ಅವತಾರ

ಎಡಗೈಯ
ಕಿರುಬೆರಳಲ್ಲಿ
ಗೋವರ್ಧನಗಿರಿ
ಹೊತ್ತ ಕೃಷ್ಣ
ಪಾಂಡವ ಪಕ್ಷಪಾತಿ.
–
ತನ್ನದೆನ್ನುವುದು
ಏನೂ ಇಲ್ಲದ
ಸಾರಥಿ.
–
ಹಳೆಯ ಗೆಳತಿ ರಾಧೆ
ಯಾರೋ ಸೆರೆಯಲ್ಲಿಟ್ಟ
ಹದಿನಾರು ಸಾವಿರ ಸ್ತ್ರೀಯರು
ಪಟ್ಟದರಸಿ ರುಕ್ಮಿಣಿ
ಹೊಟ್ಟೆಕಿಚ್ಚಿನ ಭಾಮಾ
ಬಾಲ್ಯಸಖ ಸುಧಾಮ
ಕೃಷ್ಣ ನಮ್ಮ ನಿಮ್ಮ ಹಾಗೆ
ಭವಿ
ಅನುಭವಿ ಮತ್ತು
ಕವಿ.
–
ಶ್ರೀರಾಮನೋ ಸತ್ಯ
ನಿಷ್ಠುರ.
ಒಬ್ಬಳೇ ಮಡದಿ
ಯನ್ನು ಮತ್ತೊಬ್ಬ ಹೊತ್ತೊಯ್ದಾಗ
ಬಿಸುಸುಯ್ದು, ಕಾಡು ಸುತ್ತಾಡಿ
ಕಾದಾಡಿ ಅವಳನ್ನು ಪಡೆದು
ತೊರೆದ
ಪುರುಷೋತ್ತಮ.
–
ಕೃಷ್ಣ ಪಡೆಯಲಿಲ್ಲ
ತೊರೆಯಲೂ ಇಲ್ಲ.
ರಾಮ ತೊರೆಯಲೆಂದೇ
ಪಡೆದ.
–
ಬಿಟ್ಟು ಬಾಳಿಯೇನು
ಕೊಟ್ಟು ಬದುಕಲಾರೆ
ಎಂಬ ರಾಮತ್ವ.
ಕೊಟ್ಟು ಬದುಕಬಲ್ಲೆ
ಬಿಟ್ಟು ಬಾಳಲಾರೆ
ಎಂಬ ಕೃಷ್ಣತ್ವದ
ಮಧ್ಯಮ ವ್ಯಾಯೋಗದಲ್ಲಿ
ಭಗವದ್ಗೀತೆ, ರಾಮನಾಮ.
–
ಕೋದಂಡವೂ ಇಲ್ಲದ
ಸುದರ್ಶನವೂ ಇಲ್ಲದ
ನಮಗೆ
ದೂರದಲ್ಲೆಲ್ಲೋ ಕೇಳಿಸುತ್ತಿದೆ
ಕೊಳಲನಾದ.
ಅಲ್ಲೆಲ್ಲೋ ಘಮಘಮಿಸುತ್ತಿದೆ.
ಸೀತೆಯ ಮುಡಿಯಲ್ಲಿ
ರಾಮ ಮುಡಿಸಿದ
ಹೂವು




ಜೋಗಿ ಮಹಾರಾಜರದು ಈಗ ಕ-ವನವಾಸ!
🙂 at SJ
nice poem @ Jogi
malathi S
ಗಿರೀಶ್,
ಸುಂದರ, ಅತಿಸುಂದರ.
ರಾಮಾಯಣ ಮಹಾಭಾರತದ ರಾಮ ಕೃಷ್ಣರನ್ನು ಒಂದೇ ಕವನದಲ್ಲಿ ತುಂಬ ತಲೆಕೆಡಿಸಿದ್ದೀರಿ.
ಕೃಷ್ಣ ನಮ್ಮ ನಿಮ್ಮ ಹಾಗೆ
ಭವಿ
ಅನುಭವಿ ಮತ್ತು
ಕವಿ.
ತುಂಬ ಸೊಗಸಾದ ಸಾಲುಗಳು.
ತುಂಬ ದಿನಗಳಾದ ಮೇಲೆ ಒಂದು ಒಳ್ಳೆ ಪದ್ಯ ಜಾಲದಲ್ಲಿ ಓದಲು ಸಿಕ್ಕಿತು.
– ಕೇಶವ
ತುಂಬಾ ಸೊಗಸಾಗಿದೆ….
ಜೋಗಿ ಸುಗ್ಗಿ….
” ಬಿಟ್ಟು ಬಾಳಿಯೇನು
ಕೊಟ್ಟು ಬದುಕಲಾರೆ
ಎಂಬ ರಾಮತ್ವ.
ಕೊಟ್ಟು ಬದುಕಬಲ್ಲೆ
ಬಿಟ್ಟು ಬಾಳಲಾರೆ
ಎಂಬ ಕೃಷ್ಣತ್ವದ
ಮಧ್ಯಮ ವ್ಯಾಯೋಗದಲ್ಲಿ
ಭಗವದ್ಗೀತೆ, ರಾಮನಾಮ”
ಈ ಸಾಲುಗಳು ಬಹಳ ಇಷ್ಟವಾಯ್ತು…
amazed immensely by the links, delinks with which this poem operates the epical notions of two role models we often look upto. its a pleasure to read you. -vastarey
jOgiyavar jOLigeyinda intha kavanagaLa parimaLa soosuttirali.
ಅದ್ಭುತವಾಗಿದೆ….ಜೋಗಿಯ ಅವತಾರ
Just superb!!