ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಡಾ ಬಿ ಆರ್ ಅಂಬೇಡ್ಕರ್ 125ನೇ ವರ್ಷಾಚರಣೆಯ ವಿಶೇಷ ಕಾರ್ಯಕ್ರಮವಾಗಿ ಪ್ರಸ್ತುತ ಪಡಿಸಿದ “ಭಾರತ ಭಾಗ್ಯ ವಿಧಾತ” ಧ್ವನಿ-ಬೆಳಕು ರಂಗ ಪ್ರದರ್ಶನವನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಮುಂದಿನ ಏಪ್ರಿಲ್ 14ರವರೆಗೆ ಮುಂದುವರೆಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಹೇಳಿದರು.
ಈಗಾಗಲೇ ಸರ್ಕಾರ ಅಂಬೇಡ್ಕರ್ ಅವರ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಬಡವರಿಗಾಗಿ ರಾಜ್ಯಾಧ್ಯಂತ ಅಂಬೇಡ್ಕರ್ ಹೆಸರಿನಲ್ಲಿ 4ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಸಚಿವರು ಹೇಳಿದರು.
ಸಚಿವರಾದ ಆಂಜನೇಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜನರ ನಡುವೆ ಕುಳಿತು “ಭಾರತ ಭಾಗ್ಯ ವಿಧಾತ” ರಂಗ ಪ್ರದರ್ಶನ ವೀಕ್ಷಿಸಿದರು.





0 Comments