ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮನೆಯಲ್ಲಿರುವ ಹೆಂಗಸಿಗೆ ಅಮ್ಮ ಎನ್ನುತ್ತಾರಂತೆ…'

ಹುಡುಗ, ಹಸಿವು, ಅಪ್ಪಂದಿರು

ಎಂ.ಎಸ್.ಕೃಷ್ಣಮೂರ್ತಿ

ಮನೆಯಲ್ಲಿರುವ ಗಂಡಸಿಗೆ ಅಪ್ಪ ಎನ್ನುತ್ತಾರಂತೆ
ಮನೆಯಲ್ಲಿರುವ ಹೆಂಗಸಿಗೆ ಅಮ್ಮ ಎನ್ನುತ್ತಾರಂತೆ
ಈ ಮನೆಯ ತುಂಬಾ ಅಮ್ಮಂದಿರು
ಅಪ್ಪಂದಿರು ಬಂದು ಹೋಗುತ್ತಿರುತ್ತಾರೆ
ಮನೆ ತುಂಬಾ ರೂಮ್ಗಳು
ಒಬ್ಬ ದೊಡ್ಡಮ್ಮ ಇದ್ದಾಳೆ
…….
ಅಲ್ಲಿ ನಿಂತಿರುವರಿಬ್ಬರು ಬರುತ್ತಾರೇನೋ ?
“ಬನ್ನಿ ಸಾರ್ ಹೊಸ……. ಇದೆ”
“ಏನೋ… ಇಷ್ಟು ಚಿಕ್ಕ ವಯಸ್ಸಿನ ಹುಡುಗ , ಈ ಕೆಲ್ಸಾನ”
ಹಸಿವು
ಆ ದಿನದ ಒಬ್ಬ ಅಪ್ಪ ಹತ್ತು ರೂಪಾಯಿ ಕೊಟ್ಟ
ಆ ದಿನದ ಅಮ್ಮನ ಬಾಗಿಲಲ್ಲಿ , ಚಿತ್ರಾನ್ನ
ಇನ್ನೊಬ್ಬ ಅಪ್ಪ ಯಾತಕ್ಕೂ ಕಾಯುತ್ತಿದ್ದಾನೆ
ಇನ್ನೂ ಹಸಿವು
ಒಳಗಿದ್ದ ಆ ಅಪ್ಪ ಹೊರ ಬಂದ
ಕಾಯುತ್ತಿದ್ದ ಈ ಅಪ್ಪ ಒಳಗೋದ
ಇನ್ನೂ ಹಸಿವು
…..
ದೊಡ್ಡಮ್ಮ ಹೇಳುತ್ತಾಳೆ
ಈ ಅಮ್ಮಂದಿರ ರೂಮ್ ಗುಡಿಸಿದರೆ
ಮಾತ್ರ ತಿಂಡಿ
ಈ ಅಮ್ಮಂದಿರ ರೂಮ್ಗಳು ತುಂಬಾ ಗಲೀಜು
ಅಂಟು, ಅಂಟು,
ವಾಂತಿ ಬರುತ್ತದೆ
ಆದರೆ ಹೊಟ್ಟೆಯಲ್ಲಿ ಏನೂ ಇಲ್ಲ
 

‍ಲೇಖಕರು avadhi

27 February, 2013

2 Comments

  1. pravara

    ಹಸಿವಿನೊಳಕ್ಕೆ ನುಗ್ಗಿ ನೋಡುವ ಪರಿಯೇ ಮನ ಮುಟ್ಟುತ್ತದೆ…..

  2. Sushma Moodbidri

    ಹಸಿವಿನ ರೀತಿ ಬಲು ಘೋರ..
    ಹಸಿವು ಮನುಷ್ಯನನ್ನು ಏನು ಬೇಕಾದರೂ ಮಾಡಿಸಬಲ್ಲ ಶಕ್ತಿ ಹೊಂದಿರುತ್ತದೆ..
    ಚಂದದ ಕವನ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading