ಮತ್ತೆ ಬರ್ತಾ ಇದಾನೆ ’ಹ್ಯಾಮ್ಲೆಟ್’


ವಿಶ್ವದಾದ್ಯಂತ ಹಲವು ಥಿಯೇಟರ್ ಗಳಲ್ಲಿ ವಿಭಿನ್ನ ಪ್ರಯೋಗಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಶ್ರೇಯ ಹ್ಯಾಮ್ಲೆಟ್ ಗೆ ಸಲ್ಲುತ್ತದೆ.. ದೇಶಗಳು ಬೇರೆಯಾದರೂ ಭಾಷೆಗಳು ಬೇರೆಯಾದರೂ, ನಾಟಕರಂಗಗಳು ಬೇರೆಯದ್ದಾದರೂ, ವೀಕ್ಷಕರು ಬೇರೆ ಬೇರೆಯವರಾದರೂ, ಯಾವ ಪ್ರತ್ಯೇಕತೆಯ ಲೇಶವಿಲ್ಲದೆ ಎಲ್ಲಾ ಮೂಲೆಗಳನ್ನು ಹೊಕ್ಕು ಮನೋರಂಜಿಸಿ, ಕ್ರಿಯಾತ್ಮಕತೆಯ ಹೂರಣ ಅನ್ನಿಸಿಕೊಂಡ ರಂಗಪ್ರಯೋಗವಿದು.. ಪ್ರಾಯಶಃ
ಹ್ಯಾಮ್ಲೆಟ್ ನ ಕಥಾವಸ್ತು ಕಾಡದ ರಂಗಕರ್ಮಿಗಳೇ ಇಲ್ಲವೇನೋ.. ವಿಶ್ವದ ಬಹುತೇಕ ಮಹಾನ್ ಅತಿರಥ ಮಹಾರಥ ರಂಗದಿಗ್ಗಜರು ಹ್ಯಾಮ್ಲೆಟ್ ಅನ್ನು
ತಮ್ಮದೇ ಆದ ದೃಷ್ಟಿಕೋನದಲ್ಲಿ ಒರೆಗೆ ಹಚ್ಚಿ ವಿಮರ್ಷಿಸಿದ್ದಾರೆ.. ಮೂಲಕಥೆಗೆ ಕೊಂಚವೂ ಊನವಾಗದಂತೆ ಹಲವು ವೈವಿಧ್ಯಮಯ ಪ್ರಯೋಗಗಳಿಗೆ ಒಳಪಡಿಸಿದ್ದಾರೆ.. ರಂಗಸಜ್ಜಿಕೆ, ಬೆಳಕು, ವಿನ್ಯಾಸ, ವಸ್ತ್ರಗಳು ಆಯಾ ಪ್ರಾಂತ್ಯ ಪ್ರದೇಶಗಳಿಗೆ ಅನುಗುಣವಾಗಿ ಬದಲಾಗಿವೆ.. ಪ್ರತಿ ಬಾರಿಯೂ ವಿವಿಧ ಆಯಾಮಗಳನ್ನು ಚರ್ಚಿಸಲಾಗಿದೆ.. ಆದರೆ ಹ್ಯಾಮ್ಲೆಟ್ ಜಗತ್ತಿನ ಯಾವುದೇ ರಂಗಕರ್ಮಿಗೆ ಈವರೆಗೂ ಬೇಸರ ಮೂಡಿಸಿಲ್ಲ..
ಹೇಗೆ ಭಾರತದಲ್ಲಿ ರಾಮಾಯಣ ಹಾಗೂ ಮಹಾಭಾರತ ಕಥಾವಸ್ತು ಇಂಡಿಯನ್ ಟೆಲಿವಿಷನ್ ಮಾಧ್ಯಮದಲ್ಲಿ ಹಲವು ಭಿನ್ನ ಭಿನ್ನ ಆಯಾಮದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರಿಗೆ ಮನೋರಂಜನೆ ಒದಗಿಸುತ್ತಿದೆಯೋ ಹಾಗೆಯೇ ಶೇಕ್ಸ್‌ಪಿಯರ್ ನ ಅಷ್ಟೂ ನಾಟಕಗಳು ರಂಗಕ್ಷೇತ್ರದಲ್ಲಿ ಮತ್ತೆ ಮತ್ತೆ ಚಾಲ್ತಿಗೆ ಬರುತ್ತಲೇ ಇದೆ..
ಈಗ ಮತ್ತೆ ಹ್ಯಾಮ್ಲೆಟ್ ಹಂಗಾಮಕ್ಕೆ ವೇದಿಕೆ ನಿರ್ಮಾಣವಾಗಿದೆ.. ಇದೇ ತಿಂಗಳ. 28 ರಂದು ಹನುಮಂತನಗರದ ಕೆ.ಹೆಚ್ ಕಲಾಸೌಧದಲ್ಲಿ ಹ್ಯಾಮ್ಲೆಟ್ ವೈಭವಯುತವಾಗಿ ಅಂಕದ ಪರದೆ ಸರಿಸಲಿದ್ದಾನೆ..
ರಾಮಚಂದ್ರದೇವ ಲೇಖನಿಯ ಮೂಲಕ ಕನ್ನಡಕ್ಕೆ ತುರ್ಜುಮೆಗೊಂಡ ಹ್ಯಾಮ್ಲೆಟ್ ಗೆ ಹೊಸದೊಂದು ವಿನ್ಯಾಸ ನೀಡಿ ನಿರ್ದೇಶನ ಮಾಡಿದ್ದಾರೆ ಅವಿನಾಶ್ ಸ ಷಟಮರ್ಶನ್.. ಈ ಹಿಂದೆ ಹಲವು ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ನಾಟಕಗಳಿಗೆ ರೂಪು ನೀಡಿದ ಅವಿನಾಶ್ ಮತ್ತೆ ಯಾವ ನವೀನತೆ ಲೇಪನಗೈದು ಹ್ಯಾಮ್ಲೆಟ್ ಕರೆ ತರುತ್ತಿದ್ದಾರೆ ಅನ್ನುವ ಕುತೂಹಲವಂತೂ ಇದ್ದೇ ಇದೆ..
ಮತ್ತಷ್ಟು ಹೊಸ ಬಗೆಯ ಪ್ರಯೋಗಗಳನ್ನು ಮಾಡಲಾಗಿದೆ ಅನ್ನುವ ಕ್ಯೂರಿಯಸ್ ಟ್ಯಾಗ್ ಲೈನ್ ನೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ ಅವಿನಾಶ್ ಹಾಗೂ ಗೆಳೆಯರು.. ಕನ್ನಡ ನಾಟಕರಂಗದ ವೀಕ್ಷಕರಿಗೆ ಮನೋರಂಜಿಸಲು, ಕನ್ನಡ ನಾಟಕ ಕ್ಷೇತ್ರದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಲು ಹ್ಯಾಮ್ಲೆಟ್ ಬರುತ್ತಿದ್ದಾನೆ..
ಸಿರಿಗನ್ನಡದ ಸೊಗಡಿನಲ್ಲಿ ಗ್ಲೋರಿಯಸ್ ಹ್ಯಾಮ್ಲೆಟ್ ನೋಡಲು ಇಚ್ಛಿಸುವವರಿಗೆ ಹನುಮಂತನಗರದ ರಾಮಾಂಜನೇಯ ಗುಡ್ಡದ ಒಂದು ಪಾರ್ಶ್ವದಲ್ಲಿರುವ ಕೆ.ಹೆಚ್ ಕಲಾಸೌಧ ಸ್ವಾಗತಿಸಲು ಸಿದ್ಧವಾಗಿದೆ..
 

‍ಲೇಖಕರು G

December 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: