ಎಸ್ ಬಿ ಜೋಗೂರ್
ಚಾರಿತ್ರಿಕ ಘಟನೆ, ವ್ಯಕ್ತಿ, ಸ್ಥಳ ಮುಂತಾದವುಗಳನ್ನು ಆಧರಿಸಿ ಚಲನಚಿತ್ರವನ್ನು ನಿರ್ಮಿಸುವುದು ಒಂದು ಸಾಹಸವೇ ಹೌದು. ಸಮಕಾಲೀನ ಸಂದರ್ಭದಲ್ಲಿ ಗತಕಾಲದ ಘಟನೆಗಳು ವಿಭಿನ್ನವಾದ ಸಾಂಸ್ಥಿಕ ಮೂಲಗಳಿಂದ ಗ್ರಹಿಸಲ್ಪಡುತ್ತವೆ ಮತ್ತು ತಮ್ಮ ತಮ್ಮ ಗ್ರಹಿಕೆಯ ನಿರೂಪಣೆಯ ಮೂಲಕವೇ ವಿವರಿಸುವ ಯತ್ನವೂ ನಡೆದಿರುತ್ತದೆ. ಹಾಗಾಗಿಯೇ ಸಾರೂಪ್ಯ ಎನ್ನಬಹುದಾದ ಕೃತಿಗಳು ಮತ್ತು ಅಲ್ಲಿಯ ವಿವರಣೆ ತೀರಾ ಅಪರೂಪ. ಪ್ರಥಮ ಜಾಗತಿಕ ಮಹಾಯುದ್ಧದ ಬಗೆಗಿನ ವಿವರಣೆಯನ್ನೇ ನೀವು ನೋಡಿ ಎಲ್ಲೂ ಕೂಡಾ ಹಾನಿಯ ವಿವರಗಳಲ್ಲಿ ಸಾರೂಪ್ಯತೆ ಇರಲಾರದು. ಭಾರತೀಯ ಚರಿತ್ರೆಕಾರನ ವಿವರಗಳು ಬ್ರಿಟನ್ ನ ಇರಿಹಾಸಕಾರನ ವಿವರಗಳಿಗಿಂತಲೂ ಭಿನ್ನಗಿರುತ್ತವೆ. ಇನ್ನು ಪ್ರಾದೇಶಿಕ ಭಾಷೆಯಲ್ಲಿ ರಚಿಸಲಾದ ಇತಿಹಾಸದ ಕೃತಿಗಳಂತೂ ಇನ್ನಷ್ಟು ವಿಭಿನ್ನವಾಗಿರುತ್ತವೆ. ಹೀಗಾದಾಗ ಒಂದು ಪ್ರಮುಖ ಚಾರಿತ್ರಿಕ ಘಟನೆ ಮತ್ತು ವ್ಯಕ್ತಿಯ ಬಗೆಗಿನ ಚಿತ್ರಣಗಳನ್ನು ವಸ್ತು ನಿಷ್ಟವಾಗಿ ಕಟ್ಟಿಕೊಡುವುದು ಅತ್ಯಂತ ಕಷ್ಟ.

ಅದರಲ್ಲೂ ಮಹಾತ್ಮ ಗಾಂಧಿಯಂಥಾ ಗ್ರಹಿಕೆಗೂ..ಓದಿಗೂ ಸಿಗದೇ ಇರುವ ವ್ಯಕ್ತಿತ್ವಗಳನ್ನು ಆಧರಿಸಿ ಸಿನೇಮಾ ಮಾಡುವುದು ತುಂಬಾ ಕಷ್ಟದ ಕೆಲಸ. 1980 ರ ದಶಕದಲ್ಲಿ ಆ ಕೆಲಸ ಇನ್ನೂ ಕಷ್ಟ. ಬಹುಷ: ನಾನಾಗ ಎಂಟನೆಯ ತರಗತಿಯಲ್ಲಿದ್ದೆ. 1982 ರಲ್ಲಿ ರಿಚರ್ಡ ಅಟನ್ ಬರೋ ನಿಮರ್ಾಣದ ಅದ್ಧೂರಿ ಸಿನೇಮಾ ‘ಗಾಂಧಿ’ ತೆರೆಗೆ ಬಂದಿತ್ತು. ಅಲ್ಲಿಯವರೆಗೆ ಹಾಗೂ ಆ ನಂತಾರವೂ ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿರುವ ಅನೇಕ ಮಹನೀಯರ ಬಗೆಗೆ ಸಿನೇಮಾಗಳನ್ನು ರೂಪಿಸಲಾಗಿತ್ತಾದರೂ ಅವಾವವೂ ‘ಗಾಂಧಿ’ ಬಗ್ಗೆ ಪಡೆದ ಜನಪ್ರಿಯತೆಯನ್ನು ಪಡೆಯಲಿಲ್ಲ. ಅದಕ್ಕೆ ಕಾರಣವೂ ಇತ್ತು. ಅಟನ್ ಬರೊ ಗಾಂಧಿಯ ಬಗ್ಗೆ ಸಿನೇಮಾ ಮಾಡುವಾಗ ಸುಮಾರು ಎರಡು ದಶಕಗಳ ಕಾಲ ಆ ಬಗ್ಗೆ ಸಾಕಷ್ಟು ಅಧ್ಯಯನ, ಸಂಶೋಧನೆ ಮಾಡಿ ಗಾಂಧಿ ಬಗ್ಗೆ ಇಡೀ ಜಗತ್ತು ಬೆರಗುಗೊಳ್ಳಬಹುದಾದ ರೀತಿಯಲ್ಲಿ ಸಿನೇಮಾ ಒಂದನ್ನು ರೂಪಿಸಿ ಸುಮಾರು 8 ಆಸ್ಕರ್ ಅವಾರ್ಡ್ ಪಡೆಯುವಲ್ಲಿ ಯಶಸ್ಸಾದದ್ದು ಸಾಮಾನ್ಯವಾದ ಕತೆಯಲ್ಲ. ಆಗಿನ ಸಂದರ್ಭದಲ್ಲಿಯೇ ಸುಮಾರು 12 ಕ್ಯಾಮೆರಾಗಳನ್ನು ಬಳಸಿಕೊಂಡು ಅಟನ್ ಬರೊ ಗಾಂಧಿ ಚಿತ್ರದ ಕ್ಲೈಮ್ಯಾಕ್ಸ್ ನ್ನು ಶೂಟ್ ಮಾಡಿದ್ದರು. ಹಾಗೆ ಶೂಟ್ ಮಾಡುವಾಗ ಎರಡನೆಯ ಯುನಿಟ್ ಲ್ಲಿ ಕ್ಯಾಮರಾ ಮೆನ್ ಆಗಿ ನಮ್ಮವರೇ ಆದ ಜಿ.ಎಸ್.ಭಾಸ್ಕರ್ ಅವರು ಕೆಲಸ ಮಾಡಿದ್ದರು.

ಬ್ರಿಟನ್ ಮೂಲದ ಚಿತ್ರನಿರ್ಮಾಪಕ, ನಿರ್ದೇಶಕ ನಮ್ಮ ನೆಲದಲ್ಲಿ ಒಂದು ಅದ್ಭುತವಾದ ಸೆಟ್ ಹಾಕಿ ಗಾಂಧಿ ಯವರ ಅಂತ್ಯಸಂಸ್ಕಾರ ದ ಸನ್ನಿವೇಶವನ್ನು ನಮ್ಮ ಕಣ್ಣೆದುರಲ್ಲಿಯೇ ಘಟಿಸುತ್ತಿರುವಂತೆ ಚಿತ್ರಿಸಿದ್ದರು. ಆ ಸನ್ನಿವೇಶಕ್ಕಾಗಿಯೇ ಸುಮಾರು 4 ಲಕ್ಷ ಜನರನ್ನು ಅವರು ಒಂದೆಡೆ ಸೇರಿಸಿರುವದಿತ್ತು. ಸುಮಾರು ಹದಿನೈದು ದಿನಗಳ ಕಾಲ ಬಿಟ್ಟೂ ಬಿಡದೇ ಆ ಸೀನ್ ಗಾಗಿ ಮತ್ತೆ ಮತ್ತೆ ತಾಲೀಮು ಮಾಡುವ ಮೂಲಕ ಅದನ್ನು ತಮ್ಮ ಮನಸು ಒಪ್ಪುವವರೆಗೂ ಬಿಡದೇ ಚಿತ್ರೀಕರಿಸಿದ ಅಟೆನ್ ಬರೋ, ಗಾಂಧಿ ಒಬ್ಬ ದೇವನಮಾನವನಂತೆ ಗ್ರ್ರಹಿಸುತ್ತಿದ್ದ ಜನರಿಗೆ ಅವರೂ ಒಬ್ಬ ನಮ್ಮ ನಿಮ್ಮ ಹಾಗೆಯೇ ಒಬ್ಬ ಮನುಷ್ಯ ತನ್ನ ಅಗಾಧವಾದ ಇಚ್ಚಾಶಕ್ತಿ ಮತ್ತು ಹೋರಾಟದ ಮನೋಭಾವದಿಂದ ಮಹಾತ್ಮರಾದ ಬಗೆಯನ್ನು ಅತ್ಯಂತ ವಸ್ತುನಿಷ್ಟವಾಗಿ ಅಟೆನ್ ಬರೊ ತೋರಿರುವದಿದೆ.
ಗಾಂಧಿ ಪಾತ್ರ ಮಾಡಿದ ಬಿನ್ ಕಿಂಗ್ಸ್ಲೆ ಕೂಡಾ ಗಾಂಧೀಜಿಯವರ ಹಾವ ಭಾವಗಳನ್ನು ಅನೇಕ ತಿಂಗಳುಗಳ ಕಾಲ ಅಧ್ಯಯನ ಮಾಡಿ ಆ ಪಾತ್ರಕ್ಕೆ ಜೀವ ತುಂಬಿದರು. ಆ ಪಾತ್ರಕ್ಕೂ ಆಸ್ಕರ್ ಪ್ರಶಸ್ತಿ ಲಭ್ಯವಾಗಿರುವದಿದೆ. ಇಡೀ ಚಿತ್ರದಲ್ಲಿ ಅಟೆನ್ ಬರೊ ಎಲ್ಲೂ ಗಡಿಬಿಡಿ ಮಾಡಿದಂತೆ ತೋರುವದಿಲ್ಲ. ಗಾಂಧಿ ಚಿತ್ರ ಎಲ್ಲೂ ಉತ್ಪ್ರೇಕ್ಷೆಯನ್ನು ಬಿಂಬಿಸುವ ಯತ್ನ ಮಾಡಿಲ್ಲ. ಅದೇ ಗಾಂಧಿ ಚಿತ್ರದ ಯಶಸ್ಸಿನ ಬಹು ಮುಖ್ಯ ಸೂತ್ರ. ಈ ಸಿನೇಮಾ ನಿರ್ಮಾಣದ ಸಂದರ್ಭದಲ್ಲಿ ಅಟೆನ್ ಬರೊ ಅಪಾರ ಪ್ರಮಾಣದ ಹಣಕಾಸಿನ ತೊಂದರೆಯನ್ನು ಎದುರಿಸಬೇಕಾಯಿತು. ಈ ಬಗೆಯ ಚಿತ್ರ ನಿಮರ್ಾಣಕ್ಕೆ ಕೈ ಹಾಕಿದ್ದೇ ತಪ್ಪಾಯಿತೇನೋ ಎನ್ನುವಂತಾಯಿತು. ಅದೂ ಅಲ್ಲದೇ ಸಿನೆಮಾ ಉದ್ಯಮದಲ್ಲಿರುವವರು ಈ ಚಿತ್ರಕ್ಕೆ ಅಟೆನ್ ಬರೊ ಹೀಗೆ ಹಣ ಸುರಿಯುತ್ತಿರುವದರಲ್ಲಿ ಯಾವ ಅರ್ಥವೂ ಇಲ್ಲ. ಎಂದು ಮಾತನಾಡಿಕೊಳ್ಳ್ಲುತ್ತಿರುವದೂ ಇತ್ತು. ಇದಾವುದನ್ನೂ ಲೆಕ್ಕಿಸದೇ ಮನೆ ಮಾರಾಟಮಾಡಿಯೂ ಹಣ ಹೂಡಿದ. ಅಟೆನ್ ಬರೊ ಆ ಸಂದರ್ಭದಲ್ಲಿ ಸುಮಾರು 22 ಮಿಲಿಯನ್ ಡಾಲರ್ ಹಣವನ್ನು ತೊಡಗಿಸಿದ. ಚಿತ್ರ ಅವನ ನಿರೀಕ್ಷೆಯನ್ನು ಮೀರಿಯೂ ಗಲ್ಲಾ ಪಟ್ಟಿಗೆಯಲ್ಲಿ ದಾಖಲೆ ಮಾಡಿತು. ಅವನು ಹಣ ಹೂಡಿದ ಮೊತ್ತದ ಇಪ್ಪತ್ತು ಪಟ್ಟು ಹೆಚ್ಚು ಹಣವನ್ನು ಚಿತ್ರ ಗಳಿಸಿತು. ಬರೀ ಹಣ ಮಾತ್ರವಲ್ಲ ಅಪಾರ ಪ್ರಮಾಣದ ಪ್ರಶಸ್ತಿಗಳನ್ನು ಬಾಚಿಕೊಂಡಿತು.
ಅಟೆನ್ ಬರೊ ಮೂಲಭೂತವಾಗಿ ಒಬ್ಬ ನಟನಾಗಿರುವದರಿಂದ ಪ್ರತಿಯೊಂದು ಪಾತ್ರದ ಅಭಿನಯವನ್ನು ತನ್ನ ನಿರೀಕ್ಷೆಗೆ ಬರುವವರೆಗೂ ಬಿಟ್ಟವನಲ್ಲ. ಗಾಂಧಿ ಚಿತ್ರದ ಕೊನೆಯ ದೃಶ್ಯದಲ್ಲಿ ಗಾಂಧಿಯ ಶವದ ಮೆರವಣಿಗೆಯ ಸಂದರ್ಭದಲ್ಲಿ ಶವವಾಗಿ ಮಲಗಿದವನು ಡ್ಯುಪ್ ಆಗಿದ್ದ. ಆದರೆ ಗಾಂಧಿಯನ್ನು ಅಂತ್ಯಕ್ರಿಯೆಯ ಸಂದರ್ಭದಲ್ಲಿ ಹತ್ತಿರದಿಂದ ತೊರಬೇಕಾದ ಕಾರಣ ಡ್ಯೂಪ್ ಕೆಲಸಕ್ಕೆ ಬರುವದಿಲ್ಲ ಎಂದು ಖಾತ್ರಿಯಾಯಿತು. ಗಾಂಧಿ ಮುಖವನ್ನು ಕ್ಲೋಜ್ ಅಪ್ ಲ್ಲಿ ತೋರಬೇಕಿದ್ದರಿಂದ ಗಾಂಧಿ ಪಾತ್ರದಾರಿ ಬಿನ್ ಕಿಂಗ್ಸಲೇ ನನ್ನು ಕರೆಯಿಸಿ ಹಾಗೆ ಶವವಾಗಿಸಿ ಮಲಗಿಸಿ ಗಾಂಧಿಯ ಕೊನೆಯ ಮುಖ ದರ್ಶನ ಮಾಡಿಸಿದ್ದರು. ಗಾಂಧಿ ಬಗೆಗೆ ಬಾಲ್ಯದಿಂದಲೇ ಅಗಾಧವಾದ ಕುತೂಹಲವಿದ್ದ ಅಟನ್ ಬರೊ ಭವಿಷ್ಯದಲ್ಲಿ ಗಾಂಧಿ ಕುರಿತು ಇಂಥಾ ಒಂದು ಅದ್ಧೂರಿ ಚಿತ್ರವೊಂದನ್ನು ಮಾಡಬಹುದು ಅಂದುಕೊಂಡಿರಲಿಲ್ಲ. ಗಾಂಧಿ ಸಿನೆಮಾ ಬಗ್ಗೆ ಅವನಿಗೆ ಅದ್ಯಾವ ಬಗೆಯ ಆತ್ಮವಿಶ್ವಾಸ ಇತ್ತೆಂದರೆ ತನ್ನ ಮನೆ ಮಾರಿ ದುಡ್ಡು ಹೂಡಲು ಕೂಡಾ ಆತ ಹಿಂಜರಿಯಲಿಲ್ಲ. ಬಿಡುಗಡೆಯ ಸಂದರ್ಭದಲ್ಲಿಯೂ ಅನೆಕ ಅಡೆತಡೆಗಳು ಎದುರಾದವು. ಚಿತ್ರದ ಕೊನೆಯ ಹಂತದಲ್ಲಂತೂ ಗಾಂಧಿ ಪಾತ್ರದಾರಿ ಬೆನ್ ಕಿಂಗ್ಸ್ಲೇ ಗೆ ಬೆದರಿಕೆಯ ಕರೆಗಳು ಬರಲಾರಂಭಿಸಿದವು. ಇವೆಲ್ಲ ಧಾವಂತಗಳ ನಡುವೆಯೂ ಗಾಂಧಿ ಚಿತ್ರ ಅತ್ಯಂತ ರಿಚ್ ಆಗಿ ಮೂಡಿ ಬಂದಿತ್ತು. ಖರೆ ಖರೆ ಗಾಂಧಿ ಹೇಗಿದ್ದರು ಎನ್ನುವದನ್ನು ಇಡೀ ಜಗತ್ತಿಗೆ ಮತ್ತೊಮ್ಮೆ ಅಟೆನ್ ಬರೋ ತೋರಿಸಿಕೊಟ್ಟಿದ್ದರು. ‘ದ ಗ್ರೇಟ್ ಎಸ್ಕೇಪ್’ ಚಿತ್ರದ ಮೂಲಕ ಒಬ್ಬ ಅತ್ಯುತ್ತಮ ನಟ ಎಂದು ಹಾಲಿವುಡ್ ಲ್ಲಿ ಸಾಬೀತು ಮಾಡಿದ್ದ ಅಟನ್ ಬರೋ ಸತ್ಯಜಿತ್ ರೇ ಚಿತ್ರ ‘ದ ಚೆಸ್ ಪ್ಲೇಯಸರ್್’ ಎನ್ನುವದರಲ್ಲಿಯೂ ನಟಿಸಿದ್ದರು. ಆ ಮೂಲಕ ರೇ ಚಿತ್ರದಲ್ಲಿ ನಟಿಸಿದ ಬಗ್ಗೆ ಅಪಾರ ಹೆಮ್ಮೆ ಪಡುತ್ತಿದ್ದರು. ಅವನನ್ನು ಹತ್ತಿರದಿಂದ ಬಲ್ಲವರು ಅಟೆನ್ ಬರೊ ಒಬ್ಬ ಉತ್ತಮ ಮಾನವತಾವಾದಿ. ಸಹೃದಯಿ ಎನ್ನುವದನ್ನು ಆತನ ಮರಣದ ನಂತರ ಹೇಳುವದನ್ನು ಮರೆಯಲಿಲ್ಲ. ಅಟನ್ ಬರೋ ಅಗಸ್ಟ್ ತಿಂಗಳು 24-2014 ರಂದು ತಮ್ಮ 90 ನೇ ವರ್ಷ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದರು.






0 Comments