ರೋಪ್ವೇುಯ ಕೇಬಲ್ ಕಾರ್‌ನಲ್ಲಿ ಸವಾರಿ ಮಾಡಲು. ಗ್ಯಾಂಗ್ಟಾಾಕ್ ರೋಪ್ವೇೇ ಡಿಯೊರಾಲಿ ಮತ್ತು ತಾಶಿಲಿಂಗ್ ಮಧ್ಯದಲ್ಲಿ ಕಾರ್ಯ ನಿರ್ವಹಿಸುತ್ತದೆ, ಮತ್ತು ಒಟ್ಟಿನಲ್ಲಿ ಮೂರು ನಿಲುಗಡೆಗಳನ್ನು ಹೊಂದಿದೆ, ರೂ ೭೦, ಒಬ್ಬರ ಟಿಕೆಟ್ ಶುಲ್ಕ. ಈ ಕೇಬಲ್ ಕಾರ್ ಪ್ರಯಾಣ ಗ್ಯಾಂಗ್ಟಾಮಕ್ನಗ ಒಳ್ಳೆಯ ಪಕ್ಷಿನೋಟ ನೀಡುತ್ತದೆ. ಮಂಜು ಸ್ವಲ್ಪ ಸರಿದದ್ದರಿಂದ ಈ ಪಕ್ಷಿ ನೋಟ ನೋಡುವ ಅದೃಷ್ಟವನ್ನು ಪ್ರಕೃತಿ ದೇವಿ ನಮಗೂ ದಯಪಾಲಿಸಿದ್ದಳು.
ಇಷ್ಟೊತ್ತಿಗಾಗಲೇ ಸಂಜೆ ಹತ್ತಿರವಾಗುತ್ತಿತ್ತು (ಇಲ್ಲಿ ೬ ಗಂಟೆಗೆಲ್ಲ ದಟ್ಟ ರಾತ್ರಿ) ರಿಡ್ಜ್ ಗಾರ್ಡನ್ನ್ಲ್ಲಿರುವ ಪುಷ್ಪ ಪ್ರದರ್ಶನಕ್ಕೆ ಒಂದು ತ್ವರಿತ ಭೇಟಿ ಕೊಟ್ಟು, ನಂತರ ಅಲ್ಲಿಂದ ತೆರಳಿದ್ದು ಡೈರೆಕ್ಟರೇಟ್ ಆಫ್ ಹ್ಯಾಂಡಿಕ್ರಾಫ್ಟ್ಸ್ & ಹ್ಯಾಂಡ್‌ಲೂಮ್ಸ್ಗೆದ. ಸಿಕ್ಕಿಂ ಸರ್ಕಾರದಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಸಂಸ್ಥೆ, ಸಿಕ್ಕಿಂ ರಾಜ್ಯದ ಸಾಂಪ್ರದಾಯಿಕ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಉತ್ತಮ ಸಂಗ್ರಹ ಹೊಂದಿದೆ. ಇಲ್ಲಿನ ಥಂಕಾ ಪೇಂಟಿಂಗ್ಗಿಳು, ಚೋಕ್ಟ್ಸೆಗಳು ( ಕರ ಕೌಶಲ್ಯದಿಂದ ತಯಾರಾದ ಬಣ್ಣ-ಬಣ್ಣದ ಮಡಚಬಹುದಾದ ಮೇಜುಗಳು), ಶಾಲ್, ಗೊಂಬೆಗಳು ಗಮನ ಸೆಳೆಯುತ್ತವೆ. ಕಾಂಚನಜುಂಗಾ ಕನಸಲ್ಲಿದ್ದ ನಾನು ಹಿಮಾಲಯದತ್ತ ಮುಖ ಮಾಡಿ ನಿಂತ ಹೆಣ್ಣೊಬ್ಬಳ ಪೇಂಟಿಂಗ್ ಖರೀದಿಸಿ, ಅಲ್ಲಿಂದ ಹೊರಬಿದ್ದೆ.
ಆವತ್ತಿನ ಪಟ್ಟಿಯ ಕೊನೆಯ ಸ್ಥಳ ಎಮ್.ಜಿ. ಮಾರ್ಗ. ನಗರದ ಹೃದಯ ಭಾಗದಲ್ಲಿರುವ ಈ ವಾಹನರಹಿತ, ಅಗಲ ರಸ್ತೆ, ಬೆಂಗಳೂರಿನ ಎಮ್.ಜಿ. ರೋಡಿನಂತೆಯೇ ನಳ-ನಳಿಸುವ ರಸ್ತೆ. ನಮ್ಮ ಅದೃಷ್ಟಕ್ಕೆ ಮುಸ್ಸಂಜೆ ಮಳೆ ಜೋರು… ರಸ್ತೆ ಬದಿಯಲ್ಲಿರುವ ಅಂಗಡಿಗಳಲ್ಲಿ ಮಳೆಯಿಂದ ಬಚಾವಾಗಲು ಆಶ್ರಯ ಪಡೆದು ಜನ ನಿಂತಿದ್ದರೆ, ನಾವು ಒಂದೇ ಕೊಡೆಯಡಿಯಲ್ಲಿ, ರಿಮ್-ಝಿಮ್, ರಿಮ್-ಝಿಮ್! ಸುತ್ತಲಿರುವ ಹೋಟೆಲ್ ಗಳು, ಅಂಗಡಿಗಳು, ನಿಂತಿದ್ದ ಜನರ ಮೇಲೆ ಕಣ್ಣಿಗಾದಷ್ಟು (ಕೈಲಾದಷ್ಟು ಅನ್ನೋ ಶೈಲಿಯಲ್ಲಿ ;-)) ನಮ್ಮ ದೃಷ್ಟಿ ಹರಿಸಿ, ಆ ದೃಷ್ಟಿಯಲ್ಲಿ ಅದೇನೇನು ಕಾಣಿಸಿತೋ ಅದನ್ನೆಲ್ಲ ಒಳಗಿಳಿಸಿ, ಕಾರ್ ತಲುಪುವಷ್ಟರಲ್ಲಿ ಹರ-ಹರ… ಮಳೆಯಲ್ಲಿ ತಕ್ಕ ಮಟ್ಟಿಗೆ ನೆನೆದಿದ್ದ ನಾವು ಥರ-ಥರ! 🙂
(ಗ್ಯಾಂಗ್ಟಾಟಕ್ನಲಲ್ಲಿ ನಾವು ಸಂದರ್ಶಿಸಲು ಸಾಧ್ಯವಾದ ಏಕಮಾತ್ರ ಆದರೆ ಪ್ರಮುಖ ಬೌದ್ಧ ಮಠವಾದ ರುಮ್ಟೆ ಕ್ ಮೊನಾಸ್ಟರಿ ಬಗ್ಗೆ, ಮುಂದಿನ ಕಂತಿನಲ್ಲಿ… ನಿರೀಕ್ಷಿಸಿ!)
(ಮುಂದುವರಿಯುತ್ತದೆ…)







ಇಂದಿನ ಕಂತು ಇನ್ನಷ್ಟು ರುಚಿಸಿತು. ‘ನೆನಹಂಗಡಿ’ ಪದ ಇಷ್ಟವಾಯಿತು. ‘ಮೊಮೊ’ ಅಂದರೇನು? ವಿವರಿಸಬೇಕಿತ್ತು. ಅದು ಕಿವೆಟ್ ಅಲ್ಲ, ಸಿವೆಟ್ ಹಾಗಂದರೆ ಪುನುಗಿನ ಬೆಕ್ಕು. (ಅಂದ ಹಾಗೆ ಈ ಸಿವೆಟ್ ಬೆಕ್ಕಿನ ಸ್ಪಷ್ಟ ಫೋಟೋ ಏನಾದರೂ ನಿಮ್ಮಲ್ಲಿ ಸಿಗಬಹುದೇ?) ‘ಪಾಮ್ ಸಿವೆಟ್’ಗಳು ನಮ್ಮ ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿಯೂ ಇವೆ. ಇವು ಕಾಫಿ ಹಣ್ಣುಗಳನ್ನು ತಿಂದು ಹಾಕುತ್ತವೆಂದು ತೇಜಸ್ವಿ ಬರೆದಿದ್ದಾರೆ. ‘ತಿಮ್ರೋ ನಾಮ್ ಕೀ?’ ಅರ್ಥ ಮಾಡಿಕೊಳ್ಳಲು ತುಂಬ ಸುಲಭ. ‘ತಿಮ್ರೋ’ಎಂಬುದು ‘ತುಮರೋ’ದಂತೆಯೇ ಕೇಳಿಸುತ್ತದಲ್ಲ… ನೀವು ಭಾರತದ ಉತ್ತರ ಭಾಗದ ಯಾವುದೇ ಜಾಗಕ್ಕೆ ಹೋದರೂ ಅಲ್ಲಿಯ ಭಾಷೆ ನಮಗೆ ಅಷ್ಟಿಷ್ಟು ತಿಳಿಯುವ ಹಾಗಿರುತ್ತದೆ.
ನಾಳಿನ ಕಂತಿಗಾಗಿ ಕಾಯುವೆ.
ಓಹೋ! ನಾ ಅದರ ಉಚ್ಛಾರವನ್ನು ಪರೀಕ್ಷಿಸಲಿಲ್ಲ, ಅದು ನಿಜ. ತಪ್ಪೊಪ್ಪಿಗೆ 🙂 ನಿಮ್ಮ ಮೆಚ್ಚುಗೆ ಮತ್ತು ತಿದ್ದುಪಡಿ ನೀಡಿದ ಪರಿ ಎರಡಕ್ಕೂ ಶರಣು 🙂 ಮೊಮೊ ಎಂದರೆ ಒಂದು ತರಹದ ತಿನಿಸು. ನಮ್ಮ ಮೋದಕದಂತೆಯೇ ತಯಾರಿಸುವುದು. ಒಳಗೆ ತುಂಬುವ ಹೂರಣ ಮಾತ್ರ ತರಕಾರಿ. ಉಪ್ಪಿನಕಾಯಿ ಇಲ್ಲವೇ ಚಟ್ನಿ ಹಚ್ಕೊಂಡು ತಿನ್ನಬಹುದು.ಸಿವೆಟ್ ಬೆಕ್ಕಿನ ಚಿತ್ರಗಳಿವೆ.. ಪಂಜರದಲ್ಲಿದ್ದುರಿಂದ ಸ್ಪಷ್ಟತೆ ಅಷ್ಟಿಲ್ಲ.
ಬರಹ ತು೦ಬಾ ಚೆನ್ನಾಗಿದೆ. ಚುಮು ಚುಮು ಚಳಿಯಲ್ಲಿ ನಾವೇ ಸುತ್ತಾಡಿತ ಅನುಭವ. ಅ೦ದ ಹಾಗೆ ಸಿವೆಟ್ ಅ೦ದರೆ ಪುನುಗು ಬೆಕ್ಕು. ಆ ಬೆಕ್ಕಿನ ಮೈಗೆ ಪರಿಮಳ ಇರುತ್ತಂತೆ. ಅದನ್ನು ಅತ್ತರು ತಯಾರಿಯಲ್ಲಿ ಬಳಸುತ್ತಾರೆ.
ಇದಪ್ಪಾ ನನಗೆ ಖುಷಿಕೊಟ್ಟ ವಿಚಾರ, ಮಾಂಸಾಹಾರಿಗಳಿಗೆ ವೈವಿಧ್ಯತೆ ಇದೆಯಂತೆ!
ಜುವಾಕಜಿಕಲ್ ಪಾರ್ಕ್ ಎಂದರೆ ನನಗೆ ಮನಸ್ಸಿಗೆ ಮೊದಲು ತೋಚಿದ್ದು ಊಟಿಯ ಕರ್ನಾಟಕ ಸರ್ಕಾರದ ನಿರ್ವಹಣೆಯಲ್ಲಿರುವ ಬೊಟಾನಿಕಲ್ ಪಾರ್ಕ್. ಜುವಾಲಜಿಕಲ್ ಪಾರ್ಕಿನ ವರ್ಣನೆ ಇಷ್ಟವಾಯಿತು.
ಮಗುವಿನ ಚಿತ್ರ ಬಲು ಮುದ್ದಾಗಿತ್ತು.
೩ನೇ ಕಂತೂ ರೋಚಕವಾಗಿತ್ತು.
good info..chennagide. @ wajapeyi sir, momo is a kind od dish just like our ganesha “modaka”.. Olagade kobri mithayi irolla ashte..chicken or veg haki madtare..nanage allina chkn momo tumba ishta agittu.. 😉
-Rj
ನಿಮ್ಮ ಪಾಲಿಗೆ ‘ನೆನಹಂಗಡಿ’ಯಲ್ಲಿ ಏನೂ ಸಿಗಲಿಲ್ಲಾಂತ ಡೋಂಟ್ ವರಿ ಮಾಡ್ಕೋಬೇಡಿ. ನಮಗೆ ಧಾರಾಳ ಸಿಕ್ತಾ ಇದೆ, ಈ ಸರಣಿಯ ಮೂಲಕ…..:)
ವಾಹ್…!! ಎಂತಹಾ ವಾತಾವರಣ ನಾವೇ ಟ್ರಿಪ್ ಮಾಡಿ ಬಂದ ಹಾಗೆ ಆಯ್ತು.. ಹೂ ಮಾಂಸಾಹಾರಿಗಳಿಗೆ ವೈವಿಧ್ಯತೆ ಇರುತ್ತೆ ತಿನ್ನೋದ್ರಲ್ಲಿ ಹಹಹ..:)
nale nammannella ellige karedukondu hogutterri ri! 🙂
ಜುವಾಲಜಿಕಲ್ ಪಾರ್ಕ್ ನ ವರ್ಣನೆ ಚೆನ್ನಾಗಿದೆ,ನನ್ನ ನೆನಹಿನಂಗಡಿಗೆ ನಿಮ್ಮ ಬರಹಗಳು ಸೇರ್ಪಡೆಯಾಗುತ್ತದೆ,ಮುಂದೊಮ್ಮೆ ನಾನು ಇಲ್ಲಿಗೆ ಪ್ರವಾಸ ಹೋದಲ್ಲಿ ಇವು ಒಳ್ಳೆಯ ಮಾರ್ಗದರ್ಶಿ.ನೇಪಾಳೀ ಭಾಷೆಯ ವಾಕ್ಯವನ್ನು ಹಲವು ಬಾರಿ ಹೇಳಿಕೊಂಡು ಆನಂದಿಸಿದೆ….ನನಗೇ ಮಧುರವಾಗಿ ಮಕ್ಕಳನ್ನು ಮಾತಾಡಿಸೋ ಥರ ಕೇಳಿಸ್ತು,ನಿಮ್ಮ ಮಗನಂತೂ ಮುದ್ದು ಮುದ್ದು….ದೃಷ್ಟಿ ತೆಗೆಯಿರಿ
ಚೆನ್ನಾಗಿದೆ photos ಮತ್ತೆ ಬರೆದಿದ್ದು…enjoyed reading
I just completed reading part 3… ಹೀಗೆ ಹರಿಯಲಿ ನಿಮ್ಮ ಪ್ರವಾಸದ ಅನುಭವ ಝರಿ..!!
ಮೆಚ್ಚಿದ ಎಲ್ಲರಿಗೂ ಧನ್ಯವಾದ 🙂
Namaskaara. We plan to visit Gangtok in 3rd week of Mar. ’15. Could you please suggest some budget hotels?