
ನಾಟಕಕಾರ ಬಿ.ಸುರೇಶ್ ಅವರ ರಚನೆ “ಷಾಪುರದ ಸೀನಿಂಗಿ – ಸತ್ಯ” ನಾಟಕವನ್ನು ನಿರ್ದೇಶಕಿ ಅರ್ಚನಾ ಶ್ಯಾಮ್ ರಂಗದ ಮೇಲೆ ತಂದಿದ್ದಾರೆ. ಜಾನಪದ ಶೈಲಿಯನ್ನು ಒಳಗೊಂಡಂತೆ ಹಲವು ಪ್ರಕಾರಗಳನ್ನು ಈ ಪ್ರಯೋಗದಲ್ಲಿ ಅಳವಡಿಸಲಾಗಿದೆ. ವಾಸ್ತವ-ಆಶಯ ಗಳ ನಡುವಿನ ಘರ್ಷಣೆ ಹಾಗೂ ವಾಸ್ತವವನ್ನು ವಿವಿಧ ಕೋನಗಳಿಂದ ಪರಿವೀಕ್ಷಿಸುವ ಒಂದು ಪ್ರಯತ್ನ ಇದರಲ್ಲಿದೆ.
ಈ ನಾಟಕದ ಸಂಗೀತ ವಾಸು ದೀಕ್ಷಿತ್ ಅವರದ್ದು. ಹಾಗೆಯೇ ನೃತ್ಯ ನಿರ್ದೇಶನ ಮಾಡಿರುವವರು ಲತಾ ಶ್ರೀನಿವಾಸ. ರಂಗ ವಿನ್ಯಾಸ, ಸಂಗೀತ, ಪ್ರಸಾಧನ, ನೃತ್ಯ, ಅಭಿನಯಗಳೆಲ್ಲದರ ಸಮ್ಮಿಲನದಿಂದ ಇದೊಂದು ಯಶಸ್ವಿ ಪ್ರಯೋಗ ಅನ್ನಿಸಿಕೊಂಡಿದೆ.







0 Comments