ಆ ವೇದಿಕೆಯ ತಾಕತ್ತೇ ಅಂಥಹದ್ದು. ಅಲ್ಲಿ ಧ್ವನಿ-ಬೆಳಕುಗಳದ್ದೇ ಆಟ. ಸಂಗೀತದ್ದೇ ಮೇಲುಗೈ. ಜನಪದ ಕಲೆಗಳದ್ದೇ ಮೆರಗು. ಧ್ವನಿ, ಬೆಳಕು, ಸಂಗೀತ, ಜನಪದ ಕಲೆಗಳು ಒಮ್ಮೆಲೆ ವೇದಿಕೆ ಮೇಲೆ ತಮ್ಮ ಕರಾಮತ್ತುಗಳನ್ನು ತೋರಿಸುತಿದ್ದರೆ ಎದಿರು ಕೂತ ಎಂಥಹದ್ದೇ ಪ್ರೇಕ್ಷಕ ಮೂಕವಿಸ್ಮಿತ. ಇಂಥಹ ಅದ್ಭುತ ಕಾರ್ಯಕ್ರಮ ಸವಿದು ಮೈಮರೆತದ್ದು ಚಿಕ್ಕಬಳ್ಳಾಪುರದ ಜನತೆ. ಇಡೀ ಕಾರ್ಯಕ್ರಮ ವೀಕ್ಷಿಸಿದ ಪ್ರೇಕ್ಷಕರು ಮನಸಾರೆ ಹಾಡಿ ಹೊಗಳಿದರು.















0 Comments