ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ನಿಮ್ಮ ಮುಂದೆ ಕುಂ ವೀ ಅವರ ‘ಚಾಪ್ಲಿನ್’

ಮೆಹಬೂಬ ಮಠದ

ಜಾಗತಿಕ ಸಿನೆಮಾ ರಂಗ ಕಂಡ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಭಾಷಣೆಕಾರ, ಸಾಮಾಜಿಕ ಬದಲಾವಣೆಗಾಗಿ ನಿರಂತರ ಹೋರಾಡಿದ ಹೋರಾಟಗಾರ, ಅದ್ಭುತ ತಂತ್ರಜ್ಞ, ಹಾಸ್ಯದ ‘ಅನಭಿಷಿಕ್ತ ದೊರೆ’ ಚಾರ್ಲಿ ಚಾಪ್ಲಿನ್ ಎಂದರೆ ಸಾಕು ಮಗುವಿನಿಂದ ಮುದುಕರವರೆಗೂ ಎಲ್ಲರೂ ಇಷ್ಟ ಪಡುತ್ತಾರೆ.

ಈ ಲೋಕ ಕಂಡ ಅಪ್ರತಿಮ, ಅಭಿಜಾತ ಕಲಾವಿದನಾದ ಈತನ ಕುರಿತು ಕನ್ನಡ ಭಾಷೆಯಲ್ಲಿ ವಿಶಿಷ್ಟವಾಗಿ ಬರೆಯುತ್ತಿರುವ ಮಹತ್ವದ ಭಾರತೀಯ ಲೇಖಕರಾದ ಕುಂವೀ ರವರು ಬರೆದಿರುವ ಕೃತಿ ‘ಚಾಪ್ಲಿನ್’ ಈ ತಿಂಗಳ ಅಂತ್ಯದಲ್ಲಿ ಮಳಿಗೆಗಳಲ್ಲಿ ಓದುಗರಿಗೆ ಸಿಗಲಿದೆ.

“ತನ್ನ ವ್ಯಕ್ತಿತ್ವದೊಳಗೆ ಅನೇಕ ಮಾನವತಾವಾದಗಳಿಗೆ ನೆಲೆ ಕಲ್ಪಿಸಿದ್ದ ಚಾಪ್ಲಿನ್ ನಮ್ಮೆಲ್ಲರೊಳಗಿನ ಎಲ್ಲಾ ಭಾವನೆಗಳ ಸುಂದರ ರೂಪಕ, ಜಾಗತಿಕ ಸಾರ್ವಕಾಲಿಕ ಶ್ರೇಷ್ಠ ಮಹಾನ್ ಕಲಾವಿದನ ಮನೋಜ್ಞ ಸುಂದರ ಚಿತ್ರಣ ಕುಂವೀಯವರ ಈ ಚಾಪ್ಲಿನ್”
ಎಂದು ಈ ಕೃತಿಯ ಕುರಿತು ಸಿ. ಆರ್. ಸಿಂಹ ರವರು ಬರೆಯುತ್ತಾರೆ.

ಕನ್ನಡದ ಮತ್ತೊಬ್ಬ ಮಹತ್ವದ ಲೇಖಕರು ಹಾಗೂ ಸಿನೆಮಾ ನಿರ್ದೇಶಕರಾದ ಟಿ.ಎನ್. ಸೀತಾರಾಂರವರು “ನಗುತ್ತಲೇ ಅಳಿಸಿದ, ಅಳುತ್ತಲೇ ನಗಿಸಿದ ಮಹಾನ್‌ ಮಾನವತಾವಾದಿ ವಿಶ್ವಮಾನ್ಯ ಕಲಾವಿದ ಚಾಪ್ಲಿನ್ ನ ಜೀವನ ಗಾಥೆಯನ್ನು ಕುಂವೀ ಕನ್ನಡೀಕರಿಸಿದ್ದಾರೆ, ಮತ್ತೆ ಮತ್ತೆ ಓದಿಸಿಕೊಳ್ಳುವ ಕೃತಿ ಈ ಚಾಪ್ಲಿನ್” ಎಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ತನ್ನ ಪ್ರಖರ ಚಿಂತನೆಗಳ ಮೂಲಕ ಜಗತ್ತನ್ನು ಸದಾ ಕಾಡುತ್ತಿರುವ ಚಾರ್ಲಿ ಚಾಪ್ಲಿನ್ ಕುರಿತ ಈ ಕೃತಿಯನ್ನು ಓದುವ ಕೂತೂಹಲ ಹೆಚ್ಚುತ್ತಲೇ ಇದೆ. ಈ ತಿಂಗಳ ಅಂತ್ಯಕ್ಕೆ ಚಾಪ್ಲಿನ್ ಲೋಕದೊಳಗೆ ಪ್ರವೇಶ ದೊರೆಯುತ್ತದೆ.

‍ಲೇಖಕರು avadhi

9 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading