– ಕೆ ಮಹಾಂತೇಶ

ಭಾರತದಲ್ಲಿ ಗೋವುಗಳ ಸಂತತಿ ನಶಿಸುತ್ತಿದೆಯೇ…? ಇಲ್ಲವೇ ಇಲ್ಲ..!
ಹಸಿ..ಹಸಿ ಸುಳ್ಳುಗಳಿಗೆ ಕೇಂದ್ರ ಸಕರ್ಾರದ ಸಮೀಕ್ಷೇಯೇ ಉತ್ತರ…!
ಹಾಗಾದರೆ.. ಯಾವುದುಸತ್ಯಾ..! ಯಾವುದು ಮಿಥ್ಯಾ…?
ಇತ್ತೀಚಿಗೆ ಬೆಂಗಳೂರಿನಲ್ಲಿ ಯುವಜನ ಸಂಘಟನೆ ಡಿವೈಎಫ್ಐ ಮಹಾರಾಷ್ಟ್ರ ಹಾಗೂ ಗೋವಾ, ಹರಿಯಾಣ ಸಕರ್ಾರಗಳು ಗೋಹತ್ಯೆ ನಿಷೇಧ ಗೊಮಾಂಸ ಮಾರಾಟ ಮತ್ತು ಸೇವನೆ ಮೇಲೆ ವಿಧಿಸಿರುವ ನಿರ್ಬಂಧವನ್ನು ಪ್ರತಿಭಟಿಸಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ ಕಾನರ್ಾಡ್ ಹಾಗೂ ಹಿರಿಯ ವಿಮರ್ಶಕ ಡಾ. ಕೆ ಮರುಳಸಿದ್ದಪ್ಪ ನವರ ಮುಂದಾಳತ್ವದಲ್ಲಿ ಆಹಾರದ ಹಕ್ಕಿನ ರಕ್ಷಣೆಗಾಗಿ ಆಗ್ರಹಿಸಿ ಬಹಿರಂಗ ಗೋಮಾಂಸವನ್ನು ತಿನ್ನುವ ಕಾರ್ಯಕ್ರಮ ಏರ್ಪಡಿಸಿದ್ದು ಇದೀಗ ಚಚರ್ೆಯ ವಿಷಯವಾಗಿದೆ.
ಆದರೆ ಈ ರೀತಿ ಬಹಿರಂಗ ಗೋಮಾಂಸ ಭಕ್ಷಣೆಯು ಕನರ್ಾಟಕದಲ್ಲಿ ಹೊಸದೇನಲ್ಲ. ಹಿಂದೆ ಬಿಜೆಪಿ ಸಕರ್ಾರ ಗೋಹತ್ಯೆ ಹಾಗೂ ಗೋಮಾಂಸ ಮಾರಾಟವನ್ನು ನಿಷೇಧಿಸುವ ಕಾನೂನು ಜಾರಿಗೊಳಿಸಲು ಯತ್ನಿಸಿದಾಗ ಬೆಂಗಳೂರು ವಿವಿಯ ಹಾಸ್ಟೆಲ್ನ ನೂರಾರು ವಿದ್ಯಾಥರ್ಿಗಳು ಬಹಿರಂಗವಾಗಿಯೇ ಗೋಮಾಂಸದ ಬಿರಿಯಾನಿಯನ್ನು ಸೇವಿಸಿ ತಮ್ಮ ಪ್ರತಿಭಟನೆಯನ್ನು ತೋರ್ಪಡಿಸಿದ್ದರು.
ಇದೀಗ ಕೇಂದ್ರದಲ್ಲಿ ಭಾರೀ ಬಹಮತದೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸಕರ್ಾರವು ಗೋಹತ್ಯೆಯನ್ನು ಹಾಗು ಗೋಮಾಂಸ ಮಾರಾಟವನ್ನು ದೇಶಾದ್ಯಾಂತ ನಿಷೇಧಿಸುವ ಮಾತು ಆರಂಭಿಸುತ್ತಿದ್ದಂತೆ ಅದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರ ಹಾಗೂ ಗೋವಾ ಹಾಗೂ ಹರಿಯಾಣ ಸಕರ್ಾರಗಳು ಗೋಹತ್ಯೆ ಹಾಗೂ ಗೋಮಾಂಸ ಮಾರಾಟ ಮತ್ತು ಸೇವನೆ ಮೇಲೆ ನಿಷೇಧವನ್ನು ಹೇರಿವೆ. ಇದಕ್ಕೆ ಆ ಎರಡು ರಾಜ್ಯ ಸಕರ್ಾರಗಳು ಮತ್ತು ಗೋಮಾಂಸ ನಿಷೇಧ ಮಾಡಬೇಕೆಂದು ವಾದಿಸುತ್ತಿರುವ ಆರ್ಎಸ್ಎಸ್ ಹಾಗೂ ಇತರೆ ಬಲಪಂಥಿಯರು ಹೇಳುತ್ತಿರುವ ಕಾರಣವೆಂದರೆ ಗೋವು ಹಿಂದುಗಳಿಗೆ ಪವಿತ್ರತೆಯ ಸಂಕೇತ. ಅವುಗಳನ್ನು ಹತ್ಯೆ ಮಾಡುವುದೆಂದರೆ ನಮ್ಮ ಹೆತ್ತ ತಾಯಿಯನ್ನೇ ಹತ್ಯೆಗೈದಂತೆ. ಮತ್ತು ಹೀಗೆ ಗೋವುಗಳನ್ನು ಆಹಾರಕ್ಕಾಗಿ ಹತ್ಯೆಗೈಯುತ್ತಾ ಹೋದರೆ ಮುಂದೊಂದು ದಿನ ಭಾರತದಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗಿ ಅವುಗಳ ಸಂತತಿಯೇ ನಾಶವಾಗುತ್ತದೆ ಎಂಬುದು.
ಯಾವುದು ಪವಿತ್ರ ಮತ್ತು ಅಪವಿತ್ರ..?
ಮೊದಲನೆದಾಗಿ ಪವಿತ್ರ-ಅಪವಿತ್ರವೆಂಬುದು ಅದು ಒಂದು ಧರ್ಮದ ಅಥವಾ ಒಂದು ಕೋಮಿನ ಅಥವಾ ಒಬ್ಬ ವ್ಯಕ್ತಿಯ ವೈಯಕ್ತಿಕವಾದ ಆಚಾರ. ಅದನ್ನು ಇನ್ನೊಂದು ಕೋಮಿನ ಜನರ ಆಚಾರ-ವಿಚಾರದೊಂದಿಗೆ ತಳಕು ಹಾಕುವುದು ಸರಿಯಲ್ಲ. ಯಾಕೆಂದರೆ ಇಡೀ ಭಾರತವೆಂಬುದು ಬಹು ಸಂಸ್ಕೃತಿ ಹಾಗೂ ವಿಭಿನ್ನ ಆಚಾರ ವಿಚಾರಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡೇ ಐಕ್ಯತೆಯನ್ನು ಹಾಗೂ ಸೌಹಾರ್ಧತೆಯನ್ನು ಕಾಪಾಡಿಕೊಂಡಿರುವ ದೇಶ. ಮೇಲ್ನೋಟಕ್ಕೆ ಒಂದೇ ಧಾಮರ್ಿಕ ಗುಂಪಿಗೆ ಸೇರಿದವರಲ್ಲೂ ವಿಭಿನ್ನ ಆಚರಣೆಗಳು ಹಾಗೂ ವಿಭಿನ್ನ ಆಹಾರ ಪದ್ದತಿಗಳು ನಮ್ಮ ಸಮಾಜದೊಳಗಿವೆ. ವಿಷ್ಣುವಿನ ಆರಾಧಕರಿಗೆ ವರಹಾ ಪವಿತ್ರವಾದರೆ ಅದೇ ಧಾಮರ್ಿಕತೆಯ ಭಾಗವಾಗಿರುವ ಮತ್ತೊಂದು ಜಾತಿಗೆ ಅದು ಆಹಾರವಾಗುತ್ತದೆ. ಆದರೆ ಅದೇ ವರಹಾ(ಹಂದಿ) ಇನ್ನೊಂದು ಧರ್ಮದ ಜನರ ದೃಷ್ಟಿಯಲ್ಲಿ ಅನಿಷ್ಟ ಪ್ರಾಣಿಯಾಗುತ್ತದೆ. ಇನ್ನೂ ಮೋಷಕ(ಇಲಿ) ಪುರಾಣ ಕಥೆಗಳಲ್ಲಿ ಗಣೇಶನ ವಾಹನವಾಗಿದೆ. ಭಾದ್ರಪದ ಮಾಸದಲ್ಲಿ ಗಣೇಶನನ್ನು ಮನೆಗೆ ತರುವ ಆಸ್ತಿಕರು ಅದರ ಜೊತೆ ಇರುವ ಇಲಿಗೂ ಹಾಗೂ ಹಾವಿಗೂ ಪೂಜೆ ಸಲ್ಲಿಸುತ್ತಾರೆ. ಆದರೆ ಅದೇ ಹಿಂದು ಧರ್ಮದ ಕೆಲ ಗುಂಪಿನ ಜನರಿಗೆ(ಗುಡ್ಡಗಾಡು-ಆದಿವಾಸಿ ಜನರಿಗೆ) ಇಲಿ ಮತ್ತು ಹಾವುಗಳು ಆಹಾರವೂ ಆಗುತ್ತದೆ.
ಮತ್ತೊಂದಡೆ ಕ್ರೈಸ್ತ ಧರ್ಮದ ಸ್ಥಾಪಕನಾದ ಪವಿತ್ರ ಯೇಸುವೇ ತನ್ನ 12 ಶಿಷ್ಯಂದಿರಿಗೆ ನನ್ನ ದೇಹವನ್ನು ಮಾಂಸವಾಗಿ ಪರಿಗಣಿಸಿ ಸೇವಿಸಿದರೆ ಮಾತ್ರವೇ ನಿಮಗೆ ಮುಕ್ತಿ ದೊರೆಯುವುದು ಎಂದು ಉಪದೇಶಿಸಿದ್ದರಿಂದಲೇ ಈಗಲೂ ಕ್ಯಾಥೋಲಿಕ್ರು ತಮ್ಮದೇ ಪವಿತ್ರೆಯ ಸಂಕೇತವಾದ ಯೇಸುವಿನ ಮಾಂಸವನ್ನು ್ಲ ಬ್ರೆಡ್ಡಿನ ತುಂಡಾಗಿ ಮತ್ತು ಗೋಧಿಯ ಮೂಲಕ ನೀಡುವ ವೈನ್ನ್ನೇ ರಕ್ತದ ಸಂಕೇತವಾಗಿ ಎಲ್ಲಾ ಚಚರ್ುಗಳಲ್ಲಿ ಸೇವಿಸಿ ತಮ್ಮ ದೈವತ್ವವನ್ನು ಪ್ರಾಥರ್ಿಸುತ್ತಾರೆ. ಆದರೆ ಇದನ್ನು ಅದೇ ಕ್ರಿಶ್ಚಿಯನ್ ಧರ್ಮದ ಮತ್ತೊಂದು ಗುಂಪಾದ ಪ್ರೊಟಸ್ಟೆಂಟ್ರು ಮೂತರ್ಿ ಪೂಜೆ ಸೇರಿದಂತೆ ಇಂತಹ ಎಲ್ಲಾ ಆಚರಣೆಗಳನ್ನು ವಿರೋಧಿಸುತ್ತಾರೆ. ಹಾಗೆಯೇ ಒಂಟೆಯನ್ನು ತಮ್ಮ ಧರ್ಮದ ಪವಿತ್ರತೆಯ ಸಂಕೇತವೆಂದು ಭಾವಿಸುವ ಮುಸಲ್ಮಾನರು ಪವಿತ್ರ ಬಕ್ರೀದ್ನಲ್ಲಿ ಅದನ್ನು ಸ್ವತಃಹ ಬಲಿಯಾಗಿ ನೀಡಿ ಆಹಾರವಾಗಿ ಸೇವಿಸುತ್ತಾರೆ. ಹಾಗೆಯೇ ಹಿಂದು ಧರ್ಮದ ಪವಿತ್ರವೆಂದು ಭಾವಿಸಲಾದ ಗೋವು ಮತ್ತು ಎತ್ತುಗಳನ್ನು ಹಿಂದಿನ ವೇದಗಳ ಕಾಲದಲ್ಲಿ ಯಾಗ ಯಜ್ಞಗಳಿಗೆ ಬಳಸಿ ಸ್ವತಃ ಅವುಗಳನ್ನು ಖುಷಿಮುನಿಗಳಾದಿಯಾಗಿ ಭಕ್ಷೀಸುತ್ತಿದ್ದ ಹತ್ತಾರು ನಿದರ್ಶನಗಳಿವೆ. ಇದೊಂದು ಯಾರ ಒತ್ತಡವೂ ಇಲ್ಲದೇ ಆಯಾ ಕಾಲಗಟ್ಟದಲ್ಲಿ ಇದ್ದ ಪರಿಸ್ಥಿತಿಗೆ ಅನುಗುಣವಾಗಿ ಬೆಳೆದು ಬಂದಿರುವ ಆಹಾರ ಸರಪಳಿ ಹೀಗಾಗಿ ಈ ಪ್ರಶ್ನೆಯನ್ನು ಕೇವಲ ಭಾವನಾತ್ಮವಾಗಿ ನೋಡದೇ ಭಾರತದ ಜನಸಂಸ್ಸೃತಿಯ ಭಾಗವಾಗಿ ನೋಡಬೇಕು.
ಗೋವುಗಳ ಸಂತತಿ ಅಪಾಯದಲ್ಲಿದೆಯಾ..?
ಇನ್ನೂ ಎರಡನೇ ಅತಿ ಮುಖ್ಯ ಅಂಶವಾದ ಗೋವುಗಳ ಸಂತತಿ ನಾಶವಾಗುವ ಪ್ರಶ್ನೆಯ ಬಗ್ಗೆ ಚಚರ್ಿಸುವುದಾದರೆ ಭಾರತದಲ್ಲಿ ಗೋವುಗಳು ಅಪಾಯದ ಅಂಚಿನಲ್ಲಿಲ್ಲ.! ಮಾತ್ರವಲ್ಲ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ..! ಆಶ್ಚರ್ಯವಾಗುತ್ತಿದೆಯಾ..? ಹೌದು ಇದು ಸತ್ಯ ಸಂಗತಿ.. ಆದರೆ ಕೇವಲ ಗೋವುಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡುವ ಜನರು ಈ ಬಗ್ಗೆ ಸ್ವಲ್ಪ ವಾಸ್ತವಾಂಸಗಳನ್ನು ತಿಳಿದುಕೊಳ್ಳಬೇಕು. 19 ನೇ ಭಾರತೀಯ ಲೈವ್ ಸ್ಟಾಕ್ ನಡೆಸಿದ ಸಮೀಕ್ಷೇಯ ಪ್ರಕಾರ 2007 ಇಸ್ವಿಯಲ್ಲಿ 7.16 ಮಿಲಿಯನ್ ಗಳಷ್ಟಿದ್ದ ಗೋವುಗಳ ಸಂಖ್ಯೆ 2012 ರಲ್ಲಿ 216 ಮಿಲಿಯನ್ಗೆ ಏರಿಕೆ ಕಂಡಿದೆ. ಆದರೆ ಇದೇ ಅವಧಿಯಲ್ಲಿ ಎತ್ತು(ಹೋರಿ)ಗಳ ಸಂಖ್ಯೆ ಮಾತ್ರ ಗಣನೀಯ ವಾಗಿ ಇಳಿದಿದೆ. 2007 ರಲ್ಲಿ 18.6 ಮಿಲಿಯನ್ರಷ್ಟಿದ್ದ ಅದರ ಪ್ರಮಾಣ 2012 ರಲ್ಲಿ 84 ಮಿಲಿಯನ್ಗೆ ಇಳಿದಿದೆ. ಅಂದರೆ ಇಡೀ ಜಾನುವಾರಗಳಲ್ಲೇ ಎತ್ತುಗಳ(ಗಂಡು) ಪ್ರಮಾಣ ಶೇ 30 ರಷ್ಟು ಮಾತ್ರ ಇದೆ. ಅಂದರೆ ಹತ್ಯೆಯಾಗುತ್ತಿರುವುದು ಕೆಲವರು ತಲೆಬುಡವಿಲ್ಲದೆ ಪ್ರಚಾರ ಮಾಡುತ್ತಿರುವಂತೆ ಪವಿತ್ರ ಗೋವುಗಳಲ್ಲ ಬದಲಾಗಿ ಎತ್ತುಗಳು..! ಆದರೆ ಸಂಘ ಪರಿವಾರದ ಜನರಿಗೆ ಮತ್ತು ನಮ್ಮ ದೇಶದ ಆಥರ್ಿಕತೆಯನ್ನು ರೂಪಿಸಲು ಹೊರಟಿರುವವರು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
ಆರ್ಥಿಕತೆಯ ಪ್ರಶ್ನೆಯೇ ಪ್ರಧಾನ ಹೊರತು ಧಾರ್ಮಿಕ ಪ್ರಶ್ನೆಯಲ್ಲ. !
ಭಾರತದ ವಿವಿಧ ರಾಜ್ಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಸಮೀಕ್ಷೇಯ ಪ್ರಕಾರ ಸಧ್ಯ ಇರುವ ಜಾನುವಾರುಗಳಲ್ಲಿ ಗೋವುಗಳ ಪ್ರಮಾಣ 2/3 ಭಾಗದಷ್ಟಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ (ಕುರಿ, ಕೋಳಿ, ಹಂದಿ, ಎತ್ತು,) ರೀತಿಯ ಮಾಂಸವನ್ನು ಭಕ್ಷೀಸುವವರು ಹೆಚ್ಚಾಗಿ ಗಂಡು ಜಾತಿಯ ಪ್ರಾಣಿಗಳನ್ನೇ ಬಳಸುತ್ತಾರೆ. ಇನ್ನೂ ಹೆಣ್ಣು ಜಾತಿಗೆ ಸೇರಿದ ಪ್ರಾಣಿ ಮತ್ತು ಪಕ್ಷಿಗಳು ಹೆಚ್ಚಾಗಿ ಹಾಲು- ಮೊಟ್ಟೆ ಹಾಗೂ ಸಂತತಿ ಅಭಿವೃದ್ಧಿಗೆ ಬಳಸಲ್ಪಡುತ್ತವೆ. ಗಂಡು ಜಾತಿಗೆ ಸೇರಿದ ಎತ್ತುಗಳು-ಕೋಣ ಮೊದಲಾದವುಗಳನ್ನು ಸಾಮನ್ಯವಾಗಿ ಕೃಷಿ ಉಳುಮೆಗೆ ಬಳಸಲಾಗುತ್ತದೆ. ಅದು ಬಿಟ್ಟರೇ ಅವುಗಳನ್ನು ಮೊದಲಿನಿಂದಲೂ ಮಾಂಸಕ್ಕಾಗಿಯೇ ಉಪಯೋಗಿಸಲಾಗುತ್ತಿದೆ. ಇದರ ಪರಿಣಾಮವಾಗಿ ಜಾನುವಾರುಗಳಲ್ಲಿ ಗಂಡು ಸಂತತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆಶ್ಚರ್ಯದ ಸಂಗತಿ ಎಂದರೆ ಜಾನುವಾರುಗಳಲ್ಲಿ ಲಿಂಗ ಅಸಮಾನತೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಇತ್ತೀಚಿಗೆ ಭೋಪಾಲ್ನಲ್ಲಿರುವ ಸೆಂಟ್ರಲ್ ಇನ್ಟೂಟೂಟ್ ಆಫ್ ಅಗ್ರೀಕಲ್ಚರಲ್ ಎಂಜಿನರಿಂಗ್ ನಡೆಸಿರುವ ಅಧ್ಯಯನದ ಪ್ರಕಾರ ಕೃಷಿಗೆ ಬಳಸುವ ಜಾನುವಾರುಗಳ ಸಂಖ್ಯೆ 1977 ರಲ್ಲಿ ಶೇ 44 ಇದ್ದಿದ್ದು 2012-13 ರಲ್ಲಿ ಶೇ 4 ಕ್ಕೆ ಇಳಿದಿದೆ. ಇದಕ್ಕೆ ಪ್ರಮುಖ ಕಾರಣ ಕೃಷಿಯಲ್ಲಿ ತೀವ್ರ ಪ್ರಮಾಣದಲ್ಲಿ ಹೆಚ್ಚಿರುವ ಟ್ರಾಕ್ಟರ್ ಮತ್ತು ಎಲೆಕ್ಟ್ರಾನಿಕ್ ಯಂತ್ರಗಳ ಬಳಕೆ. ಹಾಗೆ ಎಮ್ಮೆ ಕೋಣಗಳಿಗೂ ಇದು ಅನ್ವಯವಾಗುತ್ತದೆ. ಇದೇ ಅವಧಿಯಲ್ಲಿ 17.8 ರಷ್ಟಿದ್ದ ಕೋಣಗಳ ಸಂಖ್ಯೆ 16 ಮಿಲಿಯನ್ಗೆ ಇಳಿದಿದ್ದರೆ 7.99 ರಷ್ಟಿದ್ದ ಎಮ್ಮೆ ಗಳ ಸಂಖ್ಯೆ 92 ಮಿಲಿಯನ್ಗೆ ಏರಿಕೆಯಾಗಿದೆ. ಅಂದರೆ ಅವುಗಳ ನಡುವಿನ ಪ್ರಮಾಣ 6/1 ಪ್ರಮಾಣ ತಲುಪಿದೆ. ಇನ್ನೂ ವಿಶೇಷ ಹಾಗೂ ಆಶ್ಚರ್ಯದ ಸಂಗತಿ ಎಂದರೆ ಎಲ್ಲಿ ಗೋಮಾಂಸವನ್ನು ಹೆಚ್ಚಾಗಿ ಬಳಸುತ್ತಾರೋ ಅಂತಹ ಪ್ರದೇಶಗಳಲ್ಲಿ ಈ ಲಿಂಗ ಅಸಮಾನತೆ ಪ್ರಮಾಣ ಕಡಿಮೆ ಇರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.
ಇದೀಗ ಕಾನೂನು ಮೂಲಕ ದನದ ಮಾಂಸದ ಮಾರಾಟ ಹಾಗೂ ಸೇವನೆಯನ್ನು ನಿಷೇಧಿಸಿದರೆ ಇದು ಗ್ರಾಮೀಣ ಪ್ರದೇಶ ಜನರ ಮೇಲೆ ಧಮರ್ಾತೀತವಾಗಿ ತೀವ್ರ ಪರಿಣಾಮ ಬೀರುತ್ತದೆ. ವಿರೋಧಭಾಸದ ಸಂಗತಿ ಎಂದರೆ ಜಾನುವಾರುಗಳನ್ನು ಸಾಕುವವರು ಅವುಗಳ ಮೇಲೆ ತೀವ್ರ ರೀತಿಯ ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಹಸು ಎಮ್ಮೆ ಗಳನ್ನು ಸಾಕುವವರು ತಮ್ಮ ಬದುಕನ್ನು ಮುನ್ನಡೆಸಲು ತಮ್ಮ ಗಭರ್ಾಧಾರಿತ ಹಸು ಹಾಗೂ ಎಮ್ಮೆಗಳನ್ನು ನಗರಗಳಿಗೆ ತಂದು ನಗರವಾಸಿಗಳಿಗೆ ಹಾಲು ನೀಡಿ ಅವರ ಅಗತ್ಯಗಳನ್ನು ಪೂರೈಸುತ್ತಾರೆ. ಹಾಗೆ ಬಂದಂತಹ ಎಮ್ಮೆ ಹಾಗೂ ಆಕಳುಗಳು ಒಂದು ವೇಳೆ ಗಂಡು ಕರುಗಳಿಗೆ ಜನ್ಮ ನೀಡಿದರೆ ಅವುಗಳನ್ನು ಸಾಕುವ ಹೊಣೆಗಾರಿಕೆ ಅವುಗಳ ಮಾಲೀಕರಿಗೆ ಬರುತ್ತದೆ. ಹಾಗಾಗಿ ಅಂತಹ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಆ ಕರುಗಳನ್ನು ನಿಧರ್ಾಕ್ಷ್ಯಣ್ಯವಾಗಿ ಸಾಯಿಸುವಂತ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಹಾಗಂದ ಮಾತ್ರಕ್ಕೆ ಅವುಗಳ ಮಾಲೀಕರೇನೂ ಅವುಗಳನ್ನು ಬಂದೂಕಿನ ಗುಂಡಿನಿಂದ ಅಮಾನವೀಯವಾಗಿ ಹೊಡೆದು ಸಾಯುಸುವುದಿಲ್ಲ ಬದಲಾಗಿ ಲಾಭದಾಯಕವಲ್ಲದ ಆ ಗಂಡು ಮರಿ ಗಳನ್ನು ಮನೆಯ ಹೊರಗಿನ ಬಿಸಿಲಿಗೆ ಕಟ್ಟಿ ಅವುಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಹಾಗೂ ಮೇವು ಬೇಕೋ ಅಷ್ಟನ್ನು ನೀಡದೇ ಅವುಗಳು ಹಸಿವಿನಿಂದ ನಿಂತಲ್ಲೇ- ಕುಂತಲ್ಲೇ ಸಾಯುವಂತ (ಒಂದರ್ಥದಲ್ಲಿ ಕೊಲೆ) ಪರಿಸ್ಥಿತಿಗೆ ದೂಡಲಾಗುತ್ತದೆ ಇಲ್ಲವೇ ಮಾಂಸದ ವ್ಯಾಪಾರೀಗಳಿಗೆ ಕೈಗೆ ಸಿಕ್ಕ ದುಡ್ಡಿಗೆ ಮಾರಿ ಅದರಿಂದ ತಮ್ಮ ಜವಬ್ದಾರಿಯಿಂದ ಮುಕ್ತರಾಗುತ್ತಾರೆ. ಇದೂ ತೀರ ಸಂಪ್ರಾದಾಯವಾದಿಗಳು ವಾಸಿಸುವ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಸರ್ವ ಸಾಮಾನ್ಯದ ಸಂಗತಿಯಾಗಿದೆ ಅಂದರೆ ಎತ್ತುಗಳ ಸಂಖ್ಯೆ ಕ್ಷೀಣಿಸುತ್ತಿರುವುದರ ಹಿಂದಿರುವುದು ಪ್ರಧಾನವಾಗಿ ಆಥರ್ಿಕತೆಯ ಪ್ರಶ್ನೆಯೇ ಹೊರತು ಧಾಮರ್ಿಕ ಅಥವಾ ಭಾವನಾತ್ಮಕ ಪ್ರಶ್ನೆಯಲ್ಲ. !
ಕೃಷಿಯ ಬಿಕ್ಕಟ್ಟು ಕೂಡ ಪ್ರಮುಖ ಕಾರಣ
ಭಾರತದಲ್ಲಿ ನಡೆದಿರುವ ಸಮೀಕ್ಷೇಯಂತೆ ಇವತ್ತು ದೇಶದಲ್ಲಿ 299 ಮಿಲಿಯನ್ ಜಾನುವಾರಗಳಿವೆ. ಇವುಗಳ ಸಾಕಲು ಒಂದು ಅಂದಾಜಿನ ಪ್ರಕಾರ 30 ಮಿಲಿಯನ್ ಎಕ್ಟೇರ್ ನಷ್ಟು ಹುಲ್ಲುಗಾವಲಿನ ಅವಶ್ಯಕತೆ ಇದೆ. ಮತ್ತು ಅಷ್ಟೇ ದೊಡ್ಡ ಪ್ರಮಾಣದ ಭೂಮಿ ಜಾನುವಾರುಗಳ ಇತರೆ ಆಹಾರದ ಅಗತ್ಯಗಳನ್ನು ಪೂರೈಸಲು ಅಗತ್ಯವಿದೆ. ಭಾರತದಲ್ಲಿ ಸಧ್ಯ ಬೆಳೆ ಬೆಳೆಯುತ್ತಿರುವುದು 190 ಮಿಲಿಯನ್ ಎಕ್ಟೇರ್ ಪ್ರದೇಶದಲ್ಲಿ ಮಾತ್ರ. ಇದರಲ್ಲಿ ಜಾನುವಾರು ಸಾಕಾಣಿಕೆಗೆ ಅಷ್ಟು ದೊಡ್ಡ ಪ್ರಮಾಣದ ಕೃಷಿ ಭೂಮಿ ಮೀಸಲಿಡಬೇಕೆಂದರೆ ಅದು ಅಸಾಧ್ಯವೇ ಸರಿ. ಇಂತಹ ಸನ್ನಿವೇಶದಲ್ಲಿ ಇದೀಗ ಹಲವು ರಾಜ್ಯ ಸರಕಾರಗಳು ಗೋಹತ್ಯೆ ನಿಷೇಧ ಕಾನೂನನ್ನು ರೂಪಿಸಿ ಜಾರಿಗೆ ಅಂದರೆ ಜಾನುವಾರಗಳ ಉಳಿಕೆಯ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುತ್ತದೆ. ಆಗ ಮತ್ತೆ ಸಾವಿರಾರು ಎಕ್ಟೇರ್ ಭೂಮಿ ಈ ಜಾನುವಾರುಗಳ ಅಗತ್ಯವನ್ನು ಪೂರೈಸಲು ಬೇಕಾಗುತ್ತದೆ. ಆದರೆ ಸಣ್ಣ ರೈತಾಪಿ ಜನರ ಕೈಯಲ್ಲಿದ್ದ ಭೂಮಿಯನ್ನು ಹತ್ತಾರು ಯೋಜನೆಗಳ ಹೆಸರಲ್ಲಿ ಸರಕಾರವೇ ಕೈವಶ ಮಾಡಿಕೊಂಡು ದೇಶಿಯ ವಿದೇಶಿ ಬಂಡವಾಳಿಗರ ಕೈಗೆ ಒಪ್ಪಿಸುತ್ತಿದೆ. ಅಂಕಿ ಸಂಖ್ಯೆಗಳು ಹೇಳುವಂತೆ ಈಗಿರುವ ಜಾನುವಾರುಗಳಲ್ಲಿ ಮುದಿಯ ಹಾಗೂ ಉತ್ಪಾದನೆಯಲ್ಲಿ ತೊಡಗಲು ಅಸಾಧ್ಯವಾದವುಗಳ ಸಂಖ್ಯೆಯೇ 80 ಮಿಲಿಯನ್ರಷ್ಟಿದೆ. ಕೃಷಿಯಲ್ಲಿನ ಬಿಕ್ಕಟ್ಟು ಮತ್ತು ಪಶು ಆಹಾರ ಬೆಲೆ ಏರಿಕೆಯ ನಿರಂತರ ಏರಿಕೆಯಿಂದಾಗಿ ಅವುಗಳನ್ನು ಸಾಕುವುದೇ ಅವುಗಳ ಮಾಲೀಕರಿಗೆ ಸವಾಲಿನ ಕೆಲಸವಾಗಿದೆ. ಇಂತಹ ಸನ್ನಿವೇಶದಲ್ಲಿ ಆಥರ್ಿಕ ಹೊರೆಯಾಗಿ ಪರಿಣಮಿಸುವ ಆ ಜಾನುವಾರುಗಳಿಂದ ಆವರಿಗೆ ಆಗುವ ಲಾಭವಾದರೂ ಏನೂ? ಆಗ ಅವುಗಳನ್ನು ಸಾಕುತ್ತಿರುವವರಿಗೆ ಉಳಿದಿರುವ ದಾರಿ ಎಂದರೆ ತನ್ನ ಕಣ್ಣೆದುರು ಅವುಗಳ ಸಾವನ್ನು ನೋಡಲು ಬಯಸದೇ ಸಿಕ್ಕ ಬೆಲೆ ಮಾಂಸದ ವ್ಯಾಪಾರೀಗಳಿಗೆ ಮಾರುವುದು ಮಾತ್ರ. ಇದರಿಂದ ಸಾಕಿದವನಿಗೂ ಸ್ಪಲ್ಪ ಆಥರ್ಿಕ ಲಾಭವಾದರೆ ಮತ್ತೊಂದಡೆ ಅದನ್ನು ಆಹಾರವಾಗಿ ಬಳಸುವ ಲಕ್ಷಾಂತರ ಜನರಿಗೂ ಅದು ಅವರ ಅಗತ್ಯತೆಯನ್ನು ಪೂರೈಸುತ್ತದೆ.
ಗೋಮಾಂಸ ಸೇವನೆ ಹಿಂದೂ ಧರ್ಮ ವಿರೋಧಿಯಲ್ಲ.
ಯಾವ ಹಿಂದೂ ಶಾಸ್ತ್ರಗಳು ಯಾವುದೇ ಮಾಂಸದ ಸೇವನೆ ಅದರಲ್ಲೂ ಗೋ ಮಾಂಸದ ಭಕ್ಷ್ಯಣೆಯನ್ನು ವಿರೋಧಿಸಿಲ್ಲ. ನಿಜ ಸಂಗತಿ ಎಂದರೆ ವೇದಕಾಲದ ಪ್ರಧಾನ ದೇವರು ಸ್ವತಃ ಇಂದ್ರನೇ ಒಳ್ಳೆಯ ಗೋಮಾಂಸವನ್ನು ಇಷ್ಟಪಡುತ್ತಿದ್ದ, ವೇದಗಳು, ಮಹಾಭಾರತ, ರಾಮಾಯಣ, ಇತರೆ ಹಿಂದು ಪ್ರಾಚೀನ ಪವಿತ್ರ ಗ್ರಂಥಗಳೆಲ್ಲದರಲ್ಲೂ ಗೋಮಾಂಸ ಸೇವನೆಯ ಸಮರ್ಥನೆ ಇದೆ. ಆ ಕಾಲದಲ್ಲೇಲ್ಲಾ ಬ್ರಾಹ್ಮಣರಿಗೆ ಗೋಮಾಂಸವನ್ನು ವಿಶೇಷ ಖಾಧ್ಯವಾಗಿಯೇ ಮೀಸಲಿಟ್ಟು ಬಡಿಸಲಾಗುತ್ತಿತ್ತು.
ಭಾರತದಲ್ಲಿ ದನದ ಮಾಂಸವನ್ನು ಮುಸ್ಲಿಂಮರು ಹೆಚ್ಚಾಗಿ ಬಳಸುತ್ತಿರುವ ಕಾರಣದಿಂದಾಗಿಯೇ ಅದು ಪದೇ ಪದೇ ಭಾವನಾತ್ಮಕ ಪ್ರಶ್ನೆಯನ್ನಾಗಿ ಎತ್ತಲಾಗುತ್ತಿದೆ ಮತ್ತು ಆ ವಿಷಯ ರಾಜಕೀಯಕರಣಗೊಳ್ಳುತ್ತಿದೆ ಇದಕ್ಕೆ ಇತಿಹಾಸವೇ ಸಾಕ್ಷಿ. ಗೋಹತ್ಯೆ ನಿಷೇಧದ ಬೇಡಿಕೆಯನ್ನು ಮುಂದು ಮಾಡಿ ಮೊದಲು ಚಳುವಳಿ ಭಾರತದಲ್ಲಿ ಆರಂಭಗೊಂಡಿದ್ದು 1870 ರಲ್ಲಿ ಅದು ಸಿಖ್ಖ ಕುಕಾ (ನಾಮಧಾರಿ) ಎಂಬುವರಿಂದ. 1882 ರಲ್ಲಿ ದಯಾನಂದ ಸರಸ್ವತಿ ಅವರು ಆರಂಭಿಸಿದ ಗೋರಕ್ಷಿಣಿ ಸಭಾವು ಗೋಮಾಂಸ ಸೇವನೆ ವಿರುದ್ದ ನಡೆಸಿದ ತೀವ್ರ ಪ್ರಚೋಧನಕಾರಿ ಚಳುವಳಿಯೂ 1880-1890 ಅವಧಿಯಲ್ಲಿ ಹಲವು ಸರಣಿ ಕೋಮುಗಲಭೆಗಳನ್ನು ಹುಟ್ಟು ಹಾಕಿತ್ತು. ಅದೇ ಮುಂದುವರೆದು 1893 ರಲ್ಲಿ ಆಜಾಮ್ಘರ್ನಲ್ಲಿ , 1912 ರಲ್ಲಿ ಅಯೋಧ್ಯಯಲ್ಲಿ, 1971 ರಲ್ಲಿ ಶಾಹಬಾದ್ನಲ್ಲಿ ನಡೆದ ಕೋಮು ಗಲಭೆಗಳಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡರು. ಅಂದರೆ ಗೋಮಾಂಸ ಸೇವನೆಯು ಕೇವಲ ಒಂದು ಆಹಾರದ ಪ್ರಶ್ನೆಯಾಗಿ ಮಾತ್ರ ಉಳಿದಿಲ್ಲ. ಅದು ಮುಸ್ಲಿಂಮರ ವಿರುದ್ದ ಹಿಂದುಗಳನ್ನು ಎತ್ತಿಕಟ್ಟುವ ಪ್ರತಿಷ್ಟೆಯನ್ನಾಗಿ ಪ್ರಶ್ನೆಯನ್ನಾಗಿ ಪರಿವತರ್ಿಸಲಾಗಿದೆ.
ಕೊನೆಯದಾಗಿ ನಮ್ಮ ದೇಶದ ಬಹುಪಾಲು ಹಿಂದುಗಳು ಗೋಮಾಂಸವನ್ನು ಸೇವಿಸದೇ ಇರಬಹುದು. ಆದರೆ ಜಾನುವಾರುಗಳನ್ನು ಸಾಕುವವರಿಗೆ ಮಾತ್ರ ಅವರಿಗೆ ಭಾವನಾತ್ಮಕ ಪ್ರಶ್ನೆಗಳಿಗಿಂತ ಅವರಿಗೆ ನಿತ್ಯ ಕಾಡುವ ಆಥರ್ಿಕ ಸಂಕಟಗಳೇ ಪ್ರಧಾನವಾಗಿರುತ್ತವೆ. ಆದರೆ ಇದನ್ನೇ ರಾಜಕೀಯ ದಾಳವಾಗಿ ಬಳಸುತ್ತಿರುವವರಿಗೆ ಇದೊಂದು ನಿತ್ಯ ಹೊತ್ತಿ ಉರಿಯುತ್ತಿರಲೇಬೇಕಾದ ಜಲ್ವಂತ ಪ್ರಶ್ನೆಯಾಗಿ ಇರಲು ಬಯಸುತ್ತಾರೆ. ಭಾರತದ ಪ್ರಜ್ಞಾವಂತ ಜನರು ಈ ದಿಸೆಯಲ್ಲಿ ಜಾಗೃತಗೊಂಡು ಸಂಘಪರಿವಾರ ಶಕ್ತಿಗಳು ಹರಿಯಬಿಡುತ್ತಿರುವ ಭಾವನಾತ್ಮಕ ಪ್ರಶ್ನೆಗಳನ್ನು ಸೋಲಿಸುವ ಪ್ರಯತ್ನಕ್ಕೆ ಮುಂದಾಗಬೇಕು ಆ ಮೂಲಕ ನಮ್ಮ ದೇಶದ ರೈತಾಪಿ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕು. ಮತ್ತು ಜನರ ಆಹಾರದ ಹಕ್ಕು ಎತ್ತಿಹಿಡಿಯಬೇಕು.
ಏನಿದು ಲೈವ್ಸ್ಟಾಕ್ ಸಮೀಕ್ಷೇ..?
ಭಾರತ ಸಕರ್ಾರದ ಪಶುಸಂಗೋಪನ ಇಲಾಖೆಯು ಪ್ರತಿ 5 ವರ್ಷಕ್ಕೊಮ್ಮೆ ದೇಶದಲ್ಲಿರುವ ಎಲ್ಲಾ ರೀತಿಯ ಜಾನುವಾರಗಳ ಕುರಿತು ನಡೆಸುವ ಬೃಹತ್ ಪ್ರಮಾಣದ ಸಮೀಕ್ಷೇ. ಈ ಹಿಂದೆ 2007 ಇಂತಹ ಸಮೀಕ್ಷೇ ನಡೆಸಲಾಗಿತ್ತು 19 ನೇ ರಾಷ್ಟ್ರೀಯ ಸಮೀಕ್ಷೇಯನ್ನು 2012 ರಲ್ಲಿ ನಡೆಸಿದ ವರದಿ ಇದೀಗ ವೆಬ್ಸೈಟ್ ಲಭ್ಯವಿದೆ.
ಆಧಾರ : ಬಿಸಿನೆಸ್ ಸ್ಟಾಂಡರ್ಡ್ ನಲ್ಲಿ ಮುರಾದ್ಆಲಿ ಬೇಗ್ ಬರೆದ ಲೇಖನ





0 Comments